ಕೋಲಾರ: ರೈತರ ಸಾಲ ಮನ್ನಾ-ಸರ್ಕಾರದ ಕ್ರಮ ಶ್ಲಾಘಿಸಿದ ರೈತಸಂಘ,ಹಸಿರುಸೇನೆ

Source: shabbir | By Arshad Koppa | Published on 23rd June 2017, 7:48 PM | State News | Guest Editorial |

ಕೋಲಾರ ಜೂ.21 : ರಾಜ್ಯ ಸರ್ಕಾರವು ರೈತರ ಅಲ್ವಾವದಿ ಮತ್ತು ಬೆಳೆ ಸಾಲವನ್ನು ಸಹಕಾರಿ ಬ್ಯಾಂಕುಗಳು ಮತ್ತು ಸಹಕಾರಿ ಸಂಘಗಳ ಸಾಲ ಪಡೆದ ರೈತರ 50 ಸಾವಿರ ಸಾಲವನ್ನು ಮನ್ನಾ ಮಾಡಿರುವ ನಿರ್ಧಾರವನ್ನು ರೈತ ನಾಯಕ ಪೋ|| ನಂಜುಂಡ ಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸರು ಸೇನೆಯು ಸ್ವಾಗತಿಸಿದೆ. 


ಆದರೆ ಸರ್ಕಾರವು ಸಾಲ  ಮನ್ನ ಮಾಡುವ ವಿಚಾರದಲಿ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಎಂಬಂತೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ಮಾಡಿರುವ ರೈತರ ಸಾಲವನ್ನು ಪರಿಗಣಿಸದೆ ಇರುವುದು ಉಳಿಕೆ ರೈತರಿಗೆ ಬರೆ ಎಳೆದಂತಿದೆ. ಕೃಷಿಕರ ಹಿತದೃಷ್ಠಿಯಿಂದ ಸಾಲ ಮನ್ನಾ ಮಾಡುವ ಆಲೋಚನೆ ಸರ್ಕಾರದ ನಿರ್ಧಾರವಾದರೆ ತಾರತಮ್ಯವೇಕೆ ಎಂದು ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಸಂಪೂರ್ಣ ಬರ ತಾಂಡವವಾಡುತ್ತಿದ್ದು, ಕೃಷಿ ಮಾಡಲಾರದೆ ರೈತರು ಆತ್ಮಹತ್ಯೆಗಳಿಗೆ ಶರಣಾಗುತ್ತಿರುವ ಸಂದರ್ಭದಲ್ಲಿ ಸರ್ಕಾರವು ಎಲ್ಲಾ ರೈತರನ್ನು ಸಮನಾಗಿ ಕಾಣುವ ಮೂಲಕ ಸಾಲ ಮನ್ನಾ ನಿರ್ಧಾರವನ್ನು ಪ್ರಕಟಿಸಬೇಕಾಗಿದೆ. ಇಂತಹ ನಿರ್ಧಾರದಿಂದ ಸರ್ಕಾರವು ಸಂಪೂರ್ಣವಾಗಿ ರೈತರ ಪರ ಇಲ್ಲವೆಂಬುದು ಸ್ಪಷ್ಠವಾಗಿದೆ.
ರಾಜ್ಯದಲ್ಲಿ ಸಮಗ್ರ ನದಿ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಿ ರೈತರ ಭೂಮಿಗಳಿಗೆ ನೀರು ಹರಿಸಿದ್ದರೆ ರೈತರ ಸಾಲ ಮನ್ನ ಮಾಡುವ ಪ್ರಮೇವೇಯೇ ಇರುತ್ತಿರಲಿಲ್ಲ. ಆದರೆ ಸರ್ಕಾರಗಳು ನೀರನ್ನು ಭೂಮಿಗಳಿಗೆ ಹರಿಸದೆ ರೈತರನ್ನು ಸಾಲ ಮಾಡುವಂತಹ ಪರಿಸ್ಥಿತಿಗೆ ತಂದೊಡ್ಡಿದೆ.
ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಸಾಲ ಪಡೆದಿರುವ ರೈತರ ಸಾಲವನ್ನೂಮನ್ನಾ ಮಾಡಬೇಕೆಂದು ಈ ಮೂಲಕ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯು ಆಗ್ರಹಿಸಿದೆ.

(ಕಲ್ವಮಂಜಲಿ ರಾಮುಶಿವಣ್ಣ)
ಜಿಲ್ಲಾಧ್ಯಕ್ಷರು, ಎಂ.ಡಿ.ಎನ್. ಕರ್ನಾಟರ ರಾಜ್ಯ ರೈತ ಸಂಘ 
ಹಾಗೂ ಹಸಿರು ಸೇನೆ
ಮೊ.:9731426520

ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ
                

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...