ಕೋಲಾರ: ಎಸ್.ಎಸ್.ಎಲ್.ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಣೆ 

Source: shabbir | By Arshad Koppa | Published on 16th August 2017, 7:43 AM | State News | Guest Editorial |

ಕೋಲಾರ, ಆಗಸ್ಟ್ 15:    ಜಿಲ್ಲೆಯಲ್ಲಿ 71 ನೇ ಸ್ವಾತಂತ್ರ್ಯ ದಿನಾಚರಣೆಯು ಅರ್ಥಪೂರ್ಣವಾಗಿ ನೆರವೇರಿತು. ಆರೋಗ್ಯ ಮತ್ತು ಕಟುಂಬ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಆರ್.ರಮೇಶ್ ಕುಮಾರ್ ಅವರು ಧ್ವಜಾರೋಹಣ ನೆರವೇರಿಸಿದರು. 


    ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಸಚಿವರ ಪೆರೇಡ್ ವೀಕ್ಷಣೆಯ ನಂತರ ಪಥ ಸಂಚಲ ಪ್ರಾರಂಭಗೊಂಡಿತು. ಸುಮಾರು 23 ತಂಡಗಳು ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದು ನೋಡಗರ ಕಣ್ಮನ ಸೂರೆಗೊಳಿಸಿತು.
    ಪಥಸಂಚಲನದ ನಂತರ ಸುವರ್ಣ ಸೆಂಟ್ರಲ್ ಶಾಲೆಯ ಮಕ್ಕಳಿಂದ ರೈತಗೀತೆ ಮೂಡಿಬಂತು. ಇದಾದ ಬಳಿಕ ಸಚಿವರು ಸ್ವಾತಂತ್ರೋತ್ಸವ ಸಂದೇಶ ನೀಡಿದರು. ಸಂದೇಶದಲ್ಲಿ ಸರ್ಕಾರವು ಜಿಲ್ಲೆಗೆ ನೀಡಿರುವ ಯೋಜನೆಗಳ ಪ್ರಗತಿಯ ಕುರಿತು ಇಲಾಖಾವಾರು ಮಾಹಿತಿಯನ್ನು ಸವಿಸ್ತಾರವಾಗಿ ತಿಳಿಸಿದರು. 
ಸಾಮೂಹಿಕವಾಗಿ ರಾಷ್ಟ್ರಗೀತೆ ಹಾಡಲಾಯಿತು. ಇಲ್ಲಿಗೆ ಪೆರೈಡ್‍ಗಳು ಅನುಮತಿ ಪಡೆದು ಹೊರ ನಡೆದರೆ ಸಾಂಸ್ಕøತಿಕ ಕಾರ್ಯಕ್ರಮಗಳು ಪ್ರಾರಂಭಗೊಂಡವು. ನೃತ್ಯ ಪ್ರದರ್ಶನದಲ್ಲಿ ದೇಶ ಭಕ್ತಿಯು ಹೊರಹೊಮ್ಮಿತ್ತು. ವಿದ್ಯಾರ್ಥಿಗಳು ತ್ರಿವರ್ಣ ಧ್ವಜ ಹಿಡಿದು ಭಾರತಾಂಬೆಗೆ ವಂದಿಸಿದರು. 
    ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ಮಕ್ಕಳಿಂದ ನೃತ್ಯ ಪ್ರದರ್ಶನ ಮೂಡಿ ಬಂತು. ಮದರ್ ತೆರೆಸಾ ಶಾಲೆಯ 300 ಮಕ್ಕಳು ಸುನೋ ಗೋರ್ ಸೇ ದುನಿಯಾವಾಲೆ ಹಾಡಿಗೆ ಹೆಜ್ಜೆ ಹಾಕಿದರು. ಚಿನ್ಮಯ ವಿದ್ಯಾಲಯದ 250 ಮಕ್ಕಳು ಒಂದೇ ಒಂದೇ ನಾವೆಲ್ಲರೂ ಒಂದೇ ಹಾಡಿಗೆ, ಮೆಥೋಡಿಸ್ಟ್ ಪ್ರೌಢಶಾಲೆಯ 250 ಮಕ್ಕಳು ದೇಶ್ ರಂಗೀಲಾ ಹಾಡಿಗೆ ಮತ್ತು ಮಹಿಳಾ ಸಮಾಜ ಶಾಲೆಯ 300 ಮಕ್ಕಳು ವಂದೇ ಮಾತರಂ ಗೀತೆಗೆ ನೃತ್ಯ ಮಾಡುವ ಮೂಲಕ ದೇಶಭಕ್ತಿಯನ್ನು ಮೆರೆದರು. 
    ನಗರದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ 1500 ಮಕ್ಕಳು ಸಾಮೂಹಿಕ ವ್ಯಾಯಾಮ ಮಾಡಿದರು. ನಡುಪಳ್ಳಿಯ ಜ್ಞಾನಬೋಧ ವಿದ್ಯಾಸಂಸ್ಥೆ ಹಾಗೂ ಸುವರ್ಣ ಸೆಂಟ್ರಲ್ ಶಾಲೆಯ 300 ಮಕ್ಕಳು ಕರಾಟೆ ಪ್ರದರ್ಶನವನ್ನು ನೀಡಿದರು. 
    ಸರ್ಕಾರದಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್‍ಗಳನ್ನು ಉಚಿತವಾಗಿ ನೀಡುತ್ತಿದ್ದು ಕೋಲಾರ ಜಿಲ್ಲೆಗೆ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸಚಿವರು ಲ್ಯಾಪ್‍ಟಾಪ್‍ಗಳನ್ನು ವಿತರಿಸಿದರು. 


    ಕೋಲಾರ ತಾಲ್ಲೂಕಿನ ತೊರದೇವಂಡಹಳ್ಳಿ ಸರ್ಕಾರಿ ಪ್ರೌಡಶಾಲೆಯ ಕಾವ್ಯ (599) ವಿದ್ಯಾರ್ಥಿನಿಗೆ ಪ್ರಥಮ, ವೇಮಗಲ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕೆ.ಎಂ.ಸುಧಾ (596) ದ್ವಿತೀಯ, ಕ್ಯಾಲನೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿನುತಾಮೆಂಡೋನ್ಸಾ (592) ತೃತೀಯ, ಶ್ರೀನಿವಾಸಪುರ ತಾಲ್ಲೂಕಿನ ಗೌನಿಪಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎನ್. ಮುನಿವೆಂಕಟರವಣ (592) ನಾಲ್ಕನೇ ಸ್ಥಾನವನ್ನು ಪಡೆದಿದ್ದು ಇವರು ಲ್ಯಾಪ್‍ಟಾಪ್‍ಗಳನ್ನು ಪಡೆದುಕೊಂಡರು. 
    ಇನ್ನು ಪಥಸಂಚಲನದಲ್ಲಿ ಭಾಗವಹಿಸಿದ್ದ ಸುವರ್ಣ ಸೆಂಟ್ರಲ್ ಶಾಲೆ, ಮಹಿಳಾ ಸಮಾಜ ಶಾಲೆ, ಮದರ್ ತೆರೆಸಾ ಶಾಲೆ ಮತ್ತು ಅಂತರಗಂಗೆ ಶಾಲೆಯ ಮಕ್ಕಳಿಗೆ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಬಹುಮಾನಗಳನ್ನು ವಿತರಣೆ ಮಾಡಲಾಯಿತು. 
    ಕಾರ್ಯಕ್ರಮದ ನಂತರ ಪತ್ರಿಕಾಗೋಷ್ಠಿಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಹೊರತಂದಿರುವ ಸರ್ಕಾರದ 4 ವರ್ಷದ ಸಾಧನೆ ಕುರಿತ ಕಿರುಹೊತ್ತಿಗೆಯನ್ನು ಸಚಿವರಾದ ಕೆ.ಆರ್.ರಮೇಶ್‍ಕುಮಾರ್ ಅವರು ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಅವರು, ಸರ್ಕಾರವು ಜಾರಿಗೆ ತಂದಿರುವ ವಿವಿಧ ಜನಪರ ಯೋಜನೆಗಳ ಕುರಿತ ಮಾಹಿತಿಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕ್ರೂಢೀಕರಿಸಿ ಕಿರುಹೊತ್ತಿಗೆಯನ್ನು ಹೊರತಂದು ಜನರಿಗೆ ಹಂಚಿಕೆ ಮಾಡುತ್ತಿರುವುದು ಒಂದು ಉತ್ತಮ ಕೆಲಸವಾಗಿದೆ ಎಂದು ಶ್ಲಾಘಿಸಿದರು. 
    ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ರಾಜೀವ್ ಗಾಂಧಿ ಆರೋಗ್ಯ ಭಾಗ್ಯ ಯೋಜನೆಯಡಿ ಪತ್ರಕರ್ತರು ಹಾಗೂ ಅವರ ಕುಟುಂಬದವರಿಗೆ ಉಚಿತವಾಗಿ ಆರೋಗ್ಯ ಸೇವೆಗಳನ್ನು ನೀಡಲು ರಾಜೀವ್ ಆರೋಗ್ಯ ಭಾಗ್ಯ ಕಾರ್ಡನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಪತ್ರಕರ್ತರಾದ ಕಲಾವಿದ ವಿಷ್ಣು ಅವರಿಗೆ ಸಚಿವರು ನೀಡಿದರು. 
    ಕೋಲಾರ ಮತ್ತು ಚಿಕ್ಕಬಳ್ಳಾಪುರದ 126 ಕೆರೆಗಳಿಗೆ ನೀರುಣ ಸುವ ಕೆ.ಸಿ. ವ್ಯಾಲಿ ಕಾಮಗಾರಿಯು ಕೆಲವು ಸಂಸ್ಥೆಗಳ ಅಡಚಣೆಯಿಂದ ಎರಡು ತಿಂಗಳು ತಡವಾಗಿದೆ. ಪೈಪ್‍ಗಳನ್ನು 15 ಅಡಿ ಹಾಳಕ್ಕೆ ಸರ್ವೀಸ್ ರಸ್ತೆಯ ಪಕ್ಕದಲ್ಲಿ ಹಾಕಲಾಗುತ್ತಿದೆ. ಇದರಿಂದ ಹೆದ್ದಾರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. 
    ಕೋಲಾರ ಜಿಲ್ಲೆಯಲ್ಲಿ ವಿದ್ಯುತ್ ಕಣ್ಣಾಮುಚ್ಚಲೆಯ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಸ್ಥಳದಲ್ಲಿಯೇ ಇದ್ದ ಬೆಸ್ಕಾಂ ಅಧಿಕಾರಿಗಳೊಂದಿಗೆ ಮಾತನಾಡಿ, ತಕ್ಷಣ ವಿದ್ಯುತ್ ಸಮಸ್ಯೆಯನ್ನು ಪರಿಹರಿಸಬೇಕೆಂದು ಸೂಚಿಸಿದರು. 
    ರಾಜ್ಯದಲ್ಲಿರುವ ಎಲ್ಲಾ ಜಮೀನುಗಳ ಒಡೆತನವು ಕಂದಾಯ ಇಲಾಖೆಗೆ ಸೇರಿದ್ದು. ರಾಜ್ಯದಲ್ಲಿ ಹಲವಾರು ಕೆರೆಗಳು ಅನುಪಯುಕ್ತವಾಗಿದ್ದು ಈ ಕೆರೆಗಳಿಗೆ ಕಾಲುವೆ, ಕೋಡಿ, ರಾಜಕಾಲುವೆ, ಕಟ್ಟೆ ಹಾಗೂ ತೂಬು ಇದ್ಯಾವುದೂ ಇಲ್ಲದೆ ಕೆರೆಯ ಸ್ವರೂಪವನ್ನೇ ಕಳೆದುಕೊಂಡಿವೆ. ಇವುಗಳನ್ನು ಕೆರೆಗಳ ಅಂಗಳದಿಂದ ವಿರಹಿತಗೊಳಿಸಿ 94 ಸಿಸಿ ಅಡಿ ಗುಡಿಸಲು ವಾಸಿಗಳಿಗೆ ನಿವೇಶಗಳಿಗೆ ಜಮೀನು ಹಂಚಿಕೆ ಮಾಡುವುದು ಸೂಕ್ತ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 
    ಸಂಸದರಾದ ಕೆ.ಹೆಚ್.ಮುನಿಯಪ್ಪ ಅವರು ಮಾತನಾಡಿ, ಜಿಲ್ಲೆಯ ಶ್ರೀನಿವಾಸಪುರದಲ್ಲಿ ರೈಲ್ವೇ ಕೋಚ್ ಪ್ಯಾಕ್ಟರಿ ನಿರ್ಮಾಣ ಮಾಡಲು ಸೂಕ್ತ ಕ್ರಮ ವಹಿಸಲಾಗಿದೆ. ಈ ಕುರಿತು ಸಂಬಂಧಪಟ್ಟ ಕೇಂದ್ರ ಸಚಿವರ ಗಮನಸೆಳೆದು ಕೋಚ್ ಪ್ಯಾಕ್ಟರಿ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು. 
    ಈ ಸಂದರ್ಭದಲ್ಲಿ ಶಾಸಕರಾದ ವರ್ತೂರು ಆರ್.ಪ್ರಕಾಶ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಗೀತಮ್ಮ ಆನಂದರೆಡ್ಡಿ, ನಗರಸಭೆ ಅಧ್ಯಕ್ಷೆ ಮಹಾಲಕ್ಷ್ಮೀ ಪ್ರಸಾದ್ ಬಾಬು, ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕ್ ಚಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹಿಣ  ಕಟೋಚ್ ಸೆಫೆಟ್, ಅಪರ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. 

Read These Next

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...