ರೈತರ ಸಾಲ ಮನ್ನಾ; ರೈತ ಸಂಘದಿಂದ ಲೀಡ್ ಬ್ಯಾಂಕ್ ಎದುರು ಪ್ರತಿಭಟನೆ

Source: sonews | By Staff Correspondent | Published on 13th July 2018, 6:22 PM | State News | Don't Miss |


ಕೋಲಾರ: ಸಂಕಷ್ಟದಲ್ಲಿರುವ  ರೈತರ ಸಾಲ ಮನ್ನಾ ಸಮರ್ಪಕವಾಗಿ ಜಾರಿಯಾಗಲಿ ಸರ್ಕಾರ ಸಾಲ ಮನ್ನಾ ಮಾಡಿರುವ 44ಸಾವಿರ ಕೋಟಿಯಲ್ಲಿ ದಲ್ಲಾಳಿಗಳ ಕಾಟ ತಪ್ಪಿಸಲು  ಕೋಲಾರ 681ಕೋಟಿ ಸಾಲ ಮನ್ನಾ ಅಂಕಿ ಅಂಶಗಳ ಪ್ರಕಾರ ಎಷ್ಟು ಜನ ಪಲಾನುಭವಿಗಳಿಗೆ ಅನುಕೂಲವಾಗುತ್ತದೆ ಎಂಬುಂಬುದನ್ನು ಒಂದು ವಾರದೊಳಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಬೇಕು, ಹಾಗೂ ಯಾವುದೇ ಕಾರಣಕ್ಕೂ ರೈತನಿಗೆ ನೋಟಿಸ್ ನೀಡಬಾರದು ಸರ್ಕಾರದಿಂದ ಬರುವ ಸಬ್ಸೀಡಿ ಹಣವನ್ನು ಸಾಲಕ್ಕೆ ಜಮಾ ಮಾಡಿಕೊಳ್ಳಬಾರದೆಂದು ಬ್ಯಾಂಕ್‍ಗಳಿಗೆ ಆದೇಶ ನೀಡಬೇಕೆಂದು ಒತ್ತಾಯಿಸಿ ರೈತ ಸಂಘದಿಂದ ಲೀಡ್ ಬ್ಯಾಂಕ್ ಮುಂದೆ ಹೋರಾಟ ಮಾಡಿ ವ್ಯವಸ್ಥಾಪಕರನ್ನು  ಅಗ್ರಹಿಲಾಯಿತು.
      
ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಬಯಲು ಸೀಮೆಯ ರೈತರು ಬೆಳೆದ ಮಾವು ರೇಷ್ಮೇ, ಹೈನುಗಾರಿಕೆ, ಬೆಲೆ ಕುಸಿತದಿಂದ ಕಂಗಲಾಗಿದ್ದು, ಮಾಡಿದ ಖಾಸಗಿ ಸಾಲ ತೀರೀಸಲಾಗದೆ ಜೀವನದಲ್ಲಿ ಕೃಷಿಯಿಂದಲೇ ವಿಮುಕ್ತಿಹೊಂದುತ್ತಿರುವ ರೈತರ ಜೀವನದಲ್ಲಿ ಸಾಲ ಮನ್ನಾದ ಯೋಜನೆ ಸಮರ್ಪಕವಾಗಿ ನೊಂದ ರೈತರ ಪರವಾಗಿರಲಿ, ರಾಜಕೀಯ ಒತ್ತಡ ಕಮೀಷನ್ ದಂದೆ ದೂರವಾಗಿ ರಾಜ್ಯ ಸರ್ಕಾರ ರಾಜ್ಯದ ರೈತರ ರಾಷ್ಟ್ರೀಕೃತ ಹಾಗೂ ಸರ್ಕಾರಿ ಬ್ಯಾಂಕ್‍ಗಳಲ್ಲಿನ 44ಸಾವಿರ ಕೋಟಿ ಸಾಲ ಮನ್ನಾ ಮಾಡಿರುವುದು ಸ್ವಾಗತಾರ್ಹ ಆದರೆ ಈ ಸಾಲ ಮನ್ನಾ ಯಾವುದೇ ಷರತ್ತುಗಳನ್ನು ಹಾಕಬಾರದು ಹಾಗೂ ಈ ಒಂದು ಅವಕಾಶವನ್ನು ಕಾಯುತ್ತಿದ್ದ ದಲ್ಲಾಳಿಗಳು ಸಾಲ ಮನ್ನಾ  ನೆಪ ಹೇಳಿ ರೈತರನ್ನು ಯಾಮಾರಿಸುತ್ತಿರುವುದು ಕಮೀಷನ್ ದಂಧೆಯಲ್ಲಿ ಪಾಲ್ಗೋಳ್ಳುವ ಅಧಿಕಾರಿಗಳು ಮತ್ತು ದಲ್ಲಾಳಿಗಳಿಗೆ ಕಡಿವಾಣ ಹಾಕಿ ಸಾಲ ಮನ್ನಾದ ಉಪಯೋಗ ಪಡೆಯುವ ರೈತರ ಅಂಕಿ ಅಂಶಗಳ  ಪ್ರಕಾರ ಪಲಾನುಭವಿಗಳ ಪಟ್ಟಿಯನ್ನು ಪತ್ರಿಕಾ ಹೇಳಿಕೆ ಮತ್ತು ಬ್ಯಾಂಕ್ ಮುಂಬಾಗ ಸಾರ್ವಜನಿಕವಾಗಿ ಪ್ರಕಟಿಸಬೇಕು. ಹಾಗೂ ಸಾಲ ಮನ್ನಾ ಆದ ರೈತರಿಗೆ ಋಣಮುಕ್ತ ಪತ್ರ ನೀಡಬೇಕೆಂದು ಆಗ್ರಹಿಸಲಾಯಿತು.

ಜಿಲ್ಲಾದ್ಯಕ್ಷ ಮರಗಲ್ ಶ್ರೀನಿವಾಸ್ ಮಾತನಾಡಿ ನಾನಾ ಕಾರಣಗಳಿಗೆ ರೈತರಿಗೆನೋಟಿಸ್ ಕೋಡುವುದನ್ನು ನಿಲ್ಲಿಸಬೇಕು. ಹಾಗೂ ಬ್ಯಾಂಕ್‍ಗಳಲ್ಲಿ ಒಡವೆ ಸಾಲ ಪಡೆದಿರುವ ರೈತರಿಗೆ ಹಳೆ ಸಾಲ ತೀರಿಸುವವರೆಗೂ ಒಡವೆ ಕೊಡುವುದಿಲ್ಲ ಎಂಬ ರೈತ ವೀರೋದಿ ದೋರಣೆಯನ್ನು ಕೈಬಿಡಬೇಕು.ಹಾಗೂ ಸರ್ಕಾರದಿಂದ ಬರುವ ರೈತರ ಸಬ್ಸಿಡಿ ಹಣವನ್ನು ಯಾವುದೇ ಕಾರಣಕ್ಕೂ ಸಾಲಕ್ಕೆ ಜಮಾ ಮಾಡಿಕೊಳ್ಳಬಾರದೆಂದು ಬ್ಯಾಂಕ್ ಅಧಿಕಾರಿಗಳ ಸಭೆ ಕರೆದು ಆದೇಶ ನೀಡಬೇಕು ಇಲ್ಲವಾದರೆ ಬ್ಯಾಂಕ್ ಮುಂದೆ ಉಗ್ರವಾದ ಹೋರಾಟ ನಡೆಸುವ ಎಚ್ಚರಿಕೆಯನ್ನು ನೀಡಿದರು.
ಮನವಿ ಸ್ವೀಕರಿಸಿದ ಲೀಡ್ ಬ್ಯಾಂಕ್ ಮ್ಯಾನೇಜರ್ ಶ್ರೀನಿವಾಸ್‍ರಾವ್ ಮಾತನಾಡಿ ಯಾವುದೇ ಕಾರಣಕ್ಕೂ ಸಾಲ ಮನ್ನಾ ವಿಚಾರದಲ್ಲಿ ರಾಜಕೀಯ ಹಾಗೂ ದಲ್ಲಾಳಿಗಳ ಮದ್ಯಸ್ಥಿಕೆಗೆ ಅವಕಾಶ ನೀಡುವುದಿಲ್ಲ. ಸರ್ಕಾರದಿಂದ ಅಧೀಕೃತವಾಗಿ ಸುತ್ತೊಲೆ ಬಂದ ಕೂಡಲೇ ಕೋಲಾರ ಜಿಲ್ಲೆಯ ರೈತರ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಹಾಗೂ ರೈತರಿಗೆ ಬ್ಯಾಂಕ್ ಅಧಿಕಾರಿಗಳ ಕಿರುಕುಳದ ಆರೋಪದ ಬಗ್ಗೆ ಅಧಿಕಾರಿಗಳನ್ನು ಸಭೆ ಕರೆದು ರೈತರೊಡನೆ ಸ್ನೇಹದಿಂದ ಇರಲು ಆದೇಶ ನೀಡಲಾಗುವುದೆಂದು ಭರವಸೆ ನೀಡಿದರು.

ಈ ಹೋರಾಟದಲ್ಲಿ ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ, ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಮಾಲೂರು ತಾಲ್ಲೂಕಾದ್ಯಕ್ಷ ಹೊಸಹಳ್ಳಿ ವೆಂಕಟೇಶ್, ಟೇಕಲ್ ನಾರಾಯಣಸ್ವಾಮಿ, ಮೀಸೆ ವೇಂಕಟೇಶಪ್ಪ, ವೆಂಕಟರತ್ನಮ್ಮ, ಕರವೇ ನಾಗರಾಜ್, ಶಾಂತಮ್ಮ, ಮಂಜುಳ, ನಾರಾಯಣಸ್ವಾಮಿ,  ಬಿ.ಟಿ.ವೆಂಕಟೇಶಪ್ಪ, ಕಾವೇರಿ ಸುರೇಶ್, ಪುರುಶೋತ್ತಮ್, ಚಂದ್ರಪ್ಪ, ಗೋಪಾಲ್, ಈಕಂಬಳ್ಳಿಮಂಜುನಾಥ, ಸಾಗರ್, ರಂಜಿತ್, ಭರತ್, ಸುಪ್ರೀಂಚಲ,  ರಾಜಪ್ಪ, ಅಮರ್‍ನಾರಾಯಣಸ್ವಾಮಿ, ಪವನ್, ಸುಧಾಕರ್, ವಿನಯ್, ತರುಣ್, ಆನಂದರೆಡ್ಡಿ ಮುಂತಾದವರು ಇದ್ದರು.

,

Read These Next

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...