ಕೋಲಾರ:ಖಾದ್ರಿಪುರ ಗ್ರಾಮಕ್ಕೆ ಹಾದುಹೋಗುವ ರಸ್ತೆಯ ಅಂಡರ್ ಪಾಸ್ ನಲ್ಲಿ ನೀರು ತುಂಬಿಕೊಳ್ಳುವ ಸಮಸ್ಯೆ-ಮನವಿ

Source: shabbir | By Arshad Koppa | Published on 16th August 2017, 7:45 AM | State News | Guest Editorial |

ಕೋಲಾರ,ಆ.15: ಖಾದ್ರಿಪುರ ಗ್ರಾಮಕ್ಕೆ ಹಾದುಹೋಗುವ ರಸ್ತೆಯ ರೈಲ್ವೆ ಅಂಡರ್ ಪಾಸ್‍ನಲ್ಲಿ ನೀರು ನಿಂತು ತೊಂದರೆ ಆಗುತ್ತಿರುವುದನ್ನು ಸರಿಪಡಿಸಬೇಕು ಮತ್ತು  ಖಾದ್ರಿಪುರ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕೆಂದು ಖಾದ್ರಿಪುರ ಗ್ರಾಮಸ್ಥರು  ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್.ರಮೇಶ್‍ಕುಮಾರ್ ರವರಿಗೆ ಮನವಿ ಸಲ್ಲಿಸಿದರು. 
     ಕಾರ್ಯನಿಮಿತ್ತ ನಗರದ ಪ್ರವಾಸಿ ಮಂದಿರಕ್ಕೆ ಬಂದಿದ್ದ ವೇಳೆ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಖಾದ್ರಿಪುರ ಗ್ರಾಮಸ್ಥರು ಖಾದ್ರಿಪುರ ಗ್ರಾಮದಲ್ಲಿ ರೈಲ್ವೆ ಅಂಡರ್ ಪಾಸ್‍ನಲ್ಲಿ ನೀರು ನಿಂತು ನಗರಕ್ಕೆ ಬರುವ ಶಾಲಾಕಾಲೇಜು ವಿದ್ಯಾರ್ಥಿಗಳಿಗೆ, ಉದ್ಯೋಗಗಳಿಗೆ ಹೋಗುವವರು ದೈನಂದಿನ ವ್ಯವಹಾರಕ್ಕೆ ನಗರಕ್ಕೆ ಬರುವ ಸಾರ್ವಜನಿಕರಿಗೆ ಓಡಾಡಲು, ಸೈಕಲ್ಗಳು ದ್ವೀಚಕ್ರವಾಹನಗಳು, ಆಟೋರಿಕ್ಷಾ ವಾಹನಗಳು ಇಲ್ಲಿ ಓಡಾಡಲು ಸಾದ್ಯವಾಗದೆ ತುಂಬಾ ಅನಾನುಕೂಲವಾಗಿರುತ್ತದೆ. ಇಲ್ಲಿ ನೀರು ನಿಲ್ಲುವ ನೀರು ಬೇರೆ ಕಡೆ ಹರಿದುಹೋಗಲು ಯಾವುದೇ ವ್ಯವಸ್ಥೆ ಇಲ್ಲದೆ ಇರುವುದರಿಂದ ನಾವುಗಳು ನೀರನ್ನು ಎತ್ತಿ ಬೇರೆ ಕಡೆ ಹಾಕಬೇಕಾಗಿದೆ ಎಂದು ಅಸಮಾಧಾನವನ್ನು ತೋರ್ಪಡಿಸಿದರು.
    ಖಾದ್ರಿಪುರ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಪ್ರಾರಂಭಿಸಲು ಅಕ್ಕಪಕ್ಕದಲ್ಲಿರುವ ಕಾರಂಜಿಕಟ್ಟೆ, ಮುನೇಶ್ವರನಗರ, ವಿಭೊತಿಪುರ, ಸಂಗೋಂಡಹಳ್ಳಿ ಈ ಎಲ್ಲಾ ಗ್ರಾಮಗಳಲ್ಲಿ ಸುಮಾರು 20000ಕ್ಕೆ ಆದಿಕ ಜನಸಂಖ್ಯೆ ವಾಸವಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪರಿಶಿಷ್ಟಜಾತಿ ಪರಿಶಿಷ್ಟ ವರ್ಗದವರು ಮತ್ತು ಹಿಂದೂಳಿದ ವರ್ಗದವರು ಮತ್ತು ಅಲ್ಪಾಸಂಖ್ಯಾತರು ಕೂಲಿ ಮಾಡಿ ಜೀವನ ಮಾಡುವರೇ ಹೆಚ್ಚಾಗಿರುತ್ತಾರೆ ಈ ಬಾಗದ ಜನರಿಗೆ ಆರೋಗ್ಯ ಸಮಸ್ಯೆ ಎದುರಾದರೆ ನಮ್ಮ ಗ್ರಾಮಗಳಿಂದ ಸುಮಾರು 3ಕಿ.ಮೀ ದೂರವಿರುವ ಎಸ್.ಎನ್ ಆರ್ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯಾಬೇಕಾಗಿದ್ದು ರಾತ್ರಿ ವೇಳೆಯಲ್ಲಿ ಮಕ್ಕಳು ಮತ್ತು ಹೆಂಗಸರು ವಯೋವೃದ್ದರಿಗೆ ಆರೋಗ್ಯದಲ್ಲಿ ಸಮಸ್ಯೆ ಉಂಟಾದಗ ಬಂದು ಹೋಗಲು ತುಂಬ ಅನಾನುಕೂಲವಾಗಿರುತ್ತದೆ. ಈ ಬಾಗದ ಜನರಿಗೆ ಯಾವುದೇ ಬಸ್ಸಿನ ಅನೂಕೂಲ ಇರುವುದಿಲ್ಲ ಅದ್ದರಿಂದ ಈ ಭಾಗದಲ್ಲಿ ಖಾದ್ರಿಪುರ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಪ್ರಾರಂಭಿಸಲು ಮತ್ತು ರೈಲ್ವೆ ಅಂಡರ್ ಪಾಸ್‍ನಲ್ಲಿ ನೀರು ನಿಂತು ತೊಂದರೆಯನ್ನು ಸರಿಪಡಿಸಲು ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್ ರಮೇಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
    ಈ ಸಂದರ್ಬದಲ್ಲಿ ಖಾದ್ರಿಪುರ ಗ್ರಾಮಸ್ಥರು ಮತ್ತು ಯುವ ಮುಖಂಡರಾದ ಎಂ ಗೋವಿಂದ, ನಾರಾಯಣಸ್ವಾಮಿ, ಮಹೇಶ್, ಸತೀಶ್, ಪ್ರಸನ್ನ, ಹರೀಶ್, ಮಂಜು ಉಪಸ್ಥಿತರಿದ್ದರು.

    


ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ
 

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...