ಕೋಲಾರ:ಕೋಲಾರ ರೋಟರಿ ಕ್ಲಬ್ ವತಿಯಿಂದ ವಿವಿಧ ಸ್ಥಳಗಳಲ್ಲಿ ದ್ವಜಾರೋಹಣ

Source: shabbir | By Arshad Koppa | Published on 16th August 2017, 8:16 AM | State News | Guest Editorial |

ಕೋಲಾರ: 71ನೇ ಸ್ವತಂತ್ರ್ಯ ದಿನಾಚರಣೆ ಪ್ರಯುಕ್ತ ಕೋಲಾರ ರೋಟರಿ ಕ್ಲಬ್ ವತಿಯಿಂದ ವಿವಿಧ ಸ್ಥಳಗಳಲ್ಲಿ ದ್ವಜಾರೋಹಣ ಹಾಗೂ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ಮತ್ತು ನಿಘಂಟು ವಿತರಣೆ, ವೃದ್ಧರಿಗೆ ಹಣ್ಣು ಹಂಪಲು ವಿತರಣೆ ಮುಂತಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
      ಮೊದಲಿಗೆ ಬೆಳಗ್ಗೆ 6:30ಕ್ಕೆ ರೋಟರಿ ಭವನದಲ್ಲಿ ಹಾಗೂ ಸ್ಕೌಟ್ ಮತ್ತು ಗೈಡ್ಸ್ ಕಛೇರಿ ಆವರಣದಲ್ಲಿ ರೋಟರಿ ಕ್ಲಬ್ ಅಧ್ಯಕ್ಷರಾದ ಬಿ.ಕೆ.ದೇವರಾಜ್‍ರವರು ದ್ವಜಾರೋಹಣ ನೆರವೇರಿಸಿದರು. 
           ನಂತರ 8:00 ಗಂಟೆಗೆ ಕಾರಂಜಿಕಟ್ಟೆಯ ಸುಭಾಷ್ ಶಾಲೆ, 8:30ಕ್ಕೆ ಹೊದಲವಾಡಿ ಪ್ರಾರ್ಥಮಿಕ ಶಾಲೆ, 9:00 ಗಂಟೆಗೆ ಕಾಮದೇನಹಳ್ಳಿ ಪ್ರಾರ್ಥಮಿಕ ಶಾಲೆ, 10:00 ಗಂಟೆಗೆ ನೇತ್ರ ದೀಪ ಆಸ್ಪತ್ರೆಯಲ್ಲಿ ದ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ಹಾಗೂ ಪ್ರೌಢಶಾಲಾ ಮಕ್ಕಳಿಗೆ ನಿಘಂಟು ವಿತಾರಣೆ ಮಾಡಲಾಯಿತು. 10:30ಕ್ಕೆ ಅಂತರಗಂಗೆ ವಿದ್ಯಾ ಸಂಸ್ಥೆಯಲ್ಲಿ ಮಕ್ಕಳಿಗೆ ಊಟ ಮತ್ತು ಹಣ್ಣುಗಳನ್ನು ವಿತರಿಸಲಾಯಿತು, 11:00 ಗಂಟೆಗೆ ಹುದುಕುಳ ಪ್ರಾರ್ಥಮಿಕ ಶಾಲೆಯಲ್ಲಿ ದ್ವಜಾರೋಹಣ ಕಾರ್ಯಕ್ರಮ ನೆಡೆಸಿ ಕಳೆದ ವರ್ಷದ ಪ್ರತಿಭಾವಂತ ಮಕ್ಕಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು, ಮತ್ತೆ 12:30ಕ್ಕೆ ಬೀರಂಡಹಳ್ಳಿ ವೃದಾಶ್ರಮದಲ್ಲಿನ ವಯೋವೃದರಿಗೆ ಹಣ್ಣು ಹಂಪಲು ವಿತರಿಸಲಾಯಿತು.


    ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆ ಖಜಾಂಚಿ ಸಿ.ಆರ್.ಆಶೋಕ್, ಕಾರ್ಯದರ್ಶಿ ಎಸ್. ಎಂ.ಚಂದ್ರಶೇಖರ್,  ಮಾಜಿ ಅದ್ಯಕ್ಷ ಬೈಚಪ್ಪ, ಕೆ.ಗೋಪಾಲರೆಡ್ಡಿ, ರಾಮಚಂದ್ರಪ್ಪ,  ಗೋಪಾಲಕೃಷ್ಣರೆಡ್ಡಿ ಮತ್ತು ಸ್ಕೌಟ್ ಮತ್ತು ಗೈಡ್ಸ್ ಅದ್ಯಕ್ಷ ಪ್ರಹ್ಲದ್‍ರಾವ್, ಬಿಸಪ್ಪಗೌಡ, ಕೆ.ವಿ.ಶಂಕರಪ್ಪ, ಡಾ.ಮೌನಿ, ವಿ.ಪಿ.ಸೋಮಶೇಖರ್ ಸೇರಿದಂತೆ ಶಾಲಾ ಮುಖ್ಯೋಪಾದ್ಯಯರುಗಳು ಮತ್ತು ಶಾಲಾ ಶಿಕ್ಷಕವೃಂದ ಉಪಸ್ಥಿತರಿದ್ದರು.


     (ಬಿ.ಕೆ.ದೇವರಾಜ್) 
ಅಧ್ಯಕ್ಷರು ರೋಟರಿ ಕ್ಲಬ್ ಕೋಲಾರ


ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ

Read These Next

ಬಿಜೆಪಿ ಹಿಂದುಳಿದವರನ್ನು ತುಳಿಯುವ ಸಂಚು ರೂಪಿಸಿದೆ, ಭಟ್ಕಳದಲ್ಲಿ ಬಿಜೆಪಿ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

ಬಿಜೆಪಿ ಮೇಲ್ನೋಟಕ್ಕೆ ಅಲ್ಪಸಂಖ್ಯಾತರನ್ನು ವಿರೋಧಿಸುವ ಪಕ್ಷವಾಗಿ ಮೇಲ್ನೋಟಕ್ಕೆ ಕರೆಯಿಸಿಕೊಳ್ಳುತ್ತಿದೆಯಾದರೂ, ವಾಸ್ತವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...