ಕೋಲಾರ:349ನೇ ದಿನಕ್ಕೆ ಕಾಲಿಟ್ಟ ನೀರಾವರಿ ಹೋರಾಟ

Source: shabbir | By Arshad Koppa | Published on 27th May 2017, 10:06 AM | State News |

ಕೋಲಾರ ಮೇ.26: ನೀರಾವರಿ ಹೋರಾಟವು 349ನೇ ದಿನಕ್ಕೆ ಕಾಲಿಟ್ಟಿದ್ದು, ಕಾನೂನು ಕಾಲೇಜು ವಿದ್ಯಾರ್ಥಿಗಳು ಧರಣಿಯನ್ನು ಮುಂದುವರೆಸಿದರು.
ದೆಹಲಿಯ ಜಂತ್ ಮಂತರ್‍ಗೆ ಬರಲು ಇಚ್ಚಿಸುವವರು ಈ ಕೆಳಕಂಡವನ್ನು ಸಂಪರ್ಕಿಸುವುದು. ಕುರುಬರಪೇಟೆ ವೆಂಕಟೇಶ್ ಮೊ.:9945366422, ಅಹಿಂದ ಮಂಜುನಾಥ್ ಮೊ.9901983722, ಚಿನ್ನಿ ಶ್ರೀನಿವಾಸ್ ಮೊ.:9632116743, ಕನ್ನಡಪ್ರಕಾಶ್ ಮೊ.:9448402535.
    ಅಹಿಂದ ಮಂಜುನಾಥ್ ಮಾತನಾಡಿ ದಿನಾಂಕ ಜೂನ್ 1ರಂದು ವಿಧಾನಸೌಧಕ್ಕೆ ಬೈಕ್ ರ್ಯಾಲಿ ಮುಖಾಂತರ ಹೋಗುತ್ತಿರುವ ಕೋಡಿಹಳ್ಳಿ ಚಂದ್ರಶೇಖರ್ ರವರೇ ನೀವು ನಿಜವಾಗಿಯೂ ರೈತಪರ ಕಾಳಜಿ ಇದ್ದಿದ್ದರೆ ಇಷ್ಟು ದಿನ ಬೇಕಾಗಿತ್ತಾ? ನಿರಂತರ ಧರಣ ಯ ವೇದಿಕೆಗೆ ನಾಯಕರುಗಳು ಬಂದೇ ಇಲ್ಲ ಮತ್ತು ಸಮಿತಿಯೊಂದಿಗೆ ಬೆಂಬಲಕ್ಕೆ ನಿಂತಿಲ್ಲ. ಮುಂದಿನ ದಿನಗಳಲ್ಲಿ ಜನರೇ ಪಾಠ ಕಲಿಸುತ್ತಾರೆ. ಆದರೆ ನೀವು ರೈತಪರ ಕಾಳಜಿ ಅಂತ ಹೇಳಿಕೊಂಡು ಐಶಾರಾಮಿ ಜೀವನ ಮಾಡುತ್ತಾ ರೈತರನ್ನು ಮರೆತಿರುವುದೇಕೆ? ಹೋರಾಟಕ್ಕೆ ಸ್ಪಂದಿಸದೇ ಇರುವುದು ಏಕೆ? ನಿಜವಾಗಿ ನಿಮಗೆ ರೈತರಪರ ಕಾಳಜಿ ಇದ್ದರೆ ಜೂನ್ 12ರ ಕರ್ನಾಟಕ ಬಂದ್‍ಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿ ಪತ್ರಿಕಾ ಹೇಳಿಕೆಯನ್ನು ನೀಡಿ ಎಂದರು.
    ಕಾನೂನು ಕಾಲೇಜು ವಿದ್ಯಾಥಿ ಕೃಷ್ಣ ಮಾತನಾಡಿ ಜಿಲ್ಲೆಯಲ್ಲಿ 30 ರಿಂದ 35 ಡಿಗ್ರಿ ಬಿಸಿಲಿನ ವಾತಾವರಣಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಎಲ್ಲೆಲ್ಲೂ ಕುಡಿಯುವ ನೀರಿಗೆ ಹಾಹಾಕಾರ. ಕೆರೆ, ಕುಂಟೆಗಳಲ್ಲಿ ನೀರಿಲ್ಲ, ರೈತರು ಬೆಳೆಯನ್ನು ಬೆಳೆಯಲು ಮಳೆಗೆ ಕಾಯುತ್ತಿದ್ದಾರೆ. ಶಾಶ್ವತವಾದ ನದಿ ನೀರಿಗಾಗಿ 349ದಿನಗಳ ನಿರಂತರ ಹೋರಾಟ ನಡೆಸಿದರೂ ಜಿಲ್ಲೆಯ ಜಿಲ್ಲಾಡಳಿತ, ಸಂಸದರು, ಶಾಸಕರು ತೋರುತ್ತಿರುವ ಅಸಡ್ಡ ಮನೋಭಾವನೆಯಿಂದ ಜಿಲ್ಲೆಯ ಜನ ಬೇಸತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
    ಕಾನೂನು ಕಾಲೇಜು ವಿದ್ಯಾರ್ಥಿ ಎಂ.ಪದ್ಮ ಮಾತನಾಡಿ ನೀರಾವರಿ ಹೋರಾಟಕ್ಕೆ ಅತಿಹೆಚ್ಚಿನ ಸಂಖ್ಯೆಯಲ್ಲಿ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು/ ವಿದ್ಯಾರ್ಥಿನಿಯರು ಭಾಗವಹಿಸಿ ಮೂಲಭೂತ ಹಕ್ಕಾದ ನೀರನ್ನು ಕೇಳು ಪ್ರಯತ್ನಕ್ಕೆ ಬೀದಿಗಿಳಿದು ಹೋರಾಟ ಮಾಡುವುದರ ಮೂಲಕ ಶಾಶ್ವತವಾದ ನದಿ ನೀರು ಸಾಧ್ಯವಾಗುತ್ತದೆ. ಈ ರೀತಿಯ ಶಾಂತಿ ಹೋರಾಟಕ್ಕೆ ಬೆಲೆ ಕೊಡುವ ಕಾಲ ಈಗಿಲ್ಲ. ಹಾಗಾಗಿ ಕ್ರಾಂತಿ ರೂಪಕ್ಕೆ ತಿರುಗಿದರೆ ಮಾತ್ರ ನಾವು ನಮ್ಮ ಹಕ್ಕನ್ನು ಪಡೆಯಲು ಸಾಧ್ಯ ಎಂದರು. 

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...