ಶ್ರಿನಿವಾಸಪುರ: ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ 2 ಚಿನ್ನ, 1 ಕಂಚು ಪದಕ ಗೆದ್ದುಕೊಂಡ ಕರ್ನಾಟಕ ತಂಡ

Source: shabbir | By Arshad Koppa | Published on 23rd May 2017, 9:20 AM | State News | Sports News | Special Report | Don't Miss |

ಶ್ರಿನಿವಾಸಪುರ: ರಾಜ್ಯಕ್ಕೆ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ 2 ಚಿನ್ನ, 1 ಕಂಚು ಪದಕ ಗೆದ್ದುಕೊಂಡ ಕೆ.ಸಿ.ಸೌಂದರ್ಯ, ಎಂ.ಪಿ.ಜಾಗೃತ್ ಚಿನ್ನ, ಗಗನ್ ಕಂಚು ಪದಕ ಪಡೆದುಕೊಂಡು. ಕೆ.ಸಿ.ಸೌಂದರ್ಯ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
  ನವದೆಹಲಿಯ ತಾಲ್ಕಟೋರ ಇಂಡೋರ್ ಕ್ರೀಡಾಂಗಣದಲ್ಲಿ ಕರಾಟೆ ಅಸೋಸಿಯೇಷನ್ ಆಫ್ ಇಂಡಿಯಾ ಜೂನಿಯರ್ ನ್ಯಾಷನಲ್ ಚಾಂಪಿಯನ್‍ಶಿಪ್-2017 ಮೇ 11 ರಿಂದ 13 ರವರೆಗೆ ನಡೆದ ನ್ಯಾಷನಲ್ ಚಾಂಪಿಯನ್‍ಶಿಪ್ ಜೂನಿಯರ್ ಮತ್ತು 21 ವರ್ಷದೊಳಗಿನವರ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್‍ಶಿಪ್ 2017 ಸ್ಪರ್ಧೆಯಲ್ಲಿ ಶ್ರೀನಿವಾಸಪುರದ ಬಿಜಿಎಸ್ ಸ್ಕೂಲ್ ಆಫ್ ಬಿಸಿನೆಸ್ ಮೇನೇಜ್ಮೆಂಟ್ ಕಾಲೇಜ್ ಭೈರವೇಶ್ವರನಗರದ ವಿದ್ಯಾರ್ಥಿನಿ ಕೆ.ಸಿ.ಸೌಂದರ್ಯ ಮೈನೆಸ್ 45 ಕೆಜಿ ವಿಭಾಗದ ಸ್ಪರ್ಧೆಯಲ್ಲಿ  ಭಾಗವಹಿಸಿ ಚಿನ್ನದ ಪದಕ ಪಡೆದು ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆದುಕೊಂಡಿದ್ದಾಳೆ. 
  14 ವರ್ಷದೊಳಗಿನವರ ಕರಾಟೆ ಸ್ಪರ್ಧೆಯ ಕಟಾ ವಿಭಾಗದಲ್ಲಿ ಭಾಗವಹಿಸಿದ ಎಂ.ಪಿ.ಜಾಗೃತ್ ಪ್ರಥಮ ಸ್ಥಾನ ಚಿನ್ನ ಪಡೆದು, 15 ವರ್ಷದೊಳಗಿನ ಕುಮಿತೆಯಲ್ಲಿ ಮೈನಸ್ 70 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಎಸ್.ಗಗನ್ ತೃತಿಯ ಸ್ಥಾನ ಗಳಿಸಿದ್ದಾರೆ.
  ಇತ್ತೀಚೆಗೆ ಗೋವಾದಲ್ಲಿ ನಡೆದ ಸೀನಿಯರ್ಸ್ ರಾಷ್ಟ್ರಮಟ್ಟದ ಸ್ಪರ್ಧೆಯ ಕುಮಿತೆಯಲ್ಲಿ ಮೈನಸ್ 75 ಕೆಜಿ ವಿಭಾಗದಲ್ಲಿ ಶರತ್‍ಜಾಂಗೊ ಚಿನ್ನದ ಪದಕ ಪಡೆದು ತಾಯ್‍ಲ್ಯಾಂಡ್‍ಲ್ಲಿ ನಡೆದ ಒಪೆನ್ ಚಾಂಪಿಯನ್‍ಶಿಪ್ ಕರಾಟೆ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಕಂಚು ಪಡೆದುಕೊಂಡು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆಂದು ಬೆಂಗಳೂರು ಬಸವಾನಗರದ ಜೆನ್ ಸ್ಪೋಟ್ರ್ಸ್ ಕ್ಲಭ್ ತರಬೇತುದಾರ ಎಂ.ಜಿ.ಪ್ರಸಾದ್ ಪ್ರಶಂಸಿಸಿದ ಅವರು ಇಷ್ಟೆಲ್ಲಾ ಕರಾಟೆ ಸ್ಪರ್ಧೆಯಲ್ಲಿ ಸಾಧನೆ ಮಾಡಿದ್ದರೂ ಸಹ ಸರಕಾರ ಇವರಿಗೆ ಯಾವುದೇ ರೀತಿಯಾದ ಪ್ರೋತ್ಸಾಹ ನೀಡುತ್ತಿಲ್ಲವೆಂದು ವಿಷಾದ ವ್ಯಕ್ತಪಡಿಸಿದರು.
ತರಬೇತಿ: ಏಷ್ಯನ್ ಗೇಮ್ಸ್ ಹಾಗೂ ಅಂತರಾಷ್ಟ್ರಿಯ ಮಟ್ಟಕ್ಕೆ ತರಬೇತಿ ನೀಡಲಾಗುತ್ತಿದ್ದು ಸರಕಾರ ಈ ಕ್ರೀಡಾಪಟುಗಳಿಗೆ ಸ್ಪರ್ಧೆಯಲ್ಲಿ ಬಾಗವಹಿಸಲು ಕರ್ಚುವೆಚ್ಚಗಳು ನೀಡಿ ಪ್ರೋತ್ಸಾಹಿಸಬೇಕೆಂದು ಒತ್ತಾಯಿಸಿದ್ದಾರೆ. 
ಕರಾಟೆ ಅಸೋಸಿಯೇಷನ್ ಆಫ್ ಇಂಡಿಯಾ ಅಧ್ಯಕ್ಷ ತ್ಯಾಗರಾಜನ್ ಬಹುಮಾನ ವಿತರಿಸಿದ್ದಾರೆ, ಪ್ರಧಾನ ಕಾರ್ಯದರ್ಶಿ ಭರತ್ ಶರ್ಮ, ರಾಜ್ಯ ಪ್ರಧಾನ ಕಾರ್ಯದರ್ಶಿ ಅಲ್ತಾಫ್ ಪಾಷಾ ಹಜರಿದ್ದು.

ದೆಹಲಿಯಲ್ಲಿ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಕೆ.ಸಿ.ಸೌಂದರ್ಯ, ಎಂ.ಪಿ.ಜಾಗೃತ್, ಕಂಚು ಪದಕ ಪಡೆದ ಎಸ್.ಗಗನ್ ಮತ್ತು ಶರತ್ ಜಾಂಗೊ ಅವರೊಂದಿಗೆ ತರಬೇತುದಾರ ಎಂ.ಜಿ.ಪ್ರಸಾದ್.

Read These Next

ಬಿಜೆಪಿ ಹಿಂದುಳಿದವರನ್ನು ತುಳಿಯುವ ಸಂಚು ರೂಪಿಸಿದೆ, ಭಟ್ಕಳದಲ್ಲಿ ಬಿಜೆಪಿ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

ಬಿಜೆಪಿ ಮೇಲ್ನೋಟಕ್ಕೆ ಅಲ್ಪಸಂಖ್ಯಾತರನ್ನು ವಿರೋಧಿಸುವ ಪಕ್ಷವಾಗಿ ಮೇಲ್ನೋಟಕ್ಕೆ ಕರೆಯಿಸಿಕೊಳ್ಳುತ್ತಿದೆಯಾದರೂ, ವಾಸ್ತವಾಗಿ ...

ಹ್ಯಾಮರ್ ಥ್ರೋ; ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲೆ ವಿದ್ಯಾರ್ಥಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಭಟ್ಕಳ: ಮಂಡ್ಯ ಜಿಲ್ಲೆಯ ಆದಿಚುಂಚನಗಿರಿಯಲ್ಲಿ ಬುಧವಾರ ನಡೆದ ಪ್ರೌಢಶಾಲಾ ವಿದ್ಯಾರ್ಥಿಗಳ ರಾಜ್ಯಮಟ್ಟದ ಅಥ್ಲೆಟಿಕ್ಸ್ ನಲ್ಲಿ ...

ಕ್ರೀಡಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಆಸಕ್ತಿ ವಹಿಸುವಂತೆ ಕ್ಷೇತ್ರಶಿಕ್ಷಣಾಧಿಕಾರಿ ಕರೆ

ಭಟ್ಕಳ:  ವಿದ್ಯಾರ್ಥಿಗಳು  ಪಟ್ಯಪುಸ್ತಕದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ವಹಿಸಿದ್ದಲ್ಲಿ ವಿದ್ಯಾರ್ಥಿಗಳ ಸರ್ವಾಂಗೀಣ ...

ಯಾರ ಸಮುದ್ರ? ಯಾರ ಕರಾವಳಿ?

ಕಳೆದ ಐದು ವರ್ಷಗಳಿಂದ ಮುಂಬೈನ ಸ್ಥಳೀಯ ಮೀನುಗಾರ ಸಮುದಾಯವು ವಿವಾದಾಸ್ಪದವಾದ ಕರಾವಳಿ ರಸ್ತೆ ಯೋಜನೆಯನ್ನು ತಾವು ಹಲವು ...