ಕೋಲಾರ:  ಹೈನುಗಾರಿಕೆ ಮತ್ತು ಪಶುಸಂಗೋಪಣೆಯಿಂದ ಸ್ವಾವಲಂಬನೆ ಜೀವನಸಾಧ್ಯ

Source: shabbir | By Arshad Koppa | Published on 18th October 2017, 8:32 AM | State News |

ಶ್ರೀನಿವಾಸಪುರ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಕಸಬಾ ವಲಯದ ಬರುವ ಗಾಂಡ್ಲಹಳ್ಳಿ ಗ್ರಾಮದಲ್ಲಿ ಕೃಷಿ ಹೈನುಗಾರಿಕೆ ವಿಚಾರ ಸಂಕಿರಣ ಕಾರ್ಯಕ್ರಮವನ್ನು ದಿನಾಂಕ: 16.10.2017 ರಂದು ಆಯೋಜನೆ ಮಾಡಿದ್ದು, ಶ್ರೀ ಸಿ.ಸೊಣ್ಣಪ್ಪ, ಹಾಲು ಉತ್ಪಾಧಾಕ ಸಹಕಾರ ಸಂಘ ಅಧ್ಯಕ್ಷರು, ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು ಹಾಗೂ ಶ್ರೀ ಯದುಪತಿ ರವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ, ಮಾತನಾಡುತ್ತಾ ಮಹಿಳೆಯರು ಸ್ವಶಕ್ತರಾಗಬೇಕು ಹೆಚ್ಚು ಹಾಲನ್ನು ಉತ್ಪಾಧಿಸಿ ಡೈರಿಗಳನ್ನು ಅಭಿವೃದ್ಧಿಗೊಳಿಸಬೇಕು, ನಮ್ಮ ಡೈರಿಗಳಿಂದ ಸಿಗುವಂತಹ ಅನುಕೂಲಗಳನ್ನು ಎಲ್ಲಾ ರೈತ ಬಾಂಧವರು ಪಡೆಯಬೇಕೆಂದು ತಿಳಿಸಿದರು. 
.      ತಾಲೂಕಿನ ಯೋಜನಾಧಿಕಾರಿಯಾದ ಶ್ರೀ ಸುರೇಶ್ ಶೆಟ್ಟಿ ರವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರಕ್ಕೆ ಪಾದಾರ್ಪಣೆ ಮಾಡಿ 3 ವರ್ಷ 3 ತಿಂಗಳಾಗಿದೆ. ನಮ್ಮ ಗ್ರಾಮಾಭಿವೃದ್ಧಿ ಯೋಜನೆ ಹಲವಾರು ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ಸುಮಾರು 60 ಜನರಿಗೆ ಮಾಶಾಸನ, ಹಲವಾರು ದೇವಸ್ಥಾನಗಳ ಜೀರ್ಣೋದ್ಧಾರ, ಹಾಲು ಉತ್ಪಾಧಕ ಕಟ್ಟಡಗಳಿಗೆ ಅನುದಾನ , ಕೆರೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಾನೂ ಇನ್ನು ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲಾಗುತ್ತಿದೆ ಎಂದು ತಿಳಿಸಿದರು. ನಂತರ ಹೈನುಗಾರಿಕೆ ಲಾಭದಾಯಕವಾಗಿದ್ದು, ಹೈನುಗಾರಿಕೆಗೆ ಯೋಜನೆಯಿಂದ ಪ್ರಗತಿನಿಧಿ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು. 
ಪಶುವೈದ್ಯಾಧಿಕಾರಿಗಳಾದ ಶ್ರೀ ಪ್ರಸನ್ನ ಕುಮಾರ್ ರವರು ನಮ್ಮ ರೈತರು ಲಾಭದಾಯಕ ಪಶುಸಂಗೋಪಣೆ ಹೇಗೆ ಮಾಡಬೇಕು ಮತು ನಮ್ಮ ದೇಶಿಯ ತಳಿಗಳ ಬಗ್ಗೆ ಹಾಗೂ ಹೆಚ್ಚು ಇಳುವರಿ ಕೊಡುವ ಹಸುಗಳ ಸಂರಕ್ಷಣೆ ಹೇಗೆ ಮಾಡುವುದು, ಕಾಲು ಬಾಯಿ, ಕೆಚ್ಚಲುಬಾವು, ಮಲೇರಿಯಾ ಕಾಯಿಲೆ ಇತ್ಯಾಧಿ ರೋಗಗಳ ಲಕ್ಷಣಗಳ ಬಗ್ಗೆ  & ಅವುಗಳ ನಿಯಂತ್ರಣಗಳ ಬಗ್ಗೆ ತಿಳಿಸಿದರು ನಂತರ ಹಸುಗಳು ಕರು ಹಾಕುವಾಗ ಯಾವ ಯಾವ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕೆಂದು ತಿಳಿಸಿದರು. 
     ರಾಜ್ಯ ಶಿಕ್ಷಕರ ಸಂಘದ ಉಪಾಧ್ಯಕ್ಷರಾದ ಶ್ರೀ ಕೆ.ಹೆಚ್ ಸಂಪತ್ ಕುಮಾರ್ ರವರು ಮಾತನಾಡುತ್ತಾ, ಎಲ್ಲಾ ಸದಸ್ಯರು ಹೈನುಗಾರಿಕೆ ಕೈಗೊಂಡು ಉತ್ತಮವಾದ ಲಾಭದಾಯಕವಾದ ಒಂದು ಸ್ವ ಉದ್ಯೋಗ ಕೈಗೊಳ್ಳಬೇಕೆಂದು ತಿಳಿಸಿದರು. 
     ಹಾಲು ಒಕ್ಕೂಟ ಸಹಕಾರ ಸಂಘದ ವಿಸ್ತರಣಾಧಿಕಾರಿಯಾದ ಶ್ರೀ ನಾರಾಯಣಸ್ವಾಮಿ ರವರು ಮಾತನಾಡುತ್ತಾ, ಹಸುಗಳ ಪೋಷಣೆಯಲ್ಲಿ ರೈತ ಮಹಿಳೆಯ ಪಾತ್ರ ಬಹು ಮುಖ್ಯವಾದದ್ದು ಎಂದು ತಿಳಿಸಿದರು.
  
ಹಸಿರು ಇಂದನಗಳಾದ ಸೋಲಾರ್ ಮತ್ತು ಗ್ರೀನ್‍ವೇ ಕುಕ್‍ಸ್ಟವ್ ಬಗ್ಗೆ ನಾರಾಯಣಸ್ವಾಮಿ ರವರು ಮಾಹಿತಿ ನೀಡಿದರು. 
      
ಮುಖ್ಯ ಉಪಸ್ಥಿತಿ: ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀಮತಿ ಭಾಗ್ಯಮ್ಮ ನಾಗರಾಜ್, ಗಾಂಡ್ಲಹಳ್ಳಿ ಹಾಲು ಉತ್ಪಾಧಕರ ಸಹಕಾರ ಸಂಘದ ಕಾರ್ಯದರ್ಶಿಯಾದ ಶ್ರೀ ಎಂ ಲಕ್ಷ್ಮೀನಾರಾಯಣ, ಕೋಸ್ತೇನಹಳ್ಳಿ ಮಹಿಳಾ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಶ್ರೀಮತಿ ಶೋಭ, ಕೋಸ್ತೇನಹಳ್ಳಿ  ಮಹಿಳಾ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿಯಾದ ಶ್ರೀಮತಿ ಸುಜಾತಮ್ಮ ರವರು, ಆರಮಾಕಲಹಳ್ಳಿ ಹಾಲು ಉತ್ಪಾಧಕ ಸಹಕಾರ ಸಂಘದ ಅಧ್ಯಕ್ಷರಾದ ನಾರಾಯಣಸ್ವಾಮಿ, ವಲಯದ ಮೇಲ್ವಿಚಾರಕರಾದ ನಾಗರಾಜ್ ಕೃಷಿ ಮೇಲ್ವಿಚಾರಕರಾದ ಯೋಗೇಶ್ ವಲಯದ , ಒಕ್ಕೂಟದ ಅಧ್ಯಕ್ಷರು ಹಾಗೂ ಸೇವಾಪ್ರತಿನಿಧಿಗಳು ಉಪಸ್ಥಿತಿಯಲ್ಲಿದ್ದರು.

ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ.

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...