ಕೋಲಾರ:ಮಾದಕವಸ್ತುಗಳ ದಾಸರಾಗಿ ಅಮೂಲ್ಯ ಜೀವನ ನಾಶಮಾಡಿಕೊಳ್ಳದಿರಿ-ನ್ಯಾ.ಗಣಪತಿ ಪ್ರಶಾಂತ್

Source: shabbir | By Arshad Koppa | Published on 1st August 2017, 7:38 AM | State News | Guest Editorial |

ದೇಶಕಟ್ಟಲು ಆರೋಗ್ಯವಂತ ಯುವಶಕ್ತಿ ಬೇಕು

ಕೋಲಾರ:- ದೇಶಕಟ್ಟಲು ಆರೋಗ್ಯವಂತ ಯುವಶಕ್ತಿಯ ಅಗತ್ಯವಿದೆ, ನೀವು ಮಾದಕವಸ್ತುಗಳ ದಾಸರಾಗಿ ನಿಮ್ಮ ಅಮೂಲ್ಯ ಜೀವನ ನಾಶಕ್ಕೆ ನೀವೇ ಕಾರಣರಾಗದಿರಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸಿಜೆಎಂ  ಗಣಪತಿ ಪ್ರಶಾಂತ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸೋಮವಾರ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಶಿಕ್ಷಣ ಇಲಾಖೆ ಇವರ ಸಂಯುಕ್ತಾ ಆಶ್ರಯದಲ್ಲಿ ಹಮ್ಮಿಕೊಂಡಿದ್ದ `ಮಾದಕ ವಸ್ತುಗಳ ದುಷ್ಪರಿಣಾಮಗಳು,ಮಹಿಳೆ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆ ಕಾಯಿದೆ' ಕುರಿತು ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮಾದಕ ವಸ್ತುಗಳ ನಿರಂತರ ಸೇವನೆಯಿಂದ ಮನುಷ್ಯ ತನ್ನ ಮನಸ್ಸಿನ ಸ್ಥಿರತೆ ಕಳೆದುಕೊಳ್ಳುತ್ತಾನೆ, ಇದು ಮೆದುಳಿಗೆ ಅಮಲೇರಿಸಿ ನೈಜಪರಿಸ್ಥಿತಿಯೇ ಇಲ್ಲದಂತೆ ನಿಮ್ಮನ್ನು ನಾಶಪಡಿಸುತ್ತದೆ ಎಂದು ಎಚ್ಚರಿಸಿದರು.
ಈ ದೇಶದ ಭವಿಷ್ಯವಾದ ವಿದ್ಯಾರ್ಥಿಗಳೇ ಇಂದು ಹೆಚ್ಚಿನ ಪ್ರಮಾಣದಲ್ಲಿ ಮಾದಕ ವ್ಯಸನಿಗಳಾಗುತ್ತಿರುವುದಾಗಿ ತಜ್ಞರು ಎಚ್ಚರಿಸುತ್ತಿದ್ದು, ಇದನ್ನು ತಪ್ಪಿಸಲು ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ನಡೆಯಬೇಕಾಗಿದೆ ಎಂದರು.
ಗುಜರಾತ್‍ನ ಕರಾವಳಿಯಲ್ಲಿ ಭಾರತಕ್ಕೆ ಬರುತ್ತಿದ್ದ ಮೂರುವರೆ ಸಾವಿರ ಕೋಟಿ ರೂ ಮೌಲ್ಯದ 1500 ಕೆಜಿ ಹೆರಾಯಿನ್ ಮಾದಕವನ್ನು ನಮ್ಮ ದೇಶದ ಪೊಲೀಸರು ವಶಪಡಿಸಿಕೊಂಡಿದ್ದಾರೆ, ಇದು ದೇಶ ಪ್ರವೇಶಿಸಿದ್ದರೆ ಎಷ್ಟು ಮಂದಿ ಯುವಕರ ಜೀವನವನ್ನು ಬಲಿ ತೆಗೆದುಕೊಳ್ಳುತ್ತಿತ್ತು ಎಂದು ಆತಂಕ ವ್ಯಕ್ತಪಡಿಸಿದರು.
ನಿಮ್ಮ ಗುರಿ ಉತ್ತಮ ಕಲಿಕೆಯಾಗಿರಲಿ, ಯಾವುದೇ ಚಟಗಳಿಗೆ ಒಳಗಾಗದಿರಿ, ದೇಶಭಕ್ತಿ ಬೆಳೆಸಿಕೊಳ್ಳಿ, ಮಾದಕ ವಸ್ತುಗಳ ಮಾರಾಟ,ಬಳಕೆ ನಿಮ್ಮ ಗಮನಕ್ಕೆ ಬಂದರೆ ಕೂಡಲೇ ಪೊಲೀಸರಿಗೆ ದೂರು ನೀಡಿ ಎಂದು ಕಿವಿಮಾತು ಹೇಳಿದರು.
ಕಾನೂನು ಸೇವಾ ಪ್ರಾಧಿಕಾರದ ಸದಸ್ಯಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಗುರುರಾಜ್ ಜಿ.ಶಿರೊಳ್, ನಾವೆಂದೂ ಜೀವನದಲ್ಲಿ ಮಾದಕ ವಸ್ತುಗಳನ್ನು ಬಳಸುವುದಿಲ್ಲ, ಶೈಕ್ಷಣಿಕ ಸಾಧನೆಗೆ ಶೇ.100ರಷ್ಟು ಒತ್ತು ನೀಡುತ್ತೇವೆ ಎಂದು ವಿದ್ಯಾರ್ಥಿಗಳಿಂದ ಸಂಕಲ್ಪ ಮಾಡಿಸಿದರು.
ಮಾದಕ ವಸ್ತುಗಳ ಬಳಕೆ ತಡೆ ಜತೆಗೆ ಇಂದು ಸಮಾಜವನ್ನು ಕಾಡುತ್ತಿರುವ ಮತ್ತೊಂದು ಗಂಭೀರ ಸಮಸ್ಯೆ ಮಕ್ಕಳು,ಮಹಿಳೆಯರ ಅನೈತಿಕ ಕಳ್ಳಸಾಗಾಣೆ ಎಂದು ತಿಳಿಸಿ, ನೀವು ಶಾಲೆಗೆ ಬರುವಾಗ,ಹೋಗುವಾಗ ಎಚ್ಚರಿಕೆಯಿಂದಿರಿ ಎಂದು ಕಿವಿಮಾತು ಹೇಳಿದರು.
ಶಾಲೆಗೆ ಹೋಗುವ ಮಕ್ಕಳೇ ಶೇ.70ಕ್ಕಿಂತ ಹೆಚ್ಚು ಅಪಹರಣಕ್ಕೊಳಗಾಗುತ್ತಿದ್ದು, ಹೆಣ್ಣು ಮಕ್ಕಳನ್ನು ಕದ್ದೊಯ್ದು ವೈಶ್ಯಾವಾಟಿಕೆಗೆ ತಳ್ಳುವ, ಗಂಡು ಮಕ್ಕಳನ್ನು ಭಿಕ್ಷಾಟಣೆಗೆ ಬಳಕೆ ಮತ್ತು ಅಂಗಾಂಗಗಳನ್ನು ಕತ್ತರಿಸಿ ಮಾರುವ ದುಷ್ಕøತ್ಯಗಳು ಬೆಳಕಿಗೆ ಬರುತ್ತಿದ್ದು, ಇದರ ಬಗ್ಗೆ ವಿದ್ಯಾರ್ಥಿಗಳು ಎಚ್ಚರವಹಿಸಿ, ಅಪರಿಚಿತರು ನಿಮಗೆ ಆಹಾರ ನೀಡಲು ಮುಂದಾದರೆ ಪಡೆಯದಿರಿ, ಅಂತಹವರೊಂದಿಗೆ ಒಡನಾಟವೂ ಇಟ್ಟುಕೊಳ್ಳದಿರಿ ಎಂದರು.
ಮನುಷ್ಯ ತನ್ನ ಹುಟ್ಟಿನಿಂದ 45 ವರ್ಷದವರೆಗೂ ತನ್ನ ಜೀವನದ ಸಂತೋಷದ ಬದುಕನ್ನು ಸವಿಯಬೇಕಾದ ಸಂದರ್ಭದಲ್ಲಿ ಮಾದಕ ವಸ್ತುಗಳ ಚಟಕ್ಕೆ ದಾಸನಾಗಿ ತನ್ನ ಬದುಕನ್ನೇ ನರಕ ಮಾಡಿಕೊಳ್ಳುತ್ತಿದ್ದಾನೆ ಎಂದರು.
ಮಾದಕ ವಸ್ತು ಮಾರಾಟ, ಬಳಕೆ ಶಿಕ್ಷಾರ್ಹ ಅಪರಾಧವಾಗಿದ್ದು, ಅಂತಹ ವ್ಯಕ್ತಿಗಳ ವಿರುದ್ದ ಕಾನೂನಿನಲ್ಲಿ ಕಠಿಣ ಶಿಕ್ಷೆ ಇದೆ, ಇದನ್ನರಿತು ಯುವ ಸಮುದಾಯ ಇಂತಹ ಮಾರಣಾಂತಿಕ ಮಾದಕ ವಸ್ತುಗಳಿಂದ ದೂರವಿರಿ, ಉತ್ತಮ ಬದುಕು ರೂಪಿಸಿಕೊಳ್ಳಿ ಎಂದರು. 
ಕ್ಷೇತ್ರಶೀಕ್ಷಣಾಧಿಕಾರಿ ರಘುನಾಥರೆಡ್ಡಿ, ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರೇ ಹೆಚ್ಚಾಗಿ ಮಾದಕ ವ್ಯಸನಿಗಳಾಗುತ್ತಿರುವುದು ದುರಂತ, ನೀವು ಅವರ ಸಾಲಿಗೆ ಸೇರದಿರಿ, ಚೆನ್ನಾಗಿ ಓದಿ ಸಮಾಜದ ಆಸ್ತಿಯಾಗಿ ಎಂದು ಕರೆ ನೀಡಿದರು.
ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳ ಕುರಿತು ಶಾಲೆಗಳಲ್ಲಿ ಶಿಕ್ಷಕರು ಜಾಗೃತಿಮೂಡಿಸಬೇಕು, ಮಕ್ಕಳ ಕಡೆ ನಿಗಾ ವಹಿಸಬೇಕು, ಮೌಲ್ಯಯುತ ಶಿಕ್ಷಣ ನೀಡಿಕೆಗೆ ಬದ್ದತೆಯಿಂದ ಕೆಲಸ ಮಾಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯ ಶಿಕ್ಷಕ ಸಿ.ಎನ್.ಪ್ರದೀಪ್ ಕುಮಾರ್, ಬಲಿಷ್ಟ ರಾಷ್ಟ್ರ ನಿರ್ಮಾಣ ಶಾಲೆಯ ಗೋಡೆಗಳ ನಡುವೆಯೇ ನಡೆಯುತ್ತದೆ, ಶಾಲೆಗೆ ಬರುವ ಮಕ್ಕಳು ದುಶ್ಚಟಗಳಿಗೆ ದಾಸರಾಗದೇ ಕಲಿಕೆಯಲ್ಲಿ ಸಾಧನೆ ಮಾಡಿ ಮುನ್ನಡೆದರೆ ಸಾಕು ಎಂದರು.
ನ್ಯಾಯಾಲಯ, ಪೊಲೀಸ್ ಇಲಾಖೆ ಕಟ್ಟೆಚ್ಚರದ ನಡುವೆಯೂ ಮಾದಕ ವಸ್ತುಗಳ ಮಾರಾಟ ನಡೆಯುತ್ತಿದೆ, ಇದರ ತಡೆಗೆ ಪೊಲೀಸರೊಂದಿಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ, ಇಂತಹ ಘಟನೆ ಗಮಕ್ಕೆ ಬಂದಾಗ ನಮಗೆ ಸಂಬಂಧಿಸಿದ್ದಲ್ಲ ಎಂಬ ಭಾವನೆ ಬಿಟ್ಟು ಸಾಮಾಜಿಕ ಕಾಳಜಿಯಿಂದ ಪೊಲೀಸರಿಗೆ ಮಾಹಿತಿ ನೀಡಬೇಕೆಂದರು.
ಹಿರಿಯ ಶಿಕ್ಷಕ ಸಿ.ಎಂ.ವೆಂಕಟರಮಣಪ್ಪ ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಇಸಿಒ ಗೋಪಿಕೃಷ್ಣನ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ತಿಮ್ಮಸಂದ್ರ ನಾಗರಾಜ್, ಎಸ್‍ಡಿಎಂಸಿ ಅಧ್ಯಕ್ಷ ಮುನಿರಾಜು, ಮಾಜಿ ಅಧ್ಯಕ್ಷ ನಂಜುಂಡಗೌಡ, ಸದಸ್ಯರಾದ ಕೆಂಪರಾಜ್,ಎ.ಸಿ.ನಾರಾಯಣಸ್ವಾಮಿ, ನ್ಯಾಯಾಂಗ ಇಲಾಖೆಯ ಅವಿನಾಶ್, ಶಿಕ್ಷಕರಾದ ಸತೀಶ್‍ಎಸ್.ನ್ಯಾಮತಿ, ಭವಾನಿ, ನಾರಾಯಣಸ್ವಾಮಿ,ಲೀಲಾ, ಸುಗುಣಾ, ಡಿ.ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದು, ಲಿಖಿತಾ ಪ್ರಾರ್ಥಿಸಿ, ಸಿ.ಎಲ್.ಶ್ರೀನಿವಾಸಲು ನಿರೂಪಿಸಿ,ವಂದಿಸಿದರು.
ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ.

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...