ಕೋಲಾರ:ಜಿಲ್ಲೆಯ ರೈತರನ್ನು ನಿರ್ಲಕ್ಷ್ಯ ಮಾಡಿರುವ ರಾಜ್ಯ ಮತ್ತು ಕೇಂದ್ರದ ನೀತಿ ಖಂಡಿಸಿ ಹೋರಾಟ-ಶಿವಣ್ಣ

Source: shabbir | By Arshad Koppa | Published on 2nd August 2017, 8:06 AM | State News | Guest Editorial |

ಕೋಲಾರ ಆ.1 : ಕರ್ನಾಟಕ ರಾಜ್ಯ ಕೋಲಾರ ಜಿಲ್ಲೆಯ ರೈತರನ್ನು ನಿರ್ಲಕ್ಷ್ಯ ಮಾಡಿರುವುದು ರಾಜ್ಯ ಮತ್ತು  ಕೇಂದ್ರ ಸರ್ಕಾರಗಳ ನೀತಿಯನ್ನು ಖಂಡಿಸಿ ಆಗಸ್ಟ್ 1 ರಿಂದ 15ರವರೆಗೆ ಜಿಲ್ಲೆಯಾದ್ಯಂತ ವಿನೂತನ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಪೋ|| ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಕಲ್ವಮಂಜಲಿ ರಾಮು ಶಿವಣ್ಣ ತಿಳಿಸಿದ್ದಾರೆ.
    ಅವರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ  ಸಂಘದ ನಿಯೋಗದೊಂದಿಗೆ ತೆರಳಿ ಕೋಲಾರ ಜಿಲ್ಲಾಧಿಕಾರಿಗಳ ಮುಖಾಂತರ ಮನವಿಯನ್ನು ನೀಡಿದರು.
    ಜಿಲ್ಲೆ ಪ್ರಧಾನ ಕಾರ್ಯದರ್ಶಿ ಜಿ.ನಾರಾಯಣಸ್ವಾಮಿ ಮಾತನಾಡಿ  ಕೋಲಾರ ಜಿಲ್ಲೆಯನ್ನು ಕಡೆಗಣ ಸಿ ಕರ್ನಾಟಕದ ಭೂಪಟದಲ್ಲಿ ಕೋಲಾರ ಜಿಲ್ಲೆ ಇಲ್ಲದೆ ಇರುವ ರೀತಿ ರಾಜ್ಯ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ಜಿಲ್ಲಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸದೇ ಇರುವುದನ್ನು ಹಾಗೂ ರೈತರ ಆತ್ಮಹತ್ಯೆಗಳನ್ನು ತಡೆಯಲು ಕ್ರಮ ವಹಿಸದಿರುವುದನ್ನು ಖಂಡಿಸಿ ಇದೇ ಆಗಸ್ಟ್ 1 ರಿಂದ 15ರವರೆಗೆ ಜಿಲ್ಲೆಯಾದ್ಯಂತ ರೈತ ನಾಯಕ ಪೋ|| ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ವಿನೂತನ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು
    ನಿಯೋಗದಲ್ಲಿ ಬಂಗಾರಪೇಟೆ ತಾಲ್ಲೂಕು ಅಧ್ಯಕ್ಷ ಕದಿರೇನಹಳ್ಳಿ ಶ್ರೀನಿವಾಸ್, ಮಾಲೂರು ತಾಲ್ಲೂಕು ಸಂಚಾಲಕ ಕುರುಬರಹಳ್ಳಿ ಶಂಕರಪ್ಪ, ಕೋಲಾರ ತಾಲ್ಲೂಕು ಮುಖಂಡ , ಸೀಸಂದ್ರ ವೆಂಕಟಾಚಲಪತಿ, ಬಂಗಾರಪೇಟೆ ತಾಲ್ಲೂಕು ಮಹಿಳಾ ಸಂಚಾಲಕರಾದ ರಾಧಮ್ಮ, ನಗರ ಘಟಕದ ಸಂಚಾಲಕರಾದ ಜಬೀವುಲ್ಲ, ವಿದ್ಯಾರ್ಥಿ ಘಟಕದ ಗಂಗರಾಜು, ಶೀಗಹಳ್ಳಿ ವೆಂಕಟಲಕ್ಷ್ಮಮ್ಮ, ಆಬಿದ್ ಖಾನ್, ಮಣ ಘಟ್ಟ ಮುನಿವೆಂಕಟರೆಡ್ಡಿ ಇನ್ನು ಮುಂತಾದವರಿದ್ದರು.
ಮನವಿಯಲ್ಲಿ ಈ ಕೆಳಕಂಡ ಬೇಡಿಕೆಗಳನ್ನು ಈಡೇರಿಸಬೇಕೆಂದು ಸಂಘಟನೆಯು ಒತ್ತಾಯಿಸಲಾಯಿತು.
ಬೇಡಿಕೆಗಳು
ಬರಪೀಡಿತ ಬಯಲು ಸೀಮೆ ಜಿಲ್ಲೆಗಳ ರೈತರ ಎಲ್ಲಾ ರೀತಿಯ ಬ್ಯಾಂಕ್‍ನ ಸಂಪೂರ್ಣ ಸಾಲ-ಮನ್ನಾ ಮಾಡಬೇಕು. 
ರೈತರು ಬೆಳೆದ ಎಲ್ಲಾ ಬೆಳೆಗಳಿಗೂ ಸೂಕ್ತ ವೈಜ್ಞಾನಿಕ ಬಲೆ ನಿಗದಿ ಮಾಡಬೇಕು. 
ಬಯಲು ಸೇಮೆ ಜಿಲ್ಲೆಗಳಿಗೆ ಶಾಶ್ವತ ಸಮಗ್ರ ನೀರಾವರಿ ಯೋಜನೆಗಳು ನೀಡಬೇಕು. 
ಕೆ.ಸಿ. ವ್ಯಾಲಿ ನೀರನ್ನು ಮೂರು ಹಂತದಲ್ಲಿ ಶುದ್ದೀಕರಿಸಿ ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣ ಗೊಳಿಸಿ, ಕೆರೆಗಳಿಗೆ ನೀರನ್ನು ತುಂಬಬೇಕು. 
ಯರಗೋಳ್ ಯೋಜನೆಗೆ ಶೇಕಡ 80ರಷ್ಟು ಹಣ ಬಿಡುಗಡೆಯಾಗಿದ್ದರೂ ಸುಮಾರು 10-12 ವರ್ಷಗಳಿಂದ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು ಕೂಡಲೇ ಕಾಮಗಾರಿ ಪೂರ್ಣಗೊಳಿಸಬೇಕು. 
ಕೆರೆಗಳ ಒತ್ತುವರಿಯನ್ನು ಕೂಡಲೇ ತೆರವುಗೊಳಿಸಬೇಕು. 
ಜಾತ್ಯಾತೀತವಾಗಿ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ನೀಡಬೇಕು. 
ಬರಪೀಡಿತ ಜಿಲ್ಲೆಯಲ್ಲಿ ಎಲ್ಲಾ ಮಹಿಳಾ ಸ್ವ-ಸಹಾಯ ಸಂಘಗಳಿಗೂ ಬ್ಯಾಂಕ್‍ನ ಮೂಲಕ ಬಡ್ಡಿ ರಹಿತ ಸಾಲ ಸೌಲಭ್ಯವನ್ನು ಕಲ್ಪಿಸಿಕೊಡಬೇಕು. 
ಲಿಂಗಬೇದವಿಲ್ಲದೆ ಬರಪೀಡಿತ ಜಿಲ್ಲೆಗಳ 50 ವರ್ಷ ಮೇಲ್ಪಟ್ಟ ಎಲ್ಲರಿಗೂ ಮಾಶಾಸನ ನೀಡಬೇಕು. 
ನರಸಾಪುರ-ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಭೂಮಿ ಕಳೆದುಕೊಂಡ ರೈತರಿಗೆ 1.00 ಎಕರೆಗೆ ಒಂದು ಕೋಟಿ ಹಣ ನೀಡಬೇಕು. 
ಕೋಲಾರ ಜಿಲ್ಲೆಯ ಎಲ್ಲಾ ಕೈಗಾರಿಕಾ ಪ್ರದೇಶದಲ್ಲಿ ಸ್ಥಳೀಯರಿಗೆ ಉದ್ಯೋಗ ಮತ್ತು ಗುತ್ತಿಗೆ ಕೆಲಸಗಳನ್ನು ನೀಡಬೇಕು. 
ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಎಲ್ಲಾ ತರಹದ ಚಿಕಿತ್ಸೆಯನ್ನು ಉಚಿತವಾಗಿ ನೀಡಬೇಕು. 
ಸರ್ಕಾರಿ ಶಾಲೆಗಳನ್ನು ಉಳಿಸಲು ಸರ್ಕಾರಿ ಶಾಲೆಗಳಲ್ಲಿ ಎಲ್.ಕೆ.ಜಿ. ಮತ್ತು ಯು.ಕೆ.ಜಿ. ಪ್ರಾರಂಭಿಸಬೇಕು.
ಸಾಲದ ಬಾಕಿಗಾಗಿ ಬ್ಯಾಂಕುಗಳು ವಸೂಲಿ ಕ್ರಮ ಜರುಗಿಸದಂತೆ ಕ್ರಮ ವಹಿಸಬೇಕು.
ರೈತ, ರೈತ ಕಾರ್ಮಿಕ ಕುಟುಂಬಕ್ಕೆ ಪ್ಯಾಕೇಜ್ ಸಾಲ ನೀಡಬೇಕು. ಕುರಿ, ಕೋಳಿ, ಹಸು, ಎತ್ತಿನಗಾಡಿ ಸಾಲದ ಮೊತ್ತ ಹೆಚ್ಚಿಸಬೇಕು.
ಕುಷ್ಕಿ ಪ್ರದೇಶದ ಕೃಷಿ ನೀತಿ ರೂಪಿಸಬೇಕು.
ರೈತರ ಪಂಪ್‍ಸೆಟ್‍ಗಳಿಗೆ ಸಮರ್ಪಕ ವಿದ್ಯುತ್‍ನ್ನು ಒಂದು ದಿನಕ್ಕೆ ಕನಿಷ್ಠ 12ಗಂಟೆ ನೀಡಬೇಕು
ಮಣ್ಣು ಮತ್ತು ನೀರನ್ನು ಸಂರಕ್ಷಿಸಬೇಕು ಹಾಗೂ ಕೆರೆಗಳ ಡಿ ನೋಟಿಫಿಕೇಷನ್ ನಿಲ್ಲಿಸಬೇಕು.
ಕೋಲಾರ ಜಿಲ್ಲೆಯ ವಾಣ ಜ್ಯ ಬೆಳೆಗಳಾದ ರೇಷ್ಮೆ, ಮಾವು, ಟೆಮೋಟೊ, ದಾಳಿಂಬೆ ಮತ್ತು ತೋಟಗಾರಿಕೆ ಬೆಳೆಗಳ ಬೆಲೆಗಳು ಸ್ಥಿರವಾಗಿ ಇರುವ ಯೋಜನೆ ರೂಪಿಸಬೇಕು.
ಖಾಸಗಿ ಸಾಲ ಕಿರುಕುಳವನ್ನು ತಪ್ಪಿಸಬೇಕು.
ವಿಶೇಷವಾಗಿ ದುಡಿಯುವ ಮಹಿಳೆಯರ ಆರೋಗ್ಯ ರಕ್ಷಣೆಗೆ ಹೆಚ್ಚು ಒತ್ತು ನೀಡಬೇಕು ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿಯೂ ಬಡ್ಡಿರಹಿತ ಆರ್ಥಿಕ ನೆರವು ನೀಡಿ ಸ್ವಯಂ ಉದ್ಯೋಗ ಮಾಡಲು ಉತ್ತೇಜನ ನೀಡಬೇಕು.
ಗ್ರಾಮಾಂತರ ಪ್ರದೇಶದ ಎಲ್ಲಾ ಬಡ ಮಕ್ಕಳಿಗೂ ಜಾತ್ಯಾತೀತವಾಗಿ ಶಿಕ್ಷಣಕ್ಕೆ ಬಡ್ಡಿರಹಿತ ಸಾಲ ಕೊಡಬೇಕು ಹಾಗೂ ರೈತ ಕುಟುಂಬದ ನಿರುದ್ಯೋಗ ಯುವಕರಿಗೆ ಕನಿಷ್ಠ 1 ಲಕ್ಷ ರೂಗಳನ್ನು ಜಾಮೀನು ರಹಿತ ಸಾಲ ನೀಡಿ ಕೃಷಿಗೆ ಪೂರಕವಾದ ಉದ್ಯೋಗ ನಡೆಸಲು ಪ್ರೋತ್ಸಾಹಿಸಬೇಕು.
ಆತ್ಮಹತ್ಯೆಗೆ ಸಂಬಂಧಿಸಿದಂತೆ ಒಬ್ಬ ನೋಡಲ್ ಅಧಿಕಾರಿಯನ್ನು ಜಿಲ್ಲಾ ಮಟ್ಟದಲ್ಲಿ ನೇಮಕ ಮಾಡಿ ಅವರ ನೇತೃತ್ವದಲ್ಲಿ ಎಲ್ಲಾ ಅಧಿಕಾರಿಗಳ ಜೊತೆಗೆ ಮನೋವೈದ್ಯರು, ರೈತ ಪ್ರತಿನಿಧಿಗಳನ್ನೊಳ ಗೊಂಡಂತೆ ಒಂದು ಸಮಿತಿಯನ್ನು ರಚಿಸಿ ರೈತರನ್ನು ಕೌನ್ಸಿಲಿಂಗ್ ಮಾಡಬೇಕು.
ಸರ್ಕಾರಿ ಸೇವೆ ಸಲ್ಲಿಸುತ್ತಿರುವವರ ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವಂತೆ ಕಾನೂನು ಜಾರಿಗೆ ತರಬೇಕು.

  (ಜಿ. ನಾರಾಯಣಸ್ವಾಮಿ)
 ಜಿಲ್ಲಾ ಪ್ರಧಾನ ಕಾರ್ಯದರ್ಶಿ
ಪೋ|| ನಂಜುಂಡಸ್ವಾಮಿ ಸ್ಥಾಪಿತ 
  ಕರ್ನಾಟಕ ರಾಜ್ಯ ರೈತ ಸಂಘ   
    ಹಾಗೂ ಹಸಿರು ಸೇನೆ

ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...