ಕೋಲಾರ:ಶೈಕ್ಷಣಿಕ ಅಭಿವೃದ್ಧಿಯಿಂದ ಸರ್ವಾಗೀಣ ಅಭಿವೃದ್ಧಿ ಸಾದ್ಯ: ಕೆ ವಿದ್ಯಾಕುಮಾರಿ

Source: shabbir | By Arshad Koppa | Published on 18th September 2017, 8:07 AM | State News |

ಕೋಲಾರ, ಸೆಪ್ಟೆಂಬರ್ 17 : ಯಾವುದೇ ಸಮುದಾಯವು ಅಭಿವೃದ್ಧಿಯಾಗಲು ಶೈಕ್ಷಣ ೀಕ ಪ್ರಗತಿಯು ಅತಿಮುಖ್ಯ ಪಾತ್ರ ವಹಿಸುತ್ತದೆ. ಶೈಕ್ಷಣ ಕ ಅಭಿವೃದ್ಧಿಯಿಂದ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕøತಿಕ ಅಭಿವೃದ್ಧಿ ಸಾದ್ಯವಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ಅವರು ಅಭಿಪ್ರಾಯಪಟ್ಟರು. 
    ಇಂದು ನಗರದ ಟಿ. ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ವಿಶ್ವ ಕರ್ಮ ಮಹಾಸಭಾ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವಕರ್ಮಜಯಂತಿಯನ್ನು ಅವರು ಉದ್ಘಾಟಿಸಿ ಮಾತನಾಡಿದರು. ವರ್ಷದಲ್ಲಿ ಸರ್ಕಾರದ ವತಿಯಿಂದ ಸುಮಾರು 37 ಜಯಂತಿಗಳನ್ನು ಆಚರಿಸುತ್ತೇವೆ. ಇದರ ಉದ್ದೇಶ ಪ್ರತಿಸಮುದಾಯದಲ್ಲೂ ಸಾಂಸ್ಕøತಿಕ ಪ್ರಜ್ಞೆ ಮೂಡಿಸುವುದು ಹಾಗೂ ಸಮುದಾಯವನ್ನು ಮುಂದೆ ತರುವುದು ಆಗಿದೆ ಎಂದರು.
    ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸಬೇಕು. ಯಾವುದೇ ಹೆಣ್ಣು ಮಗು ಶಿಕ್ಷಣದಿಂದ ವಂಚಿತವಾಗಬಾರದು. ಹಿಂದುಳಿದ ವರ್ಗಗಳ ನಿಗಮ ಮತ್ತು ಇಲಾಖೆಯಿಂದ ಹಾಸ್ಟೆಲ್ ಸೌಲಭ್ಯ, ವಿದ್ಯಾರ್ಥಿ ವೇತನ ಮುಂತಾದವುಗಳ ಸದುಪಯೋಗವನ್ನು ಪಡೆದುಕೊಂಡು ಮುಂದೆ ಬರಬೇಕು  ಶಿಲ್ಪಕಲೆ ಕೆತ್ತನೆಯು ವಿಶ್ವಕರ್ಮ ಜನಾಂಗಕ್ಕೆ ದೇವರು ನೀಡಿರುವ ಅದ್ಬುತ ವರ. ಬೇಲೂರಿನ ಶಿಲ್ಪ ಕಲೆಯು ಇದಕ್ಕೆ ಉತ್ತಮ ನಿದರ್ಶನ ಎಂದು ತಿಳಿಸಿದರು.
    ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಜಿಲ್ಲಾಧ್ಯಕ್ಷರಾದ ಕಲಾವಿದ ವಿಷ್ಣುವರು ಮಾತನಾಡಿ ವಿಶ್ವಕರ್ಮ ಜನಾಂಗವು ಪಂಚ ಕಸಬುಗಳಾದ ರೈತರು, ಅಕ್ಕಸಾಲಿಗರು, ಮರಗೆಲಸ, ಕುಲುಮೆ ಮತ್ತು ಶಿಲ್ಪಿಗಳಾಗಿ ಸಮಾಜದ ಸೇವೆಯನ್ನು ಮಾಡುತ್ತಿದ್ದಾರೆ. ರಾಜ್ಯದಲ್ಲಿ ಸುಮಾರು 45 ಲಕ್ಷ ವಿಶ್ವಕರ್ಮರು ಇದ್ದಾರೆ. ವಿಶ್ವಕರ್ಮ ಎಂಬುದು ಜಾತಿ ಅಲ್ಲ ಅದು ಒಂದು ದೇಶದ ಸಂಸ್ಕøತಿ. ರಾಜ್ಯ ಸರ್ಕಾರವು 2014-15 ರಲ್ಲಿ ವಿಶ್ವಕರ್ಮ ನಿಗಮ ಮಂಡಳಿ ಸ್ಥಾಪಿಸಿ 5 ಕೋಟಿ ರೂಗಳನ್ನು ನೀಡಿತ್ತು. ಪ್ರಸ್ತುತ 20 ಕೋಟಿ ರೂಗಳನ್ನು ನೀಡಿದೆ ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಿ ಎಂದು ತಿಳಿಸಿದರು.
    ಸಮಾರಂಭದಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾ ಸಭಾದ ಜಿಲ್ಲಾ ಗೌರವಾಧ್ಯಕ್ಷರಾದ ಪ್ರಭಾಕರ್, ಉಪಾಧ್ಯಕ್ಷರಾದ ಎನ್. ಸರ್ವೆಚಾರ್, ಪ್ರಧಾನ ಕಾರ್ಯದರ್ಶಿ ಸೋಮಶೇಖರಚಾರಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರವಿಕುಮಾರ್ ಸೇರಿದಂತೆ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

Read These Next

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...