ಕೋಲಾರ: ಬೆಂಗಳೂರು ವಿಭಾಗಮಟ್ಟದ ಥ್ರೋಬಾಲ್ ಪಂದ್ಯಾವಳಿಗೆ ಚಾಲನೆ

Source: shabbir | By Arshad Koppa | Published on 27th October 2017, 12:31 PM | State News | Sports News |

ಕೋಲಾರ:- ಆರೋಗ್ಯವಂತ ಯುವಜನತೆಯಿಂದ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಶಿಕ್ಷಣದಷ್ಟೇ ಮಹತ್ವವನ್ನು ಕ್ರೀಡೆ ಹೊಂದಿದೆ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸೂಲೂರು ಆಂಜಿನಪ್ಪ ಅಭಿಪ್ರಾಯಪಟ್ಟರು.
ಗುರುವಾರ ಜಿಲ್ಲಾಡಳಿತ,ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಆರಂಭಗೊಂಡ ಬೆಂಗಳೂರು ವಿಭಾಗಮಟ್ಟದ 14 ಮತ್ತು 17 ವರ್ಷದ ವಯೋಮಿತಿಯ ಪ್ರೌಢಶಾಲಾ ಬಾಲಕ,ಬಾಲಕಿಯರ ಥ್ರೋಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.


ಯುವ ಪೀಳಿಗೆ ಆರೋಗ್ಯವಂತವಾಗಿದ್ದರೆ ಮಾತ್ರ ಉತ್ತಮ ಸಮಾಜ ಸಾಧ್ಯ, ಈ ನಿಟ್ಟಿನಲ್ಲಿ ಕ್ರೀಡೆಗಳಲ್ಲಿ ಹೆಚ್ಚಿನ ಭಾಗವಹಿಸುವಿಕೆ ಅಗತ್ಯ ಎಂದ ಅವರು, ಸೋಲು,ಗೆಲುವು ಮುಖ್ಯವಲ್ಲ ಎಂಬುದನ್ನು ಅರಿಯಿರಿ ಎಂದರು.
ಪ್ರಧಾನಿ ನರೇಂದ್ರ ಮೋದಿ 2025-ವಿಷನ್ ನಡಿ ದೇಶದ ಪ್ರತಿ ಜಿಲ್ಲೆಗೂ ಅಗತ್ಯವಿರುವ ಯೋಜನೆಗಳ ಕುರಿತು ಸಮಗ್ರ ಸಿದ್ದತೆಗೆ ಮುಂದಾಗಿದ್ದಾರೆ, ಮುಂದಿನ 7 ವರ್ಷಗಳಿಗೆ ಅಗತ್ಯವಿರುವ ಯೋಜನೆಗಳ ಚಿಂತನೆ ನಡೆಯುತ್ತಿದ್ದು, ಈ ಕಾರ್ಯದಲ್ಲಿ ಯುವಶಕ್ತಿಯದ್ದೇ ಮಹತ್ತರ ಪಾತ್ರ ಎಂದರು.
2025ರ ವಿಷನ್‍ನಲ್ಲಿ ಸಮಗ್ರ ಶಿಕ್ಷಣ ವ್ಯವಸ್ಥೆಯ ಬದಲಾವಣೆ ಅಗತ್ಯವಿದೆ, ಇಡೀ ದೇಶದಲ್ಲಿ ಏಕರೂಪದ ಶಿಕ್ಷಣ ಪದ್ದತಿ ಜಾರಿಗೆ ಬರಬೇಕು, ಬಡವ,ಶ್ರೀಮಂತರ ಮಕ್ಕಳೆಂಬ ಬೇಧ ಇರಬಾರದು ಎಂದ ಅವರು ಈ ಮಕ್ಕಳಿಗಾಗಿಯೇ ಸ್ವಾಸ್ಥ,ಅಭಿವೃದ್ದಿಪರ ದೇಶ ಕಟ್ಟುವ ಕೆಲಸವಾಗುತ್ತಿದೆ ಎಂದರು.
ಕ್ರೀಡೆಯಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳಿ, ನಿರಾಶರಾಗದಿರಿ, ಸಾಧನೆಯ ಗುರಿ ಮಾತ್ರ ನಿಮ್ಮದಾಗಿರಲಿ ಎಂದ ಅವರು ಕ್ರೀಡೆಗಳಲ್ಲಿ ಗುರಿ ಸಾಧನೆಗೆ ಸಾಗುವಂತೆ ಜೀವನದ ಸ್ವರ್ಧೆಯಲ್ಲೂ ಗೆಲ್ಲುವ ಸಾಮಥ್ರ್ಯ ಬೆಳೆಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ನಿಷ್ಪಕ್ಷಪಾತ ತೀರ್ಪು
ತೀರ್ಪುಗಾರರಿಗೆ ಕರೆ
ಜಿಲ್ಲಾ ಶಿಕ್ಷಣಾಧಿಕಾರಿ ಸುಬ್ರಹ್ಮಣ್ಯಂ, ತೀರ್ಪುಗಾರರು ನಿಷ್ಪಕ್ಷಪಾತವಾದ ತೀರ್ಪು ನೀಡಿ, 11 ಜಿಲ್ಲೆಗಳಿಂದ ವಿದ್ಯಾರ್ಥಿಗಳು ಬಂದಿದ್ದಾರೆ, ಅವರಲ್ಲಿ ಗೊಂದಲ ಮೂಡದಂತೆ ಎಚ್ಚರವಹಿಸಿ ಎಂದು ಸಲಹೆ ನೀಡಿದರು.
ಉತ್ತಮ ಆರೋಗ್ಯದಿಂದ ಉತ್ತಮ ಕಲಿಕೆ ಸಾಧ್ಯ ಎಂಬುದನ್ನು ಪೋಷಕರು ಅರಿಯಬೇಕಾಗಿದೆ, ತಮ್ಮ ಮಕ್ಕಳಿಗೆ ಓದಲು ನೀಡುವ ಪ್ರೋತ್ಸಾಹದ ಜತೆ ಕ್ರೀಡೆಗೂ ಒತ್ತು ನೀಡುವಂತೆ ತಿಳಿಸಿ ಎಂದು ಕೋರಿದರು.
11 ಜಿಲ್ಲೆಗಳಿಂದ
600 ವಿದ್ಯಾರ್ಥಿಗಳು
ರಾಜ್ಯ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಇ.ಶ್ರೀನಿವಾಸಗೌಡ, ಬೆಂಗಳೂರು ವಿಭಾಗದ ಬೆಂಗಳೂರು ಉತ್ತರ,ದಕ್ಷಿಣ, ಗ್ರಾಮಾಂತರ, ತುಮಕೂರು,ಚಿತ್ರದುರ್ಗ,ಮಧುಗಿರಿ, ದಾವಣಗೆರೆ,ಚಿಕ್ಕಬಳ್ಳಾಪುರ,ಕೋಲಾರ,ರಾಮನಗರ  11 ಜಿಲ್ಲೆಗಳಿಂದ 44 ತಂಡಗಳು ಬಂದಿದ್ದು, 600 ಮಂದಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದಾರೆ ಎಂದರು.
ವಿದ್ಯಾರ್ಥಿಗಳಿಗೆ ಅಗತ್ಯವಾದ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ ಸುಭಾಷ್ ಶಾಲೆಯ ಗೋಪಾಲರೆಡ್ಡಿ, ಖಾಸಗಿ ಶಾಲೆಗಳ ಸಂಘದ ಸದಾನಂದ್, ಮುಖ್ಯಶಿಕ್ಷಕರ ಸಂಘದ ಕೆ.ಗೋಪಾಲರೆಡ್ಡಿ ಮಕ್ಕಳಿಗೆ ಉಪಹಾರದ ವ್ಯವಸ್ಥೆ ಮಾಡಿದ್ದು, ಸುಭಾಷ್ ಶಾಲೆ, ಸೆಂಟ್‍ಆನ್ಸ್, ಚಿನ್ಮಯ,ಮಹಿಳಾಸಮಾಜ ಶಾಲೆಗಳವರು ಉತ್ತಮ ವಸತಿ ಸೌಲಭ್ಯ ಕೊಟ್ಟಿದ್ದಾರೆ ಎಂದರು.
ಮುಖ್ಯಶಿಕ್ಷಕರ ಸಂಘದ ಕಾರ್ಯದರ್ಶಿ ಕೆ.ಗೋಪಾಲರೆಡ್ಡಿ, ಕ್ರೀಡೆಗಳಿಂದ ಮಕ್ಕಳಲ್ಲಿ ಶಿಸ್ತು ಬೆಳೆಯಲು ಸಹಕಾರಿಯಾಗಿದೆ, 11 ಜಿಲ್ಲೆಗಳ ಮಕ್ಕಳು ಹಾಗೂ ತಂಡದ ವ್ಯವಸ್ಥಾಪಕ ಶಿಕ್ಷಕರು ಇಲ್ಲಿ ಹಾಜರಿದ್ದು, ಅವರಿಗೆ ಯಾವುದೇ ತೊಂದರೆ,ಗೊಂದಲವಾಗದಂತೆ ನಾವು ಎಚ್ಚರವಹಿಸಬೇಕು ಎಂದರು.
ತೀರ್ಪುಗಾರರಿಗೆ
ಅರಿವು ಕ್ಲಿನಿಕ್
ರಾಜ್ಯ ನೌಕರರ ಸಂಘದ ಖಜಾಂಚಿ ಎಸ್.ಚೌಡಪ್ಪ, ತೀರ್ಪುಗಾರರಾದ ದೈಹಿಕ ಶಿಕ್ಷಕರಿಗೆ ಪಂದ್ಯಾವಳಿಯ ಕುರಿತು ತಿಳಿಸಿ, ನಿಷ್ಪಕ್ಷಪಾತ ತೀರ್ಪು ನೀಡಿ, ಗೊಂದಲವಾದರೆ ತಂಡದ ವ್ಯವಸ್ಥಾಪಕರು ನೇರವಾಗಿ ಬಂದು ತಿಳಿಸಿ, ಸಮಸ್ಯೆ ಬೆಳೆಯದಂತೆ ನೋಡಿಕೊಳ್ಳಿ ಎಂದು ಮನವಿ ಮಾಡಿದರು.
ರಾಜ್ಯಮಟ್ಟದ ಕ್ರೀಡಾಪಟುಗಳಾದ ತರುಣ್,ಕುಶಾಲ್,ಸುಹೇಲ್,ಶಕೀಲ್ ತಂಡ ಕ್ರೀಡಾಜ್ಯೋತಿಯೊಂದಿಗೆ ಬಂದು ಅತಿಥಿಗಳಿಗೆ ಹಸ್ತಂತರಿಸಿತು.
ಕಾರ್ಯಕ್ರಮದಲ್ಲಿ ರಾಜ್ಯ ಬಯಲುಸೀಮೆ ಅಭಿವೃದ್ದಿ ಮಂಡಳಿ ಸದಸ್ಯ ಕೆ.ಜಯದೇವ್, ವಿಷಯಪರಿವೀಕ್ಷಕ ಮಲ್ಲಿಕಾರ್ಜುನಾಚಾರಿ,ಜಿಲ್ಲಾದೈಹಿಕ ಶಿಕ್ಷಣ ಅಧೀಕ್ಷಕ ನಾರಾಯಣಸ್ವಾಮಿ,ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಬಿ.ಅಶೋಕ್,ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ರುದ್ರಪ್ಪ, ಸಹಶಿಕ್ಷಕರ ಸಂಘದ ಅಧ್ಯಕ್ಷ ಶಂಕರಪ್ಪ,ಇಸಿಒ ಆರ್.ಶ್ರೀನಿವಾಸನ್,ಬಡ್ತಿ ಶಿಕ್ಷಕರ ಸಂಘದ ಉಪಾಧ್ಯಕ್ಷ ಜಿ.ಶ್ರೀನಿವಾಸ್,ದೈಹಿಕ ಶಿಕ್ಷಕರ ಸಂಘದ ರಾಜ್ಯಕಾರ್ಯದರ್ಶಿ ಆರ್.ನಾರಾಯಣಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
ಸುವರ್ಣಸೆಂಟ್ರಲ್ ಶಾಲಾ ಮಕ್ಕಳಿಂದ ಪ್ರಾರ್ಥನೆ,ನಾಡಗೀತೆ, ತಾಲ್ಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ನಾಗರಾಜ್ ನಿರೂಪಿಸಿ, ನಾರಾಯಣಸ್ವಾಮಿ ಸ್ವಾಗತಿಸಿ, ಚೌಡಪ್ಪ ವಂದಿಸಿದರು.

 

Read These Next

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಕಾರವಾರ: 61ನೇ ನ್ಯಾಶನಲ್ ರೋಲರ್ ಹಾಕಿ ಚಾಂಪಿಯನ್ ಶಿಪ್. ಒಂದು ಬೆಳ್ಳಿ, ಎರಡು ಕಂಚು‌ ಗಳಿಸಿದ ಕರ್ನಾಟಕ.

ಡಿಸೆಂಬರ್ 11ರಿಂದ ಚಂಡಿಗಡನಲ್ಲಿ ನಡೆಯುತ್ತಿರುವ 61ನೇ ರಾಷ್ಟ್ರೀಯ ರೋಲರ್ ಹಾಕಿ ಚಾಂಪಿಯನ್ ಶಿಫ್‌ಲ್ಲಿ ಕರ್ನಾಟಕ ತಂಡ ಗಮನಾರ್ಹ ಸಾಧನೆ ...

ಟಿ20 ವಿಶ್ವಕಪ್: ಭಾರತೀಯರಿಗೆ ದೀಪಾವಳಿ ಗಿಫ್ಟ್: ಕೊಹ್ಲಿ ಅದ್ಭುತ ಆಟ; ಪಾಕ್ ವಿರುದ್ಧ ಭಾರತಕ್ಕೆ ವಿರೋಚಿತ ಗೆಲುವು!

ಟಿ20 ವಿಶ್ವಕಪ್: ಭಾರತೀಯರಿಗೆ ದೀಪಾವಳಿ ಗಿಫ್ಟ್: ಕೊಹ್ಲಿ ಅದ್ಭುತ ಆಟ; ಪಾಕ್ ವಿರುದ್ಧ ಭಾರತಕ್ಕೆ ವಿರೋಚಿತ ಗೆಲುವು!

ಕೆಲ ಪಂದ್ಯಗಳಲ್ಲಿ ಕೊಹ್ಲಿ ಓಪನರ್ ಆಗಿ ಆಡಬಹುದು; ಆದರೆ ಟಿ20 ವಿಶ್ವಕಪ್ ನಲ್ಲಿ ಮಾತ್ರ ರಾಹುಲ್ ಓಪನರ್: ರೋಹಿತ್

ಕೆಲ ಪಂದ್ಯಗಳಲ್ಲಿ ಕೊಹ್ಲಿ ಓಪನರ್ ಆಗಿ ಆಡಬಹುದು; ಆದರೆ ಟಿ20 ವಿಶ್ವಕಪ್ ನಲ್ಲಿ ಮಾತ್ರ ರಾಹುಲ್ ಓಪನರ್: ರೋಹಿತ್