ಕೋಲಾರ: ಜಾನುವಾರುಗಳಿಗೆ 9 ವಾರಗಳಿಗೆ ಆಗುವಷ್ಟು ಮೇವು ಲಭ್ಯ; ಡಾ.ಕೆ.ವಿ.ತ್ರಿಲೋಕ್ ಚಂದ್ರ

Source: shabbir | By Arshad Koppa | Published on 25th July 2017, 8:27 AM | State News | Guest Editorial |

ಕೋಲಾರ, ಜುಲೈ 24 :ಮೇವು ಬೆಳೆ ಆಂದೋಲನದಡಿ ಜಿಲ್ಲೆಯಲ್ಲಿ ಮೇವನ್ನು ಬೆಳೆಸಲಾಗಿದ್ದು ಜಾನುವಾರುಗಳಿಗೆ 9 ವಾರಗಳಿಗೆ ಆಗುವಷ್ಟು ಮೇವು ಲಭ್ಯವಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕ್ ಚಂದ್ರ ಅವರು ತಿಳಿಸಿದರು. 
    ನಗರದ ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಂಗಣ ಸಭಾಂಗಣದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಬರ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 
    ಮಳೆಯ ಕೊರತೆ ಇರುವುದರಿಂದ ಮೇವಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಕ್ರಮವಹಿಸಬೇಕು. ನೀರಾವರಿ ಇರುವ ರೈತರ ಮನವೊಲಿಸಿ ಮೇವು ಬೆಳೆಸಲು ಹೆಚ್ಚು ಕಾಳಜಿಯನ್ನು ವಹಿಸಬೇಕು. ರೈತರಿಗೆ ಅವಶ್ಯಕ ಮಿನಿಕಿಟ್‍ಗಳನ್ನು ಪಶುಸಂಗೋಪನೆ ಇಲಾಖೆ ಮತ್ತು ಹಾಲು ಒಕ್ಕೂಟದ ಮೂಲಕ ವಿತರಣೆ ಮಾಡಲು ಸೂಚನೆ ನೀಡಿದರು. 
    ಜಿಲ್ಲೆಯಲ್ಲಿ 2,08,519 ಜಾನುವಾರುಗಳಿವೆ. ಇವುಗಳಿಗೆ 60 ದಿನಗಳಿಗೆ 1,87,665 ಟನ್ ಮೇವಿನ ಅವಶ್ಯಕತೆ ಇದೆ. ಈ ಮೇವನ್ನು 12,508 ಎಕರೆಯಲ್ಲಿ ಬೆಳೆಯಬೇಕಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಸುಮಾರು 28,298 ಎಕರೆಯಲ್ಲಿ ಮೇವು ಬೆಳೆಯಲಾಗಿದೆ. ಈ ಪೈಕಿ ರೈತರ ಸ್ವಂತ ಜಮೀನಿನಲ್ಲಿ 11,338 ಎಕರೆಯಲ್ಲಿ ಮತ್ತು ಎಂ.ಪಿ.ಸಿ.ಎಸ್‍ಗಳ ಮೂಲಕ 16,960 ಎಕರೆಯಲ್ಲಿ ಮೇವು ಬೆಳೆಯಲಾಗಿದೆ ಎಂದರು. 
    ಮೇವು ಬೆಳೆಯಲು ಭಿತ್ತನೆಗೆ ಸುಮಾರು 1463 ಎಕರೆಯನ್ನು ಗುರುತಿಸಲಾಗಿದೆ. ಅದರಂತೆ 17,572 ಎಕರೆಯಲ್ಲಿ ಮೇವು ಕಟಾವು ಆಗಿದ್ದು, 907 ಎಕರೆಯಲ್ಲಿ ಕಟಾವು ಆಗುತ್ತಿದೆ. ಸುಮಾರು 1005 ಎಕರೆಯಲ್ಲಿ ಮೇವು ಕಟಾವಿಗೆ ತಯಾರಾಗಿದೆ. ಈ ವಾರದಲ್ಲಿ 1174 ಎಕರೆ ಕಟಾವಾಗಿದೆ ಎಂದು ತಿಳಿಸಿದರು. 
    ಮೇವು ಬೆಳೆಯಲು ಮಿನಿಕಿಟ್‍ಗಳಿಗೆ ಡಿಮೆಂಡ್ ಹೇಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಶ್ನಿಸಿದಾಗ ಇದಕ್ಕೆ ಪ್ರತಿಕ್ರಿಯಿಸಿದ ಹಾಲು ಒಕ್ಕೂಟದ ಶ್ರೀನಿವಾಸಗೌಡ ಅವರು, ಸದ್ಯದ ಪರಿಸ್ಥಿತಿಯಲ್ಲಿ ರೈತರು ಟೊಮೆಟೋ ಬೆಳೆಗೆ ಮಾರು ಹೋಗುತ್ತಿದ್ದಾರೆ. ಮೇವು ಬೆಳೆದು ಕೊಡಲು ಮುಂದೆ ಬರುತ್ತಿಲ್ಲ ಎಂದು ಮಾಹಿತಿ ನೀಡಿದರು. 
    ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕ್ ಚಂದ್ರ, ಟೊಮೆಟೋ ಬೆಲೆ ಇದೆ ಎಂದು ಎಲ್ಲರೂ ಅತ್ತ ಮುಖ ಮಾಡಿರುತ್ತಾರೆ. ಹಾಗಾಗಿ ರೈತರಿಗೆ ಮೇವು ಬೆಳೆಯಲು ಉತ್ತೇಜನ ನೀಡಿ. ಅವಶ್ಯಕತೆ ಇರುವವರಿಗೆ ನೀರಾವರಿ ಇರುವುದನ್ನು ಗುರುತಿಸಿ ಮಿನಿಕಿಟ್‍ಗಳನ್ನು ವಿತರಣೆ ಮಾಡಿ ಎಂದು ಸೂಚಿಸಿದರು. 
    ನಂತರ ಹಾಲು ಒಕ್ಕೂಟದಿಂದ ರೈತರಿಗೆ ಯಾವ ರೀತಿಯಾಗಿ ಮಿನಿಕಿಟ್‍ಗಳನ್ನು ವಿತರಣೆ ಮಾಡುತ್ತಿದ್ದೀರಿ? ಎಷ್ಟು ಬೆಲೆಗೆ ರೈತರಿಗೆ ನೀಡುತ್ತಿದ್ದೀರಿ ಎಂದು ಪಶ್ನಿಸಿದರು. ಇದಕ್ಕೆ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕಿ ವಿಜಯಲಕ್ಷ್ಮೀ ಅವರು ಉತ್ತರಿಸಿ, ಎಂ.ಪಿ.ಸಿ.ಎಸ್ ಮೂಲಕ ರೈತರಿಗೆ ರಿಯಾಯಿತಿ ಧರದಲ್ಲಿ ಮಿನಿಕಿಟ್‍ಗಳನ್ನು ವಿತರಿಸಲಾಗುತ್ತಿದೆ. 
    ಮಿನಿಕಿಟ್‍ಗಳನ್ನು ಶೇ.50 ರಷ್ಟು ರಿಯಾಯಿತಿ ಧರದಲ್ಲಿ ರೈತರಿಗೆ ವಿತರಣೆ ಮಾಡಲಾಗುತ್ತಿದೆ. ಎಸ್‍ಎಸ್‍ಜಿ ಯು ಒಂದು ಕೆ.ಜಿ.ಗೆ 42 ರೂಗಳಾಗಿದ್ದು ರಿಯಾಯಿತಿ ಹೋಗಿ ರೈತರಿಗೆ 21 ರೂ ವೆಚ್ಚವಾಗಲಿದೆ. ಅದೇ ರೀತಿ ಎ.ಟಿ.ಎಂ. ಜೋಳವು ಒಂದು ಕೆ.ಜಿ.ಗೆ 39 ರೂಗಳಾಗಿದ್ದು ರಿಯಾಯಿತಿ ಹೋಗಿ ರೈತರಿಗೆ 19.5 ರೂ ಗೆ ನೀಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು. 
    ಸಭೆಯಲ್ಲಿ ಜಿಲ್ಲಾಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ, ಅಪರ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ, ನೋಡಲ್ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. 

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...