ಕೋಲಾರ: ಶಾಂತಿ ಮತ್ತು ಸೌಹಾರ್ದ ಸಮಿತಿಯ ಮಾಜಿ ಅಧ್ಯಕ್ಷ ಶ್ರೀ ಕೃಷ್ಣರ ಅಭಿನಂದನಾ ಸಮಾರಂಭ

Source: shabbir ahmed | By Arshad Koppa | Published on 6th December 2016, 8:15 AM | State News |

ಕೋಲಾರ,ಡಿ.5: 1990 ರ ನವೆಂಬರ್ ನಲ್ಲಿ ಪ್ರಾರಂಭವಾದ ಶಾಂತಿ ಮತ್ತು ಸೌಹಾರ್ದ ಸಮಿತಿಯು ಅಂದು ನಗರದಲ್ಲಿಂಟಾದ ಅಶಾಂತಿ ವಾತಾವರಣದಲ್ಲಿ 56 ದಿನಗಳ ಪೊಲೀಸ್ ಕಪ್ರ್ಯೂನಲ್ಲಿ ಹಿರಿಯ ವಕೀಲರೂ ಹಾಗೂ ನಿರ್ಗಮಿತ 25 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿರುವ ಶ್ರೀ ಕೃಷ್ಣರ ಮುಂದಾಳತ್ವದಲ್ಲಿದ್ದ ಸುಮಾರು 75 ಮಂದಿ ಹಿರಿಯ ಸದಸ್ಯರೊಂದಿಗೆ ಮಸೀದಿ, ಚರ್ಚ್, ದೇವಾಲಯಗಳಲ್ಲಿ ಸಭೆಗಳನ್ನು ನಡೆಸುವುದರ ಮೂಲಕ ಅಂದು ಶಾಂತಿ ಸ್ಥಾಪನೆಗೆ ಶ್ರಮಿಸಿದ್ದರ ಫಲ ಇಂದಿಗೂ ಮುಂದುವರೆದಿದೆ ಎಂದು ಶಾಂತಿ ಮತ್ತು ಸೌಹಾರ್ದ ಸಮಿತಿಯ ಅಧ್ಯಕ್ಷ ಪಂಡಿತ್ ಮುನಿವೆಂಕಟಪ್ಪ ತಿಳಿಸಿದರು.
  

 ನಗರದ ಪತ್ರಕರ್ತರ ಭವನದಲ್ಲಿಂದು ಹಮ್ಮಿಕೊಂಡಿದ್ದ ಶಾಂತಿ ಮತ್ತು ಸೌಹಾರ್ದ ಸಮಿತಿಯ ಮಾಜಿ ಅಧ್ಯಕ್ಷ ಶ್ರೀ ಕೃಷ್ಣರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
  

 ಹಲವು ಹಿರಿಯ ಸದಸ್ಯರಾದ ವಾಜೀದ್‍ಪಾಷ, ಡಾ.ಸಿ.ಮೋಹನ್, ಬಾಲಣ್ಣ, ಹಿರಿಯ ಪೊಲೀಸ್ ಅಧಿಕಾರಿ ಹರಿಕೃಷ್ಣ, ಡಿಎಸ್‍ಪಿ ನಾರಾಯಣಪ್ಪ ಇನ್ನಿತರರು ಶಾಂತಿಗಾಗಿ ಶ್ರಮಿಸಿದ್ದು ಇಂದು ದಿವಂಗತರಾಗಿದ್ದಾರೆ.  ಉಳಿದ ಹಿರಿಯರಾದ ಮುನಿಸ್ವಾಮಿಗೌಡ, ಮಾಜಿ ಸಚಿವ ಕೆ.ಎ.ನಿಸಾರ್ ಅಹಮದ್, ಉಸ್ಮಾನ್ ಜಾಕೀರ್, ಶ್ರೀನಿವಾಸಗೌಡ, ಲಕ್ಷ್ಮಯ್ಯ, ಜಯದೇವಪ್ರಸನ್ನ, ಕೋಮಲಕುಮಾರಿ, ಆರೀಪುಲ್ಲಾ ದರ್ವೇಶ್ ಇನ್ನಿತರರ ಆಶಯಗಳನ್ನು ಮುನ್ನಡೆಸಲು ಪ್ರಯತ್ನಿಸುವುದಾಗಿ ತಿಳಿಸಿದರು.
    

ಮಾಜಿ ಸಚಿವ ಕೆ.ಎ.ನಿಸಾರ್ ಅಹ್ಮದ್ ಮಾತನಾಡುತ್ತಾ 1990 ರಲ್ಲಿ ಸಮಿತಿಯಲ್ಲಿ 74 ಸದಸ್ಯರಿದ್ದರು. ಶಾಲೆಗಳಲ್ಲಿ ಎಸ್.ಪಿ, ಡಿ.ಸಿ, ಡಿ.ವೈ.ಎಸ್.ಪಿ, ಅಜೀಬ್ ಸೇಠ್, ಸಿಂಧ್ಯಾ, ಜಾಪರ್‍ಷರಿಫ್ ಮುಂತಾದವರು ಸಭೆಗೆ ಬಂದು ಘಟನೆ ನಡೆಯದೆ ಇರುವಂತೆ ಜಾಗೃತಿ ಮೂಡಿಸುವಲ್ಲಿ ನಾಗರೀಕ ಸಾಂತಿ ಮತ್ತು ಸೌಹಾರ್ದ ಸಮಿತಿ ಮುಖ್ಯ ಪಾತ್ರ ವಹಿಸಿದೆಯೆಂದು ಸಮಿತಿಯ ಕಾರ್ಯವೈಖರಿಯನ್ನು ಶ್ಲಾಘಿಸಿದರು.
    

ಡಿ.ವೈ.ಎಸ್.ಪಿ.ಅಬ್ದುಲ್ ಸತ್ತಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ಎಲ್ಲಾ ದೀನದಲಿತರು, ಸಂಘಟನೆಗಳು ಹಿರಿಯ ಮುಖಂಡರು ನನಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ಎಲ್ಲರೂ ಬೆಂಬಲವಿದ್ದಾಗ ಮಾತ್ರ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯ ಎಂದ ಅವರು ಎಲ್ಲಾ ಸಮುದಾಯಗಳು ಒಂದಾಗಿ ಬಾಳಬೇಕೆಂದು ಕರೆ ನೀಡಿದರು.
  

 ಕಾರ್ಯಕ್ರಮದಲ್ಲಿ ಅಂಜುಮಾನ್ ಅಧ್ಯಕ್ಷ ಜಮೀರ್ ಅಹ್ಮದ್, ಶಾಬೀರಪಾಷ, ಸಿಲ್ಕ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಹಾಗೂ ನಗರಸಭೆ ಸದಸ್ಯ ಸಾಧಿಕ್‍ಪಾಷ, ಜಯದೇವಪ್ರಸನ್ನ, ಕೋಮಲಕುಮಾರಿ, ಆರಿಫ್‍ಪಾಷ, ಲಕ್ಷ್ಮಯ್ಯ, ಮುನಿಸ್ವಾಮಿಗೌಡ, ವಕೀಲರಾದ ಎಂ.ಜಯರಾಂ, ಶಂಕರಪ್ಪ, ನಗರಸಭಾ ಮಾಜಿ ಸದಸ್ಯ ವಿ.ಪ್ರಕಾಶ್, ಲಾಲ್ ಬಹದ್ದೂರ್‍ಶಾಸ್ತ್ರಿ, ವೆಂಕಸ್ವಾಮಿ, ವೆಂಕಟರಾಮ್, ಮುನಿವೆಂಕಟಮ್ಮ ಮತ್ತು ಭೀಮಸೇನೆ ಕಾರ್ಯಕರ್ತರು ಭಾಗವಹಿದ್ದರು.

Read These Next

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...