ಕೋಲಾರ:ಜಯ ಕರ್ನಾಟಕ ಜಿಲ್ಲಾ ಕಚೇರಿಯಲ್ಲಿ 71ನೇ ಸ್ವತಂತ್ರ್ಯೋತ್ಸವ ದಿನಾಚರಣೆ

Source: shabbir | By Arshad Koppa | Published on 16th August 2017, 8:07 AM | State News | Guest Editorial |

ಕೋಲಾರ,ಆ.15: ಜಯ ಕರ್ನಾಟಕ ಜಿಲ್ಲಾ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಕೆ.ಆರ್.ತ್ಯಾಗರಾಜ್ ರವರು ಧ್ವಜಾರೋಹಣವನ್ನು ಮಾಡುವ ಮೂಲಕ  71ನೇ ಸ್ವತಂತ್ರ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು.
    ನಂತರ ಮಾತನಾಡಿದ ಇವರು ಭಾರತಕ್ಕೆ ಅನೇಕ ಮಹನೀಯರ ಬಲಿದಾನ ಹಾಗೂ ಹೋರಾಟದ ಫಲವಾಗಿ ಸ್ವಾತಂತ್ರ್ಯ ಲಭಿಸಿರುತ್ತದೆ. ಆದರೆ ಗಾಂಧೀಜಿಯವರು ಕಂಡಂತಹ ಸ್ವತಂತ್ರ್ಯದ ಕನಸು ಈವರೆಗೂ ನನಸಾಗಿರುವುದಿಲ್ಲ. ಮಧ್ಯ ರಾತ್ರಿಯಲ್ಲಿ ಒಂಟಿ ಮಹಿಳೆ ನಿರ್ಭೀತಿಯಿಂದ ರಸ್ತೆಯಲ್ಲಿ ನಡೆದಾಡಿದರೆ ಮಾತ್ರ ಭಾರತದ ಸ್ತ್ರೀಯರಿಗೆ ಸ್ವಾತಂತ್ರ್ಯ ಬಂದಂತೆ ಆಗುತ್ತದೆ ಎಂಬ ಇವರ ಆಶಯವು ಈವರೆಗೆ ಈಡೇರದೆ ಅನೇಕ ಕಡೆಗಳಲ್ಲಿ ದೌರ್ಜನ್ಯಗಳು, ಹಾಗೂ ಹಿಂಸೆಗಳು ನಡೆಯುತ್ತಿವೆ. ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಇದಕ್ಕೆ ಕಾರಣರಾಗಿದ್ದಂತವರು ಆಸೆ ಪಟ್ಟಂತೆ ಭಾರತವು ಜಾತ್ಯಾತೀತ, ಮನೋಭಾವವನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳದೆ ಇರುವುದು ದೊಡ್ಡ ದುರಂತವೆಂದು ಬಣ್ಣಿಸಿರುತ್ತಾರೆ.


    ಮುಂದಿನ ದಿನಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಬಯಸಿದ್ದಂತಹ ಭಾರತವನ್ನು ನಿರ್ಮಾಣ ಮಾಡುವಲ್ಲಿ ಎಲ್ಲರೂ ದುಡಿಯೋಣ ಆಗಲೇ ನಿಜವಾದ ಸ್ವಾತಂತ್ರ್ಯಕ್ಕೆ ಅರ್ಥ ಬರುತ್ತದೆ ಎಂದರು. 
    ಕೋಲಾರ ತಾಲೂಕು ಅಧ್ಯಕ್ಷ ಬಿ.ರಾಜೂಗೌಡ ರವರು ಮಾತನಾಡುತ್ತಾ ಉತ್ತರ ಪ್ರದೇಶದ ಘೋರಖ್‍ಪುರದ ಆಸ್ಪತ್ರೆಯಲ್ಲಿ ಅಸು ನೀಗಿದ ಮಕ್ಕಳ ಮತ್ತು ಜಮ್ಮು ಕಾಶ್ಮೀರ ಗಡಿಯಲ್ಲಿ ಹುತಾತ್ಮರಾದಂತಹ ಸೈನಿಕರ ಆತ್ಮಕ್ಕೆ ಶಾಂತಿಯನು ಕೋರಿದರು. ಭಾರತವು ಯುವ ಪೀಳಿಗೆಯ ಪರಿಶ್ರಮದಿಂದ ಉನ್ನತ ಸ್ಥಾನವನ್ನು ಅಲಂಕರಿಸಲಿ ಎಂದು ಆಶಯ ವ್ಯಕ್ತಪಡಿಸಿರುತ್ತಾರೆ.
    ಪಿ.ನಾರಾಯಣಪ್ಪರವರು ಮಾತನಾಡುತ್ತಾ ಗಾಂಧಿಜೀಯವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅಹಿಂಸೆಯನ್ನು ಅಸ್ತ್ರವನ್ನಾಗಿ ಬ್ರಿಟೀಷರ ವಿರುದ್ಧ ಉಪಯೋಗಿಸಿ ಯಶಸ್ವಿಯಾಗಿರುತ್ತಾರೆ. ಈಗಲೂ ಅಹಿಂಸಾತ್ಮಕ ಹೋರಾಟಗಳಿಂದ ದೇಶವು ಎದುರಿಸುತ್ತಿರುವಂತಹ ಅನೇಕ ಸಮಸ್ಯೆಗಳಿಗೆ ಪರಿಹಾರವನ್ನು ಕಂಡು ಕೊಳ್ಳಬಹುದು ಎಂದರು.
    ಕಾರ್ಯಕ್ರಮದಲ್ಲಿ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಕೀಲುಕೋಟೆ ಆಂಜಿನಪ್ಪ, ಕಾರ್ಯದರ್ಶಿ ಶ್ರೀನಿವಾಸರಾವ್, ದೊಡ್ಡಹಸಾಳ ಸುಬ್ರಮಣಿ, ತಾಲೂಕು ಉಪಾಧ್ಯಕ್ಷ ಕೊಂಡರಾಜನಹಳ್ಳಿ ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಶ್ರೀಧರ್, ಸಂಘಟನಾ ಕಾರ್ಯದರ್ಶಿ ಕೊಂಡರಾಜನಹಳ್ಳಿ ಜಗದೀಶ್, ಕಾರ್ಯಕಾರಿ ಸಮಿತಿ ಸದಸ್ಯ ಎಸ್.ಮಂಜುನಾಥ್, ಮಹೇಶ್, ಸಂದೀಪ್, ಸತೀಶ್, ಆನಂದ್, ಗಾಂಧಿನಗರ ರಾಜಣ್ಣ ಇನ್ನಿತರರು ಉಪಸ್ಥಿತರಿದ್ದರು.

ಹೇಮಾದ್ರಿ ಶಿಕ್ಷಣ ಸಂಸ್ಥೆಗಳಲ್ಲಿ  71ನೇ ಸ್ವಾತಂತ್ರ್ಯ ದಿನಾಚರಣೆ


  
ಕೋಲಾರ,ಆ.15: ನಗರದ ಹೊರವಲಯದಲ್ಲಿರುವ ಹೇಮಾದ್ರಿ ಶಿಕ್ಷಣ ಸಂಸ್ಥೆಗಳಲ್ಲಿ  71ನೇ ಸ್ವಾತಂತ್ರ್ಯ ದಿನಾಚರಣೆಯ ಆಚರಿಸಲಾಯಿತು. 
    ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಸ್.ಬಿ.ಮುನಿವೆಂಕಟಪ್ಪ ಧ್ವಜಾರೋಹಣವನ್ನು ನರವೇರಿಸಿ ಮಾತನಾಡುತ್ತಾ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಗಳ ಬಗ್ಗೆ, ರಾಷ್ಟ್ರೀಯ ಬಾವೈಕ್ಯತೆಯ ಬಗ್ಗೆ ತಿಳಿಸಿಕೊಟ್ಟರು
      ಸಂದರ್ಭದಲ್ಲಿ ಬಿ.ಇ.ಡಿ ಪ್ರಾಂಶುಪಾಲ ಜೆ.ಶ್ರೀನಿವಾಸಶೆಟ್ಟಿ, ಬೋಧಕ ವರ್ಗ, ಮತ್ತು ಬೋಧಕೇತ್ತರ ವರ್ಗ ಹಾಗೂ ಬಿ.ಇ.ಡಿ ಪ್ರಶಿಕ್ಷಣಾರ್ಥಿಗಳು, ಐ.ಟಿ.ಐ ವಿದ್ಯಾರ್ಥಿಗಳು ಹಾಗೂ ಹೇಮಾದ್ರಿ ಪಬ್ಲಿಕ್ ಸ್ಕೂಲ್‍ನ ವಿದ್ಯಾರ್ಥಿಗಳು ಹಾಜರಿದ್ದರು.
    ಬಿ.ಇ.ಡಿ ಮತ್ತು ಹೇಮಾದ್ರಿ ಪಬ್ಲಿಕ್ ಸ್ಕೂಲ್‍ನ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು. ಪ್ರಶಿಕ್ಷಣಾರ್ಥಿ ಲಕ್ಷ್ಮೀ ಪ್ರಾರ್ಥಿಸಿ, ಅಕ್ಷತ ಸ್ವಾಗತಿಸಿ, ಪವಿತ್ರ ಮತ್ತು ಅನಿತ ನಿರೂಪಿಸಿ, ಜಿ.ರಾಜ ವಂದಿಸಿದರು.
ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ

Read These Next

ಕೂರ್ಮಗಡ ದೋಣಿ ದುರಂತ; ಇದುವರೆಗೆ ೧೪ ಮೃತದೇಹ ಪತ್ತೆ;  ೧೯ ಜನರ ರಕ್ಷಣೆ; ಇಬ್ಬರ ಮೃತದೇಹಕ್ಕಾಗಿ ಶೋಧ

ಕಾರವಾರ: ೨೦೧೯ನೇ ವರ್ಷದ ಆರಂಭದಲ್ಲೇ ಉತ್ತರಕನ್ನಡ ಜಿಲ್ಲೆಯ ಕೂರ್ಮಗಡ ದೋಣಿ ದುರಂತ ಅತ್ಯಂತ ಭಯಾನಕವಾಗಿದ್ದು ೧೬ಮಂದಿಯನ್ನು ...

ಶಿರಾಲಿ ಹೆದ್ದಾರಿ ಅಗಲಿಕರಣ;ಸಾರ್ವಜನಿಕರ ಬೇಡಿಯಂತೆ 30 ರ ಬದಲು 45ಮೀಟರ್ ವಿಸ್ತರಣೆ-ಕೇಂದ್ರ ಸಚಿವ ಅನಂತ್ ಭರವಸೆ

ಭಟ್ಕಳ: ಶಿರಾಲಿ ಭಾಗದ ಗ್ರಾಮಸ್ಥರ ಬೇಡಿಕೆಯಂತೆ ರಾ.ಹೆ.66 ರ ಅಗಲೀಕರಣವನ್ನು 30ಮೀಟರ್ ಬದಲು 45ಮೀಟರ್ ಗೆ ವಿಸ್ತರಿಸಲು ಅಗತ್ಯ ಕ್ರಮಗಳನ್ನು ...

ಮಾನವೀಯತೆಯ ಸೌಧದಡಿ ಸಮಾನತೆಯ ಸಮಾಜ ಕಟ್ಟಿದ ಕಾಯಕ ಯೋಗಿ ಡಾ.ಶಿವಕುಮಾರ ಸ್ವಾಮೀಜಿ ಇನ್ನಿಲ್ಲ

ತುಮಕೂರು: ಪದ್ಮಭೂಷಣ, ಕರ್ನಾಟಕ ರತ್ನ, ಕಾಯಕ ಯೋಗಿ, ಶತಾಯುಷಿ ಶ್ರೀ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರು ಸೋಮವಾರ ಬೆಳಗ್ಗೆ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...