ಕೋಲಾರ:ನೈತಿಕ ಹಕ್ಕು ಇದ್ದರೆ ತಾವು ಧ್ವಜಾರೋಹಣ ಮಾಡದೆ ಕೊಟ್ಟ ಮಾತಿನಂತೆ ನಡೆದುಕೊಳ್ಳಿ-ವೆಂಕಟೇಶ್

Source: shabbir | By Arshad Koppa | Published on 14th August 2017, 8:03 AM | State News | Guest Editorial |

ಕೋಲಾರ ಆ. 13: 2016 ರ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚಣರಣೆಯಂದು ಉಸ್ತುವಾರಿ ಸಚಿವರಾದ ಕೆ.ಆರ್. ರಮೇಶ್ ಕುಮಾರ್ ರವರು ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಬಾಷಣ ಮಾಡುತ್ತಾ ಕೆ.ಸಿ.ವ್ಯಾಲಿ ನೀರನ್ನು 2017ರ ಆಗಸ್ಟ್ 15ರ ಒಳಗೆ ಜಿಲ್ಲೆಗೆ ತರದೇ ಹೋದರೆ ನಾನು ಮುಂದಿನ ಧ್ವಜಾರೋಹಣ ಮಾಡುವುದಿಲ್ಲವೆಂದು ಮಾದ್ಯಮದವರ ಮುಂದೆ ಹೇಳಿದ್ದರು. ಆದರೆ ಇದುವರೆಗೂ ನೀರು ಜಿಲ್ಲೆಗೆ ತರುವುದಿರಲಿ ಕಾಮಗಾರಿಯೂ ಸಹ ಪೂರ್ಣಗೊಂಡಿಲ್ಲ ಹಾಗೂ ಎನ್.ಹೆಚ್.ಎ.ಐ.ನಿಂದ ಪೈಪುಗಳನ್ನು ಅಳವಡಿಸಲು ಅನುಮತಿಯೂ ಸಹ ಪಡೆದಿಲ್ಲ. ಧ್ವಜಾರೋಹಣಕ್ಕೆ ಇನ್ನೇನು ಕೆಲವೇ ಕೆಲವು ದಿನಗಳು ಇರುವಾಗ ನಮಕಾವಸ್ತೆಗಾಗಿ ಲ್ಯಾಂಕೋ ಮುಂದೆ ಪ್ರತಿಭಟಿಸಿ ಜಿಲ್ಲೆಯ ಜನರಿಗೆ ಮಂಕುಬೂದಿ ಎರಚುವ ನಾಟಕಮಾಡಿ ಇದೇ 2017 ಆಗಸ್ಟ್ 15ರಂದು ಮತ್ತೆ ಧ್ವಜಾರೋಹಣ ಮಾಡಲು ಸಜ್ಜಾಗಿರುತ್ತಾರೆ. ಇದು ಇವರಿಗೆ ಶೋಭೆ ತರುವಂತಹದ್ದಲ್ಲ. ನಿಜವಾಗಿ ಇವರಿಗೆ ನೈತಿಕ ಹಕ್ಕಿದ್ದರೆ, ತಾವು ಧ್ವಜಾರೋಹಣ ಮಾಡದೆ ಕೊಟ್ಟ ಮಾತಿನಂತೆ ನಡೆದುಕೊಂಡು, ಯಾರಾದರು ಬಡ ರೈತ ಹೆಣ್ಣುಮಗಳ ಕೈಯಲ್ಲಿ ಧ್ವಜಾರೋಹಣ ಮಾಡಿಸಬೇಕಾಗಿ ನೀರಾವರಿ ಹೋರಾಟ ಸಮಿತಿಯ ಸಂಚಾಲಕ ಕುರುಬರಪೇಟೆ ವೆಂಕಟೇಶ್ ಒತ್ತಾಯಿಸಿದ್ದಾರೆ.

                                (ಕುರುಬರಪೇಟೆ ವೆಂಕಟೇಶ್)
                            ನೀರಾವರಿ ಹೋರಾಟ ಸಮಿತಿಯ ಸಂಚಾಲಕ
                                ಮೊ. : 9945366422

ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ.

Read These Next

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...