ಕೋಲಾರ:ಗಾಂಧಿ ವಿಚಾರ ಸಂಸ್ಕಾರ ಪರೀಕ್ಷೆ

Source: shabbir | By Arshad Koppa | Published on 17th July 2017, 8:48 AM | State News | Guest Editorial |

ಕೋಲಾರ, ಜುಲೈ 14:ಪ್ರಸಕ್ತ ಸಾಲಿನಲ್ಲಿ ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ರಾಷ್ಟ್ರೀಯ ಸೇವಾ ಯೋಜನೆ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಸಂಯುಕ್ತಾಶ್ರಯದಲ್ಲಿ ಗಾಂಧಿ ವಿಚಾರ ಸಂಸ್ಕಾರ ಪರೀಕ್ಷೆಯನ್ನು ನಡೆಸಲಾಗುತ್ತದೆ.
ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಒಂದು ಹಂತದಲ್ಲಿ ಹಾಗೂ ಪದವಿ ವಿದ್ಯಾರ್ಥಿಗಳಿಗಾಗಿ ಮತ್ತೊಂದು ಹಂತದಲ್ಲಿ ಈ ಪರೀಕ್ಷೆಯನ್ನು ನಡೆಸಲಾಗುವುದು. ಈ ಪರೀಕ್ಷೆಯು ಸಂಸ್ಥೆಗಳ ಹಂತದಲ್ಲಿ, ತಾಲ್ಲೂಕು, ಜಿಲ್ಲೆ ಹಂತದಲ್ಲಿ ನಡೆಯಲಿದೆ. 
ಈ ಪರೀಕ್ಷೆಗಾಗಿ ನೋಂದಾಯಿಸಿಕೊಂಡ ವಿದ್ಯಾರ್ಥಿಗಳಿಗೆ ಅವರ ಮಟ್ಟಕ್ಕೆ ಹೊಂದುವ ಗಾಂಧೀಜಿಯವರನ್ನು ಕುರಿತ ಪುಸ್ತಕಗಳನ್ನು ಒದಗಿಸಲಾಗುವುದು. ಪುಸ್ತಕದ ಬೆಲೆಯನ್ನು ಮಾತ್ರ ನೋಂದಣ  ಶುಲ್ಕವಾಗಿ ಸಂಗ್ರಹಿಸಲಾಗುತ್ತದೆ. ವಿದ್ಯಾರ್ಥಿಗಳು ಪುಸ್ತಕವನ್ನು ಓದಿ ನಿಗದಿಪಡಿಸಿದ ದಿನಾಂಕದಂದು ಪರೀಕ್ಷೆಯನ್ನು ಬರೆಯಬಹುದಾಗಿರುತ್ತದೆ. 
ನೋಂದಣ  ಶುಲ್ಕ ಪ್ರಾಥಮಿಕ ವಿಭಾಗಕ್ಕೆ 20 ರೂ, ಪ್ರೌಢಶಾಲೆ ಮತ್ತು ಪದವಿ ಪೂರ್ವ ವಿಭಾಗಕ್ಕೆ 40 ರೂ, ಪದವಿ ವಿಭಾಗಕ್ಕೆ 45 ರೂ, ಸ್ನಾತಕೊತ್ತರ ಹಾಗೂ ಸಾರ್ವಜನಿಕರಿಗೆ 70 ರೂ ಆಗಿರುತ್ತದೆ. ಹೆಚ್ಚಿನ ವಿವರಗಳಿಗಾಗಿ ರಾಜ್ಯ ಸಂಯೋಜಕರಾದ ಡಾ.ಅಬೀದ ಬೇಗಮ್ 9035912903 ಮತ್ತು ಈ. ಬಸವರಾಜು 9448957666 ಮೂಲಕ ಸಂಪರ್ಕಿಸಬಹುದಾಗಿದೆ. 

ಬೆಸ್ಕಾಂ ಗ್ರಾಹಕ ಸಂವಾದ ಸಭೆ
ಕೋಲಾರ, ಜುಲೈ 14 :ಬೆಂಗಳೂರು ವಿದ್ಯುತ್ ಕಂಪನಿ ವಾಣ ಜ್ಯ, ಕಾರ್ಯ ಮತ್ತು ಪಾಲನೆ ವಿಭಾಗವು ಕೋಲಾರದ ವ್ಯಾಪ್ತಿಯಲ್ಲಿ ಬರುವ ಕೋಲಾರ ಗ್ರಾಮೀಣ ಉಪ-ವಿಭಾಗ, ಕೋಲಾರ ನಗರ ಉಪ-ವಿಭಾಗ ಮತ್ತು ಶ್ರೀನಿವಾಸಪುರ ಉಪವಿಭಾಗ ಕಚೇರಿಗಳಲ್ಲಿ ದಿನಾಂಕ 15-07-2017 ರಂದು ಮಧ್ಯಾಹ್ನ 03 ರಿಂದ 05 ಗಂಟೆಯವರಿಗೆ  ಗ್ರಾಹಕರ ಸಂವಾದ ಸಭೆಯನ್ನು ಹಮ್ಮಿಕೊಳ್ಳಲಾಗಿದ್ದು ಸದರಿ ಸಭೆಯಲ್ಲಿ ಗ್ರಾಹಕರ ವಿದ್ಯುತ್ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸಲು ವಿಧಾನಸಭಾ ಕ್ಷೇತ್ರ ಹಾಗೂ ಶಾಖಾ ಕಚೇರಿ ಗ್ರಾಹಕ ಸಲಹಾ ಸಮಿತಿ ಸದಸ್ಯರು ಸಹ ಭಾಗವಹಿಸುತ್ತಾರೆ. 
ಸದರಿ ಸಭೆಗೆ ಬೆವಿಕಂ ಕೋಲಾರ ಮತ್ತು ಶ್ರೀನಿವಾಸಪುರ ತಾಲ್ಲೂಕುಗಳ ವಿದ್ಯುತ್ ಗ್ರಾಹಕರು ಹಾಜರಾಗಿ ವಿದ್ಯುತ್ ಸಂಬಂಧಿಸಿದ ದೂರುಗಳನ್ನು ಸಲ್ಲಿಸಿ ಬಗೆಹರಿಸಿಕೊಳ್ಳಬೇಕಾಗಿ ಇಂಜಿನಿಯರ್ (ವಿ), ವಿಭಾಗದ ಕಾರ್ಯ ನಿರ್ವಾಹಕ ಅಭಿಯಂತರರು ಕೋರಿದ್ದಾರೆ. 

ಕೋಲಾರ: ಗುರು ಶಿಷ್ಯ ಪರಂಪರೆ ಯೋಜನೆ: ಕಲಿಕಾ ಶಿಬಿರಕ್ಕೆ ಅರ್ಜಿ ಆಹ್ವಾನ 
ಕೋಲಾರ, ಜುಲೈ 14 :2017-18 ನೇ ಸಾಲಿನಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ ಜಾನಪದ ತರಬೇತಿ ಹಾಗೂ ಸಂಗೀತ ತರಬೇತಿಯನ್ನು 6 ತಿಂಗಳ ಕಾಲ ಪರಿಶಿಷ್ಟ ಪಂಗಡದ ಕಲಿಕಾ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಕನಿಷ್ಠ 12 ರಿಂದ ಗರಿಷ್ಠ 28 ವರ್ಷ ವಯಸ್ಸಿನವರಾಗಿರಬೇಕಲ್ಲದೆ 5 ನೇ ತರಗತಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಅರ್ಜಿಗಳನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆಯಲ್ಲಿ ಪಡೆದು ಜು.25 ರೊಳಗಾಗಿ ಸಲ್ಲಿಸಬಹುದಾಗಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ರಾಂ ಸಿಂಧೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
 

Read These Next

ಶಿಕ್ಷಕರ ಬಳಗದಿಂದ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‍ಕುಮಾರ್ ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಯವರ ಅಭಿನಂದನಾ ಸಮಾರಂಭ

ಶ್ರೀನಿವಾಸಪುರ :   ಪಟ್ಟಣದ ಶ್ರೀ ಶ್ರೀನಿವಾಸಕಲ್ಯಾಣ ಮಂಟಪದಲ್ಲಿ ಶಿಕ್ಷಕರ ಬಳಗದಿಂದ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‍ಕುಮಾರ್ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...