ಕೋಲಾರ:ಗ್ರಾಮೀಣರ ಬದುಕು ಬವಣೆ ಅರಿತವರೇ ಉತ್ತಮ ಪತ್ರಕರ್ತರು: ಸಿ.ಎಂ.ಮುನಿಯಪ್ಪ

Source: shabbir ahmed | By Arshad Koppa | Published on 18th January 2017, 11:31 PM | State News |

ಕೋಲಾರ ಜ.16: ಕೋಲಾರ: ಜಿಲ್ಲಾ ಪತ್ರಿಕೆಗಳಲ್ಲಿ ಕೆಲಸ ಮಾಡಿ ಗ್ರಾಮೀಣ ಭಾಗದ ಬದುಕು ಬವಣೆ ಸಮಸ್ಯೆಗಳನ್ನು ಅರಿತಾಗ ಮಾತ್ರವೇ ಉತ್ತಮ ಪತ್ರಕರ್ತರಾಗಲು ಸಾಧ್ಯವೇ ಹೊರತು ಕಾಲೇಜುಗಳಲ್ಲಿ ಪತ್ರಿಕೋದ್ಯಮ ಓದಿದವರಲ್ಲ ಎಂದು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ದಸಂಸ ಮುಖಂಡ ಸಿ.ಎಂ.ಮುನಿಯಪ್ಪ ಅಭಿಪ್ರಾಯಪಟ್ಟರು.


ನಗರದ ಪತ್ರಕರ್ತರ ಭವನದಲ್ಲಿ ರಾಜ್ಯ ಜಿಲ್ಲಾ ಮತ್ತು ಮಧ್ಯಮ ಪತ್ರಿಕೆಗಳ ಸಂಘದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಪತ್ರಕರ್ತರು ನಿರಂತರ ಅಧ್ಯಯನಶೀಲರಾಗಿ ಸಮಾಜದಲ್ಲಿ ಆಗುತ್ತಿರುವ ಆಗುಹೋಗುಗಳನ್ನು ತಿಳಿದುಕೊಂಡು ಪರಿಪಕ್ವತೆಯನ್ನು ಪಡೆದುಕೊಂಡಾಗ ಸಮಾಜ ಪರಿವರ್ತನೆ ಸಾಧ್ಯ ಎಂದು ಅವರು ಹೇಳಿದರು.
ಪತ್ರಿಕೆಗಳು ವಿಚಾರವಂತರು, ಸಾಹಿತಿಗಳು, ಬರಹಗಾರರು ಮತ್ತು ಚಳವಳಿಗಾರರ ಜತೆ ಒಡನಾಟವನ್ನಿಟ್ಟುಕೊಂಡಾಗ ಮಾತ್ರ ಉತ್ತಮ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಪತ್ರಿಕೆಗಳು ಇಂದು ಸಾಹಿತಿಗಳು, ಬರಹಗಾರರು ಮತ್ತು ಸಂಘ ಸಂಸ್ಥೆಗಳಿಂದ ಅಂತರವನ್ನು ಕಾಪಾಡಿಕೊಂಡು ಬರುತ್ತಿರುವುದರಿಂದ ಪತ್ರಿಕೆಗಳಲ್ಲಿನ ಸತ್ವಾಂಶ ಕಡಿಮೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಹಿಂದೆ ಪತ್ರಿಕೆಗಳು ತನಿಖಾ ವರದಿಗಳನ್ನು ಮಾಡುವ ಮೂಲಕ ಸಮಾಜ ಮತ್ತು ರಾಜಕಾರಣಿಗಳನ್ನು ತಿದ್ದುವ ಕೆಲಸ ಮಾಡುತಿತ್ತೆಂದ ಅವರು, ಇಂದು ಪತ್ರಿಕೆಗಳು ತನಿಖಾ ವರದಿಗಳನ್ನು ಮಾಡುವುದೇ ಬಿಟ್ಟಿವೆ ಎಂದರು.
ಅಕ್ಷರ ಜ್ಞಾನವಿಲ್ಲದ ಜೀತದಾಳುವಿನ ಮಗನಾಗಿ ಜನಿಸಿದ ನಾನು 1980 ರ ದಶಕದಲ್ಲಿ ದಸಂಸ ಚಳವಳಿಯನ್ನು ಪ್ರಾರಂಭಿಸುವ ಮೂಲಕ ಶೋಷಿತರ ಧ್ವನಿಯಾದೆ. ನಂತರ ಶೋಷಿತರ ಸಮಸ್ಯೆಯನ್ನು ಮುಖ್ಯವಾಹಿನಿಗೆ ತರಲು 1986ರಲ್ಲಿ ಸ್ನೇಹಿತರ ಬಳಗದೊಂದಿಗೆ ಆಕಸ್ಮಿಕವಾಗಿ ಸಣ್ಣ ಪತ್ರಿಕೆಯನ್ನು ಹೊರ ತರಲಾಯಿತೆಂದು ತಿಳಿಸಿದರು.
ರಾಜ್ಯ ಜಿಲ್ಲಾ ಮತ್ತು ಮಧ್ಯಮ ಪತ್ರಿಕೆಗಳ ಸಂಘದ ಅಧ್ಯಕ್ಷ ಶ.ಮಂಜುನಾಥ್ ಮಾತನಾಡಿ, ಪ್ರಶಸ್ತಿಗಳ ಹಿಂದೆ ಹೋಗಬಾರದು, ಪ್ರಶಸ್ತಿಗಳೇ ಹುಡುಕಿಕೊಂಡು ಬರಬೇಕು, ಈ ನಿಟ್ಟಿನಲ್ಲಿ ದಸಂಸ ಮುಖಂಡ ಸಿ.ಎಂ.ಮುನಿಯಪ್ಪಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಿಗುವ ಮೂಲಕ ಪ್ರಶಸ್ತಿಗೆ ಮತ್ತಷ್ಟು ಮೆರಗು ತಂದಿದೆ ಎಂದರು.
ಸಮಾಜದಲ್ಲಿ ಪ್ರಶಸ್ತಿಯನ್ನು ಪಡೆಯುವುದು ಸುಲಭದ ಕೆಲಸವಲ್ಲ, ಪ್ರಶಸ್ತಿಗಾಗಿಯೇ ಲಾಭಿ ಮಾಡಬೇಕಾಗಿದೆ, ಇಂತಹವುದರಲ್ಲಿ ರಾಜ್ಯ ಸರ್ಕಾರವೇ ದಸಂಸ ಮುಖಂಡ ಸಿ.ಎಂ.ಮುನಿಯಪ್ಪ ಅವರ ಸೇವೆಯನ್ನು ಗುರ್ತಿಸಿ ಪ್ರಶಸ್ತಿ ನೀಡಿರುವುದು ಸಂತೋಷದ ವಿಷಯವಾಗಿದೆ ಎಂದು ತಿಳಿಸಿದರು.


ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ವಿ.ಮುನಿರಾಜು ಮಾತನಾಡಿ, ಬಡ ದಲಿತ ಕುಟುಂಬದಲ್ಲಿ ಜನಿಸಿದ ಸಿ.ಎಂ.ಮುನಿಯಪ್ಪ ಇಂದು ರಾಜ್ಯ ಮಟ್ಟದವರೆಗೂ ಬೆಳೆದಿದ್ದಾರೆ ಎಂದು ಹೇಳಿದರು.
1980ರಲ್ಲಿ ದಲಿತ ಚಳುವಳಿಯ ಮುಂಚೂಣಿ ನಾಯಕರಲ್ಲಿ ಒಬ್ಬರಾಗಿದ್ದ ಸಿ.ಎಂ.ಮುನಿಯಪ್ಪ ಅನೇಕ ಚಳುವಳಿಗಳ ಮೂಲಕ ಶೋಷಿತರಿಗೆ ನ್ಯಾಯವನ್ನು ದೊರಕಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.


ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದಲ್ಲಿ ಶೋಷಣೆಗೆ ಒಳಗಾದವರಿಗೆ ಮತ್ತು ನಿಗರ್ತಿಕರಿಗೆ ನ್ಯಾಯ ಒದಗಿಸುವ ಮೂಲಕ ಅವರಿಗೆ ಮನೆ, ನಿವೇಶಗಳನ್ನು ಒದಗಿಸುವ ಕೆಲಸವನ್ನು ಸಿ.ಎಂ.ಮುನಿಯಪ್ಪ ಅವರು ತಮ್ಮ ಚಳವಳಿಗಳ ಮೂಲಕ ಮಾಡಿದ್ದಾರೆ ಎಂದರು.


ಚಳವಳಿಗೆ ಪೂರಕವಾಗಿ ಸಂಚಿಕೆ ಪತ್ರಿಕೆಯನ್ನು ಪ್ರಾರಂಭಿಸಿ ಇದರ ಮೂಲಕ ಸಮಾಜದಲ್ಲಿ ಆಗುತ್ತಿರುವ ಅನ್ಯಾಯ, ಶೋಷಣೆಗಳನ್ನು ಎತ್ತಿಹಿಡಿಯುವ ಮೂಲಕ ಜನಪ್ರತಿನಿಧಿಗಳನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ರಾಯಚೂರು ನಾಗರಾಜ, ಎಚ್.ಎಲ್.ಸುರೇಶ್, ಮತ್ತಿತರರು ಉಪಸ್ಥಿತರಿದ್ದರು.  ಶ್ರೀನಿವಾಸ್ ಪ್ರಾರ್ಥಿಸಿ, ಕಲಾವಿದ ವಿಷ್ಣು ಸ್ವಾಗತಿಸಿ, ನಿರೂಪಿಸಿದರು.

Read These Next

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...