ಕೋಲಾರ: ಮಾಧ್ಯಮ ವರದಿಗಾರರ ಮೇಲ್ಲೆ ಹಲ್ಲೆ-ಸೂಕ್ತ ಕ್ರಮ ಆಗ್ರಹಿಸಿ ಜಿಲ್ಲಾ ಪೊಲೀಸ್ ವರಿಷ್ಟಧಿಕಾರಿಗಳಿಗೆ ಮನವಿ ಸಲ್ಲಿಕೆ

Source: shabbir | By Arshad Koppa | Published on 23rd June 2017, 7:44 PM | State News | Special Report |

ಕೋಲಾರ,ಜೂ.21: ಮಾಧ್ಯಮ ವರದಿಗಾರರ ಮೇಲೆ ಹಲ್ಲೆ ನಡೆಸಿರುವ ಮಾಲೂರು ಪೊಲೀಸ್ ಠಾಣೆಯ ಪೇದೆಗಳ ವಿರುದ್ಧ ಕಾನೂನು ಕ್ರಮ ಜರಗಿಸಬೇಕೆಂದು ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಜಿಲ್ಲಾ ಪೊಲೀಸ್ ವರಿಷ್ಟಧಿಕಾರಿ ಡಾ.ರೋಹಿಣಿ ಕಟೋಚ್ ರವರಿಗೆ ಮನವಿ ಸಲ್ಲಿಸಲಾಯಿತು.
ಕಳೆದ ರಾತ್ರಿ ಕಾರ್ಯನಿಮಿತ್ತ ಪೊಲೀಸ್ ಠಾಣೆಗೆ ತೆರಳಿದ ಬಿ.ಟಿ.ವಿ ವರದಿಗಾರ ವೆಂಕಟೇಶ್ ಮತ್ತು ಜನತಾ
ಟಿ.ವಿ ವರದಿಗಾರ ಮುನಿಯಪ್ಪ ರವರ ಮೇಲೆ ತಾವು ಮಾಧ್ಯಮದವರು ಎಂದು ಹೇಳಿದರೂ ಸಹ ನೀವೂ ಯಾರದರೇನು ಎಂದು ದರ್ಪದಿಂದ ವರ್ತಿಸಿದ್ದಲ್ಲದೆ ವಿನಾಕಾರಣ ಅಲ್ಲಿನ ಪೇದೆಗಳಾದ ಪಿ.ಸಿ ರವಿಕುಮಾರ್, ಮಂಜುನಾಥ್, ಶಿವಶಂಕರ್ ಅವರು ಅವಾಚ್ಯ ಶಬ್ದಗಳಿಂದ ನಿಂಧಿಸಿ ಹಲ್ಲೆ ಮಾಡಿದ್ದಾರೆ.
ಪೊಲೀಸರು ಮಾಧ್ಯಮ ವರದಿಗಾರರ ಮೇಲೆ ಹಲ್ಲೆಗೆ ಮುಂದಾಗಿರುವುದನ್ನೂ ನೋಡಿದರೆ ಇನ್ನು ಜನಸಾಮಾನ್ಯರ ಗತಿಯೇನು? ಪೊಲೀಸ್ ಠಾಣೆಗಳಲ್ಲಿ ವ್ಯವಸ್ಥೆಯನ್ನು ಸರಿಪಡಿಸುವಂತೆ ಮನವಿಯಲ್ಲಿ ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಪೊಲೀಸ್ ವರಿಷ್ಟಧಿಕಾರಿ ಡಾ.ರೋಹಿಣಿ ಕಟೋಚ್ ರವರು ಘಟನೆಗೆ ಸಂಬಂಧಿಸಿದಂತೆ ಮಾಹಿತಿಯನ್ನು ಪಡೆಯಲಾಗಿದ್ದು, ತನಿಖೆಗೆ ಆದೇಶಿಸಿರುವುದಾಗಿ ತಿಳಿಸಿದರು.
ನಿಯೋಗದಲ್ಲಿ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್, ಪ್ರಧಾನ ಕಾರ್ಯದರ್ಶಿ ವಿ.ಮುನಿರಾಜು, ಖಜಾಂಚಿ ಅಬ್ಬಣಿ ಶಂಕರ್, ಕಾರ್ಯದರ್ಶಿ ಎ.ಜಿ.ಸುರೇಶ್‍ಕುಮಾರ್, ಚಾಂದ್‍ಪಾಷ್, ಬಿ.ಟಿ.ವಿ ವೆಂಕಟೇಶ್, ಮುನಿಯಪ್ಪ(ಬೆಟ್ಟಣ್ಣ), ಅಮರ್, ಸುಧಾಕರ್, ಲಕ್ಷ್ಮೀಪತಿ, ರವಿಕುಮಾರ್, ವಿಕ್ಕಿ ಮದನ್‍ಕುಮಾರ್,  ರವಿಕುಮಾರ್, ಕೋಲಾರನ್ಯೂಸ್ ಚಂದ್ರು, ರಘುರಾಜ್, ಶಿವಕುಮಾರ್, ಪವನ್, ಸೋಮಶೇಖರ್, ರಮೇಶ್, ಮಹೇಶ್, ಗಂಗಾಧರ್ ಉಪಸ್ಥಿತರಿದ್ದರು.
                        
ಕೋಲಾರ: ಕೃಷಿ ಹೊಂಡಗಳಿಗೆ ಆಗತ್ಯವಿರುವ ಮೀನು ಮರಿಗಳ ಮಾರಾಟ 
ಕೋಲಾರ, ಜೂನ್ 21:                             
ಜಿಲ್ಲಾಡಳಿತದಿಂದ ದಿನಾಂಕ.23-6-2017 ರಿಂದ 25-6-2017 ರವರಗೆ ಜಿಲ್ಲಾಧಿಕಾರಿಗಳ ಕಛೇರಿಯ ಆವರಣದಲ್ಲಿನ ತೋಟಗಾರಿಕಾ ಕ್ಷೇತ್ರದಲ್ಲಿ ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ಮೀನುಗಾರಿಕೆ ಇಲಾಖೆಯ ಫಲಾನುಭವಿಗಳಿಂದ  ಕೃಷಿ ಹೊಂಡಗಳಿಗೆ ಆಗತ್ಯವಿರುವ ಮೀನು ಮರಿಗಳನ್ನು ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ.   ಕೃಷಿ ಹೊಂಡ ಹೊಂದಿರುವ ಆಸಕ್ತ ರೈತರು ಈ ಅವಕಾಶವನ್ನು  ಸದುಪಯೋಗ ಪಡಿಸಕೊಳ್ಳಲು ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು, ಕೋಲಾರ ಇವರು ಕೋರಿದ್ದಾರೆ.

ಹಲಸು ಫಸಲಿನ ಬಹಿರಂಗ ಹರಾಜು
ಕೋಲಾರ, ಜೂನ್ 21 :ಕೋಲಾರ ತೋಟಗಾರಿಕೆ ಕಾಲೇಜಿನ ಟಮಕ ಹಲಸು ಕ್ಷೇತ್ರದಲ್ಲಿರುವ ಹಲಸು ಮರಗಳ 2017ನೇ ಫಸಲನ್ನು ದಿನಾಂಕ: 23-06-2017 ರಂದು ಬೆಳಿಗ್ಗೆ 10 ಗಂಟೆಗೆ ತೋಟಗಾರಿಕೆ ಮಹಾವಿದ್ಯಾಲಯ, ಟಮಕ, ಕೋಲಾರ ಕಾಲೇಜಿನ ಸಭಾಂಗಣದಲ್ಲಿ ಬಹಿರಂಗ ಹರಾಜಿನಲ್ಲಿ ವಿಲೇವಾರಿ ಮಾಡಲಾಗುವುದು.  ಇಚ್ಚೆಯುಳ್ಳ ಹಣ್ಣು ವ್ಯಾಪಾರಿಗಳು ಮತ್ತು ದಿನಸಿ ವ್ಯಾಪಾರಿಗಳು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು ಎಂದು ಕ್ಷೇತ್ರ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...