ಕೋಲಾರ:ರೈತರ ಸಾಲ ಮನ್ನಾ, ಡಾ|| ಸ್ವಾಮಿನಾಥನ್ ವರದಿ ಜಾರಿ ಆಗ್ರಹಿಸಿದ ರೈತಸಂಘ

Source: shabbir | By Arshad Koppa | Published on 29th August 2017, 8:04 AM | State News | Guest Editorial |

ಕೋಲಾರ,ಆ.28: ಕಾರ್ಪೋರೇಟ್ ಕಂಪನಿಗಳ ಸಾಲ ಮನ್ನಾ ಮಾಡಿರುವ ಕೇಂದ್ರ ಸರ್ಕಾರ  ದೇಶಕ್ಕಾಗಿ ಅನ್ನ ಬೆಳೆದು ಸಾಲಗಾರರಾಗಿ ಸರಣಿ  ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರ ವಾಣಿಜ್ಯ ಬ್ಯಾಂಕ್‍ಗಳ ಕೃಷಿ ಸಾಲ ಮನ್ನಾ ಮಾಡಿ ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಪಡಿಸಿ ಡಾ|| ಸ್ವಾಮಿನಾಥನ್ ವರದಿ ಜಾರಿಗೊಳಿಸಬೇಕೆಂದು  ರೈತ ಸಂಘಧಿಂದ ಜಾನುವಾರುಗಳೊಂದಿಗೆ ಜಿಲ್ಲಾಧಿಕಾರಿ ಕಛೇರಿ ಮುಂದೆ ಹೋರಾಟ ಮಾಡುವ ಮೂಲಕ ಪ್ರದಾನ ಮಂತ್ರಿಗಳನ್ನು  ರೈತರನ್ನು ಸಂರಕ್ಷಿಸಿ ಎಂದು ಆಗ್ರಹಿಸಲಾಯಿತು. 
    ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ 70ವರ್ಷಗಳಿಂದ ರೈತರ ಬದುಕನ್ನು ಸುದಾರಿಸಿ ಆತ್ಮಹತ್ಯೆಗಳು ತಡೆಯುವಲ್ಲಿ ಎಲ್ಲಾ ಸರ್ಕಾರಗಳು ವಿಪಲವಾಗಿವೆ.ಬಂದೂಕಿನಿಂದ ಗುಂಡು ಹಾರಿಸದೆ 8 ವರ್ಷಗಳಲ್ಲಿ  3.70 ಲಕ್ಷ ರೈತರು ಆತ್ಮಹತ್ಯೆ ಹೆಸರಿನಲ್ಲಿ ಸರ್ಕಾರಗಳು  ಕೊಲೆಮಾಡಿವೆ. ಕೃಷಿ ಎನ್ನುವುದು ಈ ದೇಶದ ಅಭಿವೃದ್ಧಿಗೆ ಮೊದಲ ಸ್ಥಾನ ವಹಿಸಿದ್ದರೂ ಕೃಷಿಕ ಮಾತ್ರ ಎರಡೊತ್ತು ಊಟಕ್ಕೂ ಕಷ್ಟ ಪಡುವಂತೆ ಬದುಕುತ್ತಿದ್ದು, ಅತಿವೃಷ್ಠಿ ಅನಾವೃಷ್ಠಿ, ಅಂತರಜಲ ಕುಸಿತ, ಇವುಗಳ ಮಧ್ಯೆ ವ್ಯವಸಾಯ ಏನ್ನುವುದು ಸಾವಿನ ಆಟವಾಗಿ ಪ್ರತಿ ವರ್ಷವು ಸಾವಿರಾರು ರೈತರು ಕೃಷಿಯ  ಚದುರಂಗ  ಆಟಕ್ಕೆ ಬಲಿಯಾಗುತ್ತಿದ್ದಾರೆ. ವ್ಯವಸಾಯದ ಮೇಲೆ ಹಾಕಿದ ಬಂಡವಾಳ ವಾಪಸ್ಸು ಬರುತ್ತೇ ಎಂಬ ನಂಬಿಕೆ ಇಂದಿಗೂ ರೈತನಿಗಿಲ್ಲದಾಗಿ ವ್ಯವಸಾಯ ನೀಸಾಯ ನಿನ್ನ ಹೆಂಡತಿ ಮಕ್ಕಳ ಸಾಯ ಎಂಬಂತೆ ಬದುಕುತ್ತಿದ್ದು,  ಬ್ಯಾಂಕ್‍ಗಳು ಕೃಷಿ ಆದಾರಿತ ಸಾಲ ಕೊಡುವುದು ಅಪರೂಪವಾಗಿದೆ. ರಸಗೊಬ್ಬರ ಬೆಲೆ ಗಗನಕ್ಕೆರಿದ್ದು,ಬಹುರಾಷ್ಟ್ರೀಯ ಕಂಪನಿಗಳ ಬೀಜ ಮತ್ತು ಔಷಧಿಗಳಿಂದ ಕೃಷಿಯ ಬಂಡವಾಳ 40ಪಟ್ಟು ಏರಿ ಈ ಬೀಜ ಮತ್ತು ಔಷದಿಯಿಂದ ಬೆಳೆ ಬರುತ್ತೆಂಬ ನಂಬಿಕೆಯಿಲ್ಲದಾಗಿದೆ. ಬೆಳೆ ಬಂದರೂ ಮಾರುಕಟ್ಟೆಗೆ ಹೋದರೆ ರೈತನಿಗೆ ಒಂದು ರೂ ಆದರೆ ದಲ್ಲಾಳರಿಗೆ 10ರೂ ಆಗಿದೆ. ಇಂದು ಇದ್ದ ಬೆಲೆ ನಾಳೆ ಇಲ್ಲದೇ ಬೆಳೆದ ತರಕಾರಿ ಬೀದಿಗೆ ಬಿಸಾಕುವಂತಾಗಿದೆ. ಸುಮಾರು ದೇಶದ 70ರಷ್ಟು ರೈತರು ವ್ಯವಸಾಯವನ್ನೇ ಕೈಬಿಟ್ಟು ಮಕ್ಕಳನ್ನು  ಕೃಷಿ ಬಿಡಿಸಿ  ನಗರಗಳಿಗೆ ಉದ್ಯೋಗ ಅರಿಸಿ ವಲಸೆ ಕಳುಸಿ  ಇದೇ ರೀತಿ ಮುಂದುವರೆದರೆ ವ್ಯವಸಾಯವನ್ನೇ ಕೈಬಿಟ್ಟು ಅನ್ನಕ್ಕಾಗಿ ಬಹುರಾಷ್ಟ್ರೀಯ ಕಂಪನಿಗಳ ಮುಂದೆ ಕೈಯೊಡ್ಡಬೇಕಾದ ಸ್ಥಿತಿ ನಿರ್ಮಾಣವಾಗಲಿದ್ದು, ಈಗಲಾದರೂ ಸರ್ಕಾರಗಳು ರೈತನ ಹೆಸರಿನಲ್ಲಿ ಮೊಸಳೆ ಕಣ ್ಣೀರು ಸುರಿಸಿ ಗಿಮಿಕ್ ವೋಟ್ ರಾಜಕಾರಣ ಮಾಡುವುದನ್ನು ಬಿಟ್ಟು, ಅನ್ನದಾತರ ಸಂಕಷ್ಟಗಳಿಗೆ ವೈಜ್ಞಾನಿಕ ಪ್ರಯತ್ನದ ಮೂಲಕ ರೈತರ ಸರಣ ೀ ಆತ್ಮಹತ್ಯೆಗಳನ್ನು ತಡೆಯಬೇಕೆಂದು ಆಗ್ರಹಿಸಿದರು.


ಜಿಲ್ಲಾ ಸಂಚಾಲಕ ಕೆ. ಶ್ರೀನಿವಾಸಗೌಡ ಮಾತನಾಡಿ ಕಾರ್ಪೋರೇಟ್ ಕಂಪನಿಗಳ ಏಜೆಂಟರಂತೆ ಸರ್ಕಾರಗಳು ವರ್ತಿಸುವುದು ಬಿಟ್ಟು ರೈತರ ಸಂಪೂರ್ಣ ಸಾಲ ಮನ್ನಾ ಮಾಡಿ  ಬ್ಯಾಂಕ್‍ಗಳಲ್ಲಿ ಪ್ರತಿ ರೈತನಿಗೂ 10ಲಕ್ಷದವರೆಗೂ ಕೃಷಿ ಆದಾರಿತ ಜಾಮೀನು ರಹಿತ ಸಾಲ ನೀಡಬೇಕು. ಪ್ರತಿ ಬಜೆಟ್‍ನಲ್ಲಿ 65% ಹಳ್ಳಿಗಳ ಅಭಿವೃದ್ಧಿಗೆ ಮೀಸಲಿಡಬೇಕು. ರೈತ ಮಕ್ಕಳಿಗೆ ಪದವಿವರೆಗೂ ಉಚಿತ ಶಿಕ್ಷಣ ನೀಡಿ ಉದ್ಯೋಗದಲ್ಲಿ 50ರಷ್ಟು ಮೀಸಲೀಡಬೇಕು. ಮತ್ತು ರೈತರ ಕೃಷಿ ಜಮೀನುಗಳಿಗೆ ನೀರಾವರಿ ಯೋಜನೆ ಜಾರಿಗೊಳಿಸಿ ಡಾ|| ಸ್ವಾಮಿನಾಥನ್ ವರದಿ ಜಾರಿಗೊಳಿಸಿ ಬೀಜ ಗೊಬ್ಬರ ಮಾರುವ ಕಂಪನಿಗಳ ಮೇಲೆ ನಿಗಾ ಇಟ್ಟು ಬೆಳೆ ನಷ್ಟವಾದರೆ ಬೆಳೆ ನಷ್ಟ ಪರಿಹಾರ ಕಂಪನಿಯಿಂದ ರೈತನಿಗೆ ಸಿಕ್ಕಿ ಮಾರುಕಟ್ಟೆಗೆ ತಂದ ಬೆಳೆಗೆ ವೈಜ್ಞಾನಿಕ ಬೆಲೆ ನಿಗಧಿ ಮಾಡಿ ರೈತರಿಂದ ದಲ್ಲಾಳರ ಕಮಿಷನ್ ಪದ್ದತಿ ತಪ್ಪಿಸಿ, ಕೃಷಿ ಉದ್ಯಮ ಈ ದೇಶದ ಮೊದಲ ಉದ್ದಿಮೆ ಎಂದು ಘೋಷಿಸಿ ರೈತರನ್ನು ರಕ್ಷಿಸಲು ಸರ್ಕಾರ ಮುಂದಾಗಬೇಕೆಂದು ಒತ್ತಾಯಿಸಲಾಯಿತು.
ಈ ಹೋರಾಟದಲ್ಲಿ ಜಿಲ್ಲಾದ್ಯಕ್ಷ ಮರಗಲ್ ಶ್ರೀನಿವಾಸ್, ಬಂಗವಾದಿ ನಾಗರಾಜ್‍ಗೌಡ, ಹುಲ್ಕೂರ್ ಹರಿಕುಮಾರ್, ಪಾರುಕ್ ಪಾಷ, 
ರಂಜಿತ್ ಕುಮಾರ್, ಆನಂದ್‍ಸಾಗರ್, ಉಮಾಗೌಡ, ವಿಜಯಪಾಲ್, ಕೋರಗಂಡಹಳ್ಳಿ ಮಂಜು, ಎಂ ಹೊಸಹಳ್ಳಿ ವೆಂಕಟೇಶ್,  ಐತಾಂಡಹಳ್ಳಿ ಅಮಿರೀಶ್, ಭರತ್, ಚಲ, ಶಿವ, ಮಂಜು, ಕಾರ್ತಿಕ್,  ಕೆಂಬೋಡಿ ಕೃಷ್ಣೇಗೌಡ,  ನಾರಾಯಣಸ್ವಾಮಿ, ಮೂರ್ತಿ, ಮಂಜು, ಕೃಷ್ಣಪ್ಪ, ವೀರಸ್ವಾಮಿ, ಅಯ್ಯಪ್ಪ, ಆನಂದಗೌಡ, ಭಾರತ್‍ದ್ವಜ್,  ನರಾಸಾಪುರ ಪುರುಷೋತ್ತಮ್,  ಮುಂತಾದವರು ಭಾಗವಹಿಸಿದ್ದರು.

ಕೆ.ಶ್ರೀನಿವಾಸಗೌಡ 

ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...