ಕೋಲಾರ: 28ನೇ ರಾಷ್ಟ್ರೀಯ ರಸ್ತೆ ಸುರಕ್ಷತ ಸಪ್ತಾಹ- ಸುಗುಣ ವಿದ್ಯಾಸಂಸ್ಥೆಯಲ್ಲಿ ಜಾಗೃತಿ ಕಾರ್ಯಕ್ರಮ 

Source: shabbir ahmed | By Arshad Koppa | Published on 18th January 2017, 8:13 AM | State News | Special Report |

ಕೋಲಾರ ಜ.17 : 28ನೇ ರಾಷ್ಟ್ರೀಯ ರಸ್ತೆ ಸುರಕ್ಷತ ಸಪ್ತಾಹ ಅಂಗವಾಗಿ ಕೋಲಾರ ನಗರದ ಟಮಕದ ಸುಗುಣ ವಿದ್ಯಾಸಂಸ್ಥೆಯಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು
    
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಚಿನ್ನದ ಪದಕ ವಿಜೇತ ಎ.ಆರ್.ಎಸ್.ಐ. ಟೈಗರ್ ವೆಂಕಟೇಶ್‍ರವರು ಮಾತನಾಡಿ ಜೀವವು ಅತ್ಯಮೂಲ್ಯವಾದುದು ಮನೆ ಬಿಟ್ಟೊಡನೆ ಮತ್ತು ಮನೆ ಸೇರುವವರೆಗೂ ಸಂಚಾರಿ ನಿಯಮಗಳನ್ನು ಸದಾ ಪಾಲನೆ ಮಾಡಬೇಕು. ರೋಡ್ ಸೈನ್ಸ್, ಮಾಂಡೋಟರಿ ಸೈನ್ಸ್, ಕಾಷ್ನರಿ ಸೈನ್ಸ್, ಕಾಷ್ನರಿ ಇನ್ಪಮೆಟರಿ ಇದರ ಬಗ್ಗೆ ಹಾಗೂ ಪ್ರಥಮ ಚಿಕಿತ್ಸೆಯ ಬಗ್ಗೆ, ನಗರದಲ್ಲಿ ಜೀಬ್ರಾ ಕ್ರಾಸಿಂಗ್ ಮತ್ತು ಪುಟ್‍ಬಾತ್‍ನ್ನು ಪಾದಚಾರಿಗಳು ಬಳಸುವ ಬಗ್ಗೆ, ವಾಹನ ಚಾಲನೆ ಮಾಡುವಾಗ ಮೊಬೈಲ್ ಪೋನ್ ಬಳಸಬಾರದು ಎಂದು ಅಲ್ಲದೆ ಜೀವ ಉಳಿಸಿಕೊಳ್ಳುವ ಸಲುವಾಗಿ ಹಾಗೂ ಇತರರ ಜೀವ ಉಳಿಸುವ ಸಲುವಾಗಿ ವಾಹನ ಸವಾರರೆ ಅಲ್ಲದೆ ಪ್ರತಿಯೊಬ್ಬರಿಗೂ ಸಂಚಾರಿ ನಿಯಮ ಪಾಲಿಸಬೇಕು ಎಂದರು.
    ಎ.ಎಸ್.ಐ. ನಾರಾಯಣಪ್ಪ ರವರು ಮಾತನಾಡಿ ವಾಹನ ಚಾಲನೆ ಮಾಡುವಾಗ ಡಿ.ಎಲ್., ಇನ್ಸುರೆಡನ್ಸ್, ಆರ್.ಸಿ., ಎಮಷನ್ ಟೆಸ್ಟ್ ಪತ್ರಗಳನ್ನು ಹೊಂದಿರಬೇಕು. ವಾಹನಕ್ಕೆ ಇನ್ಸುರೆನ್ಸ್ ಇದ್ದರೆ ಅಪಘಾತ, ಕಳುವು, ಸಂದರ್ಭದಲ್ಲಿ ಬಹಳಷ್ಟು ನೆರವಾಗುತ್ತದೆ ಎಂದರು. 


    ಮುಖ್ಯ ಪೇದೆಗಳಾದ ಗುಣಶೇಖರ್, ನಾರಾಯಣಸ್ವಾಮಿ, ಸುಗುಣ ವಿದ್ಯಾಸಂಸ್ಥೆಯ ಮುಖ್ಯೋಪಾಧ್ಯಾಯರಾದ ಶ್ರೀದೇವಿ ಮತ್ತು ಶಾಲಾ ಸಿಬ್ಬಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು
    ಇದೇ ದಿನ ಮಹಾತ್ಮಗಾಂದಿ ವನದಿಂದ ಇ.ಟಿ.ಸಿ.ಎಂ. ವೃತ್ತ ಮಾರ್ಗವಾಗಿ ಕಾಲೇಜು ವತ್ತ, ಚಂಪಕ್ ವೃತ್ತ ಮತ್ತೆ ಗಾಂಧಿವನಕ್ಕೆ ಬಂದು ಮೆರವಣ ಗೆ ಮುಖಾಂತರ ರಸ್ತೆ ಸಪ್ತಾಹ ಅಂಗವಾಗಿ ಜನ ಜಾಗೃತಿ ಮೂಡಿಸಲಾಯಿತು. ಈ ಮೆರವಣೆಗೆಗೆ ಡಿ.ವೈ.ಎಸ್.ಪಿ. ಅಬ್ದುಲ್ ಸತ್ತಾರ್ ರವರು ಚಾಲನೆ ನೀಡಿದರು. ಸರ್ಕಲ್ ಇನ್ಸ್‍ಪೆಕ್ಟರ್ ಲೋಕೇಶ್‍ರವರು, ಸಂಚಾರಿ ಠಾಣೆಯ ಪಿ.ಎಸ್.ಐ. ಜಗದೀಶ್ ರವರು,. ಟೌನ್ ಪಿ.ಎಸ್.ಐ. ಪ್ರದೀಪ್, ಮುಖ್ಯಪೇದೆ ಶಿವಪ್ಪ, ಪೇದೆ ನಾರಾಯಣಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

Read These Next

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...