ಕೋಲಾರ: ಹರ್ಡಿಕರ್ ಭಾವಚಿತ್ರದ ನಾಣ್ಯಗಳನ್ನು ಸರ್ಕಾರ ಬಿಡುಗಡೆ ಮಾಡಲಿ - ಬಿ.ಕೆ. ವೆಂಕಟನಾರಾಯಣ್

Source: shabbir | By Arshad Koppa | Published on 27th August 2017, 9:00 AM | State News | Guest Editorial |

ಕೋಲಾರ ಆ.26: ಸ್ವಾತಂತ್ರ್ಯ ಚಳುವಳಿಯಲ್ಲಿ ಜನಜಾಗೃತಿಯನ್ನು ಮೂಡಿಸಿ ಸೇವೆಗಾಗಿ ಬಾಳು ಎಂದು ಸಾರಿದ ಭಾರತ ಸೇವಾದಳ ಸಂಸ್ಥಾಪಕ ಡಾ|| ನಾ.ಸು. ಹರ್ಡೀಕರ್ ರವರ ನೆನಪನ್ನು ಶಾಶ್ವತಗೊಳಿಸಲು ಸರ್ಕರವು ನಾಣ್ಯಗಳನ್ನು ಬಿಡುಗಡೆಗೊಳಿಸಬೇಕೆಂದು ಭಾರತ ಸೇವಾದಳ ಕೇಂದ್ರ ಸಮಿತಿ ಸದಸ್ಯ ಬಿ.ಕೆ. ವೆಂಕಟನಾರಾಯಣ್ ತಿಳಿಸಿದರು.


    ನಗರದ ಜಿಲ್ಲಾ ಭಾರತ ಸೇವಾದಳ ಕಛೇರಿಯಲ್ಲಿಂದು ಡಾ|| ನಾ.ಸು. ಹರ್ಡೀಕರ್‍ರವರ 42ನೇ ಪುಣ್ಯ ಸ್ಮರಣೆಯಲ್ಲಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಅವರು ಮಾತನಾಡುತ್ತಿದ್ದರು.
    ಆದರ್ಶ ವ್ಯಕ್ತಿಗಳ ಆದರ್ಶ ವ್ಯಕ್ತಿತ್ವ ಗುಣಗಾನ ಅವರ ಜನ್ಮದಿನ, ಪುಣ್ಯ ಸ್ಮರಣೆಯಂದು ಆದರೆ ಸಾಲದು, ಪ್ರತಿದಿನ ಕಾಯಕ ಆಗಬೇಕು. ಅವರ ತತ್ವಾದರ್ಶಗಳ ಜಾರಿ ನಿಟ್ಟಿನಲ್ಲಿ ಸರ್ಕಾರ ಅವರ ನೆನಪಿನಲ್ಲಿ ಶಾಶ್ವತ ಕಾರ್ಯಗಳನ್ನು ಕೈಗೊಳ್ಳಬೇಕು ಎಂದರು.
    ಡಾ|| ನಾ.ಸು. ಹರ್ಡೀಕರ್ ಆದರ್ಶಗಳು ಮತ್ತು ಜೀವನ ಶೈಲಿಯನ್ನು ಪಠ್ಯದಲ್ಲಿ ಅಳವಡಿಸುವ ಅಗತ್ಯವಿದೆ ಎಂದು ಜಿಲ್ಲಾ ಭಾರತ ಸೇವಾದಳ ಅಧ್ಯಕ್ಷ ಕೆ.ಎಸ್. ಗಣೇಶ್ ತಿಳಿಸಿದರು.


    ಭಾರತಸೇವಾದಳ ಸಂಸ್ಥಾಪಕ ಡಾ|| ನಾ.ಸು. ಹರ್ಡೀಕರ್ ಭಾವಚಿತ್ರಕ್ಕೆ ಭಾರತ ಸೇವಾದಳ ಜಿಲ್ಲಾ ಉಪಾಧ್ಯಕ್ಷ ಜಿ. ಶ್ರೀನಿವಾಸ್, ಕಾರ್ಯದರ್ಶಿ ಎಸ್. ಸುಧಾಕರ್, ವಿಶೇಷ ಆಹ್ವಾನಿತರಾದ ಅಪ್ಪಿ ನಾರಾಯಣಸ್ವಾಮಿ, ಆರ್. ಶ್ರೀನಿವಾಸನ್, ಜಿಲ್ಲಾ ಸಮಿತಿ ಸದಸ್ಯರಾದ ರಾಜೇಶ್‍ಸಿಂಗ್, ಮುನೇಶ್, ಸಿ.ನಾರಾಯಣಸ್ವಾಮಿ, ತಾಲ್ಲೂಕು ಕಾರ್ಯದರ್ಶಿ ಶ್ರೀರಾಮ್, ಕೋಶಾಧ್ಯಕ್ಷ ದೀಪು, ಉಪಾಧ್ಯಕ್ಷ ಸಂಪತ್‍ಕುಮಾರ್ ಸದಸ್ಯ ಮುನಿಯಪ್ಪ ಮತ್ತಿತರರು ಪುಷ್ಪನಮನ ಸಲ್ಲಿಸಿದರು.
    ಸೇವಾದಳ ಅಜೀವ ಸದಸ್ಯ ವಿ.ಪಿ. ಸೋಮಶೇಖರ್ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಿಸಿದ ಸಮಾರಂಭದಲ್ಲಿ ಭಾರತಸೇವಾದಳ ಜಿಲ್ಲಾ ಸಂಘಟಕ ದಾನೇಶ್ ಸ್ವಾಗತಿಸಿ, ಸಂಪನ್ಮೂಲ ವ್ಯಕ್ತಿ ವಿ. ಮಂಜುನಾಥ್ ವಂದಿಸಿದರು.

                                    (ಜಿ. ಶ್ರೀನಿವಾಸ್)
                                       ಕೋಲಾರ.

ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ

Read These Next

ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಸಂಪಾದಕರ ಸಂಘದ ನೂತನ ಆಡಳಿತ ಮಂಡಳಿ ಪದಾಧಿಕಾರಿಗಳ ನೇಮಕ

ಕೋಲಾರ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಸಂಪಾದಕರ ಸಂಘದ ನೂತನ ಆಡಳಿತ ಮಂಡಳಿ ಪದಾಧಿಕಾರಿಗಳನ್ನು ...

ನಕಲಿ ಬಿತ್ತನೆ ಬೀಜ ಹಾಗೂ ಕೀಟ ನಾಶಕ ಕಂಪನಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ರೈತಸಂಘದಿಂದ ಮೌನ ಹೋರಾಟ

ಕೋಲಾರ: ರೈತರ ಮರಣ ಶಾಸನ ಬರೆಯುತ್ತಿರುವ ನಕಲಿ ಬಿತ್ತನೆ ಬೀಜ ಹಾಗೂ ಕೀಟ ನಾಶಕ ಕಂಪನಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ...

ಗೌನಿಪಲ್ಲಿ ಗ್ರಾಮ ಪಂಚಾಯಿತಿ ಅಧ್ಯರಾಗಿ ಕಾಂಗ್ರೆಸ್‌ನ ಶಂಕರಮ್ಮ ,ಉಪಾಧ್ಯರಾಗಿ ಮಂಜುನಾಥ ಆರಾಧ್ಯ

ಶ್ರೀನಿವಾಸಪುರ: ತಾಲ್ಲೂಕಿನ ಗೌನಿಪಲ್ಲಿ ಗ್ರಾಮ ಪಂಚಾಯಿತಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯರಾಗಿ ಕಾಂಗ್ರೆಸ್‌ನ ಶಂಕರಮ್ಮ ...

ವಿಶ್ವಾಸಮತ ಯಾಚನೆಗೆ ವಿಪರೀತ ಅಡ್ಡಿಯಾದ ವಿಪ್​ ವಿಚಾರ; ಗದ್ದಲದ ನಡುವೆ ನಾಳೆಗೆ ಉಭಯ ಸದನಗಳ ಕಲಾಪ ಮುಂದೂಡಿಕೆ

ವಿಶ್ವಾಸಮತ ಯಾಚನೆಗೆ ವಿಪರೀತ ಅಡ್ಡಿಯಾದ ವಿಪ್​ ವಿಚಾರ; ಗದ್ದಲದ ನಡುವೆ ನಾಳೆಗೆ ಉಭಯ ಸದನಗಳ ಕಲಾಪ ಮುಂದೂಡಿಕೆ

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...