ಕೋಲಾರ:ವಿವಿಧ ಸಂಘಟನೆಗಳ ಸಹಕಾರದಿಂದ ಕಾನೂನು ಅರಿವು ನೆರವು ಕಾರ್ಯಕ್ರಮ

Source: shabbir ahmed | By Arshad Koppa | Published on 21st February 2017, 8:04 AM | State News |

ಕೋಲಾರ, ಫೆ ೨೦: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕೋಲಾರ, ಶಿಕ್ಷಣ ಇಲಾಖೆ, ಕೋಲಾರ, ವಕೀಲರ ಸಂಘ, ಕೋಲಾರ, ಸರ್ಕಾರಿ ಪ್ರೌಢಶಾಲೆ, ಪಟ್ನ ಇವರ ಸಂಯುಕ್ತ ಅಶ್ರಯದಲ್ಲಿ ದಿನಾಂಕ 20-02-2017 ರಂದು ಸಾಮಾಜಿಕ ನ್ಯಾಯ ದಿನಾಚರಣೆಯನ್ನು ನಾಯಕರಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮದೊಂದಿಗೆ ಹಮ್ಮಿಕೊಳ್ಳಲಾಗಿತ್ತು. 
    ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಗುರುರಾಜ ಜಿ ಶಿರೋಳ, ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕೋಲಾರ ರವರು ನೆರವೇರಿಸಿದರು.  ಭಾರತವು ಅನೇಕ ಜಾತಿ, ಮತ ಪಂಥ, ಭಾಪ್ಷೆಗಳಿಂದ ವಿಭಜಿತವಾಗಿದ್ದರು ಕೂಡ ರಾಷ್ಟ್ರೀಯತೆಯ ವಿಷಯದಲ್ಲಿ ಐಕ್ಯತೆಯನ್ನು ಸಾಧಿಸುವುದು ಪ್ರಸ್ತುತ ಸನ್ನಿವೇಶದಲ್ಲಿ ಅತ್ಯವಶ್ಯವಾಗಿದೆ ಎಂದು ತಿಳಿಸಿದರು.   ಈ ಐಕ್ಯತೆಯನ್ನು ಸಾಧಿಸಲು ಸಮಾನತೆಯನ್ನು ಸಾಧಿಸುವುದು ಮುಖ್ಯವಾಗಿದೆ. ದೇಹದ ಒಂದು ಅಂಗವು ನೋವು ತೊಂದರೆಯಲ್ಲಿದ್ದಾಗ ಇನ್ನೊಂದು ಅಂಗವು ಅದರ ಭಾರವನ್ನು ಸ್ವೀಕರಿಸಿ ಅಧರಿಸುವಂತೆ, ನಮ್ಮ ದೇಶದಲ್ಲಿ ಅನೇಕ ಮತೀಯ, ಅರ್ಥಿಕ, ರಾಜಕೀಯ ಕಾರಣಗಳಿಂದಾಗಿ ದೌರ್ಜನ್ಯಕೊೈಳಗಾದ ಅವಕಾಶ ವಂಚಿತರಾದ ಜನರೆಲ್ಲರಿಗೆ ಉತ್ತಮ ಅವಕಾಶಗಳನ್ನು ನೀಡಿ ಅವರೆಲ್ಲರ ಅರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಸಭಲತೆಗಾಗಿ ಮುಕ್ತ ಮನಸ್ಸಿನಿಂದ ಅವರ ಏಳಿಗೆಗೆ ದುಡಿಯುವುದು ದೇಶದ ಉಳಿದ ನಾಗರೀಕರ ಅದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು. 
ಮುಂದುವರೆದು ಕಾನೂನು ಸೇವೆಗಳ ಪ್ರಾಧಿಕಾರದಿಂದ ಬಡ ಸಾಮಾನ್ಯ ಕಕ್ಷಿದಾರ ತನ್ನ ಹಕ್ಕುಗಳ ಪುನರ್‍ಸ್ಥಾಪನೆಗೆ ಕೇವಲ ಆರ್ಥಿಕ ಮುಗ್ಗಟ್ಟಿನಿಂದ ಅಥವಾ ಇನ್ಯೂವುದೋ ಕಾರಣದಿಂದ ವಂಚಿತನಾಗಬಾರದು ಎಂಬ ದೃಷ್ಟಿಯಿಂದ ತಾಲ್ಲೂಕು ಹಂತದಿಂದ ಸುಪ್ರೀಂ ಕೋರ್ಟಿನವರೆವಿಗೂ ಎಲ್ಲಾ ಹಂತಗಳಲ್ಲೂ ಉಚಿತ ಕಾನೂನು ನೆರವು ಒದಗಿಸುತ್ತಿರುವ ಕ್ರಮಗಳ ಬಗ್ಗೆ ತಿಳಿಹೇಳಿದರು. ಈ ವಿಷಯಗಳನ್ನು ವಿದ್ಯಾರ್ಥಿಗಳು ಮನಗಂಡು ತಮ್ಮ ಸುತ್ತಮುತ್ತಲಿನ ಅರ್ಥಿಕ, ಸಾಮಾಜಿಕ ದುರ್ಬಲವರ್ಗದವರಿಗೆ ತಿಳಿಹೇಳಬೇಕು ಮತ್ತು ತಾವು ಪಡೆದ ಜ್ಞಾನವನ್ನು ಎಲ್ಲರಲ್ಲೂ ಪಸರಿಸಬೇಕು ಎಂಬುದಾಗಿ ತಿಳಿಸಿದರು.    
ಶ್ರೀ ಕೆ.ವಿ. ಸುರೇಂದ್ರಕುಮಾರ್, ವಕೀಲರು, ಕೋಲಾರ ರವರು ಸಂವಿಧಾನದ ಮೂಲಭೂತ ಕರ್ತವ್ಯಗಳ ಹಾಗೂ ಜನನ_ಮರಣ ನೊಂದಣ  ಕಾಯಿದೆ ಬಗ್ಗೆ ಉಪನ್ಯಾಸ ನೀಡಿದರು. ಶ್ರೀ ವಿ. ರಾಮಕೃಷ್ಣ, ಅಧ್ಯಕ್ಷರು ವಕೀಲರ ಸಂಘ ರವರು ಸ್ವಚ್ಚ ಭಾರತ್ ಅಭಿಯಾನ ಹಾಗೂ ತಮ್ಮ ಸುತ್ತಮುತ್ತಲಿನ ಪರಿಸರ ಸಂರಕ್ಷಣೆ ಬಗ್ಗೆ ಉಪನ್ಯಾಸ ನೀಡಿದರು.   ಶ್ರೀ ಹೆಚ್. ವೆಂಕಟರವಣ, ಕಾರ್ಯದರ್ಶಿ ವಕೀಲರ ಸಂಘ ರವರು ಹೆಣ್ಣು ಭ್ರೂಣ ಹತ್ಯೆ ನಿಷೇದ ಕಾಯಿದೆ ಬಗ್ಗೆ ಉಪನ್ಯಾಸ ನೀಡಿದರು.  ಶ್ರೀ ಗೋಪಿಕೃಷ್ಣನ್, ಇ.ಸಿ. ಓ ರವರು ಹಾಜರಿದ್ದರು.
    ಶ್ರೀಮತಿ ಯಶೋಧಮ್ಮ ಶಾಲೆಯ ಪ್ರಭಾರ ಮುಖ್ಯೋಪಾದ್ಯಾಯರು ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದರು.   ಕಾರ್ಯಕ್ರಮದಲ್ಲಿ ಸುಮಾರು 100 ವಿದ್ಯಾರ್ಥಿ_ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
    ಶಾಲಾ ವಿದ್ಯಾರ್ಥಿನಿ ಪ್ರಾರ್ಥನೆ ಮಾಡಿದರು. ಶಾಲಾ ಶಿಕ್ಷಕರು ಸ್ವಾಗತಿಸಿ, ವಂದಿಸಿದರು. 

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...