ಕೋಲಾರ:ಪಾಪ್ಯುಲರ್ ಪ್ರಂಟ್ ಆಫ್ ಇಂಡಿಯಾ ವತಿಯಿಂದ ಬಡ ಶಾಲಾ ಮಕ್ಕಳಿಗೆ ಶಾಲಾ ಸಾಮಾಗ್ರಿ ವಿತರಣೆ 

Source: shabbir | By Arshad Koppa | Published on 28th May 2017, 3:44 PM | State News |

ಕೋಲಾರ,ಮೇ.27: ಪಾಪ್ಯುಲರ್ ಪ್ರಂಟ್ ಆಫ್ ಇಂಡಿಯಾ ಸಂಘಟನೆ ವತಿಯಿಂದ ಸ್ಕೂಲ್ ಚಲೋ ಶಾಲೆಗೆ ನಡೆಯಿರಿ ಅಭಿಯಾನವನ್ನು ರಾಷ್ಟ್ರಾದ್ಯಂತ ಪ್ರತಿ ಜಿಲ್ಲೆ ತಾಲೂಕುಗಳಲ್ಲಿ ನಡೆಸಲಾಗುತ್ತಿದೆ. ಕೋಲಾರ ನಗರದ ವಾರ್ಡ್ ನಂ. 31ರ ನೂರ್ ನಗರದಲ್ಲಿ ಇಲಾಹಿ ಮಸೀದಿ ಹತ್ತಿರ ಪಿ.ಎಫ್.ಐ ವತಿಯಿಂದ ಸ್ಕೂಲ್ ಚಲೋ ಶಾಲೆಗೆ ನಡೆಯಿರಿ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
    ಈ ವೇಳೆ ಸ್ಥಳೀಯ ಬಡ ಮಕ್ಕಳಿಗೆ 192 ಶಾಲಾ ಮಕ್ಕಳಿಗೆ ಸ್ಕೂಲ್ ಬ್ಯಾಗ್, ನೋಟ್‍ಪುಸ್ತಕ, ಪೆನ್ನು ಮತ್ತು ಜಾಮಿಟ್ರಿಗಳನ್ನು ವಿತರಿಸಲಾಯಿತು.


    ಸ್ಥಳೀಯ ಇಲಾಹಿ ಮಸೀದಿಯ ಇಮಾಮ್ ಮಾತನಾಡಿ ನಾವು ವಿದ್ಯಾಬ್ಯಾಸದಲ್ಲಿ ತುಂಬಾ ಹಿಂದುಳಿದ ಜನಾಂಗದವರಾಗಿದ್ದು ಎಲ್ಲರೂ ಸಹ ವಿದ್ಯಾವಂತರಾಗಬೇಕು. ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಬೇಕು, ಯಾವ ರೀತಿ ನಾವು ಕಷ್ಟಪಟ್ಟು ಜೀವನ ಸಾಗಿಸಬೇಕೋ ಆದೇ ರೀತಿ ವಿದ್ಯಾಭ್ಯಾಸಕ್ಕಾಗಿ ಒತ್ತು ನೀಡಬೇಕೆಂದರು.
    ಎಸ್.ಡಿ.ಪಿ.ಐ ಪಕ್ಷದ ಜಿಲ್ಲಾಧ್ಯಕ್ಷ ಶಾಮೀರ್‍ಪಾಷ ಮಾತನಾಡಿ, ಕುರಾನ್ ಆನ್ ನಲ್ಲಿ ಮೊದಲ ಅಕ್ಷರ ಇಕ್ರಾ ಇದರ ಅರ್ಥ ಓದಿ ಎಂದು ತಿಳಿಸಿಕೊಟ್ಟರು. ಪ್ರವಾದಿ ಮೊಹಮದ್ ಹೇಳುವ ಪ್ರಕಾರ ವಿದ್ಯಾಭ್ಯಾಸಕ್ಕಾಗಿ ವಿದ್ಯೆ ಕಲಿಯಲು ಚೀನಾಗೆ ಹೋಗಿ ವಿದ್ಯೆಯನ್ನು ಕಲಿಯಿರಿ ಎಂದು ಹೇಳಿರುವುದಾಗಿ ತಿಳಿಸಿದರು.
    ಸಾಚಾರ್ ವರದಿಯ ಪ್ರಕಾರ ನಾವು ವಿದ್ಯಾಭ್ಯಾಸ ಮತ್ತು ಮೀಸಲಾತಿ ದಲಿತರಿಂದ ನಾವು ಕೀಳು ಮಟ್ಟದಲ್ಲಿದ್ದೇವೆ. ಅದ್ದರಿಂದ ತಮ್ಮ ಎಲ್ಲಾ ಮಕ್ಕಳಿಗೆ ಸರ್ಕಾರದಿಂದ ಬರುವ ಅನುದಾನಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರು.
    ಕಾರ್ಯಕ್ರಮದಲ್ಲಿ ಪಿ.ಎಪ್.ಐ ಇಂತಿಯಾಜ್‍ಪಾಷ, ಮುಜಾಹಿದ್‍ಪಾಷ, ಮಸೀದಿಯ ಸದರ್‍ಸಾಬ್, ಮುಬಾರಕ್ ದರ್ವೇಶ್, ಇಮ್ರಾನ್‍ಪಾಷ, ರಜಾಕ್, ರಹಮತ್ತುಲ್ಲಾಖಾನ್, ಸ್ಥಳೀಯರು ಉಪಸ್ಥಿತರಿದ್ದರು.

Read These Next

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...