ಕೋಲಾರ: ಮಾರುಕಟ್ಟೆಗೆ ನೂತನ ಟಮೋಟೋ ತಳಿ ಕಾವೇರಿ 354 ಬಿಡುಗಡೆ

Source: shabbir | By Arshad Koppa | Published on 29th July 2017, 8:43 PM | State News | Guest Editorial |

ಕೋಲಾರ, ಜುಲೈ 28-ಪ್ರಸ್ತುತ ರೈತರ ಪಾಲಿನ ಕಾಮಧೇನುವಾಗಿರುವ ಟಮೋಟೋ ಹಣ್ಣು ಇಂದು ಬೆಳೆದವರ ಪಾಲಿಗೆ ಕಲ್ಪವೃಕ್ಷವಾಗಿದೆ. ಇಂತಹ ಸಂದರ್ಭದಲ್ಲಿ ಕೋಲಾರ ಎಪಿಎಂಸಿ ಮಾರುಕಟ್ಟೆಗೆ ವಿನೂತನ ತಳಿಯಾದ ಕಾವೇರಿ ಕೆ.ಟಿ.ಹೆಚ್. 354 ಎಂಬ ಬೆಳೆ ಬಿಡುಗಡೆಯಾಗಿದ್ದು, ರೈತರಿಂದ ಉತ್ತಮ ಪ್ರತಿಕ್ರಿಯೆ ಹಾಗೂ ಒಳ್ಳೆಯ ಬೆಲೆ ಮಾರಾಟವಾಗುತ್ತಿದೆ.


ಇಂದು ಬೆಳಿಗ್ಗೆ ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಕಾವೇರಿ ಕೆ.ಟಿ.ಹೆಚ್. 354 ತಳಿ ಕಂಪನಿಯವರು ಹೊಸ ತಳಿಯನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾರಾಟ ಮುಖ್ಯಸ್ಥರಾದ ರಾಜೇಶ್ ಶರ್ಮ, ರಾಜ್ಯ ವ್ಯವಸ್ಥಾಪಕ ಜೆ.ಎಸ್.ಸುದರ್ಶನ್, ವಿನೂತನ ತಳಿಯಾದ ಕಾವೇರಿ 354 ಎಂಬ ಟೊಮೋಟೊ ತಳಿಯು ರುಚಿಕರವಾಗಿದ್ದು, ಸಾಗಾಣಿಕೆಗೆ ಸರಾಗವಾಗಿದ್ದು, ಬೆಲೆಯೂ ಕೈಗೆಟುವಂತಿದ್ದು, ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಸೇಲ್ಸ್ ಆಫೀಸರ್ ಷಂಷೀರ್, ಕೋಲಾರ ಪ್ರತಿನಿಧಿ ಶ್ರೀನಿವಾಸ್, ಚಿಕ್ಕಬಳ್ಳಾಪುರ ಸೋಮಶೇಖರ್, ಬಾಲಾಜಿ ಟ್ರೇಡರ್ಸ್ ಶ್ರೀನಾಥ್‍ರೆಡ್ಡಿ ಉಪಸ್ಥಿತರಿದ್ದರು.


ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...