ಕೋಲಾರ:ವೃತ್ತಿ ಕೌಶಲ್ಯ ತರಬೇತಿ ಪಡೆಯುವ ಮೂಲಕ ಆರ್ಥಿಕ ಸದೃಢತೆ ಸಾಧ್ಯ- ಪ್ರೊ.ಬಿ.ವಿ. ಹೇಮಾಮಾಲಿನಿ 

Source: shabbir | By Arshad Koppa | Published on 14th November 2017, 8:17 AM | State News |

ಕೋಲಾರ,ನ.13: ಇಂದು ಸರ್ಕಾರಿ ಉದ್ಯೋಗವೇ ಬೇಕೆನ್ನುವುದು ಎಲ್ಲಾ ವಿದ್ಯಾವಂತರ ಕನಸು ಆದರೆ ಅದು ಸುಲಭ ಅಲ್ಲ. ಎಲ್ಲರಿಗೂ ಸಾಧ್ಯವಿಲ್ಲ. ಸಾಧ್ಯವಾದರೂ ಆಯ್ಕೆಯಂತೆ ಅಗುವುದಿಲ್ಲ ಕೆಲಸ ಅದರೂ ನಿರ್ವಹಣೆ ಅಷ್ಟು ಸುಲಭ ಅಲ್ಲ, ಸರ್ಕಾರಿ ಕೆಲಸ ಸಿಗಲ್ಲಿಲ್ಲ ಎಂದು ಚಿಂತಿಸುವುದು ಬೇಡ ಬೇರೆ ಬೇರೆ ವೃತ್ತಿ ಕೌಶಲ್ಯ ತರಬೇತಿಗಳನ್ನ ಪಡೆದು ಅವುಗಳನ್ನು ಸಕಾರಗೊಳಿಸಿಕೊಂಡರೆ ಆರ್ಥಿಕವಾಗಿ ಉತ್ತಮ ಸದೃಡತೆಯಿಂದ ಜೀವನ ರೂಪಿಸಿಕೊಳ್ಳಬಹುದು ಎಂದು ಸರ್ಕಾರಿ ಮಹಿಳಾ ಕಾಲೇಜಿನ ಸಹಾಯಕ ಪ್ರಾಧ್ಯಪಕರಾದ ಪ್ರೊ.ಬಿ.ವಿ. ಹೇಮಾಮಾಲಿನಿ ಮಹಿಳೆಯರಿಗೆ ಕರೆ ನೀಡಿದರು.


      ಮಾನವ ಸಂಪನ್ಮೂಲ ಅಭಿವೃದ್ದಿ ಕೇಂದ್ರ, ಜೀವನ ಕೌಶಲ್ಯ ಅಕಾಡೆಮಿ ಯಿಂದ ನಗರದ ಅಂತರಗಂಗೆ ರಸ್ತೆಯ ಸುಗುಣ ನರ್ಸಿಂಗ್ ಹೊಂ ಕಟ್ಟಡದ ತರಬೇತಿ ಕೇಂದ್ರದಲ್ಲಿ ಮಹಿಳೆಯರಿಗೆ ಉಚಿತವಾಗಿ ಏರ್ಪಡಿಸಿದ್ದ ಮೆಹಂದಿ ಕೌಶಲ್ಯ ತರಭೇತಿಯನ್ನು ಮೆಹಂದಿಯನ್ನು ಕೈಗೆ ಹಾಕಿಸಿಕೊಳೂವ ಮುಖಾಂತರ ಕಾರ್ಯಕ್ರಮದ ಉದ್ಗಾಟನೆಗೆ ಚಾಲನೆ ನೀಡಿ ಮತನಾಡಿದರು.     ಮೆಹಂದಿ ಕಲೆ ಕ್ರಿಸ್ತಶಕ 1300 ವರ್ಷಗಳ ಹಳೆಯದಾಗಿದೆ ಯಾವುದೇ ಮದುವೆಯಾದರು ಈ ದಿನಗಳಲ್ಲಿ ಮೆಹಂದಿ ತುಂಬಾ ಪ್ಯಾಷನ್ ಆಗಿದೆ. ಚಿತ್ರಕಾರ ಕುಂಚ ಹೇಗೆ ಕೆಲಸ ಮಾಡುತ್ತದೆಯೋ ಆದೇ ರೀತಿ ಮೆಹಂದಿ ಕಲೆಯ ಗೆರೆಗಳನ್ನು ಎಳೆಯುವುದು ಅಷ್ಟೇ ಮುಖ್ಯ ಮೆಹಂದಿಯನ್ನು ಒಂದು ಕಲೆಯಾಗಿ ರೂಪಿಸಿಕೊಳ್ಳವುದಲ್ಲದೆ ಈ ಕೇಂದ್ರದ ಇತರೆ ಕೌಶಲ್ಯ ಕಲೆಗಳನ್ನು ಕಲಿಯುವ ಮುಖಂತರ ಮಹಿಳೆಯರು ಆರ್ಥಿಕ ಸ್ವಾವಲಂಭಿಗಳಗಬೇಕೆಂದುರು.
   ಜನವಾದಿ ಸಂಘಟನೆಯ ರಾಜ್ಯಧ್ಯಕ್ಷೆ ವಿ.ಗೀತಾ ಮಾತನಾಡುತ್ತಾ ಯಾವುದೇ ಹೆಣ್ಣು ಹುಟ್ಟಿದರೆ ತಂದೆ ತಾಯಿಯರು ಒಡವೆ ಮದುವೆ ಎಂದು ಚಿಂತಿಸುವುದನ್ನು ಬಿಟ್ಟು ಉತ್ತಮ ಶಿಕ್ಷಣ ಮತ್ತು ಬಹುವಿದದ ಕೌಶಲ್ಯ ಕಲೆಗಳನ್ನು ಕಲಿಯಲು ಅವಕಾಶ ಮಡಿಕೊಟ್ಟು ಮಕ್ಕಳಿಗೆ ಬದುಕು ರೂಪಿಸುಕೊಳುವುದನ್ನು ಕಲಿಸಬೇಕೆಂದರು. ಅಲ್ಲದೆ ಈ ಕೇಂದ್ರದಲ್ಲಿ ತರಬೇತಿ ಪಡೆದವರು ವಿವಿಧ ರೀತಿಯ ಜಿವನ ರೂಪಿಸಿಕೊಂಡಿರುವುದನ್ನು ನೈಜವಾಗಿ ವಿವರಿಸಿ ಕಲಿಕಾರ್ತಿಗಳು ಕಾಟಚಾರಕ್ಕೆ ಕಲಿಯದೆ ಪರಿಪಕ್ವತೆಯಿಂದ ಕಲಿಯುವಂತೆ ತಿಳಿಸಿದರು.
   ನಗರದ ಮೆಥೋಡಿಸ್ಟ್ ಕಾಲೇಜು ಪ್ರಾಂಶುಪಾಲೆ ಶಾಲಿನಿಇಡಿತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಉತ್ತಮ ಕೌಶಲ್ಯ ತರಬೇತಿ ಪಡಿದವರಿಗೆ ಜಿಲೆ,್ಲ ರಾಜ್ಯದಲ್ಲಿ ಅಲ್ಲದೆ ದೇಶ ವಿದೇಶಗಳಲ್ಲಿ ತುಂಬಾ ಬೇಡಿಕೆ ಇದೆ. ಮೆಹಂದಿ ಜೊತೆಗೆ ಟೈಲರಿಂಗ್, ಬ್ಯುಟೀಷನ್, ಪ್ಯಾಷನ್ ಡಿಸೈನ್, ಸಾರಿ ವರ್ಕ್, ಆರಿ ವರ್ಕ್, ಕಸೂತಿ ಇವೆಲವನ್ನು ಒಟ್ಟಿಗೆ ಕಲಿಯುವಂತೆ ತಿಳಿಸಿದರು.
    ಸಂಸ್ಥೆಯ ವ್ಯವಸ್ಥಾಪಕ ಎಂ.ವಿ.ನಾರಾಯಣಸ್ವಾಮಿ, ಪಿ.ಆರತಿ ವೇದಿಕೆಯಲ್ಲಿದ್ದರು. ಶಕ್ಷಕ ಸಿಬ್ಬಂದಿಯಾದ ಮಣಿಯಮ್ಮ, ಸೀಮಾ, ಅಂಜುಮ್, ಅಶ್ವಿನಿ, ಸಮಿನಾ, ನಾಗವೇಣಿ, ಮಾಲ, ಮನೋಜ್ ಕುಮಾರ್ ಹಾಗೂ ಶಿಬಿರದಲ್ಲಿ ನೂರಾರು ಮಹಿಳೆ / ವಿದ್ಯಾರ್ಥಿನಿಯರು ಭಾಗವಹಿಸಿದರು. ತರಬೇತಿ ಶಿಕ್ಷಕಿ ಶ್ರೀದೇವಿ ಸ್ವಾಗತಿಸಿ ನಿರುಪಿಸಿದರು. 
    
ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ

Read These Next

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...