ಕೋಲಾರ: ಭೂಮಿಯ ಉಳಿವಿಗಾಗಿ ಸಸಿಗಳನ್ನು ಬೆಳೆಸಿ - ಟಿ. ಸುಬ್ಬರಾಮಯ್ಯ

Source: shabbir | By Arshad Koppa | Published on 16th September 2017, 11:58 PM | State News |

ಕೋಲಾರ ಸೆ.16: ಓಜೋನ್ ಪದರ ನಾಶವಾದಂತೆ ಪ್ರಾಣ  ಪಕ್ಷಿ, ಸಸ್ಯಗಳಿಗೂ ತೊಂದರೆ ಉಂಟಾಗುತ್ತದೆ. ಪರಿಸರ ನಾಶವಾಗುತ್ತದೆ. ಹಾಗಾಗಿ ನಾವುಗಳು ಪರಿಸರ ಮಾಲಿನ್ಯ ಹಾಗೂ ಓಝೋನ್ ಪದರ ನಾಶ ಮಾಡುವುದನ್ನು ನಿಲ್ಲಿಸಿ. ಪ್ರಾಣ , ಪಕ್ಷಿ, ಸಸ್ಯಗಳ ಜೊತೆ ನಮ್ಮ ಭೂಮಿ ಉಳಿವಿಗಾಗಿ ಸಸಿಗಳನ್ನು ನೆಟ್ಟು ಬೆಳೆಸಬೇಕೆಂದು ವಿಜ್ಞಾನ ಸಂಪನ್ಮೂಲ ವ್ಯಕ್ತಿ ಟಿ.ಸುಬ್ಬರಾಮಯ್ಯ ತಿಳಿಸಿದರು.


    ತಾಲ್ಲೂಕಿನ ಹರಟಿ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿಂದು ವಿಶ್ವ ಓಝೋನ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
    ಮಿಂಚು-ಬಿರುಗಾಳಿಯಲ್ಲಿ ಬರುವ ಒಂದು ವಿಚಿತ್ರ ವಾಸನೆಗೆ ಓಝೋನ್ ಎಂದು ಗ್ರೀಕ್ ಬಾಷೆಯಲ್ಲಿ ಕರೆಯುತ್ತಿದ್ದು, ಕ್ರಿಸ್ಟಿಯನ್ ಫೆಡ್ರಿಕ್ ಪ್ಯಾನ್ ಬೀಸ್ ಎಂಬಾತ 1840ರಲ್ಲಿ ಇದಕ್ಕೆ ಓಝೋನ್ ಎಂದು ಕೆಸರಿಟ್ಟರು ಎಂದರು.
    ಜೀವಿ ಸಂಕುಲದ ಮೇಲೆ ದುಷ್ಪರಿಣಾಮ ಬೀರುವ ಓಝೋನ್ ಪದರವನ್ನು ರಕ್ಷಿಸುವ ಮತ್ತು ಉಳಿವಿಗಾಗಿ ಶ್ರಮಿಸುವ ಪ್ರಯತ್ನವನ್ನು ಎಲ್ಲರೂ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಶಪಥ ಕೈಗೊಂಡು ಪರಿಸರ ಸಂರಕ್ಷಣೆಗೆ ನೆರವಗುವ ಅಗತ್ಯವಿದೆ ಎಂದರು.
    ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯೋಪಾದ್ಯಾಯ ಜಿ. ಶ್ರೀನಿವಾಸ್ ಮಾತನಾಡಿ, ವಿದ್ಯಾರ್ಥಿಗಳು ಇಕೋ ಕ್ಲಬ್ ಮೂಲಕ ಮಾಡುವ ಎಲ್ಲಾ ಕಾರ್ಯಕ್ರಮಗಳಲ್ಲೂ ಸಕ್ರಿಯವಾಗಿ ಭಾಗವಹಿಸಬೇಕು, ಓಝೋನ್ ಪದರದಿಂದಾಗುವ ಅನಾಹುತಗಳ ಬಗ್ಗೆ ಜನರಲ್ಲಿ ಜಾಗೃತಿ ಉಂಟು ಮಾಡಬೇಕು ಎಂದರು.
    ಸಮಾರಂಭದಲ್ಲಿ ಪ್ರೌಢಶಾಲಾ ಸಹ ಶಿಕ್ಷಕ ಅಶೋಕ್‍ರವರು ಜಾಗತಿಕ ತಾಪಮಾನದ ಬಗ್ಗೆ ಉಪನ್ಯಾಸ ನೀಡಿದರು. ಓಝೋನ್ ಪದರದ ಬಗ್ಗೆ ಬಿತ್ತಿಪತ್ರ ಪ್ರದರ್ಶಿಸಿದ ಈ ಸಂದರ್ಭದಲ್ಲಿ ಶಾಲಾ ಸಹ ಶಿಕ್ಷಕರುಗಳಾದ ಪಿ.ಎಂ. ಗೋವಿಂದಪ್ಪ, ಎಂ.ಆರ್. ಮೀನಾ, ಆರ್. ಮಂಜುಳಾ, ಹೆಚ್. ಮುನಿಯಪ್ಪ, ಕೆ. ಮಮತಾ, ಕನ್ನಡ ಅಧ್ಯಾಪಕ ಮುನಿಯಪ್ಪ, ಹೆಚ್. ಮಲ್ಲಾಂಡಹಳ್ಳಿ ಮುಖ್ಯೋಪಾದ್ಯಾಯ ಶಿವರಾಜ್ ಮತ್ತಿತರರು ಉಪಸ್ಥಿತರಿದ್ದರು.

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...