ಕೋಲಾರ:- ಸರ್ಕಾರಿ ಶಾಲೆಗಳ ಮಕ್ಕಳ ಕಲಿಕೆಗೆ ಪೂರಕವಾಗಿ ಉಳ್ಳವರು ನೆರವಿನ ಹಸ್ತ ಚಾಚುವ ಸಾಮಾಜಿಕ ಕಾಳಜಿಯ ಕಾರ್ಯ ಸ್ಮರಣೀಯ ಎಂದು ಹಿರಿಯ ಛಾಯಾಗ್ರಾಹಕ ಹಾಬಿ ರಮೇಶ್ ಅಭಿಪ್ರಾಯಪಟ್ಟರು.
ಶುಕ್ರವಾರ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ನಗರದ ಸತ್ಯನಾರಾಯಣ ಜ್ಯುವೆಲರ್ಸ್‍ನ ಮಾಲೀಕರಾದ ವೆಂಕಟೇಶ್ ಅವರ ದಿವಂಗತ ಪುತ್ರ ಶ್ರೀಹರಿ ಸ್ಮರಣಾರ್ಥ ಶಾಲಾ ಮಕ್ಕಳಿಗೆ ಬ್ಯಾಗ್‍ಗಳನ್ನು ವೆಂಕಟೇಶ್ ಅವರ ಸಮ್ಮುಖದಲ್ಲಿ ವಿತರಿಸಿ,ಶ್ರದ್ದಾಂಜಲಿ ಅರ್ಪಿಸಿ ಅವರು ಮಾತನಾಡುತ್ತಿದ್ದರು.
ಧಾರ್ಮಿಕ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಕೊಳ್ಳುತ್ತಿದ್ದ ವೆಂಕಟೇಶ್ ಅವರ ಕುಟುಂಬಕ್ಕೆ ಮಗನ ಸಾವು ತುಂಬಲಾರದ ನಷ್ಟ ತಂದಿದೆ ಎಂದು ವಿಷಾದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯ ಶಿಕ್ಷಕ ಸಿ.ಎನ್.ಪ್ರದೀಪ್ ಕುಮಾರ್, ದುಃಖದಲ್ಲೂ ಬಡ ಮಕ್ಕಳಿಗೆ ನೆರವಾಗುವ ಹೃದಯವಂತಿಕೆ ಎಲ್ಲರಿಗೂ ಬರಲಾರದು ಎಂದರು.
ತಮ್ಮ ಮಗನ ಸಾವಿನ ದುಃಖದ ನಡುವೆ ಸರ್ಕಾರಿ ಶಾಲೆಯ ಮಕ್ಕಳಿಗೆ ನೆರವಾಗಬೇಕೆಂಬ ಅವರ ಬಯಕೆ ನಿಜಕ್ಕೂ ಸಾರ್ಥಕತೆ ತರುತ್ತದೆ ಎಂದು ತಿಳಿಸಿ ಅಪಘಾತದಲ್ಲಿ ಕೊನೆಯುಸಿರೆಳೆದ ವೆಂಕಟೇಶ್ ಅವರ ಪುತ್ರ ಶ್ರೀಹರಿ ಅವರಿಗೆ ಚಿರಶಾಂತಿ ಸಿಗಲಿ ಎಂದು ಹಾರೈಸಿದರು.
ವಿಹಿಂಪ ಅಧ್ಯಕ್ಷರಾಗಿ ವೆಂಕಟೇಶ್ ಅವರ ತಂದೆ ಸತ್ಯನಾರಾಯನಶೆಟ್ಟಿ ಅವರು ಅನೇಕ ಧಾರ್ಮಿಕ ಕಾರ್ಯಗಳ ಮೂಲಕ ಮನೆಮಾತಾಗಿದ್ದರು, ಅವರಂತೆಯೇ ಅವರ ಮಗ ವೆಂಕಟೇಶ್ ಅವರು ನಿರಂತರವಾಗಿ ಅಂತರಗಂಗೆಯಲ್ಲಿ ಕೊನೆ ಕಾರ್ತಿಕ ಸೋಮವಾರ ನಡೆಸಿಕೊಂಡು ಬಂದಿರುವ ಅನ್ನದಾಸೋಹ ಸ್ಮರಣೀಯ ಎಂದರು.
ಕಾರ್ಯಕ್ರಮದಲ್ಲಿ ಹಾಜರಿದ್ದ ಫ್ಯಾನ್ಸಿಹಾಲ್‍ನ ಮಾಲೀಕರಾದ ರಾಜೇಂದ್ರ ಕಾರ್ಲೇಕರ್,ಪ್ರಸಾದ್ ಜ್ಯುವೆಲರ್ಸ್‍ನ ಪ್ರಸಾದ್ ಮಾತನಾಡಿ, ವೆಂಕಟೇಶ್ ಅವರಿಗೆ ತಮ್ಮ ಮಗನ ಸಾವಿನ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸಿದರು.
ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳು,ಶಿಕ್ಷಕರು ಎರಡು ನಿಮಿಷ ಮೌನಾಚರಣೆ ಮೂಲಕ ದಿವಂಗತ ಶ್ರೀಹರಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು.
ಕಾರ್ಯಕ್ರಮದಲ್ಲಿ ಎಸ್‍ಡಿಎಂಸಿ ಅಧ್ಯಕ್ಷ ಮುನಿರಾಜು, ಮಾಜಿ ಅಧ್ಯಕ್ಷ ಮುಳ್ಳಹಳ್ಳಿ ಮಂಜುನಾಥ್, ಶಿಕ್ಷಕರಾದ ಸಿ.ಎಂ.ವೆಂಕಟರಮಣಪ್ಪ, ಎಸ್.ಅನಂತಪದ್ಮನಾಭ್,ಸತೀಶ್ ಎಸ್.ನ್ಯಾಮತಿ, ಭವಾನಿ, ಶ್ವೇತಾ, ಸುಗುಣಾ,ಲೀಲಾ, ಡಿ.ಚಂದ್ರಶೇಖರ್, ವಸಂತಮ್ಮ ಮತ್ತಿತರರು ಹಾಜರಿದ್ದು, ಸಿ.ಎಲ್.ಶ್ರೀನಿವಸಲು ಸ್ವಾಗತಿಸಿ, ನಿರೂಪಿಸಿದರು.ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ
Read These Next
ಉಗ್ರರ ದಾಳಿಯನ್ನು ವಿರೋಧಿಸಿ ಪ್ರೋ|| ಎಂ.ಡಿ.ಎನ್. ರೈತ ಸಂಘದಿಂದ ಧರಣಿ
ಕೋಲಾರ : ಕಾಶ್ಮೀರದ ಅವಂತಿಪೋರಾದಲ್ಲಿ ಸಿಆರ್ಪಿಎಫ್ ಬಸ್ಗೆ ಸ್ಪೋಟಗೊಳಿಸಿ ಉಗ್ರರ ದಾಳಿಗೆ 42 ಜನ ಯೋದರು ಬಲಿಯಾಗಿರುವ ಯೋಧರ ...
'ಬಿಜೆಪಿಯವರು ಜನವಿರೋಧಿಗಳು. ಅವರನ್ನು ನಂಬಬೇಡಿ’- ಸಿದ್ದರಾಮಯ್ಯ
ಶ್ರೀನಿವಾಸಪುರ: ಸಮಾಜದ ಎಲ್ಲ ಸಮುದಾಯಗಳಿಗೂ ಸಮುದಾಯ ಭವನ ಬಳಕೆಗೆ ಯೋಗ್ಯವಾಗಿದೆ. ಆದ್ದರಿಂದಲೇ ನಮ್ಮ ಸರ್ಕಾರ ಎಲ್ಲ ವರ್ಗದ ಜನರಿಗೂ ...
ಶುಕ್ರವಾರದ ನಮಾಝ್ ನಲ್ಲಿ ಮುಸ್ಲಿಮ್ ಸಮುದಾಯದಿಂದ ಹುತಾತ್ಮ ಯೋಧರಿಗಾಗಿ ವಿಶೇಷ ಪ್ರಾರ್ಥನೆ
ಉಡುಪಿ: ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅವಂತಿಪೋರದಲ್ಲಿ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಯೋಧರಿಗಾಗಿ ಗಂಗೊಳ್ಳಿ ...
ಪುಲ್ವಾಮ ಉಗ್ರ ದಾಳಿ: ಕರ್ನಾಟಕದ ಯೋಧ ಹುತಾತ್ಮ!
ಪುಲ್ವಾಮ ಉಗ್ರ ದಾಳಿ: ಕರ್ನಾಟಕದ ಯೋಧ ಹುತಾತ್ಮ!
ಶ್ರೀನಿವಾಸಪುರ ರಾಷ್ಟ್ರೀಯ ಜಂತು ಹುಳ ನಿರ್ಮೂಲನಾ ದಿನಾಚರಣೆ
ಶ್ರೀನಿವಾಸಪುರ: ಪೋಷಕರು ತಮ್ಮ ಮಕ್ಕಳಿಗೆ ಜಂತು ಹುಳು ನಿವಾರಣಾ ಮಾತ್ರೆ ಕೊಡುವ ಮೂಲಕ ಸಂಭವನೀಯ ಅನಾರೋಗ್ಯದಿಂದ ಪಾರುಮಾಡಬೇಕು ಎಂದು ...
ಶ್ರೀನಿವಾಸಪುರ ತಾಲ್ಲೂಕು ಮಟ್ಟದ ಸೇವಾರತ್ನ ಪ್ರಶಸ್ತಿ ಪ್ರದಾನ ಸಮಾರಂಭ
ಶ್ರೀನಿವಾಸಪುರ: ಉತ್ತಮ ಬೋಧನೆಯಿಂದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ರೂಪಿಸಬೇಕು ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ...
’ದಲಿತ’ ಪದವನ್ನು ’ಪರಿಶಿಷ್ಟ ಜಾತಿ’ ಎಂಬ ಅರ್ಥಕ್ಕೆ ಸೀಮಿತಗೊಳಿಸಬಾರದು
ಕೇಂದ್ರದ ಮಾಹಿತಿ ಮತ್ತು ಪ್ರಸಾರ ಇಲಾಖೆಯು ಇನ್ನು ಮುಂದೆ ಮಾಧ್ಯಮಗಳು ದಲಿತ ಎಂಬ ಪದವನ್ನು ಬಳಸಬಾರದೆಂದು ಇತ್ತೀಚೆಗೆ ಸಲಹಾತ್ಮಕ ...
ನಿಜಕ್ಕೂ ಸಾದಿಯಾ ಯಾರು?
ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...
ಟಿಪ್ಪುವಿನ ಆದ್ಯತೆ ರಾಜನೀತಿಯಾಗಿತ್ತೇ ಹೊರತು ಧಾರ್ಮಿಕ ಹಿತಾಸಕ್ತಿಯಲ್ಲ
ಮೈಸೂರು ರಾಜ್ಯವನ್ನು ಹೆಚ್ಚು ಕಾಲ ಆಳುವ ಪರಮಗುರಿ ಹೊಂದಿದ್ದ ಟಿಪ್ಪುವಿಗೆ ಮುಖ್ಯವಾಗಿದ್ದು ರಾಜನೀತಿಯೇ ವಿನಾ ಧರ್ಮವಲ್ಲ ಎಂಬುದು ...
ಕಾರ್ಮಿಕರು ಸಾವುಗಳು ಮತ್ತು ಸರಾಗವಾಗಿ ನಡೆಯುವ ಉದ್ಯಮಗಳು
ಸರಾಗವಾಗಿ ಉದ್ಯಮ ನಡೆಸಲು ತೆರಬೇಕಾದ ಬೆಲೆ ಕಾರ್ಮಿಕರ ಸುರಕ್ಷೆಯ ಬಗ್ಗೆ ಅಮಾನುಷ ನಿರ್ಲಕ್ಷ್ಯ.
ಅಬುಧಾಬಿ:ಯಕ್ಷಗಾನ ಕಲಾವಿದ ಶ್ರೀ ಶೇಖರ್ ಡಿ. ಶೆಟ್ಟಿಗಾರ್ ಕಿನ್ನಿಗೋಳಿಯವರಿಗೆ ಅಬುಧಾಬಿ ಕರ್ನಾಟಕ ಸಂಘದ ಪ್ರತಿಷ್ಠಿತ "ದ. ರಾ. ಬೇಂದ್ರೆ ಪ್ರಶಸ್ತಿ"
ವಿಶೇಷ ಲೇಖನ: ಬಿ.ಕೆ ಗಣೇಶ್ ರೈ, ಅಬುಧಾಬಿ