ಕೋಲಾರ: ಕೆ.ಸಿ.ವ್ಯಾಲಿ ರಾಜಕಾಲುವೆಗಳ ಒತ್ತುವರಿ ತೆರವುಗೊಳಿಸುವಂತೆ ಆಗ್ರಹಿಸಿ ರೈತಸಂಘದಿಂದ ಮನವಿ

Source: sonews | By Staff Correspondent | Published on 12th October 2018, 5:26 PM | State News |

ಕೆ.ಸಿ ವ್ಯಾಲಿ ಹರಿಯುವ ಕೆರೆಗಳ ಹಾಗೂ ರಾಜಕಾಲುವೆಗಳ ಒತ್ತುವರಿಯನ್ನು ತೆರವು ಮಾಡಿ  ರೈತ ಬೆಳೆಗಳನ್ನು ರಕ್ಷಣೆ ಮಾಡಬೇಕು ಹಾಗೂ ಜಿಲ್ಲಾದ್ಯಾಂತ ಚೆಕ್‍ಡ್ಯಾಮ್‍ಗಳ ಹಗರಣವನ್ನು ಸೂಕ್ತ ಅಧಿಕಾರಿಗಳಿಂದ ತನಿಖೆ ನಡೆಸಿ ಭ್ರಷ್ಟಚಾರವೆಸಗಿರುವ ಟೆಂಡರ್‍ದಾರರು  ಮತ್ತು ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು. ಮತ್ತು ಸರ್ವೇ ನಂ 39 ರಲ್ಲಿ 1 ಎಕರೆ 16ಗುಂಟೆ ಹಾಗೂ  ಕೆರೆ ಅಂಗಳವನ್ನು ವಶಪಡಿಸಿಕೊಂಡಿರುವ ಹಾಗೂ ನೆರ್ನಾ ಕಂಪನಿ, ಸಿಪಾನಿ, ಪ್ರಕಾಶ್ ಕಂಪನಿಗಳು ವಶಪಡಿಸಿಕೊಂಡಿರುವ ರಾಜಕಾಲುವೆಗಳನ್ನು ಕೂಡಲೇ ತೆರವುಗೊಳಿಸಿ ಇವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಸಿ ರೈತಸಂಘ ಮನವಿ ಸಲ್ಲಿಸಿತು.
    
ಬಯಲು ಸೀಮೆಯ ಕೋಲಾರ ಜಿಲ್ಲೆಯ ಶಾಶ್ವತ ನೀರಾವರಿಗಾಗಿ ಸಾವಿರಾರು ಕೋಟಿ ಲೂಟಿ ಒಂದು ಕಡೆಯಾದರೆ ಮತ್ತೊಂದುಕಡೆ ಕೆರೆಗಳ ಮತ್ತು ರಾಜಕಾಲುವೆಗಳ ಅಭಿವೃದ್ದಿಗೆ ಸಾವಿರಾರು ಕೋಟಿ ಸರ್ಕಾರ ಬಿಡುಗಡೆ ಮಾಡುತ್ತಿದ್ದರೂ ಆ ಹಣವನ್ನು ಅಧಿಕಾರಿಗಳು ನಕಲಿ ದಾಖಲೆ ಸೃಷ್ಠಿ ಮಾಡಿ ತಿಂದು ತೇಗುತ್ತಿದ್ದರೇ ಮತ್ತೊಂದೆಡೆ ಮಳೆ ನೀರು ಸಂಗ್ರಹಣೆಗಾಗಿ ಸರ್ಕಾರ ಉದ್ಯೋಗ ನೀಡುವ ದೃಷ್ಠಿ ಹಾಗೂ ಪರಿಸರಕ್ಕೆ ಹಾನಿಯಾಗದ ನೀರು ಸಂಗ್ರಹಿಸಲು ಚೆಕ್‍ಡ್ಯಾಂ ನಿರ್ಮಾಣಕ್ಕೆ 5 ಮತ್ತು 10ಲಕ್ಷ ಚೆಕ್ ಡ್ಯಾಮ್ ನಿರ್ಮಾಣಕ್ಕೆ  ಕೋಟ್ಯಾಂತರ ರೂ ಬಿಡುಗಡೆಯಾಗುತ್ತಿದ್ದರೆ ಟೆಂಡರ್‍ದಾರರು ಕಡಿಮೆ ಮೊತ್ತಕ್ಕೆ ಶೇ.30-35 ಟೆಂಡರ್ ಕರೆದು  ಅದರಲ್ಲೂ ಉಳಿದ ಹಣದಲ್ಲಿ  ಜಿ.ಎಸ್‍ಟಿ ಸರ್ಕಾರಕ್ಕೆ ಪಾವತಿಸಬೇಕಾದ ಹಣ ಹಾಗೂ ಇಂಜಿನಿಯರ್‍ಗಳ ಕಮೀಷನ್ ಕಳೆದರೆ ಉಳಿದ 40 ರಷ್ಟು ಹಣದಲ್ಲಿ ಯಾವ ರೀತಿ ಗುಣಮಟ್ಟದ ಚೆಕ್ ಡ್ಯಾಮ್ ನಿರ್ಮಾಣ ಮಾಡುತ್ತಾರೆಂಬುದು ಸಾರ್ವಜನಿಕರ ಪ್ರಶ್ನೆಯ ಜೊತೆಗೆ  ಅಧಿಕಾರಿಗಳು ಟೆಂಡರ್‍ದಾರರ ಜೊತೆ ಸೇರಿ ಚೆಕ್‍ಡ್ಯಾಮ್‍ಗಳನ್ನೇ ನಿರ್ಮಿಸದೆ ಕೋಟ್ಯಾಂತರ ರೂ ಹಗಲು ಲೂಟಿ ಮಾಡುತ್ತಿದ್ದಾರೆ. ಮತ್ತೊಂದಡೆ  1280 ಕೋಟಿ ವೆಚ್ಚದಲ್ಲಿ ಕೆ.ಸಿ ವ್ಯಾಲಿ ನೀರು 123 ಕೆರೆಗಳಿಗೆ ಹರಿಯುತ್ತಿದ್ದು, ಹರಿಯುವ ಕೆರೆಗಳ ರಾಜಕಾಲುವೆಗಳು ಸಂಪೂರ್ಣವಾಗಿ ಒತ್ತುವರಿಯಾಗಿದ್ದು, ಇದರಿಂದ ನೀರು ರೈತರು ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ನುಗ್ಗಿ ಸಂಪೂರ್ಣವಾಗಿ ನಾಶವಾಗುತ್ತಿದ್ದು ಅದನ್ನೇ ನಂಬಿದ್ದ ರೈತರು ಬೀದಿಗೆ ಬೀಳುತ್ತಿದ್ದು, ಒತ್ತುವರಿ ತೆರವುಗೊಳಿಸದ ಅಧಿಕಾರಿಗಳಿಗೆ ಇಡೀ ಶಾಪ ಹಾಕುತ್ತಿದ್ದಾರೆ. ಮತ್ತೊಂದೆಡೆ ನರಸಾಪುರ ಕೆರೆಯ ಸರ್ವೇ ನಂ 39 ರಲ್ಲಿ 1 ಎಕರೆ 16 ಗುಂಟೆ ಕೆರೆ ಜಮೀನನ್ನು ಖಾಜಿಕಲ್ಲಹಳ್ಳಿ ಮುನಿರಾಜು ಎಂಬುವವರು ಒತ್ತುವರಿ ಮಾಡಿಕೊಂಡು ರಾಜರೋಷವಾಗಿ ಸೆಡ್‍ಗಳನ್ನು ನಿರ್ಮಿಸುವ ಜೊತೆಗೆ  ನರಸಾಪುರಕ್ಕೆ ಹರಿಯುವ ರಾಜಕಾಲುವೆಗಳನ್ನು ಸುತ್ತಮುತ್ತಲ ಕಾರ್ಖಾನೆಗಳಾದ ನೆರ್ನಾ ಕಂಪನಿ 1 ಎಕರೆ ಸಿಪಾನಿ ಕಂಪನಿ ಹಾಗೂ ಪ್ರಕಾಶ್ ಕಂಪನಿ ಸಂಪೂರ್ಣ ರಾಜಕಾಲುವೆಗಳನ್ನು ಒತ್ತುವರಿ ಕಣ್ಣುಮುಂದೆಯೇ ಮಾಡಿಕೊಂಡಿದ್ದರೂ ಸರ್ವೇ ಮಾಡಿಸಿ ಬಿಡುಗಡೆ ಮಾಡುವ ತಾಕತ್ತು  ಅಧಿಕಾರಿಗಳಿಗೆ ಇಲ್ಲದಂತಾಗಿ ಇವರ ಬೇಜವಬ್ದಾರಿಯಿಂದ ರೈತರ ಕಷ್ಟದ ಬೆಳೆ ನಾಶಮಾಡಿ ಅನ್ನದಾತನನ್ನು ಆತ್ಮಹತ್ಯೆಗೆ ನೇರವಾಗಿ ಅಧಿಕಾರಿಗಳೇ ನೂಕುತ್ತಿದ್ದಾರೆ.              

ಮಾನ್ಯ ಕಾರ್ಯಪಾಲಕ ಇಂಜಿನಿಯರ್‍ರವರು ಕೂಡಲೇ ಕೆ.ಸಿ ವ್ಯಾಲಿ ನೀರು ಹರಿಯುವ ಕೆರೆಗಳ ರಾಜಕಾಲುವೆಗಳ ಜೊತೆಗೆ ಕಂಪನಿಗಳು ಹಾಗೂ ಖಾಜಿಕಲ್ಲಹಳ್ಳಿ ಮುನಿರಾಜು ವಶಪಡಿಸಿಕೊಂಡಿರುವ ಕೆರೆ ಜಮೀನನ್ನು  ತೆರವುಗೊಳಿಸಬೇಕು. ಹಾಗೂ 5 ಲಕ್ಷ 10 ಲಕ್ಷ ಚೆಕ್‍ಡ್ಯಾಮ್ ನಿರ್ಮಾಣದಲ್ಲಿ ಆಗಿರುವ ಹಗರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ಮತ್ತು ಟೆಂಡರ್‍ದಾರರ ವಿರುದ್ದ 1 ವಾರದೊಳಗೆ  ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ರೈತರು ಬೆಳೆದ ಬೆಳೆ ಹಾಗೂ ಜಾನುವಾರುಗಳ ಸಮೇತ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ನ್ಯಾಯ ಪಡೆದುಕೊಳ್ಳಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಿಲಾಗಿದೆ.


 

Read These Next