ಕೋಲಾರ ಮತದಾರರ ಪಟ್ಟಿ ಪರಿಷ್ಕರಣೆ ವಿಶೇಷ ಆಂದೋಲನ

Source: shabbir | By Arshad Koppa | Published on 17th July 2017, 8:46 AM | State News |

ಕೋಲಾರ, ಜುಲೈ 14 :    ಭಾರತ ಚುನಾವಣಾ ಆಯೋಗದ ಸೂಚನೆಯಂತೆ ಕೋಲಾರ ತಾಲ್ಲೂಕಿನ ವಿಶೇಷವಾಗಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳದೆ ಹೊರಗುಳಿದಿರುವ 18-19 ವರ್ಷ ವಯಸ್ಸಿನ (21ವರ್ಷಗಳವರೆವಿಗೂ ವಿಸ್ತರಿಸಬಹುದಾದಂತಹ) ಅರ್ಹ ಯುವ ಮತದಾರರು ತಮ್ಮ ಪಟ್ಟಿಗೆ ಹೆಸರನ್ನು ಸೇರಿಸಲು 
ದಿನಾಂಕ:-01/07/2017 ರಿಂದ 31/7/2017 ರವರೆಗೆ ವಿಶೇಷ ಆಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು.
ಈ ಅವಧಿಯಲ್ಲಿ ಅರ್ಹ ಯುವಕ ಯುವತಿಯರು ತಮ್ಮ ಹೆಸರುಗಳನ್ನು ಮತದಾರರ ಪಟ್ಟಿಗೆ ನೊಂದಣ  ಮಾಡಿಕೊಳ್ಳಲು ಈ ಕೆಳಕಂಡ ರೀತಿಯಲ್ಲಿ ನಮೂನೆ 6ರ ಅರ್ಜಿಗಳನ್ನು ಸಲ್ಲಿಸಬಹುದಾಗಿರುತ್ತದೆ.
    18-19 ವರ್ಷ ವಯಸ್ಸುಳ್ಳ (21ವರ್ಷಗಳವರೆವಿಗೂ ವಿಸ್ತರಿಸಬಹುದಾದಂತಹ) ಯುವ ಮತದಾರರು ಮೇಲ್ಕಂಡ ಅವಧಿಯಲ್ಲಿ ಅವರ ಹೆಸರು ಮತದಾರರ ಪಟ್ಟಿಯಲ್ಲಿ ನೊಂದಾಯಿಸಿಕೊಳ್ಳಲು ನಮೂನೆ-6ನ್ನು ಭರ್ತಿಮಾಡಿ ದಾಖಲೆಗಳೊಂದಿಗೆ ಮತದಾರರ ನೋಂದಣಾಧಿಕಾರಿಗಳಿಗೆ/ಸಹಾಯಕ ಮತದಾರರ ನೋಂದಣಾಧಿಕಾರಿಗಳಿಗೆ ಅಂಚೆ ಮೂಲಕ ಅಥವಾ ಆನ್‍ಲೈನ್ http://www.voterreg.kar.nic.in ನ ಮೂಲಕ ಮತ್ತು ಎನ್‍ವಿಎಸ್‍ಪಿ ಪೋರ್ಟಲ್ http://www.nvsp.in  ಮುಖಾಂತರ ಸಲ್ಲಿಸಬಹುದಾಗಿರುತ್ತದೆ.
    ವೋಟರ್ ಸರ್ವೀಸಸ್ ಮೊಬೈಲ್ ಅಪ್ಲಿಕೇಷನ್ ಭಾರತ ಚುನಾವಣಾ ಆಯೋಗದ ವೆಬ್‍ಸೈಟ್ ನಲ್ಲಿ ಲಭ್ಯವಿದ್ದು ಇದರಡಿಯಲ್ಲೂ ಸಹ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸಬಹುದಾಗಿರುತ್ತದೆ. ನ್ಯಾಷನಲ್ ಕಾಲ್‍ಸೆಂಟರ್ “1950” ಮೂಲಕ ಲಭ್ಯವಿರುವ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ನಮೂನೆ-6 ನ್ನು ಸಲ್ಲಿಸಬಹುದಾಗಿರುತ್ತದೆ.
ಮೇಲಿನಂತೆ ಯುವ ಮತದಾರರು ತಾವು ಖುದ್ದು ನಮೂನೆ-6 ನ್ನು ಮೇಲ್ಕಂಡ ರೀತಿಗಳಲ್ಲಿ ಸಲ್ಲಿಸುವುದರ ಜೊತೆಗೆ ಭಾರತ ಚುನಾವಣಾ ಆಯೋಗದ ನಿರ್ದೇಶನಗಳಂತೆ ಮತಗಟ್ಟೆ ಹಂತದ ಅಧಿಕಾರಿಗಳು ಅವರ ಮತಗಟ್ಟೆ ಪ್ರದೇಶ ವ್ಯಾಪ್ತಿಯಲ್ಲಿ ಈ ಅವಧಿಯಲ್ಲಿ (ವಿಶೇಷ ಕಾರ್ಯಾಚರಣೆ ದಿನಾಂಕಗಳನ್ನು ಹೊರತುಪಡಿಸಿ) ಮನೆ ಮನೆಗೆ ಭೇಟಿ ನೀಡಿ ನೊಂದಣ ಯಾಗದ ಅರ್ಹ ವ್ಯಕ್ತಿಗಳಿಂದ ನಮೂನೆ-6ನ್ನು ಸಂಗ್ರಹಿಸಿಕೊಳ್ಳಲಿರುತ್ತಾರೆ. ಆದುದರಿಂದ, ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ. 
ಭಾರತ ಚುನಾವಣಾ ಆಯೋಗದ ನಿರ್ದೇಶನಗಳಂತೆ ಮೇಲ್ಕಂಡ ವಿಶೇಷ ಆಂದೋಲನ ಕಾರ್ಯಕ್ರಮದ ಅವಧಿಯಲ್ಲಿ ದಿನಾಂಕ:-08/07/2017 ಮತ್ತು 22/07/2017 ಗಳಂದು ಅಥವಾ 9/7/2017 ಮತ್ತು 23/7/2017 ಗಳಂದು ವಿಶೇಷ ಕಾರ್ಯಾಚರಣೆಯ ದಿನಗಳಾಗಿ ನಿಗಧಿಪಡಿಸಲಾಗುವುದು. ಈ ದಿನಗಳಂದು ಆಯಾ ಮತದಾರರ ಪಟ್ಟಿಯೊಂದಿಗೆ ಉಪಸ್ಥಿತರಿದ್ದು ನೊಂದಾಯಿಸಿಕೊಳ್ಳದಿರುವ ಅರ್ಹ ಯುವ ನಾಗರೀಕರಿಂದ ನಮೂನೆ-6 ಮತ್ತು ದಾಖಲೆಗಳನ್ನು ಸಂಗ್ರಹಿಸಲಾಗುವುದು. 
ಇದರ ಜೊತೆಗೆ ಜಿಲ್ಲೆಯಲ್ಲಿರುವ ಎಲ್ಲಾ ಸರ್ಕಾರಿ/ಖಾಸಗಿ ವಿದ್ಯಾ ಸಂಸ್ಥೆಗಳಲ್ಲಿ ಅಂದರೆ ಕಾಲೇಜು/ಶಾಲೆಗಳು, ತರಬೇತಿ ಕೇಂದ್ರಗಳಾದ  ಐಟಿಐ,ಬಿ.ಎಡ್ ಕಾಲೇಜು, ನರ್ಸಿಂಗ್ ಮತ್ತು ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ವಿಶೇಷ ಅಭಿಯಾನ ಕಾರ್ಯಕ್ರಮವನ್ನು ಸಹ ಈ ಅವಧಿಯಲ್ಲಿ ಎರಡು ದಿನಾಂಕಗಳಂದು ಹಮ್ಮಿಕೊಳ್ಳಲಾಗುವುದು. ಹಾಗೂ ಎಲ್ಲಾ ವಿದ್ಯಾ ಸಂಸ್ಥೆಗಳಲ್ಲಿಯೂ ಒಬ್ಬ ಕ್ಯಾಂಪಸ್ ಅಂಬಾಡಿಸರ್ ರವರನ್ನು ಗುರ್ತಿಸಿ ನೇಮಕಗೊಳಿಸಿ ಅವರ ಮುಖಾಂತರ ನೊಂದಾಯಿಸಿಕೊಳ್ಳಲಿರುವ ಅರ್ಹ ವಿದ್ಯಾರ್ಥಿ ವಿದ್ಯಾರ್ಥಿನಿಯರುಗಳಿಂದ ನಮೂನೆ-6 ನ್ನು ಸಂಗ್ರಹಿಸಿಕೊಳ್ಳಲು ಕ್ರಮ ಜರುಗಿಸಲಾಗುವುದು.
ಮೃತ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಗಳಿಂದ ತೆಗೆದು ಹಾಕುವ ಬಗ್ಗೆ:
ಈ ವಿಶೇಷ ಆಂದೋಲನ ಕಾರ್ಯಕ್ರಮದ ಎರಡನೇ ಕಾರ್ಯಚಟುವಟಿಕೆಯಾದ ಮೃತ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕುವುದಾಗಿರುತ್ತದೆ. ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜನನ ಮರಣ ನೊಂದಣಾಧಿಕಾರಿಗಳಿಂದ ಮೃತ ಮತದಾರರ ಬಗ್ಗೆ ಪ್ರಮಾಣ ಪತ್ರಗಳನ್ನು ಸಂಗ್ರಹಿಸಿ ತತ್ಸಂಬಂಧಿತ ಮತದಾರರ ಸಂಬಂಧಿಕರಿಂದ ಭರ್ತಿ ಮಾಡಲಾದ ನಮೂನೆ-7 ನ್ನು ಸಂಗ್ರಹಿಸಿ ಮತಗಟ್ಟೆ ಹಚಿತದ ಅಧಿಕಾರಿಗಳು ಸಂಬಂಧಪಟ್ಟ ಪ್ರದೇಶದಲ್ಲಿನ ಇಬ್ಬರು ಸ್ಥಳೀಯ ಮತದಾರರಿಂದ ಸಹಿ ಪಡೆದು ಮತದಾರರ ಪಟ್ಟಿಯಿಂದ ಮೃತರ ಹೆಸರುಗಳನ್ನು ತೆಗೆದು ಹಾಕಲು ಕ್ರಮ ವಹಿಸಲಾಗುವುದು. ಜೊತೆಗೆ ಸಾರ್ವಜನಿಕರೂ ಸಹ ಮೃತ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲು ಸ್ವಯಂಪ್ರೇರಿತರಾಗಿ ಮರಣ ಪ್ರಮಾಣ ಪತ್ರಗಳೊಂದಿಗೆ ಸಂಬಂಧಪಟ್ಟ ಬಿಎಲ್‍ಒ ಹಾಗೂ ಸಹಾಯಕ ನೊಂದಣಾಧಿಕಾರಿಗಳಿಗೆ ಖುದ್ದು ಸಲ್ಲಿಸಬಹುದಾಗಿರುತ್ತದೆ.
ಮೇಲ್ಕಂಡಂತೆ ವಿಶೇಷ ಆಂದೋಲನ ಕಾರ್ಯಕ್ರಮದ ಮೇರೆಗೆ ಭಾರತ ಚುನಾವಣಾ ಆಯೋಗದ ಧ್ಯೇಯವಾದ “ಓಔ ಗಿಔಖಿಇಖ ಖಿಔ ಃಇ ಐಇಈಖಿ ಃಇಊIಓಆ” ನ್ನು ಯಶಸ್ವಿಗೊಳಿಸಲು ಅಗತ್ಯವಿರುವ ಎಲ್ಲಾ ರೀತಿಯ ಕ್ರಮಗಳನ್ನು ಮತ್ತು ಸಿದ್ದತೆಗಳನ್ನು ಕೈಗೊಳ್ಳುತ್ತಿರುವ್ಯದರಿಂದ ಈ ಬಗ್ಗೆ ಸಾರ್ವಜನಿಕರು ಮತ್ತು ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಸೂಕ್ತ ಸಹಕಾರವನ್ನು ತಾಲ್ಲೂಕು ಮತ್ತು ಜಿಲ್ಲಾ ಆಡಳಿತಕ್ಕೆ ನೀಡುವಂತೆ ಈ ವಿಷಯವನ್ನು ಪತ್ರಿಕೆಗಳ ಮೂಲಕ ಅವರುಗಳ ಗಮನಕ್ಕೆ ತರುವಂತೆ ಕೋರಿದೆ.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ಕಮೀಷನರ್ ಹಾಗೂ ಮತದಾರರ ನೊಂದಣಾಧಿಕಾರಿಗಳು, ಸಹಾಯಕ ಮತದಾರರ ನೊಂದಣಾಧಿಕಾರಿಗಳು/ತಹಶೀಲ್ದಾರ್, ಕೋಲಾರ ಮತ್ತು ಜಿಲ್ಲಾಧಿಕಾರಿಗಳ ಕಛೇರಿಯ ಚುನಾವಣಾ ಶಾಖೆಯಲ್ಲಿನ ಸಿಬ್ಬಂದಿಯನ್ನು ಸಂಪರ್ಕಿಸಲು ಕೋರಿದೆ. ಹಾಗೂ ಮತದಾರರ ಪಟ್ಟಿಗಳ ಅಭಿವೃದ್ದಿಗಾಗಿ ನೇಮಕಗೊಂಡಿರುವ ಮತಗಟ್ಟೆ ಹಚಿತದ ಅಧಿಕಾರಿಗಳನ್ನೂ(ಬಿ.ಎಲ್.ಒ) ಸಹ ಸಂಪರ್ಕಿಸಬಹುದಾಗಿರುತ್ತದೆ.
ಸಂಪರ್ಕಿಸಬೇಕಾದ ಸಹಾಯ ದೂರವಾಣ  ಸಂಖೆಗಳು:
    ಹೆಚ್ಚಿನ ಮಾಹಿತಿಗಾಗಿ ದೂರವಾಣ  ಸಂಖ್ಯೆ 148-ಕೋಲಾರ-08152-221270, ಸಹಾಯಕ ಕಮೀಷನರ್ ಕಛೇರಿ-08152-222057, ಜಿಲ್ಲಾಧಿಕಾರಿಗಳ ಕಛೇರಿ-08152-220168, 224926, ಕೋಲಾರ ತಾಲ್ಲೂಕು ಕಛೇರಿ-08152-222056 ನ್ನು ಸಂಪರ್ಕಿಸುವಂತೆ ಕೋಲಾರ ತಾಲ್ಲೂಕು ತಹಶೀಲ್ದಾರ್ ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿಯಾದ ಎಂ.ವಿಜಯಣ್ಣ ತಿಳಿಸಿದ್ದಾರೆ. 

ಪರಿಷ್ಕøತ ಬೀಟ್ ವ್ಯವಸ್ಥೆ ಜಾರಿ

ಕೋಲಾರ, ಜುಲೈ 14:    ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮಗಳಲ್ಲಿ ಪರಿಷೃತ ಬೀಟ್ ವ್ಯವಸ್ಥೆ ಅಂಗವಾಗಿ ನೇಮಿಸಿದ್ದ ಬೀಟ್ ಸದಸ್ಯರುಗಳ ಸಭೆಯನ್ನು ಶ್ರೀನಿವಾಸಪುರದ ಶ್ರೀ. ವಾಸವಿ ಕಲ್ಯಾಣ ಮಂಟಪದಲ್ಲಿ ಕೋಲಾರ ಜಿಲ್ಲಾ ರಕ್ಷಣಾಧಿಕಾರಿಗಳಾದ ಡಾ.ರೋಹಿಣ  ಕಟೋಚ್ ಸಪೆಟ್ ಅವರು ಉದ್ಘಾಟಿಸಿದರು.
    ನಂತರ ಮಾನತಾಡಿದ ಅವರು, ಬೀಟ್ ಕರ್ತವ್ಯಕ್ಕೆ ನೇಮಕಗೊಂಡಿರುವ ಸಿಬ್ಬಂದಿಯವರು ಬೀಟ್ ನಲ್ಲಿ ನಡೆಯುವ ಆಗುಹೋಗುಗಳಿಗೆ ಜವಾಬ್ದಾರಿಯಾಗಿರುತ್ತಾರೆ. ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು, ಠಾಣೆಗೆ ಬಂದು ದೂರು ನೀಡಲು ಹಿಂಜರಿಯಬಾರದು, ಕೆಳಹಂತದಲ್ಲಿ ಕೆಲಸ ಆಗದಿದ್ದಲ್ಲಿ ಮೇಲಾಧಿಕಾರಿಗಳನ್ನು ಸಂಪರ್ಕಿಸಬಹುದೆಂದು ತಿಳಿಸಿದರು.
ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ಇದ್ದ 12 ಬೀಟ್‍ಗಳನ್ನು 53 ಹೆಚ್ಚಿಸಲಾಗಿದೆ. ಪ್ರತಿ ಸಿಬ್ಬಂದಿಗೆ 3-4 ಹಳ್ಳಿಗಳನ್ನು ಹಂಚಿಕೆ ಮಾಡಿ ಸಾರ್ವಜನಿಕರಿಗೆ ತಮ್ಮ ದೂರುಗಳನ್ನು ನೀಡಲು ಅನುಕೂಲವಾಗಿದೆ ಮತ್ತು ಸಾರ್ವಜನಿಕರು ತಮ್ಮ ಸಮಸ್ಯಗಳ ಬಗ್ಗೆ ಅಥವಾ ಅಪರಾಧ ಮಾಹಿತಿಗಳು ಇದ್ದಲ್ಲಿ ದೂರುವಾಣ  ಮುಖೇನ ಬೀಟ್ ಸಿಬ್ಬಂದಿಯವರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು. 
ಸಭೆಯಲ್ಲಿ ಶ್ರೀನಿವಾಸಪುರ ವೃತ್ತ ನಿರೀಕ್ಷಕರಾದ ವೆಂಕಟರಾಮಪ್ಪ, ಪಿ.ಎಸ್.ಐ. ಪ್ರದೀಪ್ ಸಿಂಗ್ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು. 
 

Read These Next

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...