ಲಕ್ಷ್ಮೀಪುರ:ತಂತಾರ್ಲಪಲ್ಲಿ ಮತ್ತು ಚಿನ್ನಪಲ್ಲಿಯಲ್ಲಿ ಸ್ವಚ್ಚತಾ ಆಂದೋಲನ ಕಾರ್ಯಕ್ರಮ

Source: shabbir | By Arshad Koppa | Published on 24th May 2017, 8:58 AM | State News | Special Report |


ಲಕ್ಷ್ಮೀಪುರ ಮೇ.23: ನೆಲವಂಕಿ ಹೋಬಳಿಯ ಪುಲಗೋರಕೋಟೆ ಗ್ರಾಮಪಂಚಾಯಿತಿ ವ್ಯಾಪ್ತಿಗೆ ಸೇರಿದ ತಂತಾರ್ಲಪಲ್ಲಿ ಗ್ರಾಮದಲ್ಲಿ ಗೂಂಜ್ ಅಂತರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆ, ಬೆಂಗಳೂರು, ಅವಾರ್ಡ್ ಸಂಸ್ಥೆ ಲಕ್ಷ್ಮೀಪುರ, ಇವರ ಸಂಯುಕ್ತಾಶ್ರಯದಲ್ಲಿ ತಂತಾರ್ಲಪಲ್ಲಿ  ಕೆರೆಯ ಕಾಲುವೆ ಮತ್ತು  ಕೆರೆ ಅಂಗಳ ಗುಂಡಿಯನ್ನು ಸುಮಾರು 65 ಅಡಿ ಉದ್ದ  80 ಅಡಿ ಅಗಲ 1 ಳಿ ಅಡಿ ಎತ್ತರದ ಹೂಳನ್ನು ಜನರ ಸಹಕಾರದಿಂದ ಸಂಪೂರ್ಣವಾಗಿ ಶ್ರಮದಾನದ ಮೂಲಕ ಸ್ವಚ್ಚಗೊಳಿಸುವ ಹಾಗೂ ವೈಯಕ್ತಿಕ ಸ್ವಚ್ಚತೆ ಕಾಪಾಡುವ ಬಗ್ಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.


ಕೆರೆಅಂಗಳ, ಕೆರೆ ಕಾಲುವೆ ಮುಳ್ಳುಗಿಡ, ಮಣ್ಣು, ವಿವಿಧ ಕಸಕಡ್ಡಿ ತೆರವುಗೊಳಿಸಿ, ಮಳೆ ನೀರನ್ನು ಶೇಖರಿಸಲು ಅವಶ್ಯಕವಾದ ಕ್ರಮಗಳನ್ನು ವಹಿಸಿಕೊಳ್ಳಲು ಸ್ಥಳೀಯ ನಾಗರೀಕರ ಮನವೊಲಿಸಿ ಕಾರ್ಯಕ್ರಮದಲ್ಲಿ ಸುಮಾರು 165 ಜನಕ್ಕೂ ಮೀರಿ ಭಾಗವಹಿಸುವಂತೆ ಸ್ಥಳೀಯ ಸ್ವಯಂ ಸೇವಾ ಸಂಸ್ಥೆಗಳಾದ ಅವಾರ್ಡ್ ಸಂಸ್ಥೆ ಕ್ರಮ ವಹಿಸಿದ್ದವು.
    
ಕಾರ್ಯಕ್ರಮದ ಪರಿಚಯವನ್ನು ಅವಾರ್ಡ್ ಸಂಸ್ಥೆಯ ಕಾರ್ಯದರ್ಶಿ ಎ.ಪಿ.ಎಸ್. ಕುಮಾರ್ ರವರು ಪ್ರಾಸ್ತಾವಿಕ ಭಾಷಣದ ಮೂಲಕ ಭಾಗವಹಿಸಿದ್ದ ಜನರಲ್ಲಿ ನೀರಿನ ಬಗ್ಗೆ ಅರಿವು ಮೂಡಿದರು. ಅಂತರಾಷ್ಟ್ರೀಯ ಗೂಂಜ್ ಸ್ವಯಂಸೇವಾ ಸಂಸ್ಥೆಯ ಕ್ಷೇತ್ರಾಧಿಕಾರಿಯಾದ ಶಾಲಿನ್ ಕುಮಾರ್ ರವರು ಆ ಸಂಸ್ಥೆಯ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರವಾಗಿ ಹಿಂದಿ ಭಾಷೆಯಲ್ಲಿ ತಿಳಿಸಿದರು. ಅವರ ಭಾಷಣವನ್ನು ಕನ್ನಡಕ್ಕೆ ತರ್ಜುಮೆ ಮಾಡಿ ಎ.ಪಿ.ಎಸ್. ಕುಮಾರ್‍ರವರು ತಿಳಿಸಿಕೊಟ್ಟರು.


    ಮುಂದಿನ ದಿನಗಳಲ್ಲಿ ಶಾಲಾ ಮಕ್ಕಳಿಗೆ ಅವಶ್ಯಕವಾದ ಶೂ, ಸಮವಸ್ತ್ರ, ಲೇಖನಿ ಸಾಮಾಗ್ರಿಗಳು ಇತ್ಯಾದಿಗಳನ್ನು ನೀಡುವುದಾಗಿ ಶ್ಯಾಲಿನ್ ಕುಮಾರ್ ರವರು ಅಶ್ವಾಸನೆಯನ್ನು ನೀಡಿದರು. 
    ಇದೇ ಸಂದರ್ಭದಲ್ಲಿ ಸ್ವಯಂ ಸೇವಾ ಸಂಸ್ಥೆಯ ಕಾರ್ಯದರ್ಶಿಯಾದ ಆರ್.ನಾರಾಯಣಸ್ವಾಮಿರವರು ವೈಯುಕ್ತಿಕ ಸ್ವಚ್ಚತೆ ಕಾಪಾಡುವಲ್ಲಿ ತಂದೆ ತಾಯಿಗಳು ಮತ್ತು ಮಕ್ಕಳು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಅರಿವು ಮೂಡಿಸಿದರು. ಮತ್ತು ಕೈ ತೊಳೆಯುವ ಪ್ರಾತ್ಯಕ್ಷತೆಯ ಚಟುವಟಿಕೆಯನ್ನು ನಡೆಸಿಕೊಟ್ಟರು.
    ಈ ಕಾರ್ಯಕ್ರಮದಲ್ಲಿ ಊರಿನ ಹಿರಿಯ ಮುಖಂಡರಾದ ಹಾಗೂ ಎಪಿಎಂ.ಸಿ ಉಪಾದ್ಯಕ್ಷರಾದ ನಾರಾಯಣಸ್ವಾಮಮಿ, ಪುಲಗೂರಕೋಟೆ ಗ್ರಾಮ ಪಂಚಾಯಿತಿ ಸದಸ್ಯರಾದ ಕೃಷ್ಣಪ್ಪ ನವರ ಅನುಪಸ್ಥಿತಿಯಲ್ಲಿ ಗೂಂಜ್ ಸಂಸ್ಥೆಯ ಟೀಮ್ ಲೀಡರ್ ಡೇವಿಡ್ ರಾಯ್, ಸತೀಶ್,  ಮಹಿಳೆಯರು ಮತ್ತು ಮಹಿಳಾ ಸ್ವ ಸಹಾಯ ಸಂಗದ ಸದಸ್ಯರುಗಳು ಯುವಕ ಯುವತಿಯರು ಭಾಗವಹಿಸಿ ಮುಖ್ಯವಾಗಿ ಶ್ರೀಯುತ ಪಾಪಣ್ಣ, ಮತ್ತು ಮುನಿರತ್ನಪ್ಪ ರವರು ಶ್ರಮದಾನದಲ್ಲಿ ಭಾಗವಹಿಸಿದ್ದರು ಮತ್ತು ಭಾಗವಹಿಸಿದ್ದ 165 ಜನರಿಗೂ ಕಿಟ್‍ಗಳನ್ನು ನೀಡಲಾಯಿತು.

Read These Next

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...