ಕೋಲಾರ: ಕುರಬರಪೇಟೆಯ ಶ್ರೀ ಹನುಮಾನ್ ಕನ್ನಡಿಗರ ಸಂಘದ ವತಿಯಿಂದ ಶ್ರೀ ಗಣಪತಿ ವಾರ್ಷಿಕೋತ್ಸವ

Source: shabbir | By Arshad Koppa | Published on 27th August 2017, 9:09 AM | State News | Guest Editorial |

ಕೋಲಾರ: ನಗರದ ಕುರಬರಪೇಟೆಯ ಶ್ರೀ ಹನುಮಾನ್ ಕನ್ನಡಿಗರ ಸಂಘದ ವತಿಯಿಂದ ಶ್ರೀ ಗಣಪತಿಯ 25ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಯಿತು.


  ಪ್ರಸಿದ್ಧ ತಿರುಪತಿಯ ವೆಂಕಟೇಶ್ವರ ಮೂರ್ತಿಯ ಪ್ರತಿರೂಪವಾದ ವಿಶೇಷ ಗಣೇಶನ ಮೂರ್ತಿಯನ್ನು ಶುಕ್ರವಾರ ಸಂಜೆ 7ಗಂಟೆಗೆ ಪ್ರತಿಷ್ಠಾಪಿಸಲಾಯಿತು. ಶ್ರೀ ಗಣಪತಿಯ 25ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ನಗರಸಭೆ ಅಧ್ಯಕ್ಷರಾದ ಮಹಾಲಕ್ಷ್ಮಿ ಪ್ರಸಾದ್‍ಬಾಬು ಗಿಡಗಳನ್ನು ವಿತರಿಸುವ ಮೂಲಕ ಉದ್ಘಾಟಿಸಿದರು. ನೂರಾರು ಮಂದಿ ಭಕ್ತಾಧಿಗಳು ವೈಕುಂಠ ಏಳುದ್ವಾರಗಳ ಮೂಲಕ ಪ್ರವೇಶ ಮಾಡಿ ವಿಶೇಷ ಗಣಪತಿಯ ದರ್ಶನ ಪಡೆದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಸಿ.ಸೋಮಶೇಖರ್, ಮಂಜುನಾಥ್, ನೀರಾವರಿ ಹೋರಾಟ ಸಮಿತಿ ಸಂಚಾಲಕರಾದ  ಕುರುಬರಪೇಟೆ ವೆಂಕಟೇಶ್, ಶ್ರೀನಿವಾಸ್, ಶ್ರೀ ಹನುಮಾನ್ ಕನ್ನಡಿಗರ ಸಂಘದ ಸದಸ್ಯರಾದ ಸಂದೀಪ್, ಸಂತೋಷ್, ದೀಪು, ಬಬುಲು, ಶ್ರೀಕಾಂತ್, ರಾಜೇಶ್, ಬುಜ್ಜಿ, ಮಂಜು ಮುಂತಾದವರು ಹಾಜರಿದ್ದರು. 

ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ

Read These Next

ಬಯಲು ಸೀಮೆಯ ಹಾಲು ಒಕ್ಕೂಟದ ಭ್ರಷ್ಟಚಾರ ಹಾಗೂ ನೇಮಕಾತಿಗಳಲ್ಲಿ ಆಗಿರುವ ಹಗರಣವನ್ನು  ಸಿ.ಬಿ.ಐಗೆ ಒಪ್ಪಿಸುವಂತೆ ರೈತಸಂಘ ಆಗ್ರಹ

ಕೋಲಾರ: ಬಯಲು ಸೀಮೆಯ ಹಾಲು ಒಕ್ಕೂಟದ ಬ್ರಹ್ಮಾಂಡ ಭ್ರಷ್ಟಚಾರ ಹಾಗೂ ನೇಮಕಾತಿಗಳಲ್ಲಿ ಆಗಿರುವ ಹಗರಣವನ್ನು  ಸಿ.ಬಿ.ಐಗೆ ಒಪ್ಪಿಸಬೇಕು ...

ಶುಕ್ರವಾರದ ನಮಾಝ್ ನಲ್ಲಿ ಮುಸ್ಲಿಮ್ ಸಮುದಾಯದಿಂದ ಹುತಾತ್ಮ ಯೋಧರಿಗಾಗಿ ವಿಶೇಷ ಪ್ರಾರ್ಥನೆ ​​​​​​​

ಉಡುಪಿ: ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅವಂತಿಪೋರದಲ್ಲಿ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಯೋಧರಿಗಾಗಿ ಗಂಗೊಳ್ಳಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...