ಕೋಲಾರ: ಸರ್ಕಾರದ ಅನುದಾನದ ಸದ್ಬಳಕೆಯಾದರೆ ಮಾತ್ರವೆ ಸರ್ಕಾರಿ ಶಾಲೆ ಅಭಿವೃದ್ದಿ ಕಾಣಲು ಸಾಧ್ಯ-ಮಂಜುನಾಥ್

Source: shabbir | By Arshad Koppa | Published on 20th July 2017, 8:31 AM | State News |

ಕೋಲಾರ ಜು.19: ಸರ್ಕಾರದ ಅನುದಾನಗಳು ದುರುಪಯೋಗವಾಗದೆ ಪ್ರಾಮಾಣಿಕವಾಗಿ ಶಾಲೆಗಳಲ್ಲಿ ಸದ್ಬಳಕೆಯಾದಾಗ ಸರ್ಕಾರಿ ಶಾಲೆಗಳು ಅಭಿವೃದ್ಧಿ ಹೊಂದಲು ಸಾಧ್ಯವೆಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್. ಮಂಜುನಾಥ್ ತಿಳಿಸಿದರು.


    ಅವರು ಇಂದು ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಟಮಕದಲ್ಲಿ ಇಲಾಖೆಯಿಂದ ಬಿಡುಗಡೆಯಾದ ಅನುದಾನದ ಶೂ ಮತ್ತು 2ನೇ ಸಮವಸ್ತ್ರವನ್ನು ವಿತರಿಸಿ ಮಾತನಾಡುತ್ತಿದ್ದರು.
    ಸರ್ಕಾರಿ ಶಾಲೆಗಳಲ್ಲಿ ಪೋಷಕರು ಶಿಕ್ಷಕರ ಮೇಲಿನ ನಂಬಿಕೆಯಿಂದ ಗುಣಮಟ್ಟದ ಶಿಕ್ಷಣ ಸಿಗುತ್ತದೆಂಬ ಕಾರಣದಿಂದ ಕಳುಹಿಸುತ್ತಿದ್ದು, ಅದರ ಜೊತೆಗೆ ಸರ್ಕಾರ ಮತ್ತು ಇಲಾಖೆ ಅನೇಕ ಪ್ರೋತ್ಸಾಹದಾಯಕಗಳನ್ನು ನೀಡುತ್ತಿದೆ. ನೀಡುವ ಅನುದಾನದಲ್ಲಿ ಶಿಕ್ಷಕರಾಗಲಿ ಇತರರಾಗಲಿ ಕಮೀಷನ್ ಪಡೆದುಕೊಳ್ಳದೆ ಗುಣಮಟ್ಟದ ವಸ್ತುಗಳನ್ನು ನೀಡಿದಾಗ ಪೋಷಕರು ಹಾಗೂ ಎಸ್.ಡಿ.ಎಂ.ಸಿಯವರ ಪ್ರಸಂಶೆಗೆ ಒಳಗಾಗುವರು ಮತ್ತು ಇಲಾಖೆಯು ಸಹ ಅವರನ್ನು ಬಹಳ ಗೌರವಯುತವಾಗಿ ಅಭಿನಂದಿಸುವರು.
    ರಾಜ್ಯದಲ್ಲಿ ಸಣ್ಣಪುಟ್ಟ ಅಚಾತುರ್ಯಗಳು ನಡೆದು ಅವು ಮಾಧ್ಯಮಗಳಲ್ಲಿ ಪ್ರಚಾರವಾಗಿ ಕೆಲವು ಶಿಕ್ಷಕರು ನಗೆಪಾಟಲಿಗೆ ಗುರಿಯಾಗಿ ಇಲಾಖೆಯ ಕೆಂಗಣ ್ಣಗೆ ಗುರಿಯಾಗಿ ಅಮಾನತ್ತಾಗುವರು. ಅಂತಹವುಗಳಿಗೆ ಆಸ್ಪದ ನೀಡದೆ ಶಿಕ್ಷಕರು ಇಲಾಖೆ ನೀಡುವ ಆದೇಶಗಳನ್ನು ಪಾಲಿಸಿದರೆ ಒಳಿತೆಂದರು.
    ಶಿಕ್ಷಣ ಸಂಯೋಜಕ ಆರ್. ಶ್ರೀನಿವಾಸನ್ ಮಾತನಾಡುತ್ತಾ ಶಾಲೆಗಳ ಸ್ಥಿತಿಗತಿಗಳನ್ನು ಅರಿತು ತಕ್ಷಣವೇ ಮುಖ್ಯಶಿಕ್ಷಕರು ಗಮನ ಹರಿಸಿ ಬದಲಾವಣೆ ತಂದಲ್ಲಿ ಹಾಗೂ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಏನೆಲ್ಲಾ ಪ್ರಯತ್ನಗಳನ್ನು, ಕ್ರಿಯಾಯೋಜನೆಗಳನ್ನು ತಯಾರಿಸಬೇಕೆಂದರು.
    ನಗರಸಭಾ ಸದಸ್ಯ ವೆಂಕಟೇಶ್‍ಪತಿಯವರು ಮಾತನಾಡುತ್ತಾ ಶಾಲೆಯನ್ನು ಅಭಿವೃದ್ಧಿಪಡಿಸುವಲ್ಲಿ ನನ್ನ ಹಂತದಲ್ಲಿ ಏನೆಲ್ಲಾ ಪ್ರಯತ್ನಗಳನ್ನು ಮಾಡಬಹುದು ಅವನೆಲ್ಲಾ ಮಾಡುವುದಾಗಿ ಹಾಗೂ ಭೌತಿಕ ಸೌಲಭ್ಯಗಳನ್ನು ಒದಗಿಸಿ ಸದಾಕಾಲ ಶಾಲೆಯ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದರು.
    ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷೆ ರಾಧಾ, ಸರ್ಕಾರಿ ನೌಕರರ ಸಂಘದ ಜಂಟಿ ಕಾರ್ಯದರ್ಶಿ ರತ್ನಪ್ಪ, ಶಿಕ್ಷಕರಾದ ಹೇಮಾವತಿ, ವಾಣ  ಮುಂತಾದವರು ಉಪಸ್ಥಿತರಿದ್ದರು.
    
(ಆರ್. ಶ್ರೀನಿವಾಸನ್)
ಕೋಲಾರ.
     ಮೊ.:9342488315


ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ

Read These Next

ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದಲ್ಲಿ ಬಿಜೆಪಿ ಶಾಮಿಲು; ತೀರ್ಥಹಳ್ಳಿಯಲ್ಲಿ ಬಿಜೆಪಿ ಸದಸ್ಯನನ್ನು ಬಂಧಿಸಿದ NIA

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (NIA) ...