ಕೋಲಾರ: ನ. 21 ರಂದು ವಿಕಲಚೇತನರ ಕ್ರೀಡಾಕೂಟ - ಸಾಂಸ್ಕೃತಿಕ ಸ್ಪರ್ಧೆ

Source: shabbir | By Arshad Koppa | Published on 15th November 2017, 8:27 AM | State News |

ಕೋಲಾರ, ಅಕ್ಟೋಬರ್ 14 :    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ವಿಕಲಚೇತನರ ಮತ್ತು ಹಿರಿಯ ನಾಗರಿಕ ಸಬಲೀಕರಣ ಇಲಾಖೆ ವತಿಯಿಂದ ವಿಶ್ವ ವಿಕಲಚೇತನರ ಕ್ರೀಡಾಕೂಟ ಮತ್ತು ಸಾಂಸ್ಕøತಿಕ ಸ್ಪರ್ಧೆಗಳನ್ನು ದಿನಾಂಕ: 21-11-2017 ರಂದು ಬೆಳಿಗ್ಗೆ 10 ಗಂಟೆಗೆ ಕೋಲಾರ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆಸಲಾಗುವುದು.
    ದಿನಾಂಕ: 21-11-2017 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಕ್ರೀಡಾಕೂಟ ಮತ್ತು ಮಧ್ಯಾಹ್ನ 2-30 ರಿಂದ ಸಾಂಸ್ಕøತಿಕ ಸ್ಪರ್ಧೆ ನಡೆಯಲಿದೆ. 6 ವರ್ಷಕ್ಕಿಂತ ಮೇಲ್ಪಟ್ಟು 40 ವರ್ಷದೊಳಗಿನ ಎಲ್ಲಾ ವಿಕಲಚೇತನರು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.

ಕೋಲಾರ: ಲೋಕಾಯುಕ್ತ ಕುಂದು ಕೊರತೆಗಳ ಅಹವಾಲು ಸ್ವೀಕಾರ
ಕೋಲಾರ, ಅಕ್ಟೋಬರ್ 14:    2017 ನೇ ಸಾಲಿನ ನವೆಂಬರ್ ಮಾಹೆಯಲ್ಲಿ ಕೋಲಾರ ಜಿಲ್ಲಾ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಕೋಲಾರ ಜಿಲ್ಲೆಯ ತಾಲ್ಲೂಕುವಾರು ಭೇಟಿ ನೀಡಿ ಸಾರ್ವಜನಿಕರಿಂದ ಕುಂದು ಕೊರತೆಗಳ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ.
    ದಿನಾಂಕ: 22-11-2017 ರಂದು ಬೆಳಿಗ್ಗೆ 11 ಗಂಟೆಯಿಂದ 1 ಗಂಟೆಯವರೆಗೆ ಮುಳಬಾಗಿಲು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ, ದಿನಾಂಕ: 27-11-2017 ರಂದು ಬೆಳಿಗ್ಗೆ 11 ಗಂಟೆಯಿಂದ 1 ಗಂಟೆಯವರೆಗೆ ಕೆ.ಜಿ.ಎಫ್ ರಾಬರ್ಟ್‍ಸನ್ ಪೇಟೆಯ ಕಾಮ್ಸೋಪೊಲಿಟನ್ ಕ್ಲಬ್ ಕಿಂಗ್ ಜಾರ್ಜ್ ಹಾಲ್‍ನಲ್ಲಿ ಹಾಗೂ ದಿನಾಂಕ: 28-11-2017 ರಂದು ಬೆಳಿಗ್ಗೆ 11 ಗಂಟೆಯಿಂದ 1 ಗಂಟೆಯವರೆಗೆ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶ್ರೀನಿವಾಸಪುರ ತಾಲ್ಲೂಕು ಮಟ್ಟದ ಸಭೆಯನ್ನು ಆಯೋಜಿಸಲಾಗಿದೆ. 
    ಸರ್ಕಾರಿ ಕಛೇರಿಗಳಲ್ಲಿ ಕೆಲಸ ಮಾಡಿಕೊಡಲು ವಿಳಂಬ - ನಿರ್ಲಕ್ಷ್ಯ, ಅಧಿಕಾರ ದುರಾಡಳಿತ ಮಾಡುತ್ತಿದ್ದಲ್ಲಿ ಅಂತಹ ಅಧಿಕಾರಿ - ಸಿಬ್ಬಂದಿಗಳ ವಿರುದ್ಧ ಲಿಖಿತ ರೂಪದಲ್ಲಿ ದ್ವಿಪ್ರತಿಯಲ್ಲಿ ದೂರು ನೀಡಬಹುದು ಎಂದು ಕರ್ನಾಟಕ  ಲೋಕಾಯುಕ್ತ ಜಿಲ್ಲಾ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.

Read These Next

ವಿವಾಹಿತ ಮಹಿಳೆ ಆತ್ಮಹತ್ಯೆ

ಶ್ರೀನಿವಾಸಪುರ: ತಾಲ್ಲೂಕಿನ ಯಲ್ದೂರು ಗ್ರಾಮದಲ್ಲಿ ಬುಧವಾರ ರಾತ್ರಿ ವಿವಾಹಿತ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ...