ಕೋಲಾರ:ಇನ್ಫೋಸಿಸ್ ಪ್ರತಿಷ್ಠಾನದಿಂದ ಸರ್ಕಾರಿ ಪ್ರೌಢಶಾಲೆಗಳಲ್ಲಿ ನೂತನ ಪ್ರಯೋಗಾಲಯ ನಿರ್ಮಾಣ

Source: shabbir ahmed | By Arshad Koppa | Published on 24th February 2017, 1:22 PM | State News | Special Report |

ಮನುಷ್ಯನ ಜೀವನದಲ್ಲಿ ವಿದ್ಯೆಯೊಂದೇ ಸ್ಥಿರ ಬೇರೆ ಯಾವುದು ಸ್ಥಿರವಲ್ಲ


ಕೋಲಾರ, ಫೆಬ್ರವರಿ 23 (ಕರ್ನಾಟಕ ವಾರ್ತೆ) :ಜೀವನದಲ್ಲಿ ವಿದ್ಯೆಯೊಂದೇ ಸ್ಥಿರವಾಗಿ ಉಳಿಯುವುದು ಬೇರೆ ಯಾವುದೂ ಸ್ಥಿರವಾಗಿ ಉಳಿಯುವುದಿಲ್ಲ ಎಂದು ಬೆಂಗಳೂರಿನ ಇನ್ಫೋಸಿಸ್ ಪ್ರತಿಷ್ಠಾನ ಅಧ್ಯಕ್ಷರಾದ ಸುಧಾಮೂರ್ತಿ ಅವರು ಅಭಿಪ್ರಾಯಿಸಿದರು. 


    ಶ್ರೀನಿವಾಸಪುರ ತಾಲ್ಲೂಕಿನ ಅಡ್ಡಗಲ್‍ನ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಇನ್ಫೋಸಿಸ್ ಪ್ರತಿಷ್ಠಾನ ಇವರು ದತ್ತಿ ರೂಪದಲ್ಲಿ ನಿರ್ಮಿಸಿರುವ ಸರ್ಕಾರಿ ಪ್ರೌಢಶಾಲಾ ಪ್ರಯೋಗಾಲಯದ ನೂತನ ಕಟ್ಟಡವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು. 


    ಮನುಷ್ಯನ ಜೀವನದಲ್ಲಿ ಅಧಿಕಾರ, ಹಣ, ಆಸ್ತಿ, ಯೌವ್ವನ, ರೂಪ ಇದ್ಯಾವುದೂ ಕೊನೆಯವರೆಗೂ ಉಳಿಯುವುದಿಲ್ಲ. ವಿದ್ಯೆಯೊಂದೇ ಕೊನೆಯವರೆಗೂ ಶಾಶ್ವತವಾಗಿ ಉಳಿಯುವುದು. ವಿದ್ಯಾದಾನ ನೀಡುವ ವೀರರೇ ಅಧ್ಯಾಪಕರು. ಹಾಗಾಗಿ ಅವರಿಗೆ ಎಂದಿಗೂ ಋಣ ಯಾಗಿರಬೇಕು ಎಂದರು. 
    ಅಧ್ಯಾಪಕರು ನಿಸ್ಸಂಷಯವಾಗಿ ಹಾಗೂ ನಿಸ್ಕಲ್ಮಶವಾಗಿ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಬೇಕು. ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಪ್ರಯೋಗಾಲಯಗಳನ್ನು ನಿರ್ಮಿಸಲಾಗಿದ್ದು ಇದನ್ನು ಸೂಕ್ತವಾಗಿ ಬಳಕೆ ಮಾಡಿಕೊಂಡರೆ ಸಾಕು ಅದೇ ನಮಗೆ ನೀಡುವ ನಿಜವಾದ ಕೊಡುಗೆ ಎಂದು ನುಡಿದರು. 
    ಸಮಾಜದಲ್ಲಿ ಪ್ರತಿಯೊಬ್ಬ ಮನುಷ್ಯನೂ ತನಗಾಗಿ ಮಾಡಿಕೊಳ್ಳುವುದನ್ನು ಬಿಟ್ಟು ಇತರರಿಗಾಗಿ ಮಾಡಬೇಕು. ಆಗ ಮಾತ್ರ ಒಳ್ಳೆಯ ಹೆಸರನ್ನು ಗಳಿಸಲು ಸಾಧ್ಯ. ನದಿ ಹರಿಯುವುದು, ಮರ ಫಸಲು ನೀಡುವುದು, ಹಸು ಹಾಲು ಕೊಡುವುದು ಇವ್ಯಾವುದೂ ಸಹ ತನಗಾಗಿ ಮಾಡಿಕೊಳ್ಳುವುದಿಲ್ಲ. ಇನ್ಫೋಸಿಸ್ ಸಹ ಅದೇ ರೀತಿ ಜನರ ಶ್ರೇಯಸ್ಸಿಗಾಗಿ ಮಾಡುತ್ತಿದೆ ಎಂದು ತಿಳಿಸಿದರು. 


    ಕರ್ನಾಟಕದ ಮೂಲೆಯಲ್ಲಿನ ಬರಗಾಲದಲ್ಲಿ ಬೆಂದಿರುವ ನದಿನಾಲೆಗಳು ಹರಿಯದ ಜಿಲ್ಲೆ ಕೋಲಾರ. ಇಂತಹ ಒಂದು ಜಿಲ್ಲೆಯ ಅಭಿವೃದ್ದಿಗೆ ಶ್ರಮಿಸಬೇಕಾದುದು ಪ್ರತಿಯೊಬ್ಬರ ಕರ್ತವ್ಯ. ಅದಕ್ಕಾಗಿಯೇ ಇನ್ಫೋಸಿಸ್‍ನಿಂದ ಸರ್ಕಾರಿ ಶಾಲೆಗಳಿಗೆ ಪ್ರಯೋಗಾಲವನ್ನು ನಿರ್ಮಿಸಿಕೊಡಲಾಗುತ್ತಿದೆ. ಇದಕ್ಕೆ ನೀಡಿರುವ ಹಣ ನಂದಲ್ಲ. ಅದು ಜನರಿಗಾಗಿ ಇಟ್ಟಿದ್ದು. ನಾನು ಅಧಿಕಾರಿದಲ್ಲಿ ಇರುವವರೆಗೂ ನನ್ನ ಕೈಲಾಗುವ ಸಹಾಯ ಮಾಡುವೆ ಎಂದರು. 
    ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾರ ಕೆ.ಆರ್.ರಮೇಶ್ ಕುಮಾರ್ ಅವರು ಮಾತನಾಡಿ, ಹಣ, ಜಾತಿ, ಪಕ್ಷ ಇತರೆ ವ್ಯಾಮೋಹ ಇದ್ದವರೆಲ್ಲಾ ದಾನಿಗಳಾಗಲು ಸಾಧ್ಯವಿಲ್ಲ. ದಾನ ಮಾಡುವ ಮತ್ತು ಮಾಡಿಸಿಕೊಳ್ಳುವವರಿಗೆ ಯೋಗ್ಯತೆ ಇರಬೇಕು. ಸಮಾಜದಲ್ಲಿ ಅನೇಕ ಮಂದಿ ಸ್ಥಿತಿವಂತರಿದ್ದಾರೆ. ಪ್ರಚಾರದ ಆಸೆಗಾಗಿ ದಾನ ಮಾಡಿದರೆ ಅದಕ್ಕೆ ಅರ್ಥ ಸಿಗುವುದಿಲ್ಲ. ಅತಂಹವರನ್ನು ಮೂರ್ಖರು ಎಂದರೆ ತಪ್ಪಾಗಲಾರದು ಎಂದರು. 


    ಸಮಾಜದ ಅಭಿವೃದ್ಧಿಗಾಗಿ ಕೈ ಜೋಡಿಸುವವರ ಸಂಖ್ಯೆ ಕಡಿಮೆಯಾಗಿದೆ. ಬಡ ಮಕ್ಕಳ ಶೈಕ್ಷಣ ಕ ಅಭಿವೃದ್ಧಿಗಾಗಿ ಇನ್ಫೋಸಿಸ್ ಸಂಸ್ಥೆಯ ಮಾಲೀಕರು ಕ್ಷೇತ್ರಕ್ಕೆ 5.5 ಕೋಟಿ ರೂ ವೆಚ್ಚದಲ್ಲಿ 11 ಪ್ರಯೋಗಲಾಯಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಅದೇ ರೀತಿ ಪ್ರತಿ ಸರ್ಕಾರಿ ಶಾಲೆಯ ಇಬ್ಬರು ಬಡ ಮಕ್ಕಳ ಶೈಕ್ಷಣ ಕ ಪ್ರಗತಿಗಾಗಿ ತಲಾ 10 ಸಾವಿರ ರೂಗಳನ್ನು ನೀಡುವುದಾಗಿ ಘೋಷಿಸಿದ್ದಾರೆ ಎಂದು ತಿಳಿಸಿದರು. 
    ಚಲನ ಚಿತ್ರ, ಟಿ.ವಿಗಳ ಮೂಲಕ ಎಳೆಯ ಮಕ್ಕಳಿಗೆ ಹಾಗೂ ಯುವಕರಿಗೆ ಸಮಾಜಿಕ ಕಳಕಳಿಯ ಬಗ್ಗೆ ನೀಡುತ್ತಿರುವ ಫಲಿತಾಂಶ ಶೂನ್ಯ. ವ್ಯವಸ್ಥೆಯೇ ಮಲಿನವಾಗಿ ಹೋಗಿದೆ. ಗೋವಿನ ಪದ್ಯದಲ್ಲಿ ಇರುವ ಸಾರಾಂಶವನ್ನು ನಾವೆಲ್ಲಾ ಇಂದಿನ ದಿನಗಳಲ್ಲಿ ಅರಿಯಬೇಕಾದ ಅವಶ್ಯಕತೆ ಇದೆ ಎಂದರು. 
    ಇನ್ಫೋಸಿಸ್ ಸಂಸ್ಥೆ ರಾಷ್ಟ್ರ ವ್ಯಾಪಿ ವಿಸ್ತರಣೆಯಾಗಲು ಅವರ ಸೇವೆ ಕಾರಣವಾಗಿದೆ. ಈ ಮೊದಲು ಸಣ್ಣ ಸಂಸ್ಥೆಯಾಗಿ ಆರಂಭವಾದ ಸಂಸ್ಥೆ ಬಡ ಮಕ್ಕಳ ಬಗ್ಗೆ ಕಾಳಜಿವಹಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. 
    ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕ್ ಚಂದ್ರ ಅವರು ಮಾತನಾಡಿ, ಗಡಿಭಾಗದ ಜಿಲ್ಲೆಯಲ್ಲಿ ಇನ್ಫೋಸಿಸ್ ಪೌಂಡೇಶನ್ ಅವರು  ವಿದ್ಯಾರ್ಥಿಗಳಿಗಾಗಿ ಪ್ರಯೋಗಾಲಯಗಳನ್ನು ನಿರ್ಮಿಸಿಕೊಡುವ ಮೂಲಕ ಇತರೆ ಸಂಸ್ಥೆಗಳಿಗೆ ಮಾದರಿಯಾಗಿದ್ದಾರೆ. ಅಷ್ಟೇ ಅಲ್ಲದೆ ಇತರೆ ಸಂಸ್ಥೆಗಳಿಗೆ ದಾರಿ ದೀಪ ತೋರಿಸಿದ್ದಾರೆ ಎಂದು ನುಡಿದರು. 
    ಮಕ್ಕಳಿಗೆ ಕಲಿಯುವ ವಯಸ್ಸಿನಲ್ಲಿ ವಿಜ್ಞಾನದ ಬಗ್ಗೆ ಅರಿವು ಮೂಡಿಸಲು ಪ್ರಯೋಗಾಲಯಗಳನ್ನು ಮಾಡಿಕೊಟ್ಟಿದೆ. ಮಕ್ಕಳ ಬುನಾದಿಗೆ ಇದು ಸಾಕಷ್ಟು ಪ್ರಯೋಜಕಾರಿಯಾಗಲಿದೆ. ಈ ಎಲ್ಲಾ ಸೌಲಭ್ಯಗಳನ್ನು ಎಲ್ಲರೂ ಸೂಕ್ತವಾಗಿ ಸದ್ಬಳಕೆ ಮಾಡಿಕೊಳ್ಳಬೇಕಾಲ್ಲದೆ ಸಂರಕ್ಷಿಸಿಕೊಂಡು ಹೋಗಬೇಕು ಎಂದರು. 
    ಇನ್ಫೋಸಿಸ್ ಕಂಪನಿಯು ಶಿಕ್ಷಣಕ್ಕೆ ಸಂಬಂಧಿಸಿದಂತೆ ಪ್ರಯೋಗಾಲಯಗಳನ್ನು 11 ಸರ್ಕಾರಿ ಪ್ರೌಢಶಾಲೆಗಳಲ್ಲಿ ಸುಮಾರು 5 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸುತ್ತಿದೆ. ಇಂತಹ ಮಾದರಿ ವ್ಯವಸ್ಥೆಗಳನ್ನು ಮಾಡಲು ಬೇರೆ ಬೇರೆ ಸಂಸ್ಥೆಗಳೂ ಸಹ ಮುಂದೆ ಬರುವಂತಾಗಬೇಕು. ಅದಕ್ಕಾಗಿ ಪತ್ರಿಕಾ ಮಾಧ್ಯಮಗಳೂ ಸಹ ಶ್ರಮಿಸಬೇಕು ಎಂದು ತಿಳಿಸಿದರು. 


    ಇದೇ ಸಂದರ್ಭದಲ್ಲಿ ಕಳೆದ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದಿರುವ ಶಾಲೆಯಗಳ ಮುಖ್ಯೋಪಧ್ಯಾಯರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕøತಿ ಕಾರ್ಯಕ್ರಮಗಳು ಮೂಡಿಬಂದವು. 


    ಈ ಸಂದರ್ಭದಲ್ಲಿ ರಾಜ್ಯ ಪ್ರೌಢ ಶಾಲಾ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಫೀನೊಮೀನಾ ಲೋಬೊ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ, ಉಪ ವಿಭಾಗಾಧಿಕಾರಿ ಸಿ.ಎನ್.ಮಂಜುನಾಥ್, ಸದಸ್ಯ ನಾರಾಯಣಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಭಾರ ಉಪನಿರ್ದೇಶಕ ಕೆ.ಜಿ.ರಂಗಯ್ಯ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸುಗುಣ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ಕೃಷ್ಣಮೂರ್ತಿ ಮುಂತಾದವರು ಇದ್ದರು.

Read These Next

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...