ಕೋಲಾರ:350ನೇ ದಿನದ ಹೋರಾಟ ಮುಂದುವರೆಸಿದ ಕರ್ನಾಟಕ ಅಹಿಂದ ರಕ್ಷಣಾ ವೇದಿಕೆ

Source: shabbir | By Arshad Koppa | Published on 28th May 2017, 3:48 PM | State News |

ಕೋಲಾರ,ಮೇ.27: ಕರ್ನಾಟಕ ಅಹಿಂದ ರಕ್ಷಣಾ ವೇದಿಕೆ ಅಲ್ಪಸಂಖ್ಯಾತ ಘಟಕದ ವತಿಯಿಂದ ನೀರಾವರಿ ವೇದಿಕೆಯ 350ನೇ ದಿನದ ಹೋರಾಟವನ್ನು ಮುಂದುವರೆಸಿದರು.
    ದೆಹಲಿಯ ಜಂತರ್ ಮಂತರ್‍ನಲ್ಲಿ ಜೂನ್ 16 ಮತ್ತು 17 ರಂದು ಹೊರಾಟಕ್ಕೆ ಬರಲು ಇಚ್ಚಿಸುವವರು ಈ ಕೆಳಕಂಡವರನ್ನು ಸಂಪರ್ಕಿಸುವುದು.
    ಕುರುಬರಪೇಟೆ ವೆಂಕಟೇಶ್ 9945366422, ಅಹಿಂದ ಮಂಜುನಾಥ್ 9901983722, ಚಿನ್ನ ಶ್ರೀನಿವಾಸ್ 9632116743, ಕನ್ನಡಪ್ರಕಾಶ್ 9448402535, ರವೀಂದ್ರ 9343057787 ಸಂಪರ್ಕಿಸುವಂತೆ ಕೋರಿದೆ.
     ಅಹಿಂದ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಅಹಿಂದ ಮಂಜುನಾಥ್ ಮಾತನಾಡಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಅತಿ ಹೆಚ್ಚಾಗಿ ನೀರಿನ ಸಮಸ್ಯೆ ಉಲ್ಭಣವಾಗಿದ್ದು, ಈ ನಿಟ್ಟಿನಲ್ಲಿ ವರ್ಷ ತುಂಬುತ್ತಾ ಬಂದಿದೆ. ನೀರಾವರಿ ಸಮಸ್ಯೆಯನ್ನು ಬಗೆಹರಿಸಲು ಜಿಲ್ಲಾಡಳಿತ, ಶಾಸಕರು ಮತ್ತು ಸಂಸದರು ಈ ಒಂದು ಹೋರಾಟದ ಮಹತ್ವವನ್ನು ಅರಿಯದೇ ಜನರ ಸಮಸ್ಯೆಗೆ ಸ್ಪಂದಿಸದೆ ತಮ್ಮ ತಮ್ಮ ಕುಟುಂಬಗಳ ಏಳಿಗೆಗಾಗಿ ತಮ್ಮ ಕುರ್ಚಿಗಳ ಭದ್ರತೆಗಾಗಿ ಬೆಂಗಳೂರು ಮತ್ತು ದೆಹಲಿ ಕಡೆ ಓಡಾಡಿಕೊಂಡು ಕಾಲಹರಣ ಮಾಡುತ್ತಾ ಮುಂಬರುವ ಚುನಾವಣೆಗಳಿಗೆ ರೂಪುರೇಷೆಗಳನ್ನು ತಯಾರಿಸಿಕೊಂಡು ಮತದಾರರನ್ನು ಯಾವ ರೀತಿ ಮೋಸ ಮಾಡಿ ಚುನಾಯಿತರಾಗಬೇಕೆಂದು ಯೋಚನೆ ಮಾಡುವುದರಲ್ಲಿ ಮಗ್ನರಾಗಿದ್ದಾರೆ ಎಂದು ಆರೋಪಿಸಿದರು.
    ನಗರಸಭಾ ಸದಸ್ಯ ರವೀಂದ್ರ ಮಾತನಾಡಿ, ಭಾರತ ದೇಶದ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮೂಲಭೂತವಾದ ಹಕ್ಕನ್ನು ಹೋರಾಟ ಮಾಡುವುದರ ಮೂಲಕ ಕೇಳಬೇಕಾದಂತಹ ದುಸ್ಥಿತಿ ಈ ಜಿಲ್ಲೆಯಲ್ಲಿ ಉದ್ಭವವಾಗಿರುವುದು ನಿಜಕ್ಕೂ ಶೋಚನೀಯ ಸ್ಥಿತಿ ಮತ್ತು ಈ ಜಿಲ್ಲೆಯ ಜನಪ್ರತಿನಿಧಿಗಳು ಜನತೆಯೂ ಅವರನ್ನು ಚುನಾಯಿಸಿ ಕಳುಹಿಸಿದ ತಪ್ಪಿಗೆ ಪಶ್ಚಾತಾಪ ಪಡಬೇಕೋ ಅಥವಾ ಅದಕ್ಕೆ ಯಾವ ರೀತಿ ಮುಂಬರುವ ಚುನಾವಣೆಗಳಲ್ಲಿ ತಕ್ಕಪಾಠ ಕಲಿಸಬೇಕೋ ಎಂಬ ಆಲೋಚನೆಯಲ್ಲಿದ್ದಾರೆ ಎಂದರು.
    ಹನುಮನಹಳ್ಳಿ ಸತೀಶ್ ಮಾತನಾಡಿ ನೀರಾವರಿ ಹೋರಾಟದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಯುವ ಜನತೆ, ವಿದ್ಯಾರ್ಥಿಗಳು ಭಾಗವಹಿಸಿ ಪಕ್ಕದ ರಾಜ್ಯವಾದ ಆಂದ್ರಪ್ರದೇಶದಿಂದ ತೆಲಂಗಾಣ ರಾಜ್ಯದಲ್ಲಿ ನಡೆದಂತಹ ಕ್ರಾಂತಿಕಾರ ಹೋರಾಟವು ಅನಿವಾರ್ಯವಾಗಿದೆ ಎಂದರು.
    ಈ ಸಂದರ್ಭದಲ್ಲಿ ಮುಕಂಡರಾದ ಮೆಕಾನಿಕ್‍ಬಾಬು, ಲಕ್ಷ್ಮಮ್ಮ, ಸುಜಯ್‍ಗೌಡ, ಸಂತೋಷ್, ಮಹಮದ್‍ಪಾಷ, ಶಕೀಲ್‍ಪಾಷ, ನೌಷಾದ್, ರುಕ್ಸಾನಾಭಾನು, ಆಯೇಷ, ಪರಹೀನ್‍ಬಾನು, ಶಕೀಲ, ಮುಮ್ತಾಜ್, ಅಮೀನಾ, ನಯಾಜ್, ಸದ್ದಾಂ ಇನ್ನಿತರರು ಉಪಸ್ಥಿತರಿದ್ದರು. 

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...