ಕೋಲಾರ:ಜೂಡೋ,ಕುಸ್ತಿಯಲ್ಲಿ ಜೂನಿಯರ್ ಕಾಲೇಜು ಸಾಧನೆ-ಸ್ವರ್ಧೆಗಳ ಎಲ್ಲಾ ವಿಭಾಗಗಳಲ್ಲೂ ಬಾಲಕರ ಮೇಲುಗೈ

Source: shabbir | By Arshad Koppa | Published on 19th August 2017, 7:56 AM | State News | Sports News |

ಕೋಲಾರ:- ಪ್ರೌಢಶಾಲಾ ನಗರ ತಾಲ್ಲೂಕು ಮಟ್ಟದ ಕ್ರೀಡಾಕೂಟದ ಜೂಡೋ ಮತ್ತು ಕುಸ್ತಿ ಪಂದ್ಯಗಳಲ್ಲಿ ನಗರದ ಬಾಲಕರ ಸರ್ಕಾರಿ ಜೂನಿಯರ್ ಕಾಲೇಜಿನ ವಿದ್ಯಾರ್ಥಿಗಳು ಹೆಚ್ಚಿನ ಬಹುಮಾನಗಳನ್ನು ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.


ಅ7 ವರ್ಷದೊಳಗಿನವರ ಕ್ರೀಡಾಕೂಟದ ಜೂಡೋ 40 ಕೆಜಿ ವಿಭಾಗದಲ್ಲಿ ವಿನೋದ್ ಪ್ರಥಮ, 45 ಕೆಜಿ ವಿಭಾಗದಲ್ಲಿ ಯಶ್ವಂತ್, 50 ಕೆಜಿ ವಿಭಾಗದಲ್ಲಿ ರವೀಂದ್ರ,  55 ಕೆಜಿ ವಿಭಾಗದಲ್ಲಿ ಮುರಳಿ, 65 ಕೆಜಿ ವಿಭಾಗದಲ್ಲಿ ಬಿ.ಆರ್.ಪವನ್ ಕುಮಾರ್, 71 ಕೆಜಿ ವಿಭಾಗದಲ್ಲಿ ರಾಹುಲ್ ಪ್ರಥಮ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ.
14 ವರ್ಷದೊಳಗಿನವರಲ್ಲೂ ಇದೇ ಕಾಲೇಜಿನ ವಿದ್ಯಾರ್ಥಿಗಳು ಸಾಧನೆ ಮಾಡಿದ್ದು, 25 ಕೆಜಿ ವಿಭಾಗದಲ್ಲಿ ಸಾಕೀಬ್ ಅಹಮದ್ ಪ್ರಥಮ, 30 ಕೆಜಿ ವಿಭಾಗದಲ್ಲಿ ರಂಜಿತ್ ಕುಮಾರ್ ಪ್ರಥಮ, 35 ಕೆಜಿ ವಿಭಾಗದಲ್ಲಿ ರಾಮಕೃಷ್ಣ ಪ್ರಥಮ, 40 ಕೆಜಿ ವಿಭಾಗದಲ್ಲಿ ದಿನೇಶ್, 45 ಕೆಜಿ ವಿಭಾಗದಲ್ಲಿಆಕಾಶ್ ಕುಮಾರ್, 50 ಕೆಜಿ ವಿಭಾಗದಲ್ಲಿ ಕಿಶೋರ್, +50 ಕೆಜಿ ವಿಭಾಗದಲ್ಲಿ ಸಂತೋಶ್ ಪ್ರಥಮ ಸ್ಥಾನ ಗಳಿಸಿದ್ದಾರೆ. 
ಕುಸ್ತಿಯಲ್ಲೂ ಮೇಲುಗೈ
ಕುಸ್ತಿಯಲ್ಲೂ ಸಾಧನೆ ಮಾಡಿರುವ ಸರ್ಕಾರಿ ಬಾಲಕರ ಜೂನಿಯರ್  ಕಾಲೇಜು ಪ್ರೌಢಶಾಲಾ 17 ವರ್ಷದೊಳಗಿನ ವಿದ್ಯಾರ್ಥಿಗಳು, 39 ಕೆಜಿ ವಿಭಾಗದಲ್ಲಿ ವಿನೋದ್, 42 ಕೆಜಿ ವಿಭಾಗದಲ್ಲಿ ಇಫ್ರಾನ್, 46 ಕೆಜಿ ವಿಭಾಗದಲ್ಲಿ ಯಶ್ವಂತ್, 50 ಕೆಜಿ ವಿಭಾಗದಲ್ಲಿ ನರೇಶ್, 63 ಕೆಜಿ ವಿಭಾಗದಲ್ಲಿ ಬಿ.ಆರ್.ಪವನ್ ಕುಮಾರ್ ಪ್ರಥಮ ಸ್ಥಾನ ಪಡೆದಿದ್ದಾರೆ. 
14 ವರ್ಷದೊಳಗಿನ ವಿದ್ಯಾರ್ಥಿಗಳು ಮೊದಲಿಗರಾಗಿ ಹೊರಹೊಮ್ಮಿದ್ದು, 29 ಕೆಜಿ ವಿಭಾಗದಲ್ಲಿ ರಂಜಿತ್, 41 ಕೆಜಿ ವಿಭಾಗದಲ್ಲಿ ದಿನೇಶ್, 45 ಕೆಜಿ ವಿಭಾಗದಲ್ಲಿ ಆಕಾಶ್, 49 ಕೆಜಿ ವಿಭಾಗದಲ್ಲಿ ಕಿಶೋರ್ ಮತ್ತು +55 ವಿಭಾಗದಲ್ಲಿ ಸಂತೋಷ್ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಸಾಧನೆ ಮಾಡಿರುವ ಎಲ್ಲಾ ವಿದ್ಯಾರ್ಥಿಗಳನ್ನು ಪ್ರಭಾರಿ ಉಪಪ್ರಾಂಶುಪಾಲ ಮಹಮದ್ ಅಲ್ಲಾಭಕಾಷ್ ಹಾಗೂ ದೈಹಿಕ ಶಿಕ್ಷಕರಾದ ಎಸ್.ಚೌಡಪ್ಪ, ಸಂತೋಷ್ ಕುಮಾರಿ ಹಾಗೂ ಎಲ್ಲಾ ಶಿಕ್ಷಕರು ಅಭಿನಂದಿಸಿದ್ದಾರೆ. 

 


ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ

Read These Next

ಹಿರಿಯ ಸ್ವಾತಂತ್ರ‍್ಯ ಹೋರಾಟಗಾರ ಖ್ಯಾತ ಸಾಹಿತಿ ಕೋ.ಚೆನ್ನಬಸ್ಸಪ್ಪನವರು ಇನ್ನಿಲ್ಲ

ಬೆಂಗಳೂರು: ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ನಿವೃತ್ತ ನ್ಯಾಯಾಧಿಶ, ಕನ್ನಡದ ಖ್ಯಾತ ಸಾಹಿತಿ, ಚಿಂತಕ, ಕನ್ನಡದ ಸಾಕ್ಷಿ ಪ್ರಜ್ಞೆ ಎಂದೇ ...

ಬಯಲು ಸೀಮೆಯ ಹಾಲು ಒಕ್ಕೂಟದ ಭ್ರಷ್ಟಚಾರ ಹಾಗೂ ನೇಮಕಾತಿಗಳಲ್ಲಿ ಆಗಿರುವ ಹಗರಣವನ್ನು  ಸಿ.ಬಿ.ಐಗೆ ಒಪ್ಪಿಸುವಂತೆ ರೈತಸಂಘ ಆಗ್ರಹ

ಕೋಲಾರ: ಬಯಲು ಸೀಮೆಯ ಹಾಲು ಒಕ್ಕೂಟದ ಬ್ರಹ್ಮಾಂಡ ಭ್ರಷ್ಟಚಾರ ಹಾಗೂ ನೇಮಕಾತಿಗಳಲ್ಲಿ ಆಗಿರುವ ಹಗರಣವನ್ನು  ಸಿ.ಬಿ.ಐಗೆ ಒಪ್ಪಿಸಬೇಕು ...

ಹ್ಯಾಮರ್ ಥ್ರೋ; ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲೆ ವಿದ್ಯಾರ್ಥಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಭಟ್ಕಳ: ಮಂಡ್ಯ ಜಿಲ್ಲೆಯ ಆದಿಚುಂಚನಗಿರಿಯಲ್ಲಿ ಬುಧವಾರ ನಡೆದ ಪ್ರೌಢಶಾಲಾ ವಿದ್ಯಾರ್ಥಿಗಳ ರಾಜ್ಯಮಟ್ಟದ ಅಥ್ಲೆಟಿಕ್ಸ್ ನಲ್ಲಿ ...

ಕ್ರೀಡಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಆಸಕ್ತಿ ವಹಿಸುವಂತೆ ಕ್ಷೇತ್ರಶಿಕ್ಷಣಾಧಿಕಾರಿ ಕರೆ

ಭಟ್ಕಳ:  ವಿದ್ಯಾರ್ಥಿಗಳು  ಪಟ್ಯಪುಸ್ತಕದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ವಹಿಸಿದ್ದಲ್ಲಿ ವಿದ್ಯಾರ್ಥಿಗಳ ಸರ್ವಾಂಗೀಣ ...

ಫಿಫಾ ವಿಶ್ವಕಪ್ 2018: ಸೌತ್ ಕೊರಿಯಾ vs ಸ್ವೀಡನ್: 60 ವಷರ್ಗಳ ಬಳಿಕ ಮೊದಲ ಪಂದ್ಯ ಗೆದ್ದ ಸ್ವೀಡನ್

ಮಾಸ್ಕೋ: ಫಿಫಾ ವಿಶ್ವಕಪ್ 2018ರ 'ಎಫ್' ಗುಂಪಿನ ಸೌತ್ ಕೊರಿಯಾ ಹಾಗೂ ಸ್ವೀಡನ್ ತಂಡಗಳ ನಡುವಣ ಪಂದ್ಯದಲ್ಲಿ ಸ್ವೀಡನ್ 1-0 ಅಂತರದ ಜಯಗಳಿಸಿ ...