ಕೋಲಾರ:ರಾಜಕೀಯ ಕಾರಣಕ್ಕಾಗಿ ಹಿಂದಿ ಏರಿಕೆಗೆ ಅವಕಾಶ ನೀಡೋಲ್ಲ ನಾಡು,ನುಡಿ ರಕ್ಷಣೆಗೆ ಜೈಲಿಗೋಗಲು ಸಿದ್ದ-ಕರವೇ ರಾಘವೇಂದ್ರ

Source: shabbir | By Arshad Koppa | Published on 17th July 2017, 8:45 AM | State News | Guest Editorial |

ಕೋಲಾರ:- ರಾಜಕೀಯ ಕಾರಣಕ್ಕಾಗಿ ಹಿಂದಿ ಭಾಷೆ ಏರಿಕೆ ಖಂಡನೀಯವಾಗಿದ್ದು, ಕನ್ನಡ ನಾಡು ನುಡಿ ಉಳಿವಿಗಾಗಿ ಜೈಲಿಗೆ ಹೋಗಲು ರಕ್ಷಣಾ ವೇದಿಕೆ ಕಾರ್ಯಕರ್ತರು ಸಿದ್ದರಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಂ.ಕೆ.ರಾಘವೇಂದ್ರ ಘೋಷಿಸಿದರು.
ಶುಕ್ರವಾರ ಕರವೇ ರಾಜ್ಯಾಧ್ಯಕ್ಷ ನಾರಯಣಗೌಡರ ಹುಟ್ಟುಹಬ್ಬದ ಅಂಗವಾಗಿ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕಗಳನ್ನು ವಿತರಿಸಿ ಅವರು ಮಾತನಾಡುತ್ತಿದ್ದರು.
ಕೋಲಾರಕ್ಕೆ ಶಾಶ್ವತ ನೀರಾವರಿ, ಕನ್ನಡಿಗರಿಗೆ ಉದ್ಯೋಗ, ಕೆಜಿಎಫ್‍ನಲ್ಲಿ ಬಿಬಿಎಂಪಿ ಕಸ ಹಾಕುವುದನ್ನು ತಡೆಯುವುದು ಸೇರಿದಂತೆ ವಿವಿಧ  ಬೇಡಿಕೆಗಳ ಈಡೇರಿಕೆಗೆ ಹೋರಾಟಕ್ಕಿಳಿದು ಗಣರಾಜ್ಯೋತ್ಸದ ದಿನ ಜೈಲಿಗೆ ಹೋಗಿದ್ದನ್ನು ಸ್ಮರಿಸಿದರು.
ರಾಜ್ಯ ಸರ್ಕಾರ ಕೂಡಲೇ ಸರೋಜಿನಿ ಮಹಿಷಿ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದ ಅವರು, 1983 ರಲ್ಲೇ ಸರೋಜಿನಿ ಮಹಿಷಿ ಅವರು ಕನ್ನಡ ನಾಡು,ನುಡಿಯ ಉಳಿವಿಗಾಗಿ ನೀಡಿದ್ದ ವರದಿ ಜಾರಿಗೆ ಇನ್ನು ಸರ್ಕಾರಗಳಿಗೆ ಸಮಯ ಬಂದಿಲ್ಲ ಎಂದು ವಿಷಾದಿಸಿದ ಅವರು, ವರದಿ ಜಾರಿಯಿಂದ ಇದರಿಂದ ಖಾಸಗಿ ಸ್ವಾಮ್ಯದಲ್ಲೂ ಕನ್ನಡಿಗರಿಗೆ ಶೇ.80 ಉದ್ಯೋಗ ಸಿಗುತ್ತದೆ ಎಂದರು.
ಹಿಂದಿ ರಾಷ್ಟ್ರೀಯ ಭಾಷೆಯಲ್ಲ, ಸಂವಿಧಾನದ ಪರಿಚ್ಚೇದ 8 ರಡಿ ಪ್ರಮುಖವಾದ ಎಲ್ಲಾ 22 ಭಾಷೆಗಳು ರಾಷ್ರೀಯ ಭಾಷೆಗಳೇ ಎಂದು ಅಭಿಪ್ರಾಯಪಟ್ಟರು.
ಹಿಂದಿ, ಇಂಗ್ಲೀಷ್ ಸೇರಿದಂತೆ ಇತರೆ ಭಾಷೆಗಳನ್ನು ಕಲಿಯುವುದು ತಪ್ಪಲ್ಲ ಆದರೆ ನಮ್ಮ ಅನ್ನದಭಾಷೆ, ತಾಯಿ ಭಾಷೆಯನ್ನು ಮಾತ್ರ ಯಾವುದೇ ಕಾರಣಕ್ಕೂ ಮರೆಯಬಾರದು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಬರಪೀಡಿತ ಕೋಲಾರ ಜಿಲ್ಲೆಯಲ್ಲಿ ರೈತರ ಮಕ್ಕಳ ಬದುಕಿಗಾಗಿ ಕೌಶಲ್ಯ ಅಭಿವೃದ್ದಿ ಕೇಂದ್ರ ತೆರೆದು ವಿವಿಧ ರೀತಿಯ ತರಬೇತಿ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡರು ಅಭಿಮಾನಿಗಳು ತಮಗೆ ನೀಡಿದ್ದ ಬೆಳ್ಳಿ ಗದೆ, ಕಿರೀಟವನ್ನು 33 ಲಕ್ಷ ರೂಗಳಿಗೆ ಹರಾಜು ಹಾಕಿ ಬಂದ 33 ಲಕ್ಷ ರೂಗಳನ್ನು ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ತಲಾ 50 ಸಾವಿರ ಹಂಚಿ ಮಾನವೀಯತೆ ಮರೆದಿದ್ದಾರೆ ಎಂದರು.
ಗೌಡರ ಹುಟ್ಟುಹಬ್ಬದ ನೆನಪಿಗಾಗಿ 51 ಸಾವಿರ ನೋಟ್ ಪುಸ್ತಕ ವಿತರಿಸಲಾಗುತ್ತಿದೆ, ಈ ಪುಸ್ತಕಗಳಲ್ಲಿ ಕೋಲಾರ ಜಿಲ್ಲೆಯ ಇತಿಹಾಸವನ್ನು ಅಚ್ಚು ಹಾಕಿಸಲಾಗಿದೆ ಎಂದರು.
ಭಾರತ ರತ್ನ ಪಡೆದ ಕನ್ನಡಿಗರು, ಜ್ಞಾನಪೀಠ ಪುರಸ್ಕøತ ಸಾಹಿತಿಗಳ ಭಾವಚಿತ್ರ ಹಾಗೂ ಅವರ ಕೃತಿಯ ವಿವರಗಳನ್ನು ನೋಟ್ ಪುಸ್ತಕದ ರಕ್ಷಾ ಪುಟಗಳಲ್ಲಿ ಮುದ್ರಿಸುವ ಮೂಲಕ ಶಾಲಾ ಮಕ್ಕಳಲ್ಲಿ ಕನ್ನಡ ನಾಡು ನುಡಿಯ ಅರಿವು ಜಾಗೃತಿಗೊಳಿಸುವ ಪ್ರಯತ್ನ ಮಾಡಿರುವುದಾಗಿ ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕ ಸಿ.ಎನ್.ಪ್ರದೀಪ್ ಕುಮಾರ್, ಕನ್ನಡ ನಾಡು,ನುಡಿಯ ರಕ್ಷಣೆಯ ಜತೆಗೆ ಸರ್ಕಾರಿ ಶಾಲಾ ಮಕ್ಕಳಿಗೆ ನೆರವಾಗುತ್ತಿರುವುದಕ್ಕಾಗಿ ಕರವೇಯನ್ನು ಅಭಿನಂದಿಸಿದರು.
ಕರವೇ ಜಿಲ್ಲಾ ಗೌರವಾಧ್ಯಕ್ಷ ಮುನಿರಾಜು, ಕನ್ನಡ,ನಾಡು,ನುಡಿ,ನೆಲಜಲ ರಕ್ಷಣೆಗೆ ಕರವೇ ಸದಾ ಸಿದ್ದವಾಗಿರುತ್ತದೆ, ನಾವು ಯಾವುದೇ ಜನಪರ ಹೋರಾಟಗಳಿಗೂ ಕೈಜೋಡಿಸುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಕರವೇ ಜಿಲ್ಲಾ ಮುಖಂಡರಾದ ಮಂಗಳಾ, ತಾಲ್ಲೂಕು ಅಧ್ಯಕ್ಷ ನವೀನ್,ನಗರ ಪ್ರಧಾನ ಕಾರ್ಯದರ್ಶೀ ಸುನೀಲ್,ನರಸಾಪುರ ಹೋಬಳಿ ಘಟಕದ ಅಧ್ಯಕ್ಷೆ ರಾಜಮ್ಮ, ಚಲುವನಹಳ್ಳಿ ಘಟಕದ ಅಧ್ಯಕ್ಷ ಶ್ರೀನಿವಾಸ್, ಅರಾಭಿಕೊತ್ತನೂರಿನ ಕರವೇ ಮುಖಂಡರಾದ ವೇಣು, ಸೋಮಶೇಖರ್, ಮುನಿಯಪ್ಪ, ರಾಜಣ್ಣ, ಶಿಕ್ಷಕರಾದ ಸಿ.ಎಂ.ವೆಂಕಟರಮಣಪ್ಪ, ಅನಂತಪದ್ಮನಾಭ್,ಸತೀಶ್ ಎಸ್‍ನ್ಯಾಮತಿ,ಶ್ವೇತಾ, ಸುಗುಣಾ, ಭವಾನಿಪ್ರಸಾದ್, ಲೀಲಾ,ನಾರಾಯಣಸ್ವಾಮಿ, ಡಿ.ಚಂದ್ರಶೇಖರ್, ವಸಂತಮ್ಮ ಮತ್ತಿತರರು ಉಪಸ್ಥಿತರಿದ್ದು, ವಿದ್ಯಾರ್ಥಿನಿ ಲಿಖಿತಾ ಪ್ರಾರ್ಥಿಸಿ, ಶಿಕ್ಷಕ ಸಿ.ಎಲ್.ಶ್ರೀನಿವಾಸಲು ಸ್ವಾಗತಿಸಿ, ನಿರೂಪಿಸಿದರು.

 

 ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ

Read These Next

“500 ಕೋಟಿ ಖರ್ಚು ಮಾಡಿದ್ರೂ ಬಿಜೆಪಿ ಅಧಿಕಾರಕ್ಕೆ ಬರೊಲ್ಲ’; ಬಿಟಿವಿ ಕುಟುಕು ಕಾರ್ಯಚರಣೆಯಲ್ಲಿ ಬಹಿರಂಗ

ಬೆಂಗಳೂರು: ಬಿ,ಎಸ್.ಯಡಿಯೂರಪ್ಪ ಹಾಗು ಅನಂತ್ ಕುಮಾರ್ ನಡುವೆ ಶೀತಲ ಸಮರ ನಡೆಯುತ್ತಿದೆ. ಜಗದೀಶ್ ಶೆಟ್ಟರ್, ಆರ್.ಅಶೋಕ್ ಮತ್ತು ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...