ಕೋಲಾರ: ಮಾವು ಬೆಳೆಯಲ್ಲಿ ಮೇ ಮಾಹೆಯಲ್ಲಿ ಅನುಸರಿಸಬೇಕಾದ ಬೇಸಾಯ ಕ್ರಮಗಳು

Source: shabbir | By Arshad Koppa | Published on 24th May 2017, 9:09 AM | State News | Special Report |

ಕೋಲಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾವು ಬೆಳೆಗಾರರಿದ್ದು, ಕಾಲಕ್ಕೆ ತಕ್ಕಂತೆ ಸರಿಯಾದ ರೀತಿಯಲ್ಲಿ ಮಾವು ಬೆಳೆಯನ್ನು ನಿರ್ವಹಣೆ ಮಾಡದೇ ಹೋದಲ್ಲಿ ರೋಗ ಮತ್ತು ಕೀಟಗಳ ಬಾಧೆ ಹಾಗೂ ಇಳುವರಿಯಲ್ಲಿ ಕುಂಠಿತವನ್ನು ಅನುಭವಿಸಬೇಕಾಗುತ್ತದೆ. ಆದ್ದರಿಂದ ರೈತ ಫಲಾನುಭವಿಗಳು ಈ ಕೆಳಗೆ ಸೂಚಿಸಿರುವಂತೆ ರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.
ಬೇಸಿಗೆಯಲ್ಲಿ ಎರಡು ಬಾರಿ  ದೊಡ್ಡ ಅಗೆತ ನೇಗಿಲಿನಿಂದ ಉಳುಮೆ ಮಾಡುವುದು ಮತ್ತು ಭೂಮಿಯನ್ನು ಸಮತಟ್ಟು ಮಾಡುವುದು.   ಹೆಚ್ಚಿನ ಸಾಂಧ್ರತೆಯುಳ್ಳ ನೆಡುತೋಪುಗಳಿಗಾಗಿ ಸಾಲುಗಳು ಮತ್ತು ಸಸ್ಯಗಳನ್ನು 5 ಮೀ. ಅಂತರದಲ್ಲಿ ನೆಡಲು ಅಗೆಯುವ ಗುಂಡಿಗಳ ಹೊಂದಾಣ ಕೆ ಮಾಡುವುದು ಮತ್ತು ಗೂಟದಿಂದ ಗುರುತು ಮಾಡುವುದು ಹಾಗೂ ಸಾಮಾನ್ಯ ನೆಡುತೋಪುಗಳಿಗೆ 9 ಮೀ. ಅಂತರ ನೀಡಬೇಕು. ಗುಂಡಿಯ ಗಾತ್ರ/ಅಳತೆ 90*90*90 ಸೆಂ.ಮೀ.ಇರಬೇಕು.  ಗುಂಡಿ ಅಗೆಯುವಾಗ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು – ಅಗೆದ (1x ಅಡಿ) ಮೇಲ್ಭಾಗದ ಮೇಲ್ಪದರದ ಮಣ್ಣನ್ನು ಎಡಭಾಗದಲ್ಲಿ ಇರಿಸುವುದು. ಅಗೆದ ಗುಂಡಿಯನ್ನು ತುಂಬುವ ಮೊದಲು ಮಣ್ಣಿನಿಂದ ಬರುವ ಕೀಟ ಮತ್ತು ರೋಗಗಳನ್ನು ನಿಯಂತ್ರಿಸಲು ಸೂಯನ ಕಿರಣಗಳಿಗೆ ಗುಂಡಿಗಳನ್ನು 2 ವಾರಗಳವರೆಗೆ ತೆರೆದಿಡಬೇಕು.
ಸರ್ಕಾರದ ವಿಶ್ವಾಸಾರ್ಹ ನರ್ಸರಿಗಳಿಂದ ಮತ್ತು ತೋಟಗಾರಿಕೆ ಇಲಾಖೆ ಶಿಫಾರಸ್ಸು ಮಾಡಿದ ನರ್ಸರಿಗಳಿಂದ ಸಸಿಗಳನ್ನು ಪಡೆಯಲು ವ್ಯವಸ್ಥೆ ಮಾಡಿಕೊಳ್ಳಬೇಕು.  ಹಣ್ಣು ಬಿಡುವ ಮರಗಳಿಂದ ಮಾವಿನ ಹಣ್ಣುಗಳನ್ನು ಸರಿಯಾಗಿ ಪಕ್ವವಾದ ನಂತರ ಸುಧಾರಿತ ಕ್ರಮಗಳನ್ನು ಅನುಸರಿಸುವುದರೊಂದಿಗೆ ಕಟಾವು ಮಾಡಬೇಕು.   ಹಳೆಯ ತೋಟಗಳಲ್ಲಿ ಕಾಂಡಕೊರಕ ಹುಳುವಿನ ಬಾಧೆ ಇದ್ದಲ್ಲಿ, ಹೀಲರ್ ಕಮ್ ಸೀಲರ್ ಚಿಕಿತ್ಸೆಯನ್ನು ನೀಡಬೇಕು.   ಪ್ಯಾಕ್‍ಹೌಸ್ ಹೊಂದಿರುವ ರೈತರು ಕೊಯ್ಲು ಮುಂಚಿನ ಹಾಗೂ ಕೊಯ್ಲೋತ್ತರ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವುದು.   
ಹಣ್ಣುಗಳನ್ನು ಮಾಗಿಸಲು ಐಐಹೆಚ್‍ಆರ್, ಬೆಂಗಳೂರು ವತಿಯಿಂದ ಅಭಿವೃದ್ಧಿ ಪಡಿಸಲಾಗಿರುವ ಮಾವು ಮಾಗಿಸುವ ಘಟಕಗಳನ್ನು ಉಪಯೋಗಿಸಿಕೊಳ್ಳುವುದು.  ಹಣ್ಣು ನೊಣ ಮತ್ತು ಚಿಬ್ಬು ರೋಗದ ಹಾನಿಯನ್ನು ತಡೆಗಟ್ಟುವ ಸಲುವಾಗಿ ಐಐಹೆಚ್‍ಆರ್, ಬೆಂಗಳೂರು ವತಿಯಿಂದ ಶಿಫಾರಸ್ಸು ಮಾಡಿದಂತೆ ಕೊಯ್ಲು ಮಾಡಲಾದ ಹಣ್ಣುಗಳನ್ನು ಬಿಸಿ ನೀರಿನಲ್ಲಿ ಉಪಚರಿಸಬೇಕು.  ಕೊಯ್ಲು ಮಾಡಲಾದ ಹಣ್ಣುಗಳನ್ನು ವಿಂಗಡಣೆ ಮತ್ತು ಪ್ಯಾಕಿಂಗ್ ಮಾಡಿ ಮಾರುಕಟ್ಟೆಗೆ ಕಳುಹಿಸುವುದು.
ದೂರದ ಮಾರುಕಟ್ಟೆಗೆ ಉತ್ತಮ ಗುಣಮಟ್ಟದ ಪ್ಯಾಕಿಂಗ್ ಸಾಮಗ್ರಿಗಳನ್ನು ಬಳಸಿಕೊಂಡು ಸಣ್ಣ ಪ್ರಮಾಣದ ಪ್ಯಾಕಿಂಗ್‍ಗಳಲ್ಲಿ ಕಳುಹಿಸಿಕೊಡುವುದು.  ಮಾವಿನ ಹಣ ್ಣನ ಹಣ್ಣು ನೊಣದ ಮೋಹಕ ಬಲೆಯಲ್ಲಿ ಮೋಹಕ ಧಾತುವನ್ನು ಬದಲಿಸುವುದು.  ಬಿದ್ದ ಹಣುಗಳನ್ನು ಸಂಗ್ರಹಿಸುವುದು ಹಾಗೂ ನಾಶಪಡಿಸುವುದು.  ಮಾವಿನ ಹಣ ್ನನ ಹಣ್ಣು ನೊಣದ ಆಕರ್ಷಣೆಗೆ ಬೇಟ್ ಪದಾರ್ಥವನ್ನು ಸಿಂಪಡಿಸುವುದು.
ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ, ಹಾರ್ಟಿಕ್ಲಿನಿಕ್, ಕೋಲಾರ ರವರನ್ನು ದೂ:7829512236 ಸಂಪರ್ಕಿಸಬಹುದು.
 
ಶೌರ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ
ಕೋಲಾರ, ಮೇ 23 :2017 ನೇ ಸಾಲಿಗೆ 06 ರಿಂದ 18 ವರ್ಷದ ವಯೋಮಿತಿಯೊಳಗಿನ ಮಕ್ಕಳು ತಮ್ಮ ಪ್ರಾಣದ ಹಂಗನ್ನು ತೊರೆದು ಇತರರ ಪ್ರಾಣ ರಕ್ಷಣೆಗಾಗಿ ಅಸಾಧಾರಣಾ ಧೈರ್ಯ-ಸಾಹಸ ಪ್ರದರ್ಶಿಸಿದ ಮಕ್ಕಳಿಗೆ ಶೌರ್ಯ ಪ್ರಶಸ್ತಿಯನ್ನು ನೀಡಲು ನಿರ್ಧರಿಸಿದೆ. 
    ಅರ್ಜಿಗಳನ್ನು ದಿನಾಂಕ: 15-06-2017 ರ ಒಳಗೆ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ನ್ಯೂ ಕೋಲಾರ ನರ್ಸಿಂಗ್ ಹೋಂ ಕಟ್ಟಡ, ಮೊದಲನೇ ಮಹಡಿ, ಕುವೆಂಪು ನಗರ, ಕೋಲಾರ ಇಲ್ಲಿ ಕಛೇರಿಯ ವೇಳೆಯಲ್ಲಿ ಸಲ್ಲಿಸತಕ್ಕದ್ದು.   ನಿಗಧಿತ ದಿನಾಂಕದ ನಂತರ ಸಲ್ಲಿಸಿದ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಪರಿಗಣ ಸಲಾಗುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read These Next

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...