ಶ್ರೀನಿವಾಸಪುರ:ರೋಗ್ಯ ಸಚಿವ ರಮೇಶ್ ಕುಮಾರ್ ಬಗ್ಗೆ ಈಶ್ವರಪ್ಪರ ಲಘುಮಾತುಗಳಿಗೆ ಖಂಡನೆ

Source: shabbir | By Arshad Koppa | Published on 15th November 2017, 8:21 AM | State News |

ಶ್ರೀನಿವಾಸಪುರ: ಸಚಿವ ರಮೇಶ್  ಕುಮಾರ್ ಬಡವರ ಪರವಾಗಿ ಖಾಸಗಿ ಆಸ್ಪತ್ರೆಗಳ ಖಾಯಿದೆಯನ್ನು ತಿದ್ದುಪಡಿ ಮಾಡಲು ಹೊರಟಿದ್ದು, ಇದರಿಂದ ಈ ರಾಜ್ಯದ ಬಡಜನತೆಗೆ ಸಂಜೀವಿನಿ ಆಗಿದೆ, ಆದರೆ ವಿರೋಧ ಪಕ್ಷದ ನಾಯಕರಾದ ಈಶ್ವರಪ್ಪ ಮಾತನಾಡಿರುವುದನ್ನು ಪಕ್ಷಾತೀತವಾಗಿ ಖಂಡಿಸುತ್ತಿದ್ದು,  

    ಪಟ್ಟಣದ ಬಸ್‍ಸ್ಟ್ಯಾಂಡ್ ವೃತ್ತದಲ್ಲಿ ಆರೋಗ್ಯ ಸಚಿವ ರಮೇಶ್ ಕುಮಾರ್ ಬಗ್ಗೆ ವಿಧಾನ ಪರಿಶತ್ತ್ತಿನ ವಿರೋಧಪಕ್ಷದ ನಾಯಕ ಈಶ್ವರಪ್ಪ,  ಸಚಿವರ ಬಗ್ಗೆ ಲಘುವಾಗಿ  ಮಾತುಗಳನ್ನಾಡಿರುವುದನ್ನು ಖಂಡಿಸಿ ಪಕ್ಷದ ಕಾರ್ಯಕರ್ತರಿಂದ  ಪತಿಭಟನೆ ನಡೆಸಿ, ಮಾತನಾಡಿದ ಮುಖಂಡರಾದ ಅಶೋಕ್,  ಆರೋಗ್ಯ ಸಚಿವರು ಇಡೀ ಜಿಲ್ಲೆಯಲ್ಲಿ, ರಾಜ್ಯ ವ್ಯಾಪ್ತಿಯಲ್ಲಿ ಉತ್ತಮ ಸಜ್ಜನಪಟುವೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು, ಇಂತಹ ಉತ್ತಮ ನಾಯಕರು ಖಾಸಗಿ  ಆಸ್ಪತ್ರೆಗಳ ನಿಯಂತ್ರಣ ಕಾಯ್ದೆಯ ತಿದ್ದುಪಡಿಯನ್ನು ಜಾರಿಗೊಳಿಸಲು ಸಿದ್ದರಾಗಿದ್ದು, ಈ ವಿಚಾರವಾಗಿ ಸಂಭಂಧವಿಲ್ಲದೆ ರಮೇಶ್ ಕುಮಾರ್ ರವರಿಗೆ ಮಕ್ಕಳಿಲ್ಲ, ಅವರೊಬ್ಬ ರಾಕ್ಷಸ ಎನ್ನುವ ಅವಾಚ್ಯ ಶಬ್ದಗಳನ್ನು ಬಳಸಿ ಮಾತನಾಡಿರುವುದನ್ನು ಖಂಡಿಸಿದರು.

 

     
    ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷರಾದ ನವೀನ್ ಕುಮಾರ್, ಮುಖಂಡರಾದ ಬಿ.ವಿ. ರೆಡ್ಡಿ, ಕೆ.ಕೆ. ಮಂಜು, ಮುಕ್ತಿಯಾರ್, ಎಮ್ಮನೂರು ನಾಗರಾಜ್, ಸರ್ದರ್, ರಾಮಾಂಜಮ್ಮ, ವೆಂಕಟಮ್ಮ ಮತ್ತು ನೂರಾರು ಕಾರ್ಯಕರ್ತರು ಹಾಜರಿದ್ದರು. 

ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ.

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...