ಕೋಲಾರ: ಕಾರಾಗೃಹದಲ್ಲಿ ಕಾನೂನು ಅರಿವು-ಶಿಕ್ಷೆ ಪ್ರಮಾಣ ತಗ್ಗಿಸಲು ಮನವಿಗೆ ಅವಕಾಶ-ನ್ಯಾ.ಗುರುರಾಜ್ ಶಿರೋಳ್

Source: shabbir | By Arshad Koppa | Published on 29th July 2017, 4:36 PM | State News | Guest Editorial |

ಕೋಲಾರ:- ಕಾರಾಗೃಹದಲ್ಲಿ ಬಂಧಿತರಾದ ಆರೋಪಿಗಳು ತಪ್ಪು ಒಪ್ಪಿಕೊಂಡು ಶಿಕ್ಷೆ ಪ್ರಮಾಣ ಕಡಿಮೆ ಮಾಡಲು ಮನವಿ ಮಾಡಲು ಕಾನೂನಿನಲ್ಲಿ ಅವಕಾಶ ನಿಡಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನುನೂ ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗುರುರಾಜ್ ಜಿ ಶಿರೋಳ ತಿಳಿಸಿದರು.
ಜಿಲ್ಲಾ ಕಾನುನೂ ಸೇವೆಗಳ ಪ್ರಾಧಿಕಾರ,ಜಿಲ್ಲಾ ಕೇಂದ್ರ ಕಾರಗೃಹ,ವಕೀಲರ ಸಂಘ,  ಜಾಗೃತಿ ಸೇವಾಸಂಸ್ಥೆ ಇವರ ಸಂಯುಕ್ತಾ ಆಶ್ರಯದಲ್ಲಿ ಜಿಲ್ಲಾ ಕಾರಗೃಹದಲ್ಲಿ ಬಂಧಿತ ಆರೋಪಿತರಿಗೆ ಶಿಕ್ಷೆಯ ಚೌಕಾಸಿ ಮತ್ತು ಬಂಧಿತರ ಹಕ್ಕುಗಳ ಬಗ್ಗೆ, ಕಾನುನೂ ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಆರೋಪಿಗಳಿಗೆ ಶಿಕ್ಷೆ ಪ್ರಮಾಣವನ್ನು ನಿರ್ಧರಿಸುವಲ್ಲಿ ಆರೋಪಿಗಳ ಪಾತ್ರ ಇರುವುದಿಲ್ಲ ಆದರೆ ವಿಧಿಸಿಬಹುದಾದ ಶಿಕ್ಷೆ ಪ್ರಮಾಣವನ್ನು ಕಡಿಮೆ ಮಾಡಲು ಆರೋಪಿ ಮನವಿ ಮಾಡಬಹುದಾಗಿದೆ ಎಂದರು.
 2006ನೇ ಸಾಲಿನಲ್ಲಿ ದಂಡ ಪ್ರಕ್ರಿಯೆ  ಸಮಿತಿಗೆ ತಿದ್ದುಪಡಿತಂದು 7 ವರ್ಷಗಳಕ್ಕಿಂತ ಕಡಿಮೆ ಶಿಕ್ಷೆ ವಿಧಿಸಬಹುದಾದ ಪ್ರಕರಣಗಳಲ್ಲಿ ಆರೋಪಿಯು ನ್ಯಾಯಾಲಯಕ್ಕೆ ತಪ್ಪು ಒಪ್ಪಿಕೊಳ್ಳುವುದಾಗಿ ಶಿಕ್ಕೆ ಪ್ರಮಾಣದ ಬಗ್ಗೆ ಚೌಕಾಸಿ ಮಾಡುವ ಅವಾಕಾಶ ಕಲ್ಪಿಪಿಸಲಾಗಿದೆ ಎಂದು ತಿಳಿಸಿದರು.
ಮಾಡಿದ ತಪ್ಪು ಮರುಕಳಿಸದಂತೆ ಮನ:ಪರಿವರ್ತನೆ ಮಾಡಿಕೊಂಡು ಕಾರಾಗೃಹದಿಂದ ಹೊರ ಬಂದ ನಂತರ ಉತ್ತಮ ಜೀವನ ನಡೆಸುವ ಸಂಕಲ್ಪ ಮಾಡಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ವಕೀಲ ಹಾಗೂ ಜಾಗೃತಿ ಸೇವಾ ಸಂಸ್ಥೆ ಅಧ್ಯಕ್ಷ ಕೆ.ಆರ್.ಧನರಾಜ್, ಬಂಧಿತ ಆರೋಪಿಗಳು ಕಾರಗೃಹದಲ್ಲಿ ಬಂಧಿಸಿದ ಮಾತ್ರಕ್ಕೆ ಅವರ ಬದುಕಿನ  ಘನತೆಯ  ಹಕ್ಕು ವಂಚಿತರಾಗುವುದಿಲ್ಲ,  ಬಂಧಿತರು ಆರೋಪಿಗಳು ತಾವು ಬಂಧನದಲ್ಲಿರುವ ಸಮಯದಲ್ಲಿ ಕೆಲವು ನಿರ್ಧಿಷ್ಠ ಹಕ್ಕುಗಳನ್ನು ಹೋರತಪಡಿಸಿ ಸಂವಿಧಾನದ 21 ನೇ ಪರಿಚ್ಛೇದದ ಅಡಿಯಲ್ಲಿ ಸಿಗಬಹುದಾದ ಎಲ್ಲಾ ಹಕ್ಕುಗಳನ್ನು ತಮ್ಮ ಬಂಧಿತ ಸ್ಥಳದಲ್ಲಿ ಪಡೆಯಬಹುದಾಗಿದೆ ಎಂದು ತಿಳಿಸಿದರು. 
ಕಾರಾಗೃಹದಲ್ಲಿ ನಿಮಗೆ ಸೌಲಭ್ಯಗಳು ಸಮರ್ಪಕವಾಗಿ ಸಿಗದಿದ್ದರೆ ಕೇಳಬಹುದಾಗಿದೆ, ನಿಯಮಾನುಸಾರ ನಿಮಗೆ ನೀಡಬಹುದಾದ ಸೌಲಭ್ಯಗಳು ಮೊದಲೇ ನಿರ್ಧಾರವಾಗಿರುತ್ತದೆ ಎಂದರು.
ಕಾರಾಗೃಹದ ಗ್ರಂಥಾಲಯದಲ್ಲಿ ಸಿಗುವ ಪುಸ್ತಕ ಓದಿ, ಜ್ಞಾನ ವೃದ್ದಿಸಿಕೊಳ್ಳಿ, ಮುಂದೆಂದೂ ಇಂತಹ ತಪ್ಪು ಮಾಡಬಾರದು ಎಂಬ ಸಂಕಲ್ಪದೊಂದಿಗೆ ನಿಮ್ಮ ಹೊಸ ಜೀವನ ರೂಪಿಸಿಕೊಳ್ಳಿ ಎಂದರು. 
 ಮುಕ್ತಾ ಕೌಟುಂಬಿಕ ಸಲಹಾ ಮತ್ತು ಕಾನುನೂ ನೆರವು ಕೇಂದ್ರದ ಅಧ್ಯಕ್ಷೆ ಶಾಂತಮ್ಮ , ಬಂಧಿತ ಆರೋಪಿಗಳು ಕ್ಷಣದ ಕೋಪಕ್ಕಾಗಿ ತಪ್ಪುಮಾಡುವುದಿಂದ ತಾವು ಶಿಕ್ಷೆ ಅನುಭೋಗಿಸುವುದಲ್ಲದೆ ತಮ್ಮ ಕುಂಟುಂಬವು ಸಹ ಪರೋಕ್ಷವಾಗಿ ಶಿಕ್ಷೆಯನ್ನು ಅನುಭವಿಸುವಂತಾಗಿದೆ ಎಂದರು.
ನಿಮ್ಮ ಮಕ್ಕಳು ಸಹ ಸಮಾಜದಲ್ಲಿ ಅಪರಾಧಿಗಳು ಆಗುತ್ತಾರೆ. ಇದನ್ನು ತಡೆಯಲು ಆರೋಪಿಗಳು ಶಿಕ್ಷೆಯ ಅವಧಿಯಲ್ಲಿ ಸನ್‍ಮಾರ್ಗದಲ್ಲಿ ನಡೆದಲ್ಲಿ ಶಿಕ್ಷೆ ಪ್ರಮಾಣ ಕಡಿಮೆಯಾಗಿ ಉತ್ತಮ ಪ್ರಜೆಗಳಾಗಿ ಸಮಾಜಕ್ಕೆ ಬರಬಹುದೆಂದು ತಿಳಿಸಿದರು.
 ವಕೀಲರ ಸಂಘದ ಕಾರ್ಯದರ್ಶಿ ಹೆಚ್.ವೆಂಕಟರವಣ ಬಂಧಿತ ಆರೋಪಿಗಳಿಗೆ ಸಂಬಂಧಿಸಿದಂತೆ ಜಿಲ್ಲಾ  ಕಾನುನೂ ಸೇವೆಗಳ ಪ್ರಾಧಿಕಾರದ ಮಹತ್ವವನ್ನು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರಗೃಹದ ಅಧೀಕ್ಷಕ ಎಂ.ಹೆಚ್. ಆಶೇಖಾನ್ ವಹಿಸಿದ್ದರು ವಕೀಲರು ಶ್ರೀಮತಿ ಗಾಯಿತ್ರಿ ಪ್ರಾರ್ಥಿಸಿದರು,  ಕುಮಾರಿ ನಂದಿನಿ ಸ್ವಾಗತಿಸಿದಳು ,ಕುಮಾರಿ ಚೈತ್ರ ವಂದಿಸಿದರು.


ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...