ಕೋಲಾರ:ಮಾದ್ಯಮ ಅಕಾಡೆಮಿ ಸದಸ್ಯ  ಕೆ.ಎಸ್ ಗಣೇಶ್ ರಿಗೆ ರೈತ ಸಂಘದಿಂದ ಸನ್ಮಾನ

Source: shabbir | By Arshad Koppa | Published on 3rd August 2017, 7:47 AM | State News | Guest Editorial |

ಕೋಲಾರ.ಆ.2 ಮಾದ್ಯಮ ಅಕಾಡೆಮಿ ಸದಸ್ಯರನ್ನಾಗಿ ಸರ್ಕಾರ ನಾಮಕರಣ ಮಾಡಿರುವ ಕಾರ್ಯನಿರತ ಪತ್ರಕರ್ತರ ಸಂಘದ  ಅಧ್ಯಕ್ಷರಾದ ಕೆ.ಎಸ್ ಗಣೇಶ್‍ರವರನ್ನು ರೈತ ಸಂಘದಿಂದ ಉದಯವಾಣಿ  ಕಚೇರಿಯಲ್ಲಿ ಸನ್ಮಾನಿಸಲಾಯಿತು.


ಪ್ರಜಾಪ್ರಭುತ್ವದ 4ನೇ ಆದಾರ ಸ್ಥಂಭವಾಗಿರುವ ಪತ್ರಿಕೋದ್ಯಮದ ಮೇಲೆ ಜನಸಾಮಾನ್ಯರು ಇಂದಿನ ಭ್ರಷ್ಟ ವ್ಯವಸ್ಥೆಯಲ್ಲಿ ಅಪಾರ ನಂಬಿಕೆ ಇಟ್ಟಿದ್ದಾರೆ.  ಪತ್ರಿಕೋದ್ಯಮ ಎಂಬುವುದು ಹರಿತ ಕತ್ತಿಯ ಮೇಲೆ ಪ್ರತಿ ನಿತ್ಯ ನಡಿಗೆಯ ಬದುಕಾಗಿದ್ದು, ವ್ಯವಸ್ಥೆಯ ಮತ್ತು ಶೋಷಣೆಯ ಕರಾಳ ಮುಖವನ್ನು ಜಗತ್ತಿನ ಸಾಮಾನ್ಯ ಜನರಿಗೆ ತಲುಪಿಸುವಲ್ಲಿ ಪತ್ರಕರ್ತರ ಪಾತ್ರ ಅಪಾರವಾಗಿದೆ ಇಂದು ಪತ್ರಿಕೋದ್ಯಮ ಕೆಲವು ಬೆರಳೆಣ ಕೆಯ ಮಂದಿಯಿಂದ ವಸ್ತು ನಿಷ್ಟ ವರಧಿಗಾರರಿಗೆ ಕಪ್ಪು ಚುಕ್ಕೆಗಳಾಗಿ ಪರಿಣಮಿಸುತ್ತಿದ್ದಾರೆ.  ಆ ಕಪ್ಪು ಚುಕ್ಕೆಯ ವ್ಯಕ್ತಿಗಳನ್ನು ಪತ್ರಿಕಾ ರಂಗದಿಂದ ದೂರವಿಡುವಂತಹ ಕೆಲಸ ಪ್ರಜ್ಞಾವಂತ ಪತ್ರಕರ್ತರಿಂದ ಆಗಬೇಕು ಆಗ ಜನ ಸಾಮಾನ್ಯರು ಪತ್ರಿಕೋದ್ಯಮ ಮೇಲೆ ಇಟ್ಟಿರುವ ನಂಬಿಕೆಗೆ ಬಲ ಬಂದು ಈ ಕರಾಳ ವ್ಯವಸ್ಥೆಗೆ ಹೊಸ ಆಯಾಮವನ್ನು ನೀಡಬಹುದೆಂದು ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ ಅಭಿಪ್ರಾಯಪಟ್ಟರು.
ಪತ್ರಿಕೋದ್ಯಮದ ಕೆಲಸಕ್ಕೆ ಹೊಸ ಹೊಸ ಯುವ ಜನಾಂಗವನ್ನು ಸೃಷ್ಟಿ ಮಾಡುವಂತಹ ಕೆಲಸ ಪತ್ರಕರ್ತರಿಂದ ಆಗಬೇಕು ನಿರ್ಭಯವಾಗಿ ವರಧಿ ಮಾಡುವ ಪತ್ರಕರ್ತರ ನೆರವಿಗೆ ಪತ್ರಿಕೋದ್ಯಮದ ಹಿರಿಯ ಜೀವಿಗಳು ಬೆಂಗಾವಲಾಗಿ ನಿಂತು ಅವರಿಗೆ ದೈರ್ಯ ತುಂಬುವ ಕೆಲಸಕ್ಕೆ ಮುಂದಾಗ ಬೇಕೆಂದು ಜಿಲ್ಲಾ ಸಂಚಾಲಕ ಕೆ. ಶ್ರೀನಿವಾಸಗೌಡ ತಿಳಿಸಿದರು.
ಸನ್ಮಾನ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷೆ ಎ. ನಳಿನಿ, ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್, ಕೋರಗಾಂಡಳ್ಳಿ ಮಂಜು, ಕೆಂಬೋಡಿ ಕೃಷ್ಣೇಗೌಡ, ಎಂ ಹೊಸಹಳ್ಳಿ ವೆಂಕಟೇಶ್, ಯಾರಂಘಟ್ಟ ಮಂಜುನಾಥ್, ನರಸಾಪುರ ಪುರುಷೋತ್ತಮ್, ಈಕಂಬಳ್ಳಿ ಮಂಜು ಉಪಸ್ಥಿತರಿದ್ದರು.

ಕೆ. ಶ್ರೀನಿವಾಸಗೌಡ,

ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...