ಕೋಲಾರ:ಪರೀಕ್ಷೆ ಎದುರಿಸುವ ಆತ್ಮವಿಶ್ವಾಸ ತುಂಬಲು `ವಿಶ್ವಾಸಕಿರಣ'

Source: shabbir | By Arshad Koppa | Published on 24th October 2017, 8:42 AM | State News |

ಕೋಲಾರ:- ಜಿಲ್ಲೆಯ ಸರ್ಕಾರಿ ಶಾಲೆಗಳ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ `ವಿಶ್ವಾಸಕಿರಣ' ಕಾರ್ಯಕ್ರಮದ ಮೂಲಕ ಪರೀಕ್ಷೆಗಳನ್ನು ಎದುರಿಸುವ ಆತ್ಮವಿಶ್ವಾಸ ತುಂಬುವ ಕೆಲಸ ಆರಂಭಿಸಲಾಗಿದ್ದು, ಇದರ ಪ್ರಯೋಜನ ಪಡೆದುಕೊಳ್ಳುವಂತೆ ಜಿಲ್ಲಾ ಪರೀಕ್ಷಾ ನೋಡೆಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ಕರೆ ನೀಡಿದರು.
ಸೋಮವಾರ ನಗರದ ನೂತನ ಪ್ರೌಢಶಾಲೆಯಲ್ಲಿ ವಿಶ್ವಾಸಕಿರಣ ಯೋಜನೆಯಡಿ ನಡೆಯುತ್ತಿರುವ 9, 10ನೇ ತರಗತಿಗಳ ವಿಶೇಷ ತರಗತಿಗಳ ಪರೀಶೀಲನೆ ನಂತರ ಮಕ್ಕಳನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿ ತಲಾ 3 ವಿಶ್ವಾಸಕಿರಣ ಬೋಧನಾ ಕೇಂದ್ರಗಳನ್ನು ತೆರೆಯಲಾಗಿದ್ದು, ರಜಾದಿನಗಳು ಹಾಗೂ ನಂತರ ಫೆಬ್ರವರಿ 2018 ರವರೆಗೂ ಭಾನುವಾರಗಳಂದು ತರಗತಿಗಳು ನಡೆಯಲಿವೆ ಎಂದರು.
ಕಲಿಕೆಯಲ್ಲಿ ಹಿಂದುಳಿದ 10ನೇ ತರಗತಿ ವಿದ್ಯಾರ್ಥಿಗಳಿಗೆ ಅ.12 ರಿಂದ 25 ರವರೆಗೂ ಹಾಗೂ 2018ರ ಫೆಬ್ರವರಿವರೆಗೂ ಪ್ರತಿ ಭಾನುವಾರಗಳಂದು ವಿಶ್ವಾಸಕಿರಣ ಯೋಜನೆಯಲ್ಲಿ ಉತ್ತಮ ಸಂಪನ್ಮೂಲ ಶಿಕ್ಷಕರಿಂದ ಕಠಿಣ ವಿಷಯಗಳಾದ ಗಣಿತ,ವಿಜ್ಞಾನ ಮತ್ತು ಇಂಗ್ಲೀಷ್ ಪಠ್ಯವಿಷಯಗಳ ಮುಖ್ಯ ಹಾಗೂ ಕ್ಲಿಷ್ಟ ಅಧ್ಯಾಯಗಳ ಬೋಧನೆ ನಡೆಯಲಿದೆ ಎಂದು ತಿಳಿಸಿದರು.
ಅದೇ ರೀತಿ 9ನೇ ತರಗತಿ ಮಕ್ಕಳಿಗೂ ಈ ಬೋಧನೆ ಮುಂದುವರೆಸಿ ಅವರನ್ನು ಮುಂದಿನ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಅಡಿಪಾಯ ಹಾಕಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡುತ್ತಿರುವುದಾಗಿ ತಿಳಿಸಿದರು. 
ಸರ್ಕಾರಿ ಶಾಲಾ ಮಕ್ಕಳಿಗೆ ಕ್ಲಿಷ್ಟವಾಗಿರುವ ವಿಜ್ಞಾನ,ಗಣಿತ,ಇಂಗ್ಲೀಷ್ ವಿಷಯಗಳ ಆಯ್ದ ಕ್ಲಿಷ್ಟ ಅಧ್ಯಾಯಗಳನ್ನು ಇಲ್ಲಿ ಕಲಿಸಿಕೊಡಲಿದ್ದು, ಮಕ್ಕಳು ಪಠ್ಯಕ್ಕೆ ಸಂಬಂಧಿಸಿದ ತಮ್ಮ ಅನುಮಾನಗಳನ್ನು ಪರಿಹರಿಸಿಕೊಳ್ಳಲು ಅವಕಾಶವಿದೆ ಎಂದರು.
ಮಕ್ಕಳು,ಶಿಕ್ಷಕರಿಗೆ ಬಯೋಮೆಟ್ರಿಕ್ ಹಾಜರಾತಿ


ಪ್ರತಿ ದಿನ ವಿಶ್ವಾಸ ಕಿರಣ ತರಗತಿ ಬೆಳಗ್ಗೆ 9-30ಕ್ಕೆ ಆರಂಭಗೊಳ್ಳಲಿದ್ದು, ವಿದ್ಯಾರ್ಥಿಗಳು ಹಾಗೂ ಸಂಪನ್ಮೂಲ ವ್ಯಕ್ತಿ ಶಿಕ್ಷಕರ ಬಯೋ ಮೆಟ್ರಿಕ್ ಹಾಜರಾತಿಯನ್ನು 10 ಗಂಟೆಯೊಳಗೆ ಪಡೆದುಕೊಳ್ಳಲಾಗುತ್ತಿದೆ ಎಂದರು. 
ನಂತರ 10 ಗಂಟೆಯಿಂದ 11 ಗಂಟೆವರೆಗೂ ಗಣಿತ, 11ರಿಂದ 12 ವರೆಗೂ ವಿಜ್ಞಾನ, 12 ರಿಂದ 1 ಗಂಟೆವರೆಗೂ ಇಂಗ್ಲೀಷ್ ಹಾಗೂ 1 ರಿಂದ  2 ಗಂಟೆವರೆಗೂ ಇಮ್ಮಾಹಿತಿ ತರಗತಿ ನಡೆಯಲಿದೆ ಎಂದರು.
ಎಸ್ಸೆಸ್ಸೆಲ್ಸಿ ಫಲಿತಾಂಶ ವೃದ್ದಿಗೂ ಈ ತರಗತಿಗಳು ಸಹಕಾರಿಯಾಗಲಿವೆ, ಮಕ್ಕಳಲ್ಲಿ ಪರೀಕ್ಷಾ ಭಯ ಹೋಗಲಾಡಿಸಿ ಆತ್ಮವಿಶ್ವಾಸ ತುಂಬುವುದರಿಂದ ಫಲಿತಾಂಶ ಗುಣಾತ್ಮಕಗೊಳಿಸುವುದೇ ಇದರ ಉದ್ದೇಶ ಎಂದರು.
ಕೋಲಾರ ತಾಲ್ಲೂಕಲ್ಲಿ 3 ಕೇಂದ್ರಗಳು


ಕೋಲಾರ ತಾಲ್ಲೂಕಿನಲ್ಲಿ ಮೂರು ಕೇಂದ್ರಗಳು ವಿಶ್ವಾಸ ಕಿರಣದಡಿ ಕೆಲಸ ಮಾಡುತ್ತಿದ್ದು, ಕೋಲಾರದ ಬಾಲಕರ ಪಿಯು ಕಾಲೇಜು ಕೇಂದ್ರದಲ್ಲಿ ತರಗತಿಗೆ 145 ವಿದ್ಯಾರ್ಥಿಗಳು ಹೆಸರು ನೊಂದಾಯಿಸಿದ್ದು, 100 ಮಂದಿ ಹಾಜರಾಗಿದ್ದಾರೆ,  ನೂತನ ಪ್ರೌಢಶಾಲೆಯಲ್ಲಿ 176 ಮಂದಿ ನೊಂದಾಯಿಸಿದ್ದು, 89 ಮಂದಿ ಹಾಜರಾಗಿದ್ದಾರೆ ಎಂದರು.

ಉಳಿದಂತೆ ವೇಮಗಲ್ ಸರ್ಕಾರಿ ಪಿಯು ಕಾಲೇಜಿನಲ್ಲಿ 9 ಮತ್ತು 10ನೇ ತರಗತಿಗೆ 164 ಮಂದಿ ನೊಂದಾಯಿಸಿದ್ದು, 66 ಮಂದಿ ಹಾಜರಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ವಿಷಯ ಪರಿವೀಕ್ಷಕರಾದ ಬಾಬು ಜನಾರ್ಧನನಾಯ್ಡು, ರಾಜಣ್ಣ, ನರಸಿಂಹರೆಡ್ಡಿ ಹಾಜರಿದ್ದರು. 

ಕೋಲಾರದ ನೂತನ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವಾಸಕಿರಣ ಯೋಜನೆಯಡಿ ನಡೆಯುತ್ತಿರುವ 9 ಮತ್ತು 10ನೇ ತರಗತಿ ವಿಶೇಷ ತರಗತಿಗಳನ್ನು ಪರೀಕ್ಷಾ ನೋಡೆಲ್ ಅಧಿಕಾರಿ ನಾಗೇಂದ್ರಪ್ರಸಾದ್ ಮತ್ತಿತರರು ವೀಕ್ಷಿಸಿ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬಿದರು.

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...