ಕೋಲಾರ: ಸೀತಿ ಗ್ರಾ.ಪಂ ನಲ್ಲಿ ಬಹಿರಂಗ ಹರಾಜು

Source: shabbir, | By Arshad Koppa | Published on 15th November 2017, 8:28 AM | State News |

ಕೋಲಾರ, ಅಕ್ಟೋಬರ್ 14 :ಕೋಲಾರ ತಾಲ್ಲೂಕು ವೇಮಗಲ್ ಹೋಬಳಿ ಸೀತಿ ಗ್ರಾಮದ ಶ್ರೀ ಪತೇಶ್ವರ ಮತ್ತು ಬೈರವೇಶ್ವರಸ್ವಾಮಿ ದೇವಾಲಯದ ಭಕ್ತಾಧಿಗಳ ಪಾದರಕ್ಷೆ ಕಾಯುವ ಕೆಲಸಕ್ಕೆ 2018ನೇ ಸಾಲಿನ ದಿನಾಂಕ: 01-01-2018 ರಿಂದ  b31-12-2018 ರ ವರೆಗೆ ಒಂದು ವರ್ಷ ಅವಧಿಗೆ ರೂಡಿಸಿಕೊಳ್ಳುವ ಹಕ್ಕನ್ನು ವಹಿಸುವ  ಷರತ್ತು ಬದ್ದ ಬಹಿರಂಗ ಹರಾಜನ್ನು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ರಾಜಸ್ವ ನಿರೀಕ್ಷಕರ ಸಮಕ್ಷಮದಲ್ಲಿ 
ದಿನಾಂಕ: 30-11-2017 ರಂದು ಬೆಳಿಗ್ಗೆ 11 ಗಂಟೆಗೆ ಸೀತಿ ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆಸಲಾಗುವುದು.
    ಹರಾಜಿನಲ್ಲಿ ಭಾಗವಹಿಸುವ ಆಸಕ್ತಿಯುಳ್ಳವರು ಒಂದು ಸಾವಿರ ರೂಗಳ ಮುಂಗಡ ಠೇವಣ  ಇಡಬೇಕು. ಹರಾಜು ಮುಗಿದ ಕೂಡಲೇ ಹರಾಜಿನ ಸಂಪೂರ್ಣ ಮೊಬಲಗನ್ನು ಸವಾಲುದಾರರು ಸ್ಥಳದಲ್ಲೇ ಪಾವತಿ ಮಾಡಿ ರಸೀದಿ ಪಡೆಯಬೇಕು. ಹರಾಜು ಮಂಜೂರಾತಿಯು ಜಿಲ್ಲಾಧಿಕಾರಿಗಳ ಅನುಮೋದನೆಗೆ ಒಳಪಟ್ಟಿರುತ್ತದೆ.  ಹರಾಜಿನ ಮೊತ್ತ ಕಡಿಮೆ ಎನಿಸಿದರೆ ಪುನಃ ಹರಾಜು ನಡೆಸಲಾಗುವುದು. ಹರಾಜು ಮಂಜೂರಾಗುವವರೆಗೆ ಹರಾಜುದಾರರು ಚಪ್ಪಲಿ ಕಾಯುವ ಶುಲ್ಕವನ್ನು ವಸೂಲಿ ಮಾಡತಕ್ಕದ್ದಲ್ಲ. ಹರಾಜುದರರು ಒಂದು ಜೊತೆ ಚಪ್ಪಲಿಗೆ ಎರಡು ರೂ ರಂತೆ ರಶೀದಿ ಮುದ್ರಿಸಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ರಶೀದಿ ಪುಸ್ತಕವನ್ನು ದೃಡೀಕರಿಸಿಕೊಂಡ ನಂತರ ವಿತರಿಸಬೇಕು. ನಿಗಧಿಪಡಿಸಿದ ಶುಲ್ಕಕ್ಕಿಂತ ಹೆಚ್ಚಿಗೆ ವಸೂಲಿ ಮಾಡಬಾರದು. ಈ ಸಂಬಂಧ ಭಕ್ತಾಧಿಗಳಿಂದ ದೂರುಗಳು ಬಂದಲ್ಲಿ ಹರಾಜನ್ನು ರದ್ದುಗೊಳಿಸಲಾಗುವುದು. ಹರಾಜನ್ನು ಯಾವುದೇ ಕಾರಣಕ್ಕೂ ಉಪ-ಗುತ್ತಿಗೆಗೆ ನೀಡತಕ್ಕದ್ದಲ್ಲ ಎಂದು ಕಾರ್ಯ ನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.

Read These Next

ವಿವಾಹಿತ ಮಹಿಳೆ ಆತ್ಮಹತ್ಯೆ

ಶ್ರೀನಿವಾಸಪುರ: ತಾಲ್ಲೂಕಿನ ಯಲ್ದೂರು ಗ್ರಾಮದಲ್ಲಿ ಬುಧವಾರ ರಾತ್ರಿ ವಿವಾಹಿತ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ...