ಕೋಲಾರ: ವಿದೇಶದಲ್ಲಿ ಉನ್ನತ ವಿದ್ಯಾಭ್ಯಾಸ ಮಾಡುವವರಿಗೆ ಹೆಚ್ಚಿನ ಆರ್ಥಿಕ ನೆರವು: ಜೆ ಹುಚ್ಚಪ್ಪ

Source: shabbir | By Arshad Koppa | Published on 23rd June 2017, 7:39 PM | State News | Special Report |

ಕೋಲಾರ, ಜೂನ್ 21 :  ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಹೋಗುವವರಿಗೆ 18 ರಿಂದ 19 ¯ಕ್ಷದವರೆಗೆ ಸಾಲದ ನೆರವು ನೀಡಲಾಗುವುದು ಎಂದು ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಜೆ. ಹುಚ್ಚಪ್ಪ ತಿಳಿಸಿದರು.
        ನಗರದ ಪ್ರವಾಸಿ ಮಂದಿರದಲ್ಲಿ ಬುದವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡುವವರಲ್ಲಿ ಪುರುಷರಿಗೆ 4% ಹಾಗೂ ಮಹಿಳೆಯರಿಗೆ 3.5% ಬಡ್ಡಿ ದರದಲ್ಲಿ ಆರ್ಥಿಕ ನೆರವು ನೀಡಲಾಗುವುದು. ರಾಜ್ಯದಲ್ಲಿ ಸಿ.ಇ.ಟಿ ಮೂಲಕ ಸರ್ಕಾರಿ ಕೋಟಾದಲ್ಲಿ ಆಯ್ಕೆಯಾದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೂ ಶೈಕ್ಷಣಿಕ ಸಾಲದ ನೆರವು ನೀಡಲಾಗುವುದು.  ಈ ಉದ್ದೇಶಕ್ಕೆ ಈಗಾಗಲೇ ಶಿಕ್ಷಣ ಇಲಾಖೆಗೆ 5 ಕೋಟಿ ನೀಡಲಾಗಿದೆ ಎಂದರು. 
       ನಮ್ಮ ನಿಗಮದಲ್ಲಿ ಲಭ್ಯವಿರುವ ಎಲ್ಲಾ ಸೌಲಭ್ಯಗಳನ್ನು ಎಲ್ಲರಿಗೂ ತಲುಪಿಸುವ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದೇವೆ. ಎಲ್ಲಾ ವರ್ಗದ ಆರ್ಥಿಕವಾಗಿ ಹಿಂದುಳಿದವರೂ ಸೌಲಭ್ಯ ಪಡೆಯಬಹುದು. ಸೌಲಭ್ಯ ಪಡೆಯಲು ಬಿ.ಪಿ.ಎಲ್ ಕಾರ್ಡ್ ಹೊಂದಿರಬೇಕು ಹಾಗೂ ಇನ್‍ಕಮ್ ಟ್ಯಾಕ್ಸ್ ವ್ಯಾಪ್ತಿಗೆ ಒಳಪಟ್ಟಿರಬಾರದು ಎಂದರು. 
    ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ 80 ಲಕ್ಷ ಹಣ ನೀಡಿದ್ದೇವೆ. ಕೋಲಾರ ಜಿಲ್ಲೆಗೆ ಒಟ್ಟು 8.83 ಕೋಟಿಯನ್ನು ನಿಗಮದ ವತಿಯಿಂದ ನೀಡಿದ್ದೇವೆ. ಈ ಹಣವನ್ನು ಎಂ.ಎಲ್.ಎ, ಎಂ.ಪಿ, ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳನ್ನು ಒಳಗೊಂಡ ಕಮಿಟಿ ಫಲಾನುಭವಿಗಳನ್ನು ಆಯ್ಕೆ ಮಾಡುತ್ತದೆ. ಈಗಾಗಲೆ 16 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಮಾಹಿತಿ ನೀಡಿದ್ದೇವೆ ಎಂದರು.

ವಿಶೇಷ ಗೃಹ ನಿರ್ಮಾಣ ಯೋಜನೆ : ಕುಶಲ ಕರ್ಮಿಗಳಿಂದ ಅರ್ಜಿ ಆಹ್ವಾನ
ಕೋಲಾರ, ಜೂನ್ 21 :2016-17ನೇ ಸಾಲಿಗೆ ವಿಶೇಷ ಗೃಹ ನಿರ್ಮಾಣ ಯೋಜನೆಯಡಿ, ಕೋಲಾರÀ ಜಿಲ್ಲಾ ವ್ಯಾಪ್ತಿಯಲ್ಲಿರುವ ನಿವೇಶನ ಹೊಂದಿರುವ ಐದು ಫಲಾನುಭವಿಗಳಿಗೆ ವಸತಿ ರಹಿತ ವೃತ್ತಿ ನಿರತ ಕುಶಲ ಕರ್ಮಿಗಳಿಗೆ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯಿಂದ ವೈಯುಕ್ತಿಕ  ವಸತಿ ಮತ್ತು ಕಾರ್ಯಗಾರ ನಿರ್ಮಾಣ ಮಾಡುವ ಕಾರ್ಯಕ್ರಮವಿದ್ದು, ಬಡತನ ರೇಖೆಗಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿರುವ ಅರ್ಹ ಕುಶಲ ಕರ್ಮಿಗಳು ಈ ಕೆಳಗಿನ ನಿಬಂಧನೆಗಳಿಗೆ ಒಳಪಟ್ಟು ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿದಾರರು ಕೋಲಾರ ಜಿಲ್ಲೆಯ ವ್ಯಾಪ್ತಿಯಲ್ಲಿ ವಾಸವಾಗಿದ್ದು ಕನಿಷ್ಟ 400 ಚ.ಅಡಿ ಖಾಲಿ ನಿವೇಶನ ಹೊಂದಿರಬೇಕು, ಇದಕ್ಕೆ ಸಂಭಂದಿಸದಂತೆ ದಾಖಲಾತಿಗಳನ್ನು ಸಲ್ಲಿಸತಕ್ಕದ್ದು ಅನುಮೋದಿತ ನಕ್ಷೆಯಂತೆ ವಸತಿ ಕಾರ್ಯಾಗಾರ ನಿರ್ಮಿಸಬೇಕು.  ಗ್ರಾಮ ಪಂಚಾಯ್ತಿ/ ಸ್ಥಳೀಯ ಸಂಸ್ಥೆಗಳಿಂದ ಕುಶಲಕಾರ್ಮಿವೃತ್ತಿ ದೃಡೀಕರಣ ಪತ್ರ ಸಲ್ಲಿಸಬೇಕು.  ಸರ್ಕಾರದ ಯಾವುದೇ ಯೋಜನೆಯಡಿಯಲ್ಲಿ ಅರ್ಜಿದಾರರು ಹಾಗು ಕುಟುಂಬದೇ ಯಾವುದೇ ಸದಸ್ಯರು ವಸತಿ ಹೊಂದಿರಬಾರದು ಹಾಗು ಈ ಬಗ್ಗೆ ದೃಡೀಕರಣ ಪತ್ರ ಸಲ್ಲಿಸುವುದು.
ಅರ್ಜಿದಾರರು ಬಡತನ ರೇಖೆಗಿಂತ ಕಡಿಮೆ ವಾರ್ಷಿಕ ಆದಾಯವಿರಬೇಕು ಈ ಬಗ್ಗೆ ಬಿ.ಪಿ.ಲ್ ಕಾರ್ಡು ಆದಾಯ ದೃಡೀಕರಣ ಪತ್ರ ಹಾಗು ಜಾತಿ ಪ್ರಮಾಣ ಪತ್ರ ಸಲ್ಲಿಸಬೇಕು. (ಗ್ರಾಮೀಣ ರೂ. 32,000/ಕ್ಕಿಂತ ಕಡಿಮೆ, ನಗರ ರೂ 87600ಕ್ಕಿಂತ ಕಡಿಮೆ)  ವಸತಿ ಕಾರ್ಯಾಗಾರರ ನಿರ್ಮಾಣದ ವೆಚ್ಚ ರೂ 2,50,000/- ಆಗಿದ್ದು ಆದರೂ ರೂ 30,000/- ಕುಶಲಕರ್ಮಿಯು ಭರಿಸಬೇಕು.  ಈಗಿರುವ ಖಾಲಿ ನಿವೇಶನ/ಗುಡಿಸಲು/ಶಿಥಿಲಗೊಂಡ ಮನೆಯ ಛಾಯಾಚಿತ್ರ ಸಲ್ಲಿಸಬೇಕು.
         ಹೆಚ್ಚಿನ ವಿವರಗಳಿಗೆ ಹಾಗೂ ಅರ್ಜಿಗಳನ್ನು ಜಂಟಿ ನಿರ್ದೇಶಕರ ಕಛೇರಿ, ಜಿಲ್ಲಾ ಕೈಗಾರಿಕಾ ಕೇಂದ್ರ, ಕೋಲಾರ, ಜಿಲ್ಲಾಧಿಕಾರಿಗಳ ಕಛೇರಿ ಆವರಣ ಕೋಲಾರ ಇವರಿಂದ ಪಡೆಯಬಹುದಾಗಿದೆ.  ಎಲ್ಲಾ ದಾಖಲಾತಿಗಳೊಂದಿಗೆ ಅರ್ಜಿಯನ್ನು ದಿನಾಂಕ:30-06-2017 ರೊಳಗೆ ಸಲ್ಲಿಸಲು ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಕೋಲಾರ ತಿಳಿಸಿದ್ದಾರೆ.

Read These Next

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...