ಕೋಲಾರ: ಅಕ್ರಮ ಮರಳು,ಮಣ್ಣು ಮಾರಾಟ ಗಣಿಗಾರಿಕೆ ತಡೆಯಲು ತಹಸೀಲ್ದಾರರಿಗೆ ಮನವಿ

Source: shabbir | By Arshad Koppa | Published on 15th August 2017, 8:06 AM | State News | Guest Editorial |

 

ಕೋಲಾರ ಆ.14 : ತಾಲ್ಲೂಕಿನ ಕೋಲಾರ ತಾಲ್ಲೂಕಿನಲ್ಲಿ ಕೆರೆಗಳ ಮಣ್ಣು ಮತ್ತು ಮರಳು ಮಾರಾಟ ಹಾಗೂ ಅಕ್ರಮ ಗಣಿ ಗಾರಿಕೆಯನ್ನು ಕೂಡಲೇ ತಡೆಯಬೇಕು ಹಾಗೂ ರೈತರ ಬೇಡಿಕೆಗಳನ್ನು ಈಡೇಸಿಸಲು ಹಾಗೂ ಕೆರೆಗಳ ಡಿ ನೋಟಿಫಿಕೇಷನ್‍ನ್ನು ಕೈ ಬಿಡಬೇಕೆಂದು ಈ ಮೂಲಕ ರೈತ ನಾಯಕ ಪ್ರೋ|| ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯು ತಹಸೀಲ್ದಾರ್ ವಿಜಯಣ್ಣನವರಿಗೆ ಮನವಿಯನ್ನು ನೀಡಿದರು.
ಜಿಲ್ಲಾಧ್ಯಕ್ಷ ಕಲ್ವಮಂಜಲಿ ಶಿವಣ್ಣ ಮಾತನಾಡಿ ಕೋಲಾರ ತಾಲ್ಲೂಕಿನ ಎಗ್ಗಿಲ್ಲದೆ ಕೆರೆಗಳಲ್ಲಿ ಅಕ್ರಮ ಮರಳುಗಾರಿಕೆ ಮತ್ತು ಗಣ ಗಾರಿಕೆಯನ್ನು ನಡೆಸುತ್ತಿದ್ದು, ಕೆರೆಗಳ ನೈಜ ಸ್ಥಿತಿಯನ್ನು ಹಾಳು ಮಾಡುತ್ತಿರುವ ದಂದೆಕೋರರ  ಪರವಾಗಿ ಬೆಂಗಾವಲಾಗಿ ನಿಂತಿರುವ ತಾಲ್ಲೂಕು ದಂಡಾಧಿಕಾರಿಗಳೇ ನೇರ ಹೊಣೆಗಾರರು. ಹಾಗಾಗಿ ಈಗಲಾದರೂ ದಂದೆ ಕೋರರ ವಿರುದ್ಧ ಕೂಡಲೇ ಕ್ರಮಕೈಗೊಂಡು ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಿ ಜೈಲಿಗೆ ಹಟ್ಟಬೇಕು ಹಾಗೂ ಕೆರೆಗಳಿಗೆ ಪುನಶ್ಚೇತನ ನೀಡಬೇಕು.   ರಾಜ್ಯ ಸರ್ಕಾರ 19-04-2017ರಂದು ಸಂಪುಟ ಸಭೆ ಸೇರಿ ಕೆರೆಗಳ ಡಿ ನೋಟಿಫಿಕೇಷನ್ ಮಾಡಲು ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಕಲಂ 68ರ ಅಡಿಯಲ್ಲಿ ಅವಕಾಶವಿಲ್ಲದಿದ್ದರೂ ಭೂಮಾಫಿಯಾಗಳ ಒತ್ತಡಕ್ಕೆ ಮಣ ದು ಸರ್ಕಾರವು ಕಲಂ 68ನ್ನು ತಿದ್ದುಪಡಿ ಮಾಡಿ ಕೆರೆಗಳ ಡಿ ನೋಟಿಪೇಷನ್ ಮಾಡಲು ಕೊರಟಿರುವುದನ್ನು ರೈತ ನಾಯಕ ಪ್ರೋ|| ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ತೀವ್ರವಾಗಿ ಖಂಡಿಸಿ ಡಿ ನೋಟಿಫಿಕೇಷನ್ ತಿದ್ದುಪಡಿಯನ್ನು ವಾಪಸ್ಸು ಪಡೆದು ಕರ್ನಾಟಕ ರಾಜ್ಯದ ಜನರ ಕ್ಷಮೆ ಕೇಳಬೇಕೆಂದು ಈ ಮೂಲಕ ಒತ್ತಾಯಿಸುತ್ತದೆ.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ನಾರಾಯಣಸ್ವಾಮಿ ಮಾತನಾಡಿ ತಾಲ್ಲೂಕಿನ ಉಪ ತಹಸೀಲ್ದಾರ್ ಕೇಂದ್ರಗಳಲ್ಲಿ ರೈತರು ಪಹಣ , ಆಧಾರ್ ಕಾರ್ಡ್ ಮತ್ತು ಇನ್ನಿತರೆ ಕೆಲಸಗಳಿಗೆ ಅಲೆದಾಡುತ್ತಿದ್ದು, ಕೂಡಲೇ ಸಂಬಂಧಪಟ್ಟವರಿಗೆ ಸೂಕ್ತ ಅದೇಶವನ್ನು ನೀಡಿ ರೈತರಿಗೆ ಅನುಕೂಲವಾಗುವಂತೆ ಕ್ರಮ ಕೈಗಳ್ಳಬೇಕೆಂದು ಹಾಗೂ ನಗರದಲ್ಲಿ ಕುಡಿಯುವ ನೀರಿಗೆ ಹಾಹಾಕಾರವೆದ್ದಿದ್ದು, ಜನರು ಕೆಲಸ ಕಾರ್ಯಗಳಿಗೆ ಹೋಗದೆ ನೀರಿಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ, ಜನರ ನೀರಿನ ಬವಣೆಗೆ ಪರ್ಯಾಯ ಮಾರ್ಗವನ್ನು ಅನುಸರಿಸಿ ಜನರಿಗೆ ನೀರು ಕಲ್ಪಿಸಬೇಕೆಂದು ತಹಸೀಲ್ದಾರ್‍ರವರನ್ನು ಒತ್ತಾಯಿಸಿದರು.
    ನಿಯೋಗದಲ್ಲಿ ಬಂಗಾರಪೇಟೆ ತಾಲ್ಲೂಕು ಅಧ್ಯಕ್ಷ ಕದಿರೇನಹಳ್ಳಿ ಶ್ರೀನಿವಾಸ್, ಮುಳಬಾಗಿಲು ತಾಲ್ಲೂಕು ಅಧ್ಯಕ್ಷ ಕೊಲದೇವಿ ಗೋಪಾಲಕೃಷ್ಣಮೂರ್ತಿ, ನಗರ ಸಂಚಾಲಕ ಎ.ಜಡ್. ಜಬೀವುಲ್ಲಾ ಖಾನ್, ಕಾರ್ಮಿಕ ಘಟಕದ ಸಂಚಾಲಕ ಎಸ್.ಆರ್.ಕೆ. ನವಾಜ್, ಕಾರ್ಮಿಕ ಘಟಕದ ಸಂಚಾಲಕ ಜೆ. ಅಬೀದ್ ಖಾನ್, ಬಲಮಂದೆ ಕೃಷ್ಣಪ್ಪ, ಗಂಗರಾಜು, ಕಿಟ್ಟಪ್ಪ, ಗಂಗಾಧರ್ ಮುಂತಾದವರು ಉಪಸ್ಥಿತರಿದ್ದರು.
            
                                    (ಕಲ್ವಮಂಜಲಿ ರಾಮುಶಿವಣ್ಣ)
                                        ಜಿಲ್ಲಾಧ್ಯಕ್ಷರು, 
 ರೈತ ನಾಯಕ ಪ್ರೋ|| ನಂಜುಂಡಸ್ವಾಮಿ ಸ್ಥಾಪಿತ 
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ
     ಕೋಲಾರ . ಮೊ. : 9731426520


    


ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ.

Read These Next

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...