ಕೋಲಾರ:ವಸತಿ ಶಾಲೆಯಲ್ಲಿ ಅಪ್ರಾಪ್ತೆ ಬಾಲಕಿ ಮೇಲೆ ಅಡಿಗೆ ಸಿಬ್ಬಂದಿಯಿಂದಲೇ ಅತ್ಯಾಚಾರ-ತನಿಖೆಗೆ ರೈತಸಂಘ ಆಗ್ರಹ

Source: shabbir | By Arshad Koppa | Published on 31st August 2017, 8:05 AM | State News | Guest Editorial |

ಕೋಲಾರ.ಆ30: ಬಂಗಾರಪೇಟೆಯ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಯಲ್ಲಿ ಅಪ್ರಾಪ್ತೆ ಬಾಲಕಿ ಮೇಲೆ ಅಡಿಗೆ ಸಿಬ್ಬಂಧಿ ಅತ್ಯಾಚಾರವೆಸಗಿರುವ ಆರೋಪಿ ವಿರುದ್ಧ ಕೇಸ್ ದಾಖಲಿಸಿ ಹಾಸ್ಟೆಲ್ ವ್ಯವಸ್ತೆಯಲ್ಲಿ ಗುತ್ತಿಗೆದಾರರು ಮತ್ತು ಅಧಿಕಾರಿಗಳ ಹಿಟ್ಲರ್ ದೋರಣೆ ಮತ್ತು ಲೂಟಿಗೆ ಕಡಿವಾಣ ಹಾಕಿ ಹಾಸ್ಟೆಲ್ ವ್ಯವಸ್ಥೆಯನ್ನು ಸುದಾರಿಸಿ ಹದಗೆಟ್ಟಿರುವ ಜಿಲ್ಲೆಯ ಹಾಸ್ಟೆಲ್ ವ್ಯವಸ್ಥೆ ಬಗ್ಗೆ ಉನ್ನತ ಮಟ್ಟದ ತನಿಖೆ ಕೈಗೊಳ್ಳಬೇಕೆಂದು ಎಂದು ರೈತ ಸಂಘದಿಂದ ಜಿಲ್ಲಾಪಂಚಾಯಿತಿ ಸಿಇಒ ರವರಿಗೆ ಮನವಿ ನೀಡಿ ಆಗ್ರಹಿಸಲಾಯಿತು.
    ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ ಮಾತನಾಡಿ ಜಿಲ್ಲೆಯಲ್ಲಿ ಬಹುತೇಕ ಹಾಸ್ಟೆಲ್‍ಗಳು ಅಧಿಕಾರಿಗಳ ಮತ್ತು ಗುತ್ತಿಗೆದಾರರ ಲೂಟಿ ಕೇಂದ್ರಗಳಾಗಿವೆ.  ಬಡ ಮಕ್ಕಳಿಗೆ ಬರುವ ಪ್ರತಿಯೊಂದು ವಸ್ತುವನ್ನು ಕಸಿದು ತಿನ್ನುವ ಆಹಾರವನ್ನು ಬಿಡದೆ ಲೂಟಿ ಮಾಡುತ್ತಿದ್ದಾರೆ ಮತ್ತು ಹಾಸ್ಟೆಲ್‍ಗಳ ಅಭಿವೃದ್ಧಿಗೆ ಬರುವ ಕೋಟ್ಯಾಂತರ ರೂ. ಹಣ ಇವರ ಜೇಬು ಸೇರಿ ಸರ್ವಾಧಿಕಾರಿಗಳಂತೆ ಅಲ್ಲಿನ ಬಡ ಮಕ್ಕಳ ಮಲಮೂತ್ರವನ್ನೂ ಬಿಡದೆ ತಿನ್ನುವ ಮಟ್ಟಕ್ಕೆ ಅಧಿಕಾರಿ ವರ್ಗದ ವ್ಯವಸ್ಥೆ ಹದಗೆಟ್ಟಿದೆ.  ಈ ಮಗುವಿನ ಮೇಲೆ ಲೈಂಗಿಕ ಕಿರುಕುಳದಲ್ಲಿ ಇದಕ್ಕೆ ಸಂಬಂಧಪಟ್ಟ ಅಧಿಕಾರಿ ವರ್ಗದ ಮೇಲೆ ಮೊದಲು ಕ್ರಿಮಿನಲ್ ಮೊಕ್ಕದಮೆ ದಾಖಲಿಸಿ ಹಾಸ್ಟೆಲ್‍ಗಳ ಅವಾಂತರ ಮತ್ತು ಲೂಟಿ ಮತ್ತು ಕಿರುಕುಳ ಬಗ್ಗೆ ಉನ್ನತ ಮಟ್ಟದ ತನಿಖೆ ಮಾಡಿಸಬೇಕೆಂದು ಆಗ್ರಹಿಸಿದರು.
    ಹಾಸ್ಟೆಲ್‍ಗಳಲ್ಲಿ ಬಡ ಮಕ್ಕಳಿಗೆ ರಕ್ಷಣೆ ಎನ್ನುವುದು ಇಲ್ಲದಾಗಿದ್ದು, ಕಾವಲುಗಾರನಿಂದ ಮೇಲ್ಮಟ್ಟದ ಅಧಿಕಾರಿಯ ವರೆಗೂ ಮಕ್ಕಳ ಅನುದಾನ ಲೂಟಿ ಮತ್ತು ಕಿರುಕುಳು ನಿರಂತರವಾಗಿ ನಡೆದು ಮಕ್ಕಳು ಹಾಸ್ಟೆಲ್‍ಗಳೆಂಬ ನರಕಕೂಪದಲ್ಲಿ ಪ್ರತಿ ದಿನವೂ ನಲಗುತ್ತಿದ್ದರೂ ಜಿಲ್ಲಾಡಳಿತಕ್ಕಾಗಲಿ ಮತ್ತು ಸರ್ಕಾರಕ್ಕಾಗಲಿ ಹಾಸ್ಟೆಲ್ ವ್ಯವಸ್ಥೆಯನ್ನು ಸರಿಪಡಿಸುವ ಯೋಗ್ಯತೆ ಇಲ್ಲದಾಗಿದ್ದು, ಇದಕ್ಕೆ ಬಡ ಮಕ್ಕಳು ಬಲಿಯಾಗುತ್ತಿದ್ದು, ಈ ಲೈಂಗಿಕ ಪ್ರಕರಣವನ್ನು ಗಂಭೀರವಾಗಿ ಪರಿಗಣ ಸಿ ತಪ್ಪಿತಸ್ತ ಮತ್ತು ಅಧಿಕಾರಿ ವರ್ಗದ ವಿರುದ್ಧ ಕ್ರಿಮಿನಲ್ ಮೊಕ್ಕದಮೆ ದಾಖಲಿಸಿ ನೊಂದ ಮಗುವಿಗೆ ಜಿಲ್ಲಾಡಳಿತದಿಂದ ಸೂಕ್ತ ಬಂದೋಬಸ್ತ್ ಮತ್ತು ಪುನರ್‍ವಸತಿ ಕಲ್ಪಿಸಿ ಲೂಟಿ ಕೇಂದ್ರಗಳು ಮತ್ತು ಶೋಷಣೆ ಕೇಂದ್ರಗಳಾಗಿರುವ ಹಾಸ್ಟೆಲ್ ವ್ಯವಸ್ಥೆಗಳನ್ನು ಸರಿಪಡಿಸಿ ಬಡ ಮಕ್ಕಳನ್ನು ರಕ್ಷಿಸಬೇಕೆಂದು ತಿಳಿಸಿದರು.
    ಮನವಿ ನೀಡುವಾಗ ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್, ಪಾರುಕ್‍ಪಾಷಾ, ವಕ್ಕಲೇರಿ ಹನುಮಯ್ಯ, ವಿಜಯಪಾಲ್, ಆನಂದ್‍ಸಾಗರ್, ರಂಜೀತ್‍ಕುಮಾರ್, ಸುಪ್ರೀಂ ಚಲ, ಕಾರ್ತಿಕ್, ಭರತ್, ನರಸಾಪುರ ಪುರುಷೋತ್ತಮ್, ಮಂಜುನಾಥ್ ಮುಂತಾದವರಿದ್ದರು.

ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ.

Read These Next

ದಿನ ನಿತ್ಯದ ಅಗತ್ಯ ವಸ್ತುಗಳನ್ನು ಜಿಎಸ್ಟಿ ವ್ಯಾಪ್ತಿಗೆ ತರುವಂತೆ ಆಗ್ರಹಿಸಿ ರೈತಸಂಘದಿಂದ ಪ್ರತಿಭಟನೆ

ಕೋಲಾರ: ಜನ ಸಾಮಾನ್ಯರ ದಿನ ನಿತ್ಯದ ಅಗತ್ಯ ವಸ್ತುಗಳಾದ ಡೀಜಲ್, ಪೆಟ್ರೋಲ್, ಗ್ಯಾಸ್‍ನ್ನು ಜಿ.ಎಸ್.ಟಿ ವ್ಯಾಪ್ತಿಗೆ ತರಬೇಕೆಂದು ...

ಅಜರ್‍ಬೈಜಾನ್ ಜೊತೆಗಿನ ದ್ವಿಪಕ್ಷೀಯ ಸಂಬಂಧವನ್ನು ಭಾರತ ಗೌರವಿಸುತ್ತದೆ - ಮುನಿಯಪ್ಪ

ಕೋಲಾರ:  ಭಾರತ ಮತ್ತು ಅಜರ್‍ಬೈಜಾನ್ ನಮ್ಮ ಐತಿಹಾಸಿಕ ಸಂಬಂಧಗಳು ಮತ್ತು ಹಂಚಿಕೆ ಸಂಪ್ರದಾಯಗಳ ಆಧಾರದ ಮೇಲೆ ನಿಕಟ ಮತ್ತು ಸೌಹಾರ್ದಯುತ ...

ಪಟ್ಟಣದವಾಸಿಗಳೆ ಎಚ್ಚರ  ಬೀದಿಯಲ್ಲಿ ಬೌ ಬೌ ಸದ್ದು ಎಚ್ಚರ ತಪ್ಪಿದರೂ ನಾಯಿ ಕಡಿತ. ಕೈಕಟ್ಟಿ ಕುಳಿತಿರುವ ಪುರಸಭೆ ಅಧಿಕಾರಿಗಳು

ಶ್ರೀನಿವಾಸಪುರ: ಪಟ್ಟಣದವಾಸಿಗಳೆ ಎಚ್ಚರ  ಪಟ್ಟಣದ ಹಾದಿ ಬೀದಿಯಲ್ಲಿ ಈಗ ಬೌ ಬೌ ಸದ್ದು. ಸ್ವಲ್ಪ ಎಚ್ಚರ ತಪ್ಪಿದರೂ ನಾಯಿ ಕಡಿತ ...

ಗೊಂದಲ ನಿವಾರಿಸಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಹಿಜುವನಹಳ್ಳಿ ಗ್ರಾಮಸ್ಥರ ಮನವಿ

ಹಿಜುವನಹಳ್ಳಿ ಗ್ರಾಮದಲ್ಲಿ ಸುಮಾರು 130 ಮನೆಗಳು ಇದ್ದು, 600ಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ, ನೂರಾರು ವರ್ಷಗಳಿಂದ ಯಾರ ನಡುವೆಯೂ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...