ಕೋಲಾರ: ಬೃಹತ್ ಮಹಿಳಾ ಸಮಾವೇಶ-ರೈತರಿಗೆ 2.25 ಕೋ.ಸಾಲ ವಿತರಣೆ

Source: shabbir | By Arshad Koppa | Published on 27th March 2017, 7:51 AM | State News | Special Report |

ಕೋಲಾರ, ಮಾ ೨೪: ಕುಟುಂಬಕ್ಕೆ ಅಸ್ತಿಭಾರವಾಗಿರುವ ತಾಯಂದಿರು ಗೌರವ,ಸ್ವಾಭಿಮಾನದಿಂದ ಬದುಕುವಂತಾಗಲು ರಾಜ್ಯ ಸರ್ಕಾರದಿಂದ ಮಹಿಳಾ ಸ್ವಸಹಾಯ ಸಂಘಗಳಿಗೆ ಶೂನ್ಯ ಬಡ್ಡಿ ಸಾಲಸೌಲಭ್ಯ ಒದಗಿಸಿರುವುದಾಗಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್.ರಮೇಶ್‍ಕುಮಾರ್ ತಿಳಿಸಿದರು.


ತಾಲ್ಲೂಕಿನ ತೊಟ್ಲಿ ಸರ್ಕಾರಿ ಶಾಲಾ ಆವರಣದಲ್ಲಿ ಸುಗಟೂರು ಎಸ್‍ಎಫ್‍ಸಿಎಸ್ ಹಾಗೂ ಡಿಸಿಸಿ ಬ್ಯಾಂಕ್ ವತಿಯಿಂದ ಏರ್ಪಡಿಸಿದ್ದ ಬೃಹತ್ ಮಹಿಳಾ ಸಮಾವೇಶಕ್ಕೆ ಚಾಲನೆ ನೀಡಿ, ರೈತರಿಗೆ 2.25 ಕೋಟಿ ರೂ ಶೂನ್ಯ ಬಡ್ಡಿ ಸಾಲದ ಚೆಕ್‍ಗಳನ್ನು ವಿತರಿಸಿ ಅವರು ಮಾತನಾಡುತ್ತಿದ್ದರು.
ನನ್ನ ತಾಯಿ,ತಂದೆ ಸಾಲದಿಂದ ಅನುಭವಿಸಿದ ನೋವನ್ನು ಕಣ್ಣಾರೆ ಕಂಡಿದ್ದೇನೆ ಎಂದು ತಿಳಿಸಿದ ಅವರು, ತಾಯಂದಿರಿಗೆ ಶೂನ್ಯ ಬಡ್ಡಿಯಡಿ ಸಾಲ ಒದಗಿಸಿ ಶೋಷಣೆಯಿಂದ ಪಾರು ಮಾಡಿ ಅವರ ಋಣ ತೀರಿಸುವ ಸಣ್ಣ ಕೆಲಸ ಮಾಡಿದ್ದೇನೆ ಎಂದರು.
ಬಜೆಟ್‍ನಲ್ಲಿ ಮಹಿಳಾ ಸಂಘಗಳಿಗೆ ಶೂನ್ಯ ಬಡ್ಡಿ ಸಾಲ ಘೋಷಿಸಿದ ಸಿದ್ದರಾಮಯ್ಯ ಅವರಿಗೆ ಸಾಷ್ಟಾಂಗ ನಮಸ್ಕಾರಗಳು ಎಂದು ತಿಳಿಸಿದ ಅವರು, ಮಳೆಯಿಲ್ಲ ಮನೆಗೆ ಬಂದವರಿಗೆ ಊಟ ನೀಡುವ ಮತ್ತು ಭಿಕ್ಷುಕರಿಗೆ ಕಾಳು ಹಾಕುವ ಶಕ್ತಿಯೂ ಇಲ್ಲವಾಗಿದೆ ಎಂದು ವಿಷಾದಿಸಿದರು.
ಕುಟುಂಬ ಉಸ್ತುವಾರಿ ವಹಿಸಿರುವ ತಾಯಂದಿರು ಟೈಲರಿಂಗ್,ಹಸು ಸಾಕಾಣೆ ಹೀಗೆ ಹತ್ತಾರು ಕೆಲಸ ಮಾಡುತ್ತಿದ್ದಾರೆ, ಅವರು ಗೌರವದಿಂದ ಬದುಕುವಂತಾದರೆ ಮಾತ್ರ ಈ ದೇಶ,ಕುಟುಂಬದ ಗೌರವ ಉಳಿಯುತ್ತದೆ ಎಂದರು.


ಏಪ್ರಿಲ್‍ಮೂರನೇವಾರ 10 ಕೋ.ರೂ ಸಾಲ


ಸುಗಟೂರು ಹೋಬಳಿ ವ್ಯಾಪ್ತಿಯ ಮಹಿಳೆಯರಿಗೆ ಏಪ್ರಿಲ್ ಮೂರನೇವಾರ 10 ಕೋಟಿ ರೂಗಳ ಶೂನ್ಯಬಡ್ಡಿ ಸಾಲವನ್ನು ವಿತರಿಸುವುದಾಗಿ ಭರವಸೆ ನೀಡಿದರು.
ತಾಯಂದಿರು ತಮ್ಮ ಕೊರಳಲ್ಲಿನ ಸರ,ಓಲೆ ಎಲ್ಲವನ್ನು ಹಲವುಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಅಡವಿಟ್ಟಿದ್ದಾರೆ ಎಂದರು.
ನಮ್ಮ ತಾಯಿಯ ಕೊರಳಲ್ಲಿನ ಸರ ಅಡವಿಟ್ಟಿದ್ದು, ಅವರು ಹರಾಜು ಹಾಕಿದರೆ ಅದು ನಮ್ಮ ತಾಯಿಯನ್ನೇ ಹರಾಜು ಹಾಕಿದಂತೆ ಎಂದು ನೊಂದು ನುಡಿದ ಸಚಿವರು, ಈ ಬಗ್ಗೆ ಸದನದಲ್ಲಿ ನಾನೆಷ್ಟು ಕೂಗಿದರೂ ಅನೇಕರಿಗೆ ಅರ್ಥವೇ ಆಗಲಿಲ್ಲ ಎಂದರು.
ಹಸಿವಿಗೆ ಪಕ್ಷವಿಲ್ಲ - ಜಾತಿ,ರಾಜಕೀಯವಿಲ್ಲ
ನಾನು ರಾಜಕೀಯಕ್ಕಾಗಿ,ಓಟಿಗಾಗಿ ತಾಯಂದಿರಿಗೆ ಶೂನ್ಯ ಬಡ್ಡಿ ಸಾಲ ಕೊಡಿಸುವ ಕೆಲಸ ಮಾಡಲಿಲ್ಲ, ನಿಮ್ಮನ್ನು ಓಟು ಕೇಳುತ್ತಿಲ್ಲ, ಆರೋಗ್ಯ ಆಯಸ್ಸು ನೀಡಿ ಆಶೀರ್ವದಿಸಿ ಅಷ್ಟೇ ಸಾಕು ಎಂದು ಮನವಿ ಮಾಡಿದರು.
ಹಸಿವಿಗೆ ಜಾತಿ,ಪಕ್ಷ,ರಾಜಕೀಯವಿಲ್ಲ ಎಂದರು.
ನೀವೇನು ಮಾಡಿದಿರಿ ಎಂದು ನೀವು ಕೇಳಬಾರದು ಎಂದೇ ಶೂನ್ಯ ಬಡ್ಡಿ ಸಾಲ ಕೊಡಿಸುವ ಈ ಕೆಲಸ ಮಾಡಿದ್ದೇನೆ, ಸಣ್ಣಪುಟ್ಟ ಸಾಲ ಪಡೆದ ಬಡವರಾರೂ ದೇಶ,ಬ್ಯಾಂಕ್ ಮುಳುಗಿಸೊಲ್ಲ ಇಂತವರಿಗೆ ನೀಡುವ ಸಾವಿರರೂ ಸಾಲಕ್ಕೆ ಭದ್ರತೆ ಕೇಳುತ್ತಾರೆ, ಸಾಲ ಪಾವತಿಸದಿದ್ದರೆ ಮನೆ ಮುಂದೆ ತಮಟೆ ಬಾರಿಸಿ ಮರ್ಯಾದೆ ಹರಾಜು ಹಾಕುತ್ತಾರೆ.

ಪ್ರತಿ ಮಹಿಳೆಗೂ 50 ಸಾವಿರ ಸಾಲ
ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಸುಗಟೂರು ಹೋಬಳಿಯಲ್ಲಿ ಈಗಾಗಲೇ 3 ಕೋಟಿ ರೂ ಸಾಲ ನೀಡಲಾಗಿದೆ, ಇದೀಗ ಶೂನ್ಯ ಬಡ್ಡಿ ಸಾಲವನ್ನು ಪ್ರತಿ ತಾಯಂದಿರಿಗೂ ತಲಾ 50 ಸಾವಿರ ನೀಡುತ್ತಿದ್ದು, ಕೂಡಲೇ ಮಹಿಳಾ ಸಂಘ ರಚಿಸಿಕೊಳ್ಳಿ ಎಂದು ಕರೆ ನೀಡಿದರು.
ಡಿಸಿಸಿ ಬ್ಯಾಂಕಿಗೆ ಬೆನ್ನೆಲುಬಾಗಿ ಇದೀಗ ಮತ್ತೆ ಬ್ಯಾಂಕಿಗೆ 5 ಕೋಟಿ ರೂ ಬಿಡುಗಡೆ ಮಾಡಿಸುವ ಭರವಸೆ ನೀಡಿರುವ ರಮೇಶ್‍ಕುಮಾರ್ ಅವರ ಬಡವರಪರ ಕಾಳಜಿಗೆ ನಿಮ್ಮ ಆಶೀರ್ವಾದವಿರಲಿ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕನಾಗನಾಳ ಸೋಮಣ್ಣ, ಕೆಯುಡಿಎ ಮಾಜಿ ಅಧ್ಯಕ್ಷ ವಿ.ವೆಂಕಟಮುನಿಯಪ್ಪ,ಗ್ರಾ.ಪಂ ಅಧ್ಯಕ್ಷೆ ಅಶ್ವಿನಿ ಬಾಬು ಮಾತನಾಡಿದರು.
ಕಾರ್ಯಕ್ರಮದಲ್ಲಿ ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ಕೃಷ್ಣೇಗೌಡ, ಎಸ್‍ಎಫ್‍ಸಿಎಸ್ ಅಧ್ಯಕ್ಷ ತಿಮ್ಮರಾಯಪ್ಪ, ಎಪಿಎಂಸಿಮಾಜಿ ಉಪಾಧ್ಯಕ್ಷ ಕೃಷ್ಣಪ್ಪ, ತಾಪಂ ಸದಸ್ಯರಾದ ಪದ್ಮಾವತಮ್ಮ, ಆಂಜಿನಮ್ಮ ತಿರುಮಳಪ್ಪ, ಮಂಜುನಾಥ್, ಮುಖಂಡರಾದ ನಾಗನಾಳ ಮಂಜುನಾಥ್, ತೊಟ್ಲಿ ವೆಂಕಟರಾಮರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.
ಸವಿತಾ ನಾಗೇಂದ್ರಶೆಟ್ಟಿ ಪ್ರಾರ್ಥಿಸಿ, ತಿಮ್ಮರಾಯಪ್ಪ ಸ್ವಾಗತಿಸಿ, ಅಂಕತಟ್ಟಿ ಬಾಬು ನಿರೂಪಿಸಿ, ವಂದಿಸಿದರು.

 

ಕೋಲಾರ ತಾಲ್ಲೂಕು ತೊಟ್ಲಿಯಲ್ಲಿ ಬೃಹತ್ ಮಹಿಳಾ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಬೃಹತ್ ಸಂಖ್ಯೆಯ ಮಹಿಳೆಯರು.

Read These Next

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...