ಕೋಲಾರ: ಯುವ ಬರಹಗಾರರ ಚೊಚ್ಚಲ ಕೃತಿ ಪ್ರಕಟಿಸಲು ಪ್ರೋತ್ಸಾಹಧನ

Source: shabbir | By Arshad Koppa | Published on 16th September 2017, 11:55 PM | State News |

ಕೋಲಾರ, ಸೆಪ್ಟೆಂಬರ್ 16:ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ 2016 ನೇ ಸಾಲಿನ ಯುವಬರಹಗಾರರ ಚೊಚ್ಚಲ ಕೃತಿಗಳನ್ನು ಪ್ರಕಟಿಸಲು ಪ್ರೋತ್ಸಾಹಧನ ನೀಡುವ ಸಲುವಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 
ಅರ್ಜಿದಾರರು ಕನಿಷ್ಠ 18 ರಿಂದ 35 ವರ್ಷ ವಯೋಮಿತಿಯವರಾಗಿರಬೇಕು. ಸ್ವ-ವಿವರವುಳ್ಳ ಮನವಿಯೊಂದಿಗೆ ದೃಢೀಕೃತ ಎಸ್.ಎಸ್.ಎಲ್.ಸಿ ಪ್ರಮಾಣ ಪತ್ರದ ಪ್ರತಿ ಅಥವಾ ಅಧಿಕೃತವಾದ, ದೃಢೀಕರಿಸಲ್ಪಟ್ಟ ಜನ್ಮದಾಖಲಾತಿ ಪ್ರಮಾಣ ಪತ್ರದ ಪ್ರತಿಯನ್ನು ಸಲ್ಲಿಸಬೇಕು. ಅಲ್ಲದೆ ಪ್ರಸ್ತುತ ಸಲ್ಲಿಸಲ್ಪಡುತ್ತಿರುವ ಕೃತಿಯು ತಮ್ಮ ಚೊಚ್ಚಲ ಕೃತಿಯಾಗಿದ್ದು ಎಲ್ಲಿಯೂ ಪ್ರಕಟವಾಗಿಲ್ಲವೆಂದು ಸ್ವಯಂ ದೃಢೀಕರಣ ಪತ್ರ ನೀಡಬೇಕು. 
ಆಯ್ಕೆಗಾಗಿ ಸಲ್ಲಿಸುವ ಹಸ್ತ ಪ್ರತಿಯು ಡಿ.ಟಿ.ಪಿ ಮಾಡಿಸಿದಾಗ 1/8 ಡೆಮ್ಮಿ ಅಳತೆಯಲ್ಲಿ ಕನಿಷ್ಠ 60 ಪುಟಗಳಿರಬೇಕು. ಅನುವಾದ, ಪಠ್ಯಪುಸ್ತಕ ಹಾಗೂ ಬೇರಾವುದೇ ಪದವಿಗೆ ಸಿದ್ಧಪಡಿಸಿದ ಪ್ರಬಂಧಗಳನ್ನು ಹೊರತುಪಡಿಸಿ, ಕಥೆ, ಕಾದಂಬರಿ, ಕವನ, ನಾಟಕ, ವಿಮರ್ಶಾ ಲೇಖನ, ಪ್ರಬಂಧ ಮುಂತಾದ ಕನ್ನಡ ಸಾಹಿತ್ಯದ ಪ್ರಕಾರಗಳಿಗೆ ಸಂಬಂಧಿಸಿದಂತೆ ಹಸ್ತಪ್ರತಿ ಇರಬೇಕು. 
ಆಸಕ್ತರು ಅರ್ಜಿಗಳನ್ನು ದಿನಾಂಕ: 04-10-2017 ರೊಳಗೆ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002 ಈ ವಿಳಾಸಕ್ಕೆ ಕಳುಹಿಸಿಕೊಡಬಹುದಾಗಿದೆ. ಹೆಚ್ಚಿನ ಮಾಹಿತಿಯನ್ನು ದೂರವಾಣ  ಸಂಖ್ಯೆ 080-22484516 ಅಥವಾ 22017704 ಗೆ ಕರೆ ಮಾಡಿ ಪಡೆದುಕೊಳ್ಳಬಹುದಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ. 


ಸೆ. 21ರಂದು ವಡಗೂರು ಗ್ರಾಮ ಮತ್ತು ವಾರ್ಡ್ ಸಭೆ
ಕೋಲಾರ, ಸೆಪ್ಟೆಂಬರ್ 16 :    ವಡಗೂರು ಗ್ರಾಮಪಂಚಾಯಿತಿಗೆ ಸೇರಿದ ಗ್ರಾಮಗಳಲ್ಲಿ ಸರ್ಕಾರದ ಆದೇಶದಂತೆ ಸಾರ್ವಜನಿಕರ ಕುಂದು ಕೊರತೆ, ವಸತಿ, ಸರ್ಕಾರದ ಸವಲತ್ತು ಪಡೆಯಲು ಅರ್ಹ ಫಲಾನುಭವಿಗಳ ಪಟ್ಟಿ ಮಾಡಲು 2017-18 ನೇ ಸಾಲಿನ ವಾರ್ಡ್ ಅಥವಾ ಗ್ರಾಮ ಸಭೆಯನ್ನು ನಡೆಸಲು ದಿನಾಂಕ ನಿಗಧಿಪಡಿಸಲಾಗಿದೆ. 
    ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪ್ರಭಾವತಿ ಅವರ ಅಧ್ಯಕ್ಷತೆ ಹಾಗೂ ಪಂಚಾಯಿತಿ ನೋಡಲ್ ಅಧಿಕಾರಿ ಎಂ.ಕೆ.ರಾಮಪ್ಪ ಅವರ ಸಮ್ಮುಖದಲ್ಲಿ ಈ ಸಭೆಗಳು ನಡೆಯಲಿವೆ. 
    ಸಭೆಯು ದಿನಾಂಕ:21-09-2017 ರಂದು ಬೆಳಗ್ಗೆ 9.30 ಗಂಟೆಗೆ ಕಾಳಹಸ್ತಿಪುರ ಶಾಲೆಯ ಆವರಣದಲ್ಲಿ, 10.30 ಕ್ಕೆ ಚದುಮನಹಳ್ಳಿ ಗ್ರಾಮದ ಅಶ್ವತ್ಥಕಟ್ಟೆ, ಮಧ್ಯಾಹ್ನ 12.30 ಕ್ಕೆ ಕೆಂಬೋಡಿಯ ಚೌಡೇಶ್ವರಿ ದೇವಸ್ಥಾನ, 2.00 ಗಂಟೆಗೆ ತಿಮ್ಮಸಂದ್ರ ಅಶ್ವತ್ಥ ಕಟ್ಟೆ, 3.30 ಗಂಟೆಗೆ ಅಜ್ಜಪನಹಳ್ಳಿ ಅಶ್ವತ್ಥ ಕಟ್ಟೆಯ ಮೇಲೆ ನಡೆಯಲಿದೆ. 
    ನಂತರ ದಿನಾಂಕ: 22-09-2017 ರಂದು ಬೆಳಗ್ಗೆ 10.00 ಗಂಟೆಗೆ ಚನ್ನರಾಯಪುರ ಸಮುದಾಯ ಭವನ, 11.00 ಗಂಟೆಗೆ ಗಿರ್ನಹಳ್ಳಿಯ ಪ್ರಾಥಮಿಕ ಶಾಲೆ ಹತ್ತಿರ, ಮಧ್ಯಾಹ್ನ 1.00 ಗಂಟೆಗೆ ಸೀಸಂದ್ರದ ಅಶ್ವತ್ಥ ಕಟ್ಟೆ, 2.00 ಗಂಟೆಗೆ ಶಿವರಾಂಪುರ ಗಂಗಮ್ಮ ದೇವಸ್ಥಾನ, ಮಧ್ಯಾಹ್ನ 3.00 ಗಂಟೆಗೆ ರಾಮಸಂದ್ರ ಗ್ರಾಮದ ಯಲ್ಲಮ್ಮ ದೇವಸ್ಥಾನದ ಬಳಿ ಹಾಗೂ ದಿನಾಂಕ: 23-09-2017 ರಂದು ಬೆಳಗ್ಗೆ 9.30 ಗಂಟೆಗೆ ವಡಗೂರಿನ ಈಶ್ವರ ದೇವಾಸ್ಥಾನದ ಬಳಿ ವಾರ್ಡ್ ಸಭೆ ಹಾಗೂ ಬೆಳಗ್ಗೆ 11.00 ಗಂಟೆಗೆ ವಡಗೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ಗ್ರಾಮ ಸಭೆ ನಡೆಯಲಿದೆ. 

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...