ಕೋಲಾರ: ಸರ್ವಜ್ಞ ಭವನ ನಿರ್ಮಾಣಕ್ಕೆ 50 ಲಕ್ಷ ರೂ ಮಂಜೂರು: ಕೆ.ಹೆಚ್. ಮುನಿಯಪ್ಪ 

Source: shabbir ahmed | By Arshad Koppa | Published on 21st February 2017, 8:07 AM | State News | Special Report |

ಕೋಲಾರ, ಫೆಬ್ರವರಿ 20 (ಕರ್ನಾಟಕ ವಾರ್ತೆ) :ಸರ್ವಜ್ಞ ಭವನ ನಿರ್ಮಾಣಕ್ಕೆ 50 ಲಕ್ಷ ರೂಗಳನ್ನು ಮಂಜೂರು ಮಾಡಲಾಗುವುದು ಎಂದು ಲೋಕಸಭಾ ಸದಸ್ಯರಾದ ಕೆ.ಹೆಚ್.ಮುನಿಯಪ್ಪ ಅವರು ತಿಳಿಸಿದರು. 

ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದ್ದ ಶ್ರೀ ಸಂತ ಕವಿ ಸರ್ವಜ್ಞ ಜಯಂತಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 
 ಜಿಲ್ಲಾಧಿಕಾರಿಗಳು ಸರ್ವಜ್ಞ ಭವನ ನಿರ್ಮಿಸಲು ಜಮೀನು ನೀಡಲು ಒಪ್ಪಿದ್ದಾರೆ. ಅದರಂತೆ ಭವನ ಪ್ರಾರಂಭಿಸಲು 10 ಲಕ್ಷ ರೂಗಳನ್ನು ಬಿಡುಗಡೆ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗುವುದು. ಜೊತೆಗೆ ಕುಂಬಾರ ವರ್ಗವು 2ಎ ನಲ್ಲಿ ಇರುವುದರಿಂದ ಸಾಕಷ್ಟು ಸೌಲಭ್ಯಗಳು ದೊರೆಯುತ್ತಿಲ್ಲ. ಹಾಗಾಗಿ ಅವಕಾಶವಿದ್ದಲ್ಲಿ 1ಎ ಗೆ ಸೇರಿಸಲು ಹಿಂದುಳಿದ ವರ್ಗಗಳ ಆಯೋಗಕ್ಕೆ ಪತ್ರ ಬರೆಯುವುದಾಗಿ ಹೇಳಿದರು. 
ದೇವರಾಜು ಅರಸ್ಸು ಮುಖ್ಯಮಂತ್ರಿಗಳಾಗಿದ್ದಾಗ ಹಿಂದುಳಿದ ಸಮಾಜಗಳನ್ನು ಗುರ್ತಿಸಿ ಅವುಗಳ ಅಭಿವೃದ್ಧಿಯನ್ನು ಮಾಡಲಾಯಿತು. ಆದರೆ ಕಾಲ ಕಳೆದಂತೆಲ್ಲಾ ಹಿಂದುಳಿದ ವರ್ಗಗಳ ಅಭಿವೃದ್ಧಿಯಲ್ಲಿ ಕೆಲವು ಸಮುದಾಯಗಳು ಮಾತ್ರ ಬೆಳೆದವು ಇನ್ನೂ ಕೆಲಸವು ಸಮುದಾಯಗಳು ಹಿಂದೆ ಬೀಳುವಂತಾಯಿತು ಎಂದರು. 
ಪರಿಶಿಷ್ಟ ಜಾತಿ ಮತ್ತು ಪಂಗಡದ ರೆಸಿಡೆನ್ಸಿ ಮತ್ತು ಹಿಂದುಳಿದ ವರ್ಗಗಳ ಆಯೋಗದ ಅಡಿಯಲ್ಲಿ ಹಾಸ್ಟೆಲ್‍ಗಳು ನಡೆಯುತ್ತಿದ್ದು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಅಷ್ಟೇ ಅಲ್ಲದೆ ತಮ್ಮ ಮಕ್ಕಳನ್ನು ರೆಸಿಡೆನ್ಸಿ ಶಾಲೆಗಳಿಗೆ ಸೇರಿಸಿ ಉತ್ತಮ ಶಿಕ್ಷಣವನ್ನು ಕೊಡಿಸಿ ಎಂದ ಅವರು, ಪ್ರತಿಯೊಂದು ಹೋಬಳಿಗೂ ಒಂದೊಂದು ರೆಸಿಡೆನ್ಸಿ ಶಾಲೆಗಳನ್ನು ನಿರ್ಮಿಸಲು ಪ್ರಾಮಾಣ ಕ ಪ್ರಯತ್ನ ಪಡುವುದಾಗಿ ತಿಳಿಸಿದರು. 
ಪ್ರತಿಯೊಂದು ಧರ್ಮ, ಮತ, ಜಾತಿಗಳಲ್ಲೂ ಸಹ ಇಂತಹ ಸರ್ವಜ್ಞರಿದ್ದಾರೆ. ಗಾಂಧೀಜೀ, ಅಂಬೇಡ್ಕರ್, ಬುದ್ದ, ಪೈಗಂಬರ್ ಇಂತಹವರೆಲ್ಲಾ ದೈವಸಂಭೂತಿಗಳಾಗಿದ್ದಾರೆ. ಅದೇ ರೀತಿ ತಮ್ಮ ಮಕ್ಕಳನ್ನೂ ಸಹ ಸರ್ವಜ್ಞರಾಗಿಲು ಪ್ರತಿಯೊಬ್ಬರೂ ಶ್ರಮಿಸಬೇಕೆಂದು ಹೇಳಿದರು. 
ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕ್ ಚಂದ್ರ ಮಾತನಾಡಿ, ಸಂಸ್ಕøತದಲ್ಲಿ ಸರ್ವಜ್ಞ ಎಂದರೆ ಎಲ್ಲಾ ತಿಳಿದವನು ಎಂದರ್ಥ. ಸರ್ವಜ್ಞನ ಕಾಲದ ಬಗ್ಗೆ ನಿಖರವಾದ ಮಾಹಿತಿಗಳು ಇಲ್ಲ. ಆದರೆ ಸರ್ವಜ್ಞನ ಭಾಷಾ ಪ್ರಯೋಗದ ಲಕ್ಷಣಗಳ ಅಧ್ಯಯನದಿಂದ ಈತ ಜೀವಿಸಿದ್ದ ಕಾಲ 13 ನೇ ಶತಮಾನದ ಆದಿಭಾಗ ಎಂದು ಪ್ರತಿಪಾದಿಸಲಾಗಿದೆ ಎಂದರು. 
ಸರ್ವಜ್ಞನ ನಿಜವಾದ ಹೆಸರು ಪುಷ್ಪದತ್ತ. ಸರ್ವಜ್ಞ ಎಂಬುವುದು ಅವರ ಕಾವ್ಯನಾಮ. ತಂದೆ ತಾಯಿಗಳಿಂದ ಅಗಲಿ ಪುಣ್ಯ ಕ್ಷೇತ್ರಗಳು ಹಾಗೂ ಗುರು ಮಠಗಳನ್ನು ಭೇಟಿ ಮಾಡಿ ಜ್ಞಾನಾರ್ಜನೆ ಮಾಡಿದನು. ಎಲ್ಲಾ ಶಾಸ್ತ್ರಗಳ ಜ್ಞಾನವನ್ನು ಸಂಪಾದಿಸಿದನು. ಅವನ ಜನಪ್ರಿಯ ವಚನಗಳು ಸಾಕಷ್ಟು ಮಾಹಿತಿಯನ್ನು ಒದಗಿಸಿವೆ. ಅವರ ರಚಿಸಿದ ತ್ರಿಪದಿಗಳಿಗೆ ಲೆಕ್ಕವೇ ಇಲ್ಲ. ಸುಮಾರು 3030 ವಚನಗಳು ಲಭ್ಯವಾಗಿದೆಯೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಎಂದರು. 
ಸರ್ವಜ್ಞನ ತ್ರಿಪದಿಗಳು ಸರಳತೆ ಮತ್ತು ಪ್ರಾಸಬದ್ಧತೆಯಿಂದ ಜನಪ್ರಿಯವಾಗಿದೆ. ಈ ತ್ರಿಪದಿಗಳು ಮುಖ್ಯವಾಗಿ ನೈತಿಕ, ಸಾಮಾಜಿಕ ಮತ್ತು ಧಾರ್ಮಿಕ ವಿಷಯಗಳನ್ನು ಕುರಿತವು. ಹಲವು ಒಗಟುಗಳು ಸಹ ಸರ್ವಜ್ಞನ ತ್ರಿಪದಿಗಳಲ್ಲಿ ಸೇರಿವೆ ಎಂದು ತಿಳಿಸಿದರು. 
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸೂಲೂರು ಎಂ.ಆಂಜಿನಪ್ಪ ಮಾತನಾಡಿ, ಭಗವಂತ ವ್ಯಕ್ತಿಯ ರೂಪದಲ್ಲಿ ಆಗಾಗ ಬಂದು ಸಮಾಜದ ಸುಧಾರಣೆ ಬಗ್ಗೆ ತಿಳಿಸಿ ಹೋಗುತ್ತಾರೆ. ಭಗವಂತನ ಇನ್ನೊಂದು ರೂಪವೇ ಸರ್ವಜ್ಞ ಎಂದು ಅವರು ಬಣ ್ಣಸಿದರು. 
ಹಿಂದುಳಿದ ವರ್ಗಗಳಿಗೆ ಶಕ್ತಿಯನ್ನು ತುಂಬಿ ಚೈತನ್ಯ ನೀಡುವ ಸಲುವಾಗಿ ಆಯಾ ಸಮುದಾಯಗಳ ಮಹಾನ್ ವ್ಯಕ್ತಿಗಳನ್ನು ಗುರ್ತಿಸಿ ಅವರ ಆಚರಣೆಗಳನ್ನು ಸರ್ಕಾರ ಮಾಡುತ್ತಿದೆ. ಅದೇ ರೀತಿಯಾಗಿ ಮುಖಂಡರುಗಳು ಸಮುದಾಯದಲ್ಲಿನ ಬಡ ಜನತೆಗೆ ಸರ್ಕಾರದಿಂದ ಬರುವ ಸೌಲಭ್ಯಗಳನ್ನು ತಲುಪಿಸುವ ಪ್ರಾಮಾಣ ಕ ಪ್ರಯತ್ನ ಮಾಡಬೇಕು ಎಂದರು. 
ಮುಖಂಡರಾದ ತಬಲ ನಾರಾಯಣಸ್ವಾಮಿ, ನಾಗರಾಜಪ್ಪ, ಜ್ಞಾನ ಮೂರ್ತಿ ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನಾ ನಗರದ ಪ್ರಮುಖ ರಸ್ತೆಗಳಲ್ಲಿ ಸರ್ವಜ್ಞ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಅದ್ದೂರಿಯಾಗಿ ಮೆರವಣ ಗೆ ಮಾಡಲಾಯಿತು. 


ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಗೀತಮ್ಮ ಆನಂದರೆಡ್ಡಿ, ನಗರಸಭೆ ಅಧ್ಯಕ್ಷೆ ಮಹಾಲಕ್ಷ್ಮೀ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ, ಡಿವೈಎಸ್‍ಪಿ ಅಬ್ದುಲ್ ಸತ್ತಾರ್, ಗ್ರೇಡ್2 ತಹಶೀಲ್ದಾರ್ ನಾಗವೇಣ , ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯ ನಿರ್ದೇಶಕ ಸಿದ್ರಾಸಿಂಧೆ, ನಾರಾಯಣಸ್ವಾಮಿ, ವಿವಿಧ ಸಂಘಟನೆಗಳ ಮುಖಂಡರಾದ ಎಂ.ವೆಂಕಟೇಶ್, ಎಲ್.ರಾಜಪ್ಪ, ಶ್ರೀನಿವಾಸ್, ಗೌಡಳ್ಳಿ ವೆಂಕಟಸ್ವಾಮಿ, ನ್ಯಾತಪ್ಪ, ನಂದೀಶ್, ಚಂಬೆ ರಾಜೇಶ್, ಕಲಾವಿದ ವಿಷ್ಣು, ಯುವರಾಜ್, ಜಯದೇವ್, ನಂಜುಂಡಪ್ಪ ಸೇರಿದಂತೆ ಮುಂತಾದವರು ಇದ್ದರು. 

Read These Next

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...